ವರ್ಕ್ ಫ್ರಂ ಹೋಂ ಬೇಕಾದ್ರೆ ಈ ಕಂಡೀಷನ್​ ಒಪ್ಪಬೇಕು : ಕಂಪನಿಯ ಡಿಮ್ಯಾಂಡ್ ಕೇಳಿ ಕೆಲಸ ಬಿಟ್ಟ ಉದ್ಯೋಗಿ

Work From Home: ಮೊದಲೆಲ್ಲಾ ಕೆಲಸ ಎಂದರೆ ಆಫೀಸಿಗೆ ಹೋಗಲೇಬೇಕು. ಆದರೆ ಈಗ ಹಾಗಲ್ಲ. ಬಹುತೇಕ ಎಲ್ಲಾ ಕಂಪನಿಗಳಲ್ಲಿ ವರ್ಕ್ ಫ್ರಂ ಹೋಂ ಆಯ್ಕೆ ಇರುತ್ತದೆ. ಕರೋನಾ (Covid) ಅವಧಿಯ ನಂತರ ಈ ಕಾನ್ಸೆಪ್ಟ್ ಹೆಚ್ಚು ಜನಪ್ರಿಯವಾಯಿತು. ಕೆಲವು ಕಂಪನಿಗಳು ಹೈಬ್ರೀಡ್ ಮೋಡ್​ ನಲ್ಲಿ ಕೆಲಸ ಮಾಡುವ ಅವಕಾಶ ಕೊಟ್ಟರೆ ಇನ್ನು ಕೆಲವು ಕಂಪನಿಗಳು ಕಂಪ್ಲೀಟ್ ವರ್ಕ್ ಫ್ರಂ ಹೋಂ ಆಪ್ಶನ್ ನೀಡುತ್ತಿದೆ.

ಸಾಮಾನ್ಯವಾಗಿ ವರ್ಕ್ ಫ್ರಂ ಹೋಂ (Work From Home )ಅಂದ ಕೂಡಲೇ ಬಹಳ ಆರಾಮ ಎನ್ನುವ ಯೋಚನೆಯೇ ಮೊದಲು ಬರುವುದು. ಮನೆಯಿಂದ ಕೆಲಸ ಮಾಡುವುದು ಎಂದರೆ ಫುಲ್ ಫ್ರೀ ಎನ್ನುವಂತೆ ಮಾತನಾಡುವವರೇ ಹೆಚ್ಚು. ಆಫೀಸ್ ಕೆಲಸದ ಜೊತೆಗೆ ಮನೆಯನ್ನೂ ನೋಡಿಕೊಳ್ಳಬಹುದು ಏನೂ ತೊಂದರೆ ಇಲ್ಲ ಎನ್ನುವ ಲೆಕ್ಕಾಚಾರ ಹಲವರದ್ದು. ಕಂಪನಿಗಳು ಕೂಡಾ ಹಾಗೆಯೇ ವರ್ಕ್ ಫ್ರಂ ಹೋಂನಲ್ಲಿ ಎರಡುಪಟ್ಟು ದುಡಿಸಿಕೊಂಡರೂ ಉಪಕಾರ ಮಾಡುತ್ತಿರುವ ಹಾಗೆಯೇ ವರ್ತಿಸುವುದು.

Work From Home IIT Kanpur Graduate Shares Working Hour And Culture Post Went Viral Debate Start

Work From Home ಎಷ್ಟು ಸುಲಭ ?:

ವರ್ಕ್ ಫ್ರಂ ಹೋಂ ನಿಜಕ್ಕೂ ಆರಾಮಾನಾ? ಮನೆ ಕೆಲಸ ಆಫೀಸ್ ಅನ್ನು ಒಟ್ಟಿಗೆ ಸಂಭಾಳಿಸಿಕೊಂಡು ಹೋಗುವುದು ಅವರಿಗೆ ಸಾಧ್ಯವಾಗುತ್ತಾ ಎನ್ನುವ ಚರ್ಚೆ ಇದೀಗ ಹುಟ್ಟಿಕೊಂಡಿದೆ. ಇಲ್ಲೊಬ್ಬ ಮಹಿಳೆ ವರ್ಕ್ ಫ್ರಂ ಹೋಮ್ ಮಾಡುತ್ತಿದ್ದರು. ಆದರೆ ಇದೀಗ ತಮ್ಮ ಕೆಲಸಕ್ಕೆ ರಾಜೀನಾಮೆ ಕೊಟ್ಟಿದ್ದಾರೆ. ಅವರು ಕೆಲಸ ಬಿಡುವುದಕ್ಕೆ ಕೊಟ್ಟಿರುವ ಕಾರಣ ಏನು ಗೊತ್ತಾ? ಕಂಪನಿಯ ಪ್ರಕಾರ ಇವರು ವರ್ಕ್ ಫ್ರಂ ಹೋಂನಲ್ಲಿರುವ ಕಾರಣ ಯಾವಾಗಲೂ ಆನ್ ಲೈನ್ ನಲ್ಲೇ ಇರಬೇಕು. ಬೆಳಿಗ್ಗೆ 10 ರಿಂದ ಸಂಜೆ 6 ರವರೆಗೂ ಆನ್ ಲೈನ್ ನಲ್ಲಿ ಇರಬೇಕು. ಎಲ್ಲಿಯೂ ಎದ್ದು ಹೋಗುವ ಹಾಗೆಯೇ ಇಲ್ಲ. ಈ ಘಟನೆ ಕೆಲಸದ ಸಮಯ, ಉದ್ಯೋಗಿಗಳ ಸ್ವಾತಂತ್ರ್ಯ ಮತ್ತು ಕಂಪನಿಗಳ ನಂಬಿಕೆಯ ಬಗ್ಗೆ ಹೊಸ ಚರ್ಚೆ ಹುಟ್ಟುಹಾಕಿದೆ.

Work From Home ಬಗ್ಗೆ ಚರ್ಚೆ :

IIT ಕಾನ್ಪುರದ ಹಳೆ ವಿದ್ಯಾರ್ಥಿ ಮತ್ತು ಮೆಕಿನ್ಸೆಯ ಹಳೆ ವಿದ್ಯಾರ್ಥಿ ಕನಕ್ ಅಗರ್ವಾಲ್ ಈ ಘಟನೆಯ ಬಗ್ಗೆ ಲಿಂಕ್ಡ್ಇನ್​ ನಲ್ಲಿ ಶೇರ್ ಮಾಡಿದ್ದಾರೆ. ತಮ್ಮ ಫ್ರೆಂಡ್​ ಅನುಭವವನ್ನು ಇಲ್ಲಿ ಬರೆದುಕೊಂಡಿದ್ದಾರೆ. ಯಾವುದೇ ಉದ್ಯೋಗಿ ಮನೆಯಿಂದ ಕೆಲಸ ಮಾಡುವಾಗಲೂ ಆಫೀಸಿನ ವೇಳಾಪಟ್ಟಿ ಅನುಸರಿಸಬೇಕಾದರೆ, ರಿಮೋಟ್ ಕೆಲಸದ ನಿಜವಾದ ಪ್ರಯೋಜನ ಏನು ಎನ್ನುವುದು ಅವರ ಪ್ರಶ್ನೆ. ಕನಕ್ ಪ್ರಕಾರ, ಈ ಕಾರಣಕ್ಕಾಗಿಯೇ ಅವರ ಫ್ರೆಂಡ್ ಕೆಲಸ ಬಿಟ್ಟಿದ್ದಾರೆ. ಅವರು ಮನೆಯಿಂದಲೇ ಕೆಲಸ ಮಾಡುತ್ತಿದ್ದರು. ಆದರೆ ಅವರು ಇಡೀ ದಿನ ಆನ್​ ಲೈನಿನಲೇ ಇರಬೇಕಾಗಿತ್ತು. ಯಾವ ಹೊತ್ತಿಗೆ ಕೆಲಸ ಕೊಟ್ಟರೂ ಮಾಡಬೇಕಾಗಿತ್ತು. ಕನಕ್ ಹೇಳುವ ಪ್ರಕಾರ ಇಲ್ಲಿ ವರ್ಕ್ ಫ್ರಂ ಹೋಂ ಅಥವಾ ವರ್ಕ್ ಫ್ರಂ ಆಫೀಸ್ ಎನ್ನುವುದು ವಿಚಾರವೇ ಅಲ್ಲ. ಇದು ಒಬ್ಬರ ಸಮಯವನ್ನು ನಿಯಂತ್ರಿಸುವ ಸ್ವಾತಂತ್ರ್ಯದ ವಿಷಯ.

ಕೆಲಸ ಅಲ್ಲ ಆನ್ ಲೈನಿನಲ್ಲಿರುವುದು ಮುಖ್ಯ :

ಇಲ್ಲಿ ಉದ್ಯೋಗಿ (employees) ಎಲ್ಲೇ ಇರಲಿ ಕೆಲಸ ನೀಟಾಗಿ ನಡೆಯುತ್ತಿದೆ ಎನ್ನುವ ಯೋಚನೆ ಕಂಪನಿಗಾಗಲಿ ಮೇಲಾಧಿಕಾರಿಗಾಗಲಿ ಇಲ್ಲವೇ ಇಲ್ಲ. ಅವರಿಗೆ ಕೆಲಸ ಅಚ್ಚುಕಟ್ಟಾಗಿ ನಡೆಯುತ್ತಿದೆ ಎನ್ನುವುದಕ್ಕಿಂತ ಆನ್ ಲೈನಿನಲ್ಲಿ ಇದ್ದಾರೋ ಇಲ್ಲವೋ ಎನ್ನುವುದನ್ನು ಚೆಕ್ ಮಾಡುವುದೇ ಆಗಿದೆ. ಒಂದು ವೇಳೆ ಉದ್ಯೋಗಿ ಆನ್ ಲೈನಿನಲ್ಲಿ ಇಲ್ಲ ಎಂದರೆ ಅವರ ಮೇಲಿನ ಕಂಟ್ರೋಲ್ ತಪ್ಪುತ್ತದೆ ಎನ್ನುವ ಭಯ. ಅನ್​ಲೈನಿನಲ್ಲಿದ್ದುಕೊಂಡು ಕೆಲಸ ಮಾಡುತ್ತಾರೋ ಬಿಡುತ್ತಾರೋ ಅದು ಅಗತ್ಯವಿಲ್ಲ. ಒಟ್ಟಿನಲ್ಲಿ ಆನ್ಲೈನಿನಲ್ಲಿರುವುದು ಮುಖ್ಯ ಅಷ್ಟೇ.

ಬೇರೆ ಬೇರೆ ರೀತಿಯ ಕಾಮೆಂಟ್ :

ಲಿಂಕ್ಡ್ ಇನ್ ನಲ್ಲಿ ಮಾಡಿರುವ ಈ ಪೋಸ್ಟ್ ಗೆ ತುಂಬಾ ಜನ ರಿಯಾಕ್ಟ್ ಮಾಡಿದ್ದಾರೆ. ರಿಮೋಟ್ ವರ್ಕ್ ಮತ್ತು ಫ್ಲೆಕ್ಸಿಬಲ್ ಅವರ್ ವರ್ಕಿಂಗ್ ಎನ್ನುವುದು ಎರಡು ಬೇರೆ ಬೇರೆ ವಿಷಯ ಎನ್ನುವುದರ ಬಗ್ಗೆ ಮಾತನಾಡಿದ್ದಾರೆ. ಇನ್ನು ಕೆಲವರು ಟೀಂ ವರ್ಕ್​ ನ ಸವಾಲುಗಳ ಬಗ್ಗೆ ಮಾತನಾಡಿದ್ದಾರೆ. ಅವರ ಪ್ರಕಾರ, ಪ್ರತಿಯೊಬ್ಬ ಉದ್ಯೋಗಿ ತನ್ನ ಅನುಕೂಲಕ್ಕೆ ಅನುಗುಣವಾಗಿ ತನಗೆ ಬೇಕಾದ ಟೈಂನಲ್ಲಿ ಕೆಲಸ ಮಾಡಿದರೆ, ಮೀಟಿಂಗ್ ಮಾತುಕತೆ, ಪ್ರಮುಖ ಕೆಲಸಗಳನ್ನು ಸಂಬಾಳಿಸಿಕೊಂಡು ಹೋಗುವುದು ಕಷ್ಟವಾಗಬಹುದು.

ಉದ್ಯೋಗಿಗಳು ಏನು ಬಯಸುತ್ತಾರೆ?

ಇಂದು ಉದ್ಯೋಗಿಗಳಿಗೆ ಮನೆಯಿಂದ ಕೆಲಸ ಮಾಡುವುದಷ್ಟೇ ಸಾಕಾಗುವುದಿಲ್ಲ ಎನ್ನುವುದು ಈ ಚರ್ಚೆಯಿಂದ ಸ್ಪಷ್ಟವಾಗುತ್ತದೆ. ಅವರು ತಮ್ಮ ಕೆಲಸದ (work) ಗುಣಮಟ್ಟ ಮತ್ತು ರಿಸಲ್ಟ್ ಬಗ್ಗೆಯೂ ಯೋಚಿಸಬೇಕು. ವೈಯಕ್ತಿಕ ಜೀವನಕ್ಕೆ ಸಮಯ ಹೊಂದಿಸಿಕೊಳ್ಳಬೇಕು. ಆದರೆ, ಪ್ರತಿಯೊಂದು ಕೆಲಸದಲ್ಲೂ ಒಂದೇ ರೀತಿಯ ಸ್ವಾತಂತ್ರ್ಯ ಸಾಧ್ಯವಿಲ್ಲ. ಕಂಪನಿ ತಂಡದ ಅಗತ್ಯತೆ ಮತ್ತು ಉದ್ಯೋಗಿಗಳ ಸ್ವಾತಂತ್ರ್ಯದ ನಡುವೆ ಸಮತೋಲನ ಸಾಧಿಸಬೇಕು. ಉದ್ಯೋಗಿಗಳು ಎಲ್ಲಿಂದ ಕೆಲಸ ಮಾಡುತ್ತಾರೆ ಎನ್ನುವುದು ಪ್ರಶ್ನೆಯಲ್ಲ. ಕೆಲಸ ಮತ್ತು ಸಮಯವನ್ನು ಸಂಘಟಿಸಲು ಎಷ್ಟು ಸ್ವಾತಂತ್ರ್ಯವಿದೆ ಎನ್ನುವುದು ಮುಖ್ಯವಾಗುತ್ತದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+