• search
 • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಜಗತ್ತಿನ ಶಕ್ತಿಶಾಲಿ ಪಾಸ್‌ಪೋರ್ಟ್ ಹೊಂದಿರುವ ದೇಶ ಯಾವುದು ಗೊತ್ತೇ?

|

ನವದೆಹಲಿ, ಜನವರಿ 10: ಜಗತ್ತಿನ ಅತ್ಯಂತ ಶಕ್ತಿಶಾಲಿ ಪಾಸ್‌ಪೋರ್ಟ್ ಹೊಂದಿರುವ ದೇಶ ಯಾವುದು ಗೊತ್ತೇ? ಜಗತ್ತಿನ ಅತ್ಯಂತ ಶಕ್ತಿಶಾಲಿ ಪಾಸ್‌ಪೋರ್ಟ್ ಸೂಚ್ಯಂಕ 2020ರ ಪ್ರಕಾರ ಜಪಾನ್ ಮೊದಲ ಸ್ಥಾನದಲ್ಲಿ. ಹಿಂದಿನ ಬಾರಿ 82ನೇ ಸ್ಥಾನದಲ್ಲಿದ್ದ ಭಾರತ, ಈ ಬಾರಿ 84ನೇ ಸ್ಥಾನಕ್ಕೆ ಕುಸಿದಿದೆ.

   Nityananda creates his own 'Kailasaa' | Oneindia Kannada

   ಅಂತಾರಾಷ್ಟ್ರೀಯ ವಾಯು ಸಾರಿಗೆ ಸಂಸ್ಥೆಯಿಂದ (ಐಎಟಿಎ) ಪಡೆದ ಮಾಹಿತಿಗಳ ಆಧಾರದಲ್ಲಿ ಹೆನ್ಲಿ & ಪಾರ್ಟ್ನರ್ಸ್ ಈ ಪಾಸ್‌ಪೋರ್ಟ್ ಸೂಚ್ಯಂಕ ಸಿದ್ಧಪಡಿಸಿದೆ. ಪ್ರತಿ ದೇಶಗಳ ಪಾಸ್‌ಪೋರ್ಟ್ ಹೊಂದಿರುವವರು ಯಾವುದೇ ಪೂರ್ವ ವೀಸಾ ಇಲ್ಲದೆ ಎಷ್ಟು ದೇಶಗಳಿಗೆ ಭೇಟಿ ನೀಡಬಹುದು ಎಂಬ ಲೆಕ್ಕದ ಆಧಾರದಲ್ಲಿ ಈ ಸೂಚ್ಯಂಕ ರೂಪಿಸಲಾಗಿದೆ.

   ಪಾಕಿಸ್ತಾನಕ್ಕೆ ಹೋಗುವವರೇ ಇಲ್ಲ, ಪ್ರವಾಸಕ್ಕೆ ಈ ದೇಶಗಳೇ ಸೂಪರ್

   ಭಾರತೀಯ ಪಾಸ್‌ಪೋರ್ಟ್ ಹೊಂದಿರುವವರು ವಿಶ್ವದ 58 ದೇಶಗಳಿಗೆ ವೀಸಾ ಮುಕ್ತವಾಗಿ ಪ್ರವೇಶಿಸಬಹುದು. ಆದರೆ ಈ ಹಿಂದಿನಿಂದಲೂ ಸೂಚ್ಯಂಕದಲ್ಲಿ ಮುಂಚೂಣಿಯಲ್ಲಿರುವ ಜಪಾನ್, ಜಗತ್ತಿನ 191 ದೇಶಗಳಿಗೆ ವೀಸಾ ರಹಿತ ಪ್ರವೇಶದ ಅವಕಾಶ ಹೊಂದಿದೆ. ಈ ಪಟ್ಟಿಯಲ್ಲಿ ಏಷ್ಯಾದ ದೇಶಗಳು ಹೆಚ್ಚಿರುವುದು ವಿಶೇಷ.

   ಚೀನಾ ಭಾರತಕ್ಕಿಂತ ಮೇಲೆ

   ಚೀನಾ ಭಾರತಕ್ಕಿಂತ ಮೇಲೆ

   2020ರ ವೇಳೆ ಭಾರತವು ಸೂಚ್ಯಂಕದಲ್ಲಿ ತನ್ನ ಎರಡು ಸ್ಥಾನವನ್ನು ಕಳೆದುಕೊಂಡಿದೆ. ಮೌರಿಟಾನಿಯಾ ಮತ್ತು ತಜಕಿಸ್ತಾನ ದೇಶಗಳು ಕೂಡ ಭಾರತದೊಂದಿಗೆ 84ನೇ ಶ್ರೇಯಾಂಕವನ್ನು ಹಂಚಿಕೊಂಡಿದೆ.ಭಾರತಕ್ಕಿಂದಲೂ ಚೀನಾ ಪ್ರಭಾವಶಾಲಿ ಪಾಸ್‌ಪೋರ್ಟ್ ಹೊಂದಿದೆ. ಚೀನಾ ಈ ಪಟ್ಟಿಯಲ್ಲಿ 71ನೇ ಸ್ಥಾನದಲ್ಲಿದೆ.

   ಭಾರತಕ್ಕೆ ಎಲ್ಲೆಲ್ಲಿ ಮುಕ್ತ ಪ್ರವೇಶ?

   ಭಾರತಕ್ಕೆ ಎಲ್ಲೆಲ್ಲಿ ಮುಕ್ತ ಪ್ರವೇಶ?

   ಹೆನ್ಲಿ ಪಾಸ್‌ಪೋರ್ಟ್ ಸೂಚ್ಯಂಕ 2020ರ ಪ್ರಕಾರ ಅಫ್ಘಾನಿಸ್ತಾನ ಅತ್ಯಂತ ಕಳಪೆ ಪಾಸ್‌ಪೋರ್ಟ್ ಸಾಮರ್ಥ್ಯ ಹೊಂದಿದ್ದರೆ, ಪಾಕಿಸ್ತಾನ ನಾಲ್ಕನೇ ಕಳಪೆ ಪಾಸ್‌ಪೋರ್ಟ್ ಹೊಂದಿದೆ. ಭಾರತದ ಪಾಸ್‌ಪೋರ್ಟ್ ಹೊಂದಿರುವವರು ಭೂತಾನ್, ನೇಪಾಳ, ಕಾಂಬೋಡಿಯಾ, ಇಂಡೋನೇಷ್ಯಾ, ಮಕಾವೊ, ಮಾಲ್ಡೀವ್ಸ್, ಮಯನ್ಮಾರ್, ಶ್ರೀಲಂಕಾ, ಥಾಯ್ಲೆಂಡ್, ಕೆನ್ಯಾ, ಮಾರಿಷಸ್, ಸೇಷಲ್ಸ್, ಜಿಂಬಾಬ್ವೆ, ಉಗಾಂಡ, ಇರಾನ್ ಮತ್ತು ಖತಾರ್‌ಗೆ ತೆರಳಲು ವೀಸಾದ ಅಗತ್ಯವಿಲ್ಲ. ಇನ್ನು ಕೆಲವು ದೇಶಗಳಿಗೆ ಪ್ರವೇಶಿಸಿದ ಬಳಿಕ ವೀಸಾ ಪಡೆದುಕೊಳ್ಳಬೇಕಾಗುತ್ತದೆ.

   ಪಾಸ್‌ಪೋರ್ಟ್‌ನಲ್ಲಿ ಬಿಜೆಪಿಯ ಕಮಲ ಚಿಹ್ನೆ ಬಳಸಿದ್ದೇಕೆ?

   ಶಕ್ತಿಶಾಲಿ ಪಾಸ್‌ಪೋರ್ಟ್ ದೇಶಗಳು

   ಶಕ್ತಿಶಾಲಿ ಪಾಸ್‌ಪೋರ್ಟ್ ದೇಶಗಳು

   ಟಾಪ್ 10 ಶಕ್ತಿಶಾಲಿ ಪಾಸ್‌ಪೋರ್ಟ್ ದೇಶಗಳು ಮತ್ತು ಅವುಗಳು ವೀಸಾ ಇಲ್ಲದೆ ಪ್ರವೇಶಿಸಬಹುದಾದ ದೇಶಗಳ ಪಟ್ಟಿ ಇಲ್ಲಿದೆ.

   ಜಪಾನ್ - 191

   ಸಿಂಗಪುರ- 190

   ಜರ್ಮನಿ, ದಕ್ಷಿಣ ಕೊರಿಯಾ- 189

   ಫಿನ್ಲೆಂಡ್, ಇಟಲಿ-188

   ಡೆನ್ಮಾರ್ಕ್, ಲಕ್ಸಂಬರ್ಗ್, ಸ್ಪೇನ್- 187

   ಫ್ರಾನ್ಸ್, ಸ್ವೀಡನ್- 186

   ಆಸ್ಟ್ರಿಯಾ, ಐರ್ಲೆಂಡ್, ನೆದರ್‌ಲ್ಯಾಂಡ್ಸ್, ಪೋರ್ಚುಗಲ್, ಸ್ವಿಟ್ಜರ್ಲೆಂಡ್- 185

   ಬೆಲ್ಜಿಯಂ, ಗ್ರೀಸ್, ನಾರ್ವೆ, ಯುಕೆ, ಯುಎಸ್‌ಎ-184

   ಆಸ್ಟ್ರೇಲಿಯಾ, ಕೆನಡಾ, ಜೆಕ್ ರಿಪಬ್ಲಿಕ್, ಮಾಲ್ಟಾ, ನ್ಯೂಜಿಲ್ಯಾಂಡ್- 183

   ಹಂಗೆರಿ, ಲಿಥುವಾನಿಯಾ, ಸ್ಲೊವೇಕಿಯಾ- 181

   ಜಗತ್ತಿನ ಕಳಪೆ ಪಾಸ್‌ಪೋರ್ಟ್‌ಗಳ್ಯಾವುವು?

   ಜಗತ್ತಿನ ಕಳಪೆ ಪಾಸ್‌ಪೋರ್ಟ್‌ಗಳ್ಯಾವುವು?

   ಅಫ್ಘಾನಿಸ್ತಾನ- 26

   ಇರಾಕ್- 28

   ಸಿರಿಯಾ- 29

   ಪಾಕಿಸ್ತಾನ, ಸೊಮೇಲಿಯಾ- 32

   ಯೆಮನ್- 33

   ಲಿಬಿಯಾ- 37

   ನೇಪಾಳ, ಪ್ಯಾಲೆಸ್ಟೀನ್ ಪ್ರದೇಶ- 38

   ಉತ್ತರ ಕೊರಿಯಾ, ಸುಡಾನ್- 39

   ಕೊಸೋವೊ, ಲೆಬನಾನ್- 40

   ಬಾಂಗ್ಲಾದೇಶ, ಕಾಂಗೊ, ಎರಿಟ್ರಿಯಾ, ಇರಾನ್- 41

   ಭಾರತೀಯರಿಗೆ ಅಮೆರಿಕ ವೀಸಾ ಪ್ರಕ್ರಿಯೆ ಇನ್ನು ಸರಳ

   English summary
   India slips to 84 from 82nd place in the World's most powerful passport index 2020. Japan continues to dominate in the top.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X
   We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more