ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಾಲಿನ್ಯದಿಂದ ಮರಣ: ಕಲುಷಿತ ನಗರಗಳ ಪಟ್ಟಿಯಲ್ಲಿ ದೆಹಲಿಗೆ ಅಗ್ರಸ್ಥಾನ!

|
Google Oneindia Kannada News

ನವದೆಹಲಿ, ಆಗಸ್ಟ್ 18: ಜಗತ್ತಿನಲ್ಲೇ ಅತಿಹೆಚ್ಚು ಮಾಲಿನ್ಯವನ್ನು ಹೊಂದಿರುವ ನಗರಗಳ ಪಟ್ಟಿಯಲ್ಲಿ ರಾಷ್ಟ್ರ ರಾಜಧಾನಿ ಅಗ್ರಸ್ಥಾನದಲ್ಲಿ ಗುರುತಿಸಿಕೊಂಡಿದೆ, ಇದರ ಜೊತೆಗೆ ಕೋಲ್ಕತ್ತಾ ಎರಡನೇ ಸ್ಥಾನದಲ್ಲಿ ಕಾಣಿಸಿಕೊಂಡಿದೆ.

ಸರಾಸರಿ ವಾರ್ಷಿಕ ಜನಸಂಖ್ಯೆ-ಆಧಾರದಲ್ಲಿ PM 2.5 ಮಾನ್ಯತೆಗೆ ಸಂಬಂಧಿಸಿದಂತೆ ದೆಹಲಿ ಮತ್ತು ಕೋಲ್ಕತ್ತಾ ವಿಶ್ವದ ಎರಡು ಅತ್ಯಂತ ಕಲುಷಿತ ನಗರಗಳಾಗಿವೆ ಎಂದು ತಿಳಿದು ಬಂದಿದೆ. ವಾಣಿಜ್ಯನಗರಿ ಮುಂಬೈ ಈ ಪಟ್ಟಿಯಲ್ಲಿ 14ನೇ ಸ್ಥಾನದಲ್ಲಿ ಗುರುತಿಸಿಕೊಂಡಿವೆ. NO2 ಸರಾಸರಿ ಮಾನ್ಯತೆಗೆ ಸಂಬಂಧಿಸಿದಂತೆ ಶಾಂಘೈ ಅತ್ಯಂತ ಕೆಟ್ಟ ನಗರವಾಗಿ ಗುರುತಿಸಿಕೊಂಡಿದೆ. ಆದರೆ ಯಾವುದೇ ಭಾರತೀಯ ನಗರವು ಟಾಪ್-20ರಲ್ಲಿ ಇಲ್ಲ.

ಎಚ್ಚರಿಕೆ ಇರಲಿ: ವಾಯು ಮಾಲಿನ್ಯಕ್ಕೂ ಉಂಟು ಉಸಿರು ಕಿತ್ತುಕೊಳ್ಳುವ ತಾಕತ್ತು!ಎಚ್ಚರಿಕೆ ಇರಲಿ: ವಾಯು ಮಾಲಿನ್ಯಕ್ಕೂ ಉಂಟು ಉಸಿರು ಕಿತ್ತುಕೊಳ್ಳುವ ತಾಕತ್ತು!

ಆರೋಗ್ಯ ಪರಿಣಾಮಗಳ ಸಂಸ್ಥೆಯ (HEI) ಸ್ಟೇಟ್ ಆಫ್ ಗ್ಲೋಬಲ್ ಏರ್ ಇನಿಶಿಯೇಟಿವ್ ಬಿಡುಗಡೆ ಮಾಡಿರುವ ಹೊಸ ವರದಿಯಲ್ಲಿ ವಾಯುಮಾಲಿನ್ಯ ಮತ್ತು ಆರೋಗ್ಯಕರ ನಗರಗಳ ಪಟ್ಟಿಯ ಬಗ್ಗೆ ಉಲ್ಲೇಖಿಸಲಾಗಿದೆ. ಒಟ್ಟು 7,000 ನಗರಗಳನ್ನು ಅಧ್ಯಯನಕ್ಕೆ ಒಳಪಡಿಸಲಾಗಿದೆ, ಆದರೂ ಕೇವಲ 103 ನಗರಗಳು ಮತ್ತು ಆರು ಪ್ರದೇಶಗಳಲ್ಲಿ ಹೆಚ್ಚು ಜನಸಂಖ್ಯೆ ಹೊಂದಿರುವ ನಗರಗಳು ಎಂದು ಪರಿಗಣಿಸಲಾಗಿದೆ.

ದೆಹಲಿಯಲ್ಲಿ ಮಾಲಿನ್ಯ ತಂದ ಸಾವುಗಳು ಎಷ್ಟು?

ದೆಹಲಿಯಲ್ಲಿ ಮಾಲಿನ್ಯ ತಂದ ಸಾವುಗಳು ಎಷ್ಟು?

PM 2.5- ಮಾಲಿನ್ಯಕ್ಕೆ ಸಂಬಂಧಿಸಿದಂತೆ ಹಲವು ಕಾಯಿಲೆಗಳು ಜನರನ್ನು ಸಾವಿನ ಮನೆ ಸೇರಿಸುತ್ತಿದೆ. ಈ ವಿಚಾರದಲ್ಲಿ ಚೀನಾದ ಬೀಜಿಂಗ್ ಅಗ್ರಸ್ಥಾನದಲ್ಲಿ ಗುರುತಿಸಿಕೊಂಡಿದೆ. ಬೀಜಿಂಗ್ ನೆಲದಲ್ಲಿ ವಾಯುಮಾಲಿನ್ಯದಿಂದ ಅಂಟಿಕೊಂಡ ರೋಗಕ್ಕೆ ಪ್ರತಿ 1,00,000 ಜನರಲ್ಲಿ 124 ಮಂದಿ ಪ್ರಾಣ ಬಿಟ್ಟಿದ್ದಾರೆ. ಅದೇ ರೀತಿ ಎಂಟನೇ ಸ್ಥಾನದಲ್ಲಿರುವ ದೆಹಲಿಯಲ್ಲಿ 1 ಲಕ್ಷಕ್ಕೆ 106 ಮಂದಿ ಮಾಲಿನ್ಯದಿಂದ ಉಂಟಾಗುವ ಆರೋಗ್ಯ ಸಮಸ್ಯೆಗಳಿಗೆ ಬಲಿಯಾಗಿದ್ದಾರೆ. ಕೋಲ್ಕತ್ತಾದಲ್ಲಿ ಈ ಸಂಖ್ಯೆಯು 99 ಆಗಿದೆ. ಇನ್ನು ಮಾಲಿನ್ಯ ಸಮಸ್ಯೆಯಿಂದ ಅತಿಹೆಚ್ಚು ಸಾವಿನ ನಗಾರಿ ಬಾರಿಸುವ ಟಾಪ್ 20 ನಗರಗಳ ಪಟ್ಟಿಯಲ್ಲಿ ಚೀನಾದ ಐದು ನಗರಗಳು ಕಾಣಿಸಿಕೊಂಡಿವೆ.

ಶೇ.86ರಷ್ಟು ಮಾಲಿನ್ಯಕಾರಕಗಳಿಗೆ ಒಡ್ಡಿಕೊಳ್ಳುತ್ತಿರುವ ವಾತಾವರಣ

ಶೇ.86ರಷ್ಟು ಮಾಲಿನ್ಯಕಾರಕಗಳಿಗೆ ಒಡ್ಡಿಕೊಳ್ಳುತ್ತಿರುವ ವಾತಾವರಣ

ಜಗತ್ತಿನಾದ್ಯಂತ ಅತಿಹೆಚ್ಚು ಜನಸಂಖ್ಯೆಯನ್ನು ಹೊಂದಿರುವ ನಗರಗಳೆಲ್ಲ PM 2.5 ಮತ್ತು NO2 ಸಂಬಂಧಿಸಿದಂತೆ ವಿಶ್ವ ಆರೋಗ್ಯ ಸಂಸ್ಥೆಯ (WHO) ನೀಡಿದ ಮಾನದಂಡಗಳನ್ನು ಮೀರಿದೆ. ದೆಹಲಿಗೆ 2019ರಲ್ಲಿ ಸರಾಸರಿ PM 2.5 ಮಾನ್ಯತೆಯು ಪ್ರತಿ ಘನ ಮೀಟರ್‌ಗೆ 110 ಮೈಕ್ರೋಗ್ರಾಂಗಳು ಎಂಬುದನ್ನು ವರದಿಯು ಪತ್ತೆ ಮಾಡಿದೆ. ಇದು ವಿಶ್ವ ಆರೋಗ್ಯ ಸಂಸ್ಥೆಯು ನೀಡಿರುವ ಪ್ರತಿ ಘನ ಮೀಟರ್‌ಗೆ 5 ಮೈಕ್ರೋಗ್ರಾಂಗಿಂತ 22 ಪಟ್ಟು ಹೆಚ್ಚಾಗಿದೆ. ಕೋಲ್ಕತ್ತಾವು ಪ್ರತಿ ಘನ ಮೀಟರ್‌ಗೆ ಸರಾಸರಿ 84 ಮೈಕ್ರೋಗ್ರಾಂಗಳಷ್ಟು ಹೆಚ್ಚಾಗಿದೆ. ಶಾಂಘೈ ಪ್ರತಿ ಘನ ಮೀಟರ್‌ಗೆ ಸರಾಸರಿ NO2 ಮಾನ್ಯತೆ 41.6 ಮೈಕ್ರೋಗ್ರಾಂಗಳನ್ನು ಹೊಂದಿದೆ. ಅದೇ ರೀತಿ ರಷ್ಯಾದ ಮಾಸ್ಕೋ ಪ್ರತಿ ಘನ ಮೀಟರ್‌ಗೆ 40.2 ಮೈಕ್ರೋಗ್ರಾಂಗಳಷ್ಟು ಮಾನ್ಯತೆಯನ್ನು ಹೊಂದಿದೆ.

NO2 ಮಾನ್ಯತೆಗೆ WHO ಮಾನದಂಡವು ಪ್ರತಿ ಘನ ಮೀಟರ್‌ಗೆ 10 ಮೈಕ್ರೋಗ್ರಾಂ ಆಗಿರುತ್ತದೆ. 2019ರಲ್ಲಿ ವರದಿಯಲ್ಲಿ ಸೇರಿಸಲಾದ 7,000ಕ್ಕೂ ಹೆಚ್ಚು ನಗರಗಳಲ್ಲಿ ಶೇ.86 ರಷ್ಟು ಮಾಲಿನ್ಯಕಾರಕಗಳಿಗೆ ಒಡ್ಡಿಕೊಳ್ಳುತ್ತಿರುವುದು ವಿಶ್ವ ಆರೋಗ್ಯ ಸಂಸ್ಥೆಯ ಮಾನದಂಡವನ್ನು ಮೀರಿಸಿದೆ. ಆದ್ದರಿಂದ ಸುಮಾರು 2.6 ಶತಕೋಟಿ ಜನರ ಮೇಲೆ ಇದು ಪರಿಣಾಮ ಬೀರುತ್ತದೆ

ಮಾಲಿನ್ಯದಿಂದ ದೆಹಲಿಯಲ್ಲಿ ಸತ್ತವರು ಎಷ್ಟು ಜನ?

ಮಾಲಿನ್ಯದಿಂದ ದೆಹಲಿಯಲ್ಲಿ ಸತ್ತವರು ಎಷ್ಟು ಜನ?

ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ವಾಯು ಮಾಲಿನ್ಯಕ್ಕೆ ಒಡ್ಡಿಕೊಳ್ಳುವುದರಿಂದ 2019ರಲ್ಲಿಯೇ 29,900 ಮಂದಿ ಪ್ರಾಣ ಬಿಟ್ಟಿದ್ದಾರೆ. ಅದೇ ರೀತಿ ಕೋಲ್ಕತ್ತಾದಲ್ಲಿ 21,380 ಜನರು ಮೃತಪಟ್ಟಿದ್ದರೆ, ಮುಂಬೈನಲ್ಲಿ 16,020 ಮಂದಿ ಸಾವನ್ನಪ್ಪಿದ್ದಾರೆ. ಚೀನಾದ ಬೀಜಿಂಗ್ ನೆಲದಲ್ಲಿ ಇದೇ ಕಾರಣಕ್ಕೆ 26,270 ಜನರು ಸಾವಿನ ಮನೆ ಸೇರಿದ್ದಾರೆ ಎಂಬುದು ಅಧ್ಯಯನದಿಂದ ತಿಳಿದು ಬಂದಿದೆ.

PM 2.5 ಮತ್ತು NO2 ಅಪಾಯವುಳ್ಳ ನಗರಗಳು

PM 2.5 ಮತ್ತು NO2 ಅಪಾಯವುಳ್ಳ ನಗರಗಳು

2010 ರಿಂದ 2019 ರವರೆಗಿನ ಅಂಕಿ-ಅಂಶಗಳನ್ನು ಬಳಸಿ ವರದಿಯನ್ನು ಸಿದ್ಧಪಡಿಸಲಾಗಿದ್ದು, ಈ ವೇಳೆ ಎರಡು ಪ್ರಮುಖ ವಾಯು ಮಾಲಿನ್ಯಕಾರಕಗಳಾದ NO2 ಮತ್ತು PM 2.5ಗೆ ಒಡ್ಡಿಕೊಳ್ಳುವ ಅಂಶ ಬೆಳಕಿಗೆ ಬಂದಿದೆ.

ಕಡಿಮೆ ಮತ್ತು ಮಧ್ಯಮ-ಆದಾಯದ ದೇಶಗಳಲ್ಲಿರುವ ನಗರಗಳಲ್ಲಿ ಸೂಕ್ಷ್ಮವಾದ ಕಣಗಳ ಮಾನ್ಯತೆ ಹೆಚ್ಚಿರುವುದು ಕಂಡುಬಂದರೆ, ಹೆಚ್ಚಿನ ಆದಾಯದ ಮತ್ತು ಮಧ್ಯಮ-ಆದಾಯದ ದೇಶಗಳಲ್ಲಿನ ನಗರಗಳಲ್ಲಿ ನೈಟ್ರೋಜನ್ ಡೈಆಕ್ಸೈಡ್ ಅಥವಾ NO2 ಗೆ ಒಡ್ಡಿಕೊಳ್ಳುವುದು ಹೆಚ್ಚಾಗಿದೆ. NO2 ಅನ್ನು ಪ್ರಾಥಮಿಕವಾಗಿ ವಾಹನಗಳಿಂದ ಮತ್ತು ವಿದ್ಯುತ್ ಸ್ಥಾವರಗಳ ಮೂಲಕ ಹೊರಸೂಸುವಿಕೆಯ ರೂಪದಲ್ಲಿ ಬಿಡುಗಡೆ ಮಾಡಲಾಗುತ್ತದೆ.

ಎಂಥಾ ರಾಷ್ಟ್ರಗಳ ಪ್ರಮುಖ ನಗರಗಳಲ್ಲಿ ವಾಯುಮಾಲಿನ್ಯ?

ಎಂಥಾ ರಾಷ್ಟ್ರಗಳ ಪ್ರಮುಖ ನಗರಗಳಲ್ಲಿ ವಾಯುಮಾಲಿನ್ಯ?

"ಪ್ರಪಂಚದಾದ್ಯಂತ ನಗರಗಳು ವೇಗವಾಗಿ ಬೆಳೆಯುತ್ತಿರುವಂತೆ, ನಿವಾಸಿಗಳ ಆರೋಗ್ಯದ ಮೇಲೆ ವಾಯುಮಾಲಿನ್ಯದ ಪರಿಣಾಮಗಳು ಹೆಚ್ಚಾಗುವ ನಿರೀಕ್ಷೆಯಿದೆ. ಈ ಮಾಲಿನ್ಯವನ್ನು ಕಡಿಮೆ ಮಾಡಲು ಮೂಲಕ ಸಾರ್ವಜನಿಕ ಆರೋಗ್ಯವನ್ನು ರಕ್ಷಿಸುವುದು ತೀರಾ ಅಗತ್ಯವಾಗಿದೆ," ಎಂದು HEI ಹಿರಿಯ ವಿಜ್ಞಾನಿ ಪಲ್ಲವಿ ಪಂತ್ ಒತ್ತಿ ಹೇಳಿದ್ದಾರೆ.

ಈ ವಿಶ್ಲೇಷಣೆಯು ಕಡಿಮೆ ಮತ್ತು ಮಧ್ಯಮ-ಆದಾಯದ ರಾಷ್ಟ್ರಗಳಲ್ಲಿನ ಅಂಕಿ-ಅಂಶಗಳ ಮಧ್ಯೆ ಇರುವ ಅಂತರವನ್ನು ಎತ್ತಿ ತೋರಿಸಿದೆ. ವಿಶ್ವ ಆರೋಗ್ಯ ಸಂಸ್ಥೆಯು ವಾಯು ಗುಣಮಟ್ಟದ ಡೇಟಾಬೇಸ್ ಅನ್ನು ಉಲ್ಲೇಖಿಸಿ, PM2.5 ಅನ್ನು ಪತ್ತೆಹಚ್ಚಲು ಕೇವಲ 117 ರಾಷ್ಟ್ರಗಳು ಪ್ರಸ್ತುತ ನೆಲಮಟ್ಟದ ಮೇಲ್ವಿಚಾರಣಾ ವ್ಯವಸ್ಥೆಯನ್ನು ಹೊಂದಿವೆ. 74 ರಾಷ್ಟ್ರಗಳು ಮಾತ್ರ NO2 ಮಟ್ಟವನ್ನು ಮೇಲ್ವಿಚಾರಣೆ ಮಾಡಲು ಅವಕಾಶವಿದೆ ಎಂದು ಹೇಳಿದೆ.

"ನೆಲಮಟ್ಟದ ವಾಯು ಗುಣಮಟ್ಟ ಮೇಲ್ವಿಚಾರಣಾ ವ್ಯವಸ್ಥೆಗಳಲ್ಲಿನ ಕಾರ್ಯತಂತ್ರದ ಹೂಡಿಕೆ ಮಾಡಬೇಕಾಗುತ್ತದೆ. ಆ ಮೂಲಕ ಉದ್ದೇಶಿತ ಪ್ರದೇಶಗಳಲ್ಲಿ ಉಪಗ್ರಹ ವಿಸ್ತರಿತ ಬಳಕೆ ಮತ್ತು ಇತರ ಉದಯೋನ್ಮುಖ ತಂತ್ರಜ್ಞಾನಗಳ ಶುದ್ಧ ಗಾಳಿಯ ಕಡೆಗೆ ನಿರ್ಣಾಯಕ ಕ್ರಮ ಕೈಗೊಳ್ಳಬಹುದು," ಎಂದು ಅಧ್ಯಯನವು ತಿಳಿಸಿದೆ.

English summary
World’s most polluted cities: Delhi tops and Kolkata 2nd place in List. Know More.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X