World Tiger Day 2024: ಹುಲಿಗಳ ಸಂತತಿ ನಾಶವಾದರೆ ಪರಿಸರವೇ ನಾಶ, ನಿಮಗೆ ಗೊತ್ತಿರದ ಮಾಹಿತಿ ಇಲ್ಲಿದೆ
ಬೆಂಗಳೂರು, ಜುಲೈ 29: ರಾಷ್ಟ್ರೀಯ (ಭಾರತದ) ಪ್ರಾಣಿ 'ಹುಲಿ' ಇದು ವನ್ಯಜೀವಿಗಳ ಪೈಕಿ ಅತ್ಯಂತ ಪ್ರಮುಖ ಪ್ರಾಣಿ ಎನ್ನಬಹುದು. ವಿಶೇಷವೆಂದರೆ ಕರ್ನಾಟಕದಲ್ಲಿ ಅತೀ ಹೆಚ್ಚು ಹುಲಿಗಳು ಕಾಣಸಿಗುತ್ತವೆ. ಅನೇಕ ಜಾತಿಯ ಹುಲಿಗಳಿದ್ದು, ಮಾನವನ ದುರಾಸೆಯಿಂದ ಹುಲಿಗಳು ಕ್ರಮೇಣ ಅವಸಾನದತ್ತ ಹೊರಟಿವೆ.
ಈಗ ನೆನಪಿಸಿಕೊಳ್ಳಲು ಮುಖ್ಯ ಕಾರಣವೇನೆಂದರೆ ಇಂದು ಜುಲೈ 29ರಂದು ವಿಶ್ವ ಹುಲಿ ದಿನಾಚರಣೆ (World Tiger Day 2024). ಪ್ರಾಣಿ ಸಾಮ್ರಾಜ್ಯದಲ್ಲಿ ಈ ಹುಲಿಯನ್ನು ವಿಶೇಷ ರೀತಿಯಲ್ಲಿ ನೋಡಲಾಗುತ್ತದೆ. ಭೂಮಿ ಮೇಲೆ ಬಿಳಿ ಹುಲಿ ಮತ್ತು ರಾಯಲ್ ಬೆಂಗಾಲ್ ಹುಲಿಯಿಂದ ಸೈಬೀರಿಯನ್ ಹುಲಿಯವರೆಗೆ, ಈ ಕಾಡು ಬೆಕ್ಕುಗಳು ವಿವಿಧ ಜಾತಿಗಳ ಹುಲಿಗಳು ಜೀವಿಸುತ್ತಿವೆ.

ಪ್ರತಿಯೊಂದೂ ಹುಲಿಗಳು ತಮ್ಮ ವ್ಯಾಪ್ತಿಯಲ್ಲಿನ ಆವಾಸಸ್ಥಾನವನ್ನು ಆಳುತ್ತವೆ. ಭೇಟೆಯಾಡಿ ಬದುಕುತ್ತವೆ. ಹವಾಮಾನ ಬದಲಾವಣೆ, ಕಾನೂನುಬಾಹಿರ ವನ್ಯಜೀವಿ ವ್ಯಾಪಾರ ಮತ್ತು ಆವಾಸಸ್ಥಾನದ ನಷ್ಟದಂತಹ ಅಂಶಗಳು ಹುಲಿಗಳ ಸಂಖ್ಯೆಯನ್ನು ವೇಗವಾಗಿ ಕುಗ್ಗಲು ಕಾರಣವಾಗಿದೆ.
ಹುಲಿಗಳ ಬಗ್ಗೆ ನಿಮಗೆ ಗೊತ್ತಿರದ ಸಂಗತಿ
ಅಳಿವಿನಂಚಿನಲ್ಲಿರುವ ಹುಲಿಯ ಸಂರಕ್ಷಣೆಯ ಬಗ್ಗೆ ಜಾಗೃತಿ ಮೂಡಿಸಲು ಜುಲೈ 29 ಅನ್ನು ಅಂತಾರಾಷ್ಟ್ರೀಯ ಹುಲಿ ದಿನವನ್ನಾಗಿ ಆಚರಿಸಲಾಗುತ್ತದೆ. ಅಂದಿನಿಂದಲೂ ಹುಲಿಗಳ ವಾಸಸ್ಥಾನ, ಅಗತ್ಯತೆ, ಅವುಗಳ ರಕ್ಷಣೆ ಪ್ರಾಮುಖ್ಯತೆ ಬಗ್ಗೆ ತಿಳಿಸಲಾಗುತ್ತಿದೆ.

ರಾಷ್ಟ್ರ ಪ್ರಾಣಿ ಹುಲಿ ಹುಲ್ಲುಗಾವಲುಗಳು, ಉಷ್ಣವಲಯದ ಮಳೆಕಾಡುಗಳು, ಹಿಮಭರಿತ ಕಾಡುಗಳು ಮತ್ತು ಮ್ಯಾಂಗ್ರೋವ್ ಜೌಗು ಪ್ರದೇಶಗಳನ್ನು ಒಳಗೊಂಡಂತೆ ವಿವಿಧ ನೈಸರ್ಗಿಕ ಪ್ರದೇಶಗಳಲ್ಲಿ ಬದುಕಬಲ್ಲವು. ಅವುಗಳ ಇರುವಿಕೆ ಮಧ್ಯೆವು ಅಂಕಿ ಅಂಶ ಪರಿಗಣಿಸಿದಾಗ 20 ನೇ ಶತಮಾನದ ಆರಂಭದಿಂದ ಈ ವನ್ಯಜೀವಿಗಳ ಸಂಖ್ಯೆಯು ಶೇಕಡಾ 95% ಕ್ಕಿಂತ ಕಡಿಮೆ ಆಗಿದೆ.
ಪರಭಕ್ಷಕ ಹುಲಿಗಳ ಸಂತತಿ
ಪ್ರಸ್ತುತ, ವಿಶ್ವ ವನ್ಯಜೀವಿ (WWF) ಪ್ರಕಾರ, ಪ್ರಪಂಚದಾದ್ಯಂತ ಕಾಡಿನಲ್ಲಿ ವಾಸಿಸುವ ಒಟ್ಟು ಹುಲಿಗಳ ಸಂಖ್ಯೆ ಸುಮಾರು 3,900ಕ್ಕೂ ಹೆಚ್ಚಿವೆ ಎಂದು ಅಂದಾಜಿಸಲಾಗಿದೆ. ಕಾಡಿನಲ್ಲಿ ತಮ್ಮ ವಾಸಸ್ಥಾನದ ಪ್ರದೇಶಗಳಲ್ಲಿ ಪರಭಕ್ಷಕಗಳಾಗಿವೆ. ಜಿಂಕೆ, ಕೋತಿ ಸೇರಿದಂತೆ ಇನ್ನಿತರ ಪ್ರಾಣಿಗಳನ್ನು ಬೇಟೆ ಮಾಡುತ್ತವೆ.
ಹುಲಿಗಳಿಂದಲೇ ಪರಿಸರ ಸಮತೋಲನ, ಹೇಗೆ?
ಈ ಹುಲಿಗಳು ಪರಿಸರ ವ್ಯವಸ್ಥೆಯಲ್ಲಿ ಸಮತೋಲನವನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತವೆ. ಅವುಗಳ ಸಂಖ್ಯೆ ಒಂದು ವೇಳೆ ಕ್ಷೀಣಿಸಿದರೆ, ಅನುಪಸ್ಥಿತಿಯಲ್ಲಿ ಬೇಟೆಯಾಡುವ ಪ್ರವೇತ್ತಿ ಹೆಚ್ಚಾಗಬಹುದು. ಪ್ರತಿಯಾಗಿ ಪರಿಸರಕ್ಕೆ ವನ್ಯಸಂಕುಲಕ್ಕೆ ಹಾನಿ ಆಗುತ್ತದೆ. ಮುಖ್ಯವಾಗಿ ನೈಸರ್ಗಿಕ ಆಹಾರ ಸರಪಳಿಯಲ್ಲಿ ಹುಲಿಗಳು ಪ್ರಮುಖ ಪಾತ್ರವನ್ನು ವಹಿಸುತ್ತವೆ ಎಂದು ತಜ್ಞರು ಹೇಳುತ್ತಾರೆ.
ಹವಾಮಾನ ಬದಲಾವಣೆಯು ವಿಶ್ವದಾದ್ಯಂತ ಹುಲಿ ಸಂತತಿಗೆ ಪ್ರತಿಕೂಲ ಪರಿಣಾಮ ಭೀರುತ್ತವೆ. ಹುಲಿಗಳ ಸಂತತಿ ಕುಗ್ಗುತ್ತಿವೆ, ಕಾಡು ನಾಶವಾಗುತ್ತಿದೆ. ಹೆದ್ದಾರಿಗಳು ನಿರ್ಮಾಣ, ಒತ್ತುವರಿ ಆಗುತ್ತಿವೆ. ಇದರಿಂದ ಮನುಷ್ಯರಿರುವ ಜಾಗದಲ್ಲಿ ಹುಲಿಗಳು ಆಗಾಗ ಬಂದು ಪ್ರಾಣಿ ಮತ್ತು ಮನುಷ್ಯ ಸಂಘರ್ಷ ಏರ್ಪಡುತ್ತಿದೆ.
ಮನುಷ್ಯರಾದ ನಾವು, ನಾವು ಬದುಕಬೇಕು, ವನ್ಯಜೀವಿಗಳಿಗೆ ಬದುಕಲು ಅವಕಾಶ ಮಾಡಿಕೊಡಬೇಕು. ಹುಲಿಗಳ ರಕ್ಷಣೆಗೆ ಕೈಜೋಡಿಸಬೇಕು. ಸಮುದಾಯಗಳು ಮತ್ತು ಸರ್ಕಾರಗಳನ್ನು ಒಟ್ಟುಗೂಡಿಸುವ ಗುರಿಯ ಜೊತೆಗೆ ಭಿವಷ್ಯದಲ್ಲಿ ಹುಲಿಗಳ ಸಂಖ್ಯೆ ಹೆಚ್ಚಾಗುವಂತೆ ಮಾಡಬೇಕು ಎಂಬುದು ಈ ವಿಶ್ವ ಹುಲಿ ದಿನಾಚರಣೆಯ (World Tiger Day 2024) ಆಶಯವಾಗಿದೆ.












Click it and Unblock the Notifications