ಭಾರತದಲ್ಲಿ ವಿಶ್ವದ ಅತಿ ಉದ್ದದ ದ್ವಿಪಥ ಸೆಲಾ ಸುರಂಗ ಮಾರ್ಗ ಶೀಘ್ರವೇ ಉದ್ಘಾಟನೆ, ವಿಶೇಷತೆ, ಸ್ಥಳ ತಿಳಿಯಿರಿ
ನವದೆಹಲಿ, ಅಕ್ಟೋಬರ್ 07: ವಿಶ್ವದ ಅತಿ ಉದ್ದದ ದ್ವಿಪಥ ಸುರಂಗ ಮಾರ್ಗವು ಅರುಣಾಚಲ ಪ್ರದೇಶದಲ್ಲಿ ನಿರ್ಮಾಣವಾಗುತ್ತಿದೆ. ಇದು ಶೀಘ್ರವೇ ಪೂರ್ಣಗೊಳ್ಳಲಿದ್ದು, ಸಾರ್ವಜನಿಕ ಬಳಕೆಗೆ ಉದ್ಘಾಟನೆಗೊಳ್ಳಲಿದೆ.
ಭಾರತ- ಚೀನಾ ಗಡಿಯ ಪೂರ್ವ ವಲಯದ ಕಡೆಗೆ ಉತ್ತಮ ಸಂಪರ್ಕಕ್ಕಾಗಿ ಇದನ್ನು ನಿರ್ಮಾಣ ಮಾಡಲಾಗುತ್ತಿದೆ. ಬಾರ್ಡರ್ ರೋಡ್ಸ್ ಆರ್ಗನೈಸೇಶನ್ (BRO) ಅರುಣಾಚಲ ಪ್ರದೇಶದಲ್ಲಿ ನಿರ್ಮಾಣವಾಗುತ್ತಿರುವ ಸೆಲಾ ಎಂಬ ಹೆಸರಿನ ದ್ವಿಪಥ ಸುರಂಗದ 90 ಪ್ರತಿಶತದಷ್ಟು ನಿರ್ಮಾಣ ಕಾರ್ಯಗಳು ಪೂರ್ಣಗೊಂಡಿದೆ.

ಬಾರ್ಡರ್ ರೋಡ್ಸ್ ಆರ್ಗನೈಸೇಶನ್ ಅಧಿಕಾರಿಗಳ ಪ್ರಕಾರ, ಅರುಣಾಚಲ ಪ್ರದೇಶದಲ್ಲಿ ಸುರಂಗಗಳು ಮತ್ತು ರಸ್ತೆಗಳ ನಿರ್ಮಾಣ ಕಾರ್ಯಗಳಲ್ಲಿ ನಾವು ಯುದ್ದೋಪಾದಿಯಲ್ಲಿ ಕೆಲಸ ಮಾಡುತ್ತಿದ್ದೇವೆ. ಸೆಲಾ ಸುರಂಗ ಯೋಜನೆಯು ಅಂತಿಮ ಹಂತದಲ್ಲಿದೆ. ಇದು ಸುಮಾರು 90 ಪ್ರತಿಶತದಷ್ಟು ನಿರ್ಮಾಣ ಕಾರ್ಯಗಳು ಪೂರ್ಣಗೊಂಡಿದೆ. ಈ ವರ್ಷದೊಳಗೆ ಅದು ಪೂರ್ಣಗೊಳ್ಳಲಿದೆ ಎಂದು ಆಶಿಸುತ್ತೇವೆ ಎಂದು ತಿಳಿಸಿದ್ದಾರೆ.
ಸುರಂಗವು ಒಮ್ಮೆ ಕಾರ್ಯಾರಂಭಿಸಿದರೆ ಅರುಣಾಚಲ ಪ್ರದೇಶದ ತವಾಂಗ್‌ನ ಜನರಿಗೆ ಎಲ್ಲಾ ಹವಾಮಾನದಲ್ಲೂ ರಸ್ತೆ ಸಂಪರ್ಕ ಒದಗಿಸುತ್ತದೆ, ಜಿಲ್ಲೆಗೆ ಭೇಟಿ ನೀಡುವ ಪ್ರವಾಸಿಗರು ಮತ್ತು ಸಶಸ್ತ್ರ ಪಡೆಗಳು ಸಹ ಪ್ರಯೋಜನವಾಗುತ್ತದೆ. ಸೆಲಾ ಸುರಂಗವು ಒಮ್ಮೆ ಪೂರ್ಣಗೊಂಡರೆ, 13,000 ಅಡಿ ಎತ್ತರದಲ್ಲಿ ವಿಶ್ವದ ಅತಿ ಉದ್ದದ ದ್ವಿ-ಪಥದ ಸುರಂಗವಾಗುತ್ತದೆ ಎಂದು ತಿಳಿಸಿದರು.
ಸೇಲಾ ಸುರಂಗದ ನಿರ್ಮಾಣ ಕೆಲಸಗಾರ ಪದೀಪ್ ಕಚಾರಿ ಮಾತನಾಡಿ, "ಸುರಂಗದ ಸುಮಾರು 90 ಪ್ರತಿಶತದಷ್ಟು ನಿರ್ಮಾಣ ಕಾರ್ಯಗಳು ಪೂರ್ಣಗೊಂಡಿವೆ. ಸೇಲಾ ಸುರಂಗ ಯೋಜನೆಯಲ್ಲಿ ಎರಡು ಸುರಂಗಗಳಿವೆ. ಯೋಜನೆಗಳು ಪೂರ್ಣಗೊಂಡ ನಂತರ ಜನರಿಗೆ ಪ್ರಯೋಜನಗಳು ಸಿಗುತ್ತವೆ" ಎಂದು ಪ್ರದೀಪ್ ಕಚಾರಿ ಹೇಳಿದರು.
ಸೆಲಾ ಸುರಂಗ ಯೋಜನೆಯು ಎರಡು ಸುರಂಗಗಳನ್ನು ಒಳಗೊಂಡಿದೆ. ಸುರಂಗ 1, ಇದು 980 ಮೀಟರ್ ಉದ್ದದ ಏಕ ಮಾರ್ಗದ ಸುರಂಗ ಮತ್ತು ಸುರಂಗ 2 ಇದು 1555 ಮೀಟರ್ ಉದ್ದದ ದ್ವಿಮಾರ್ಗ ಸುರಂಗವಾಗಿದೆ. ಸೆಲಾ ಸುರಂಗವು ಸೆಲಾ ಪಾಸ್‌ನಿಂದ 400 ಮೀಟರ್‌ಗಳಷ್ಟು ಕೆಳಗಿದೆ. ಒಮ್ಮೆ ಸುರಂಗ ಪೂರ್ಣಗೊಂಡರೆ ಜನರು ಚಳಿಗಾಲದಲ್ಲಿಯೂ ಸಹ ಅದರ ಮೂಲಕ ಹಾದುಹೋಗಲು ಸಾಧ್ಯವಾಗುತ್ತದೆ. ಇದು ಅರುಣಚಲ ಪ್ರದೇಶದ ಮೂಲಸೌಕರ್ಯವನ್ನು ಮಾತ್ರವಲ್ಲದೆ ಪ್ರವಾಸೋದ್ಯಮವನ್ನೂ ಹೆಚ್ಚಿಸುತ್ತದೆ.
ಸೆಲಾ ಸುರಂಗ ಮಾರ್ಗ ನಿರ್ಮಾಣಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರು ಫೆಬ್ರವರಿ 9, 2019 ರಂದು ಅಡಿಪಾಯ ಹಾಕಿದ್ದರು. ಅದರ ನಿರ್ಮಾಣವು ಏಪ್ರಿಲ್ 1, 2019 ರಂದು ಪ್ರಾರಂಭವಾಯಿತು.












Click it and Unblock the Notifications