• search
 • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ತೀವ್ರಗೊಳ್ಳಲಿದೆ ಯಾಸ್ ಚಂಡಮಾರುತ; ಮುಂದಿನ 12 ಗಂಟೆಗಳಲ್ಲಿ ಭಾರೀ ಮಳೆ ಸೂಚನೆ

|

ನವದೆಹಲಿ, ಮೇ 25: ಬಂಗಾಳ ಕೊಲ್ಲಿಯ ಪೂರ್ವ ಕೇಂದ್ರ ಭಾಗದಲ್ಲಿ ವಾಯುಭಾರ ಕುಸಿತದಿಂದ ಯಾಸ್ ಚಂಡಮಾರುತ ಸೃಷ್ಟಿಯಾಗಿದ್ದು, ಮೇ 23ರಿಂದ ಮೇ 27ರವರೆಗೂ ಚಂಡಮಾರುತ ತನ್ನ ಆರ್ಭಟ ತೋರುವುದಾಗಿ ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ. ಒಡಿಶಾ, ಪಶ್ಚಿಮ ಬಂಗಾಳದಲ್ಲಿ ಚಂಡಮಾರುತದ ತೀವ್ರತೆ ಹೆಚ್ಚಲಿದ್ದು, ಸೋಮವಾರ ರಾತ್ರಿಯೂ ಈ ರಾಜ್ಯಗಳಲ್ಲಿ ಹೆಚ್ಚಿನ ಮಳೆಯಾಗಿರುವುದಾಗಿ ಮಾಹಿತಿ ನೀಡಿದೆ.

ಸೋಮವಾರ ರಾತ್ರಿ 11.30ರ ನಂತರ ಒಡಿಶಾದ ಪಾರದೀಪ್ ದಕ್ಷಿಣ ಆಗ್ನೇಯ ಭಾಗದ 390 ಕಿ.ಮೀ ಕೇಂದ್ರದಲ್ಲಿ, ಬಾಲಾಸೋರ್‌ನ ದಕ್ಷಿಣ ಆಗ್ನೇಯದ 490 ಕಿ.ಮೀ ಕೇಂದ್ರದಲ್ಲಿ, ಪಶ್ಚಿಮ ಬಂಗಾಳದ ದಿಗಾದಲ್ಲಿನ ದಕ್ಷಿಣ ಆಗ್ನೇಯ ದಿಕ್ಕಿನ 470 ಕಿ.ಮೀ ಕೇಂದ್ರದಲ್ಲಿ ಹಾಗೂ ಬಾಂಗ್ಲಾದೇಶದ ಖೇಪುಪಾರಾದ 500 ಕಿ.ಮೀ ಕೇಂದ್ರಿತವಾಗಿ ಚಂಡಮಾರುತದ ಪ್ರಭಾವ ಗೋಚರಿಸಿರುವುದಾಗಿ ಇಲಾಖೆ ತಿಳಿಸಿದೆ. ಮುಂದೆ ಓದಿ...

ಮೇ 26ರಿಂದ ಕರಾವಳಿ, ದಕ್ಷಿಣ ಒಳನಾಡಿನಲ್ಲಿ ಮಳೆ ಮೇ 26ರಿಂದ ಕರಾವಳಿ, ದಕ್ಷಿಣ ಒಳನಾಡಿನಲ್ಲಿ ಮಳೆ

   ಮಗನ ತೋಟದಲ್ಲಿ ವಿವಾಹ ವಾರ್ಷಿಕೋತ್ಸವ ಆಚರಿಸಿಕೊಂಡ HDD ದಂಪತಿ | Oneindia Kannada
    ಮುಂದಿನ ಕೆಲವು ಗಂಟೆಗಳಲ್ಲಿ ತೀವ್ರಗೊಳ್ಳಲಿದೆ ಚಂಡಮಾರುತ

   ಮುಂದಿನ ಕೆಲವು ಗಂಟೆಗಳಲ್ಲಿ ತೀವ್ರಗೊಳ್ಳಲಿದೆ ಚಂಡಮಾರುತ

   ಮುಂದಿನ ಕೆಲವು ಗಂಟೆಗಳಲ್ಲಿ ಚಂಡಮಾರುತ ಉತ್ತರ ವಾಯವ್ಯ ದಿಕ್ಕಿಗೆ ಚಲಿಸುವ ಸಾಧ್ಯತೆಯಿದೆ. ಚಂಡಮಾರುತ ಮತ್ತಷ್ಟು ತೀವ್ರಗೊಳ್ಳುತ್ತದೆ ಎಂದು ಇಲಾಖೆ ತಿಳಿಸಿದೆ. ಬುಧವಾರ ಬೆಳಿಗ್ಗೆ ಪಶ್ಚಿಮ ಬಂಗಾಳ ಕರಾವಳಿ ಪ್ರದೇಶಗಳು ಹಾಗೂ ಉತ್ತರ ಒಡಿಶಾಗೆ ಚಂಡಮಾರುತ ಅಪ್ಪಳಿಸಲಿದೆ ಎಂದು ಇಲಾಖೆ ತಿಳಿಸಿದೆ. ಚಂಡಮಾರುತದಿಂದ ಉತ್ತರ ಒಡಿಶಾದ ಜಿಲ್ಲೆಗಳು, ವಿಶೇಷವಾಗಿ ಮಯೂರ್‌ಭಂಜ್, ಭದ್ರಾಕ್ ಮತ್ತು ಬಾಲಸೋರ್ ಜಿಲ್ಲೆಗಳು ಹೆಚ್ಚಿನ ಅಪಾಯಕ್ಕೆ ಒಳಗಾಗುವ ಸಂಭವವಿದೆ ಎಂದು ಎಚ್ಚರಿಕೆ ನೀಡಿದೆ. ಚಂಡಮಾರುತದಿಂದಾಗಿ ಮುಂದಿನ 12 ಗಂಟೆಗಳಲ್ಲಿ ಭಾರೀ ಮಳೆಯಾಗುವ ಸಾಧ್ಯತೆಯಿದೆ ಎಂದು ತಿಳಿಸಿದೆ.

    ಮೇ 26ರಂದು ಚಂಡಮಾರುತದಿಂದ ಹೆಚ್ಚಿನ ಹಾನಿ

   ಮೇ 26ರಂದು ಚಂಡಮಾರುತದಿಂದ ಹೆಚ್ಚಿನ ಹಾನಿ

   ಚಂಡಮಾರುತದಿಂದಾಗಿ ಉತ್ತರ ಒಡಿಶಾ ಹಾಗೂ ಪಶ್ಚಿಮ ಬಂಗಾಳದ ಕರಾವಳಿ ಜಿಲ್ಲೆಗಳಲ್ಲಿ ಮೇ 26ರಂದು ಹೆಚ್ಚಿನ ಹಾನಿಯಾಗಲಿದೆ ಎಂದು ಇಲಾಖೆ ತಿಳಿಸಿದೆ. ಇದು ಉತ್ತರ ಒಡಿಶಾ - ಪಶ್ಚಿಮ ಬಂಗಾಳ ಹಾದು ಪಾರದೀಪ್ ಮತ್ತು ಸಾಗರ ದ್ವೀಪಗಳ ನಡುವೆ ಮೇ 26ಕ್ಕೆ ತಲುಪಿ ಗಂಭೀರ ಸ್ವರೂಪ ಪಡೆಯಲಿದೆ ಎಂದು ತಿಳಿಸಿದ್ದಾರೆ.

   ಯಾಸ್ ಚಂಡಮಾರುತ: ಒಡಿಶಾದ 3 ಜಿಲ್ಲೆಗೆ ಹೆಚ್ಚು ಅಪಾಯ ಎಂದ ಹವಾಮಾನ ಇಲಾಖೆಯಾಸ್ ಚಂಡಮಾರುತ: ಒಡಿಶಾದ 3 ಜಿಲ್ಲೆಗೆ ಹೆಚ್ಚು ಅಪಾಯ ಎಂದ ಹವಾಮಾನ ಇಲಾಖೆ

    ಒಡಿಶಾದಲ್ಲಿ ಅಬ್ಬರದ ಮಳೆ ಸೂಚನೆ

   ಒಡಿಶಾದಲ್ಲಿ ಅಬ್ಬರದ ಮಳೆ ಸೂಚನೆ

   ಪುರಿ, ಜಗತ್‌ಸಿಂಗ್ ಪುರ, ಖರ್ದಾ, ಕಟಕ್, ಕೇಂದ್ರಪಾರಾ, ಜೈಪುರ, ಭಾದ್ರಾಕ್, ಬಾಲಸೋರ್ ಜಿಲ್ಲೆಗಳಲ್ಲಿ ಅಬ್ಬರದ ಮಳೆಯಾಗಲಿದೆ. ಪ್ರವಾಹ ಉಂಟಾಗುವ ಸೂಚನೆಯಿಂದೆ ಎಂದು ಇಲಾಖೆ ತಿಳಿಸಿದೆ. ಗಂಜಾಂ, ಧೆಂಕಾಲನ್, ಮಯೂರ್ ಬಂಜ್ ಜಿಲ್ಲೆಗಳಲ್ಲಿ ದಾಖಲೆಯ ಮಳೆಯಾಗಲಿದೆ ಎಂದು ತಿಳಿಸಿದೆ.

    ರಾಜ್ಯಗಳಲ್ಲಿ ಎನ್‌ಡಿಆರ್‌ಎಫ್ ತಂಡ

   ರಾಜ್ಯಗಳಲ್ಲಿ ಎನ್‌ಡಿಆರ್‌ಎಫ್ ತಂಡ

   ಚಂಡಮಾರುತ ಪ್ರಭಾವ ತೀವ್ರಗೊಳ್ಳಲಿರುವ ಕಾರಣ ಮುನ್ನೆಚ್ಚರಿಕಾ ಕ್ರಮವಾಗಿ ಪಶ್ಚಿಮ ಬಂಗಾಳ, ತಮಿಳುನಾಡು, ಆಂಧ್ರ ಪ್ರದೇಶ ಮತ್ತು ಅಂಡಮಾನ್ ನಿಕೋಬಾರ್ ದ್ವೀಪಗಳಿಗೆ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆಗಳನ್ನು ಕಳುಹಿಸಲಾಗಿದೆ. ಪಶ್ಚಿಮ ಬಂಗಾಳದಲ್ಲಿ 35 ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆಯ ತಂಡಗಳನ್ನು ನಿಯೋಜನೆ ಮಾಡಲಾಗಿದೆ. ಚಂಡಮಾರುತದ ಪ್ರಭಾವ ತಮಿಳುನಾಡು, ಆಂಧ್ರ ಪ್ರದೇಶ ಹಾಗೂ ಅಂಡಮಾನ್ ನಿಕೋಬಾರ್ ದ್ವೀಪಗಳಲ್ಲಿಯೂ ಹೆಚ್ಚಾಗುವ ನಿರೀಕ್ಷೆಯಿದ್ದು ಎನ್‌ಡಿಆರ್‌ಎಫ್ ಪಡೆ ಸನ್ನದ್ಧವಾಗಿದೆ.

   English summary
   IMD has forecasted Yaas cyclone to intensify in odisha and west bengal coast on wednesday,
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X