ಮಹಿಳೆಯರಿಗೆ ಗೌರಿ ಹಬ್ಬದ ಉಡುಗೊರೆ ಕೊಟ್ಟ ಕೇಂದ್ರ ಸರ್ಕಾರ?
ಕೇಂದ್ರ ಸರ್ಕಾರ ಗೌರಿ-ಗಣೇಶ ಹಬ್ಬದ ಸಮಯದಲ್ಲೇ ಭರ್ಜರಿ ಸುದ್ದಿ ಕೊಟ್ಟಿದೆ. ದೇಶದ ಮಹಿಳೆಯರಿಗೆ ಇಷ್ಟುದಿನ ಸಿಗಬೇಕಾಗಿದ್ದ ನ್ಯಾಯಕ್ಕೆ ಮನ್ನಣೆ ಕೊಟ್ಟಿದೆ. ಇಂದು ಪ್ರಧಾನಿ ಮೋದಿ ನೇತೃತ್ವದಲ್ಲಿ ನಡೆದ ಕೇಂದ್ರ ಸರ್ಕಾರದ ಕ್ಯಾಬಿನೆಟ್ ಸಭೆಯಲ್ಲಿ ಈ ಮಹತ್ವದ ನಿರ್ಧಾರಕ್ಕೆ ಅಂತಿಮ ಮುದ್ರೆ ಬಿದ್ದಿದೆಯಂತೆ. ಹಾಗಾದರೆ ಏನದು ಗೌರಿ ಹಬ್ಬದ ಭರ್ಜರಿ ಉಡುಗೊರೆ? ಸಂಪೂರ್ಣ ಮಾಹಿತಿ ಇಲ್ಲಿದೆ.
ಲೋಕಸಭೆ & ರಾಜ್ಯ ವಿಧಾನಸಭೆಗಳಲ್ಲಿ ಮಹಿಳೆಯರಿಗೆ ಶೇ. 33ರಷ್ಟು ಸ್ಥಾನಗಳನ್ನು ಮೀಸಲು ಇಡುವ ಕ್ರಮಕ್ಕೆ ಕೇಂದ್ರ ಸರ್ಕಾರ ಕ್ಯಾಬಿನೆಟ್ ಸಭೆಯಲ್ಲಿ ಒಪ್ಪಿಗೆ ನೀಡಿದೆ ಎನ್ನಲಾಗಿದ್ದು, ಈ ಬಗ್ಗೆ ಉನ್ನತ ಮೂಲಗಳು ತಿಳಿಸಿದ್ದಾಗಿ ರಿಪಬ್ಲಿಕ್ ಟಿವಿ ವರದಿ ಮಾಡಿದೆ. ಬರೋಬ್ಬರಿ ಎರಡೂವರೆ ದಶಕದಿಂದ ಕಾಡುತ್ತಿದ್ದ ಈ ಪ್ರಶ್ನೆಗೆ ಅಂತಿಮವಾಗಿ ಹಬ್ಬದಂದೇ ಉತ್ತರ ಸಿಕ್ಕಿದೆ. ಇಂದು ಸಂಜೆ ಪ್ರಧಾನಿ ಮೋದಿ ನೇತೃತ್ವದಲ್ಲಿ ಮಹತ್ವದ ಕ್ಯಾಬಿನೆಟ್ ಸಭೆ ನಡೆಸಲಾಗಿತ್ತು. ಇದೇ ಸಭೆಯಲ್ಲಿ ಮಹಿಳೆಯರಿಗೆ ಶೇಕಡಾ 33ರಷ್ಟು ಮೀಸಲಾತಿ ನೀಡುವ ಕ್ರಮಕ್ಕೆ ಒಪ್ಪಿಗೆ ಸೂಚಿಸಲಾಗಿದೆ ಎಂಬ ಸುದ್ದಿ ಸಂಚಲನ ಸೃಷ್ಟಿಸಿದೆ.

ಗೌರಿ ಹಬ್ಬಕ್ಕೆ ಭಾರತೀಯ ನಾರಿಯರಿಗೆ ಗಿಫ್ಟ್
ಅಷ್ಟಕ್ಕೂ 'ಮಹಿಳಾ ಮೀಸಲಾತಿ' ಮಸೂದೆ ಮೂಲಕ ದೇಶದ ಮಹಿಳೆಯರಿಗೆ ಸೂಕ್ತವಾದ ಸ್ಥಾನಮಾನ ಕಲ್ಪಿಸಬೇಕು ಎಂಬುದು ಕೇಂದ್ರ ಸರ್ಕಾರದ ಉದ್ದೇಶವಾಗಿತ್ತು. ಹೀಗಾಗಿ ಕಳೆದ 27 ವರ್ಷಗಳಿಂದ 'ಮಹಿಳಾ ಮೀಸಲಾತಿ' ಮಸೂದೆ ಜಾರಿಗೆ ತರಲು ಬಿಜೆಪಿ & ಕಾಂಗ್ರೆಸ್‌ನ ಸರ್ಕಾರಗಳು ಯತ್ನಿಸಿದ್ದವು. ಆದರೆ ಇದೀಗ ಅಂತಿಮವಾಗಿ ಮೋದಿ ನೇತೃತ್ವದ ಸರ್ಕಾರವು ಭಾರತದ ಮಹಿಳೆಯರ ಹಲವು ವರ್ಷಗಳ ಕನಸು ನನಸು ಮಾಡಲು ಮುಂದಾಗಿದೆ. ಈ ಬಗ್ಗೆ ಇನ್ನು ಅಧಿಕೃತ ಮಾಹಿತಿ ಹೊರಬಿದ್ದಿಲ್ಲ. ಹಾಗಾದ್ರೆ ಏನಿದು 'ಮಹಿಳಾ ಮೀಸಲಾತಿ' ಮಸೂದೆ? ಸಂಪೂರ್ಣ ಮಾಹಿತಿ ಇಲ್ಲಿದೆ ಮುಂದೆ ಓದಿ.
ವಿಧಾನಸಭೆ & ಲೋಕಸಭೆಯಲ್ಲಿ ನಾರಿಶಕ್ತಿ
ಈಗಿನ ಲೆಕ್ಕಾಚಾರ ಹೇಳುವುದಾದ್ರೆ ಪ್ರಸಕ್ತ ಲೋಕಸಭೆಯಲ್ಲಿ ಕೇವಲ 78 ಮಹಿಳಾ ಸದಸ್ಯರು ಇದ್ದಾರೆ. ಹೀಗಾಗಿ ಒಟ್ಟಾರೆ ಸದಸ್ಯರಲ್ಲಿ ಇದು ಶೇ. 15ಕ್ಕಿಂತ ಕಡಿಮೆ. ರಾಜ್ಯಸಭೆ ಮಹಿಳಾ ಪ್ರಾತಿನಿಧ್ಯ ಶೇಕಡಾ 14ರಷ್ಟಿದೆ ಎಂದು ಕೇಂದ್ರ ಸರ್ಕಾರ ಡಿಸೆಂಬರ್‌ನಲ್ಲಿ ಸಂಸತ್ತಿಗೆ ತಿಳಿಸಿತ್ತು. ಇದಕ್ಕಿಂತ ಬೇಸರದ ಸಂಗತಿ ಎಂದರೆ ಹಲವು ರಾಜ್ಯಗಳ ವಿಧಾನಸಭೆಗಳು ಶೇ 10ಕ್ಕಿಂತ ಕಡಿಮೆ ಮಹಿಳಾ ಪ್ರಾತಿನಿಧ್ಯ ಹೊಂದಿವೆ. ಇದೀಗ 'ಮಹಿಳಾ ಮೀಸಲಾತಿ' ಮಸೂದೆ ಜಾರಿಗೆ ಬಂದ್ರೆ ಆಗ ದೇಶದಲ್ಲಿ ಲೋಕಸಭೆ ಮತ್ತು ವಿಧಾನಸಭೆಯಲ್ಲಿ ಮಹಿಳೆಯರ ಪ್ರಾತಿನಿಧ್ಯವು ಕನಿಷ್ಠ ಶೇಕಡಾ 33ಕ್ಕೆ ತಲುಪಲಿದೆ.

ಭಾರತದ ಇತಿಹಾಸದಲ್ಲೇ ದಿಟ್ಟ ಹೆಜ್ಜೆ
ದೇಶದಲ್ಲಿ ಹಲವು ರಾಜ್ಯಗಳು ಅಂದರೆ ಆಂಧ್ರಪ್ರದೇಶ, ಅಸ್ಸಾಂ, ಅರುಣಾಚಲ ಪ್ರದೇಶವೂ ಸೇರಿದಂತೆ ಗೋವಾ, ಗುಜರಾತ್, ಹಿಮಾಚಲ ಪ್ರದೇಶ, ಕರ್ನಾಟಕ ಮತ್ತು ಮಧ್ಯಪ್ರದೇಶ, ಮಹಾರಾಷ್ಟ್ರ, ಮಣಿಪುರ, ಮೇಘಾಲಯ, ಒಡಿಶಾ, ಸಿಕ್ಕಿಂ, ತಮಿಳುನಾಡು, ತೆಲಂಗಾಣ, ತ್ರಿಪುರ ಮತ್ತು ಪುದುಚೇರಿ ರಾಜ್ಯಗಳು ಈ ಪಟ್ಟಿಗೆ ಸೇರಿವೆ. ಅಂದ್ರೆ ಈ ರಾಜ್ಯಗಳಲ್ಲಿ ಶೇಕಡಾ 10ಕ್ಕಿಂತ ಕಡಿಮೆ ಮಹಿಳಾ ಪ್ರಾತಿನಿಧ್ಯ ಇದೆ. ಈಗ 'ಮಹಿಳಾ ಮೀಸಲಾತಿ' ಮಸೂದೆ ಜಾರಿಗೆ ಬಂದರೆ ಎಲ್ಲವೂ ಬದಲಾಗಲಿದೆ. ಹಾಗೇ ಭಾರತದ ಇತಿಹಾಸದಲ್ಲೇ ಎಂದೂ ಮರೆಯಾಗದ ನಿರ್ಧಾರ ಕೂಡ ಇದಾಗಲಿದೆ.
ಬಿಹಾರ, ಹರಿಯಾಣ, ಪಂಜಾಬ್, ರಾಜಸ್ಥಾನ, ಉತ್ತರಾಖಂಡ, ಉತ್ತರ ಪ್ರದೇಶ, ದೆಹಲಿಗೆ ಶೇ 10-12 ರಷ್ಟು ಮಹಿಳಾ ಶಾಸಕರಿದ್ದು. ಛತ್ತೀಸ್‌ಗಢ, ಪಶ್ಚಿಮ ಬಂಗಾಳ & ಜಾರ್ಖಂಡ್‌ಗಳು ಕ್ರಮವಾಗಿ ಶೇ.14.44, ಶೇ.13.7 ಮತ್ತು ಶೇ.12.35 ಮಹಿಳಾ ಶಾಸಕರೊಂದಿಗೆ ಅಗ್ರಸ್ಥಾನವ ಪಡೆದಿವೆ. ಹೀಗಾಗಿ ಇದೀಗ 'ಮಹಿಳಾ ಮೀಸಲಾತಿ' ಮಸೂದೆ ಜಾರಿಗೆ ಬಂದರೆ ಭಾರತದ ಇತಿಹಾಸದಲ್ಲೇ ಹೊಸ ಮನ್ವಂತರ ಶುರುವಾಗುತ್ತೆ. ಇದೀಗ ಕೇಂದ್ರ ಕ್ಯಾಬಿನೆಟ್ ಸಭೆಯಲ್ಲಿ ಈ ಬಗ್ಗೆ ನಿರ್ಧಾರ ಕೈಗೊಳ್ಳಲಾಗಿದೆ ಎನ್ನಲಾಗಿದ್ದು, ಅಧಿಕೃತ ಮಾಹಿತಿ ಹೊರಬರಬೇಕು.
-
Gold Rate: ಸತತ ಕುಸಿತ ಕಾಣುತ್ತಿರುವ ಬಂಗಾರದ ಬೆಲೆ; ಬೆಂಗಳೂರಿನಲ್ಲಿ ಇಂದಿನ ಚಿನ್ನ, ಬೆಳ್ಳಿ ದರ ಎಷ್ಟು ಗೊತ್ತಾ? -
Gold Price: ಏಪ್ರಿಲ್ನಲ್ಲಿ ಚಿನ್ನದ ದರ ಭವಿಷ್ಯ: ಹೇಗಿರುತ್ತದೆ ಮುಂದಿನ ತಿಂಗಳು ಚಿನ್ನದ ಬೆಲೆ? ವಿಶ್ಲೇಷಣೆ -
ತಿಂಗಳಿಗೆ 10 ಸಾವಿರ ರೂ. ಥೆರಪಿಗೆ, 3 ಸಾವಿರ ನೇಲ್ ಆರ್ಟ್ಗೆ! ಬೆಂಗಳೂರು ಯುವತಿಯ 'Gen Z’' ಖರ್ಚಿನ ಪಟ್ಟಿ Viral -
Ananya Birla: ಆರ್ಸಿಬಿ ಅಭಿಮಾನಿಗಳು ಹಾಗೂ ಸಹೋದರನಿಗೆ ಅನನ್ಯಾ ಬಿರ್ಲಾ ವಿಶೇಷ ಸಂದೇಶ -
Karnataka Weather: ಬಿಸಿಲಿನಿಂದ ಕಂಗೆಟ್ಟಿದ್ದ ಕರುನಾಡಿಗೆ ತಂಪೆರೆಯಲಿದ್ದಾನೆ ವರುಣ; ಎಲ್ಲೆಲ್ಲಿ ಮಳೆ? ಇಲ್ಲಿದೆ ಮಾಹಿತಿ -
March 25 Horoscope: ಈ 3 ರಾಶಿಗಳಿಗೆ ಅದೃಷ್ಟದ ಬಾಗಿಲು ತೆರೆದುಕೊಳ್ಳಲಿದೆ -
SSLC ಇಂಗ್ಲೀಷ್ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು, ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Karnataka Rains: ಧಾರಾಕಾರ ಮಳೆ! 7 ಜಿಲ್ಲೆಗಳಿಗೆ 'ಆರೆಂಜ್', 15ಕ್ಕೂ ಹೆಚ್ಚು ಜಿಲ್ಲೆಗಳಿಗೆ 'ಯೆಲ್ಲೋ' ಅಲರ್ಟ್ -
Gold: ಚಿನ್ನ ಖರೀದಿ ಮತ್ತು ಮಾರಾಟಕ್ಕೆ ಇದು ಒಳ್ಳೆಯ ಸಮಯವಲ್ಲ ಎಂದ ಅರ್ಥಶಾಸ್ತ್ರಜ್ಞೆ ಮೇರಿ ಜಾರ್ಜ್ -
ಡಬಲ್ ಡೆಕ್ಕರ್ ಫ್ಲೈಓವರ್ ಸಹಿತ ನಮ್ಮ ಮೆಟ್ರೋ ಕಾರಿಡಾರ್: ಯೋಜನೆಗೆ ಜೈಕಾದಿಂದ 6,775 ರೂ ಸಾಲ: BMRCL -
ಐಪಿಎಲ್ ಇತಿಹಾಸದಲ್ಲೇ ಆರ್ಸಿಬಿಯ ಹೊಸ ಅಧ್ಯಾಯ: 16,000 ಕೋಟಿಗೆ ಫ್ರಾಂಚೈಸಿ ಖರೀದಿಸಿದ ಆರ್ಯಮನ್ ಬಿರ್ಲಾ ಯಾರು? -
Gold Rate: ದಿಢೀರ್ ಏರಿಕೆ ಕಂಡ ಬಂಗಾರದ ಬೆಲೆ; ಬೆಂಗಳೂರಿನಲ್ಲಿ ಚಿನ್ನದ ದರ ಹೀಗಿದೆ..












Click it and Unblock the Notifications