ಕುಡಿದ ಮತ್ತಿನಲ್ಲಿ ಮಹಿಳಾ ಪೊಲೀಸ್ ಮೇಲೆ ಭೀಕರ ಹಲ್ಲೆ ನಡೆಸಿದ ಯುವಕರು: ಮುಂದೆನಾಯ್ತು?
ಚೆನ್ನೈ, ಜನವರಿ 09: ಸಾರ್ವಜನಿಕ ಸ್ಥಳಗಳಲ್ಲಿ ಮದ್ಯಪಾನ ಮಾಡಿ ಗಲಾಟೆ ಮಾಡಬೇಡಿ ಎಂದು ಕೇಳಿದ್ದಕ್ಕೆ ಪಾನಮತ್ತರಾದ 20 ಮಂದಿ ಯುವಕರ ತಂಡ ಮಹಿಳಾ ಸಬ್‌ಇನ್‌ಸ್ಪೆಕ್ಟರ್ ಮೇಲೆ ಮಾರಣಾಂತಿಕವಾಗಿ ಹಲ್ಲೆ ನಡೆಸಿದ ಘಟನೆ ಚೆನ್ನೈನ ನ್ಯೂ ವಾಷರ್‌ಮೆನ್‌ಪೇಟೆಯಲ್ಲಿ ನಡೆದಿದೆ.
2021ರ ಬ್ಯಾಚ್‌ನ ಎಸ್‌ಐ ಮಹೇಶ್ವರಿ ಎನ್ನುವ ಹೆಡ್ ಕಾನ್‌ಸ್ಟೆಬಲ್ ವಿಜಯ್ ಆನಂದ್ ಅವರೊಂದಿಗೆ ಗಸ್ತು ಕರ್ತವ್ಯದಲ್ಲಿದ್ದರು, ನ್ಯೂ ವಾಷರ್‌ಮೆನ್‌ಪೇಟೆಯ ಬಳಿಯ ಎಂಪಿಟಿ ಆಟದ ಮೈದಾನದ ಬಳಿ ಸಾರ್ವಜನಿಕ ಸ್ಥಳದಲ್ಲಿ ಯುವಕರು ಮದ್ಯಪಾನ ಮಾಡಿ ಗಲಾಟೆ ಮಾಡುತ್ತಿದ್ದಾರೆ ಎನ್ನುವ ದೂರು ಕೇಳಿ ಬಂದಿತ್ತು.

ಈ ಹಿನ್ನೆಲೆಯಲ್ಲಿ ಎಸ್‌ಐ ಮಹೇಶ್ವರಿ ಹಾಗೂ ಹೆಡ್ ಕಾನ್‌ಸ್ಟೆಬಲ್ ವಿಜಯ್ ಆನಂದ್ ಈ ಸ್ಥಳಕ್ಕೆ ಹೋಗಿ ಪರಿಶೀಲನೆ ನಡೆಸಿದ್ದಾರೆ. ಈ ವೇಳೆ ಬರೋಬ್ಬರಿ ಇಪ್ಪತ್ತು ಯುವಕರ ತಂಡ ಪಾನಮತ್ತರಾಗಿ ಗಲಾಟೆ ಮಾಡುವುದು ಕಂಡು ಬಂದಿದೆ. ಕೂಡಲೇ ಎಸ್‌ಐ ಮಹೇಶ್ವರಿ ತಮ್ಮ ಫೋನ್‌ನಿಂದ ಈ ದೃಶ್ಯಗಳನ್ನು ಸೆರೆಹಿಡಿದಿದ್ದಾರೆ. ಅಲ್ಲದೇ ಸ್ಥಳಕ್ಕೆ ಹೋಗಿ ಅಲ್ಲಿಂದ ಹೊರಡುವಂತೆ ಪಾನಮತ್ತ ಯುವಕರಿಗೆ ಹೇಳಿದ್ದಾರೆ
ಇಷ್ಟಕ್ಕೆ ಕೋಪಗೊಂಡ ಯುವಕರು ಎಸ್‌ಐ ಮಹೇಶ್ವರಿ ಅವರನ್ನು ಅಮಾನುಷವಾಗಿ ನಡೆಸಿಕೊಂಡು ಅಶ್ಲೀಲವಾಗಿ ನಿಂದಿಸಿದ್ದಾನೆ ಎನ್ನಲಾಗಿದೆ. ಅಲ್ಲದೇ ಆಕೆಯ ನಿತ್ಯದ ಕೆಲಸಕ್ಕೆ ಅಡ್ಡಿಪಡಿಸುವುದಾಗಿ ಬೆದರಿಕೆ ಹಾಕಿದ್ದಾರೆ ಎನ್ನಲಾಗಿದೆ. ಅಲ್ಲದೇ ಮಾರಣಾಂತಿಕವಾಗಿ ಹಲ್ಲೆ ನಡೆಸಿದ್ದಾರೆ ಎಂದು ವರದಿಯಾಗಿದೆ. ಆದರೆ ಈವರೆಗೂ ಯಾವುದೇ ದೂರು ದಾಖಲಾಗಿಲ್ಲ. ಸದ್ಯ ಹಿರಿಯ ಪೊಲೀಸ್ ಅಧಿಕಾರಿಗಳು ಎಸ್‌ಐ ಮಹೇಶ್ವರಿ ಅವರ ಫೋನ್‌ನಲ್ಲಿರುವ ವಿಡಿಯೋ ಮೂಲಕ ಆರೋಪಿಗಳ ಪತ್ತೆಗೆ ಮುಂದಾಗಿದ್ದಾರೆ.
ಬಿಯರ್ ಬಾಟಲಿಯಿಂದ ಪೊಲೀಸ್ ಮೇಲೆ ಹಲ್ಲೆ
ಇನ್ನು ಪೊಲೀಸ್ ಮೇಲೆ ಹಲ್ಲೆ ನಡೆಸಿರುವ ಮತ್ತೊಂದು ಘಟನೆ ಚೆನ್ನೈನಲ್ಲಿ ನಡೆದಿದೆ. ಸೆಂಬಿಯಂನಲ್ಲಿ ವ್ಯಾಸರಪಾಡಿಯ ಪೊಲೀಸ್ ಠಾಣೆಗೆ ಸೇರಿರುವ ಹೆಡ್ ಕಾನ್‌ಸ್ಟೆಬಲ್ ಮಾರ್ಷಲ್. ಎಚ್ ರಾಜ್‌ಕುಮಾರ್ (46) ಎನ್ನುವವರು ಪೆರಂಬೂರಿನ ಮಾಧವರಂ ಹೈ ರೋಡ್‌ನಲ್ಲಿರುವ ಬಾರ್‌ಗೆ ತೆರಳಿದ್ದರು. ಅಲ್ಲಿ ಇಬ್ಬರು ವ್ಯಕ್ತಿಗಳ ಜೊತೆ ಹೆಡ್ ಕಾನ್‌ಸ್ಟೆಬಲ್ ಜಗಳವಾಡಿದ್ದು, ಕುಡಿದ ಮತ್ತಿನಲ್ಲಿದ್ದ ವ್ಯಕ್ತಿಗಳು ಖಾಲಿ ಬಿಯರ್ ಬಾಟಲಿಯಿಂದ ಪೊಲೀಸ್ ಮೇಲೆ ಹಲ್ಲೆ ನಡೆಸಿದ್ದಾರೆ.
ಘಟನೆಯಲ್ಲಿ ಹೆಡ್ ಕಾನ್‌ಸ್ಟೆಬಲ್ ಮಾರ್ಷಲ್. ಎಚ್ ರಾಜ್‌ಕುಮಾರ್ ಅವರ ಹಣೆ ಮತ್ತು ಮೂಗಿಗೆ ಗಂಭೀರ ಗಾಯವಾಗಿದ್ದು, ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ. ಘಟನೆ ಸಂಬಂಧ ದೂರು ದಾಖಲಾಗಿದ್ದು, ಒಟ್ಟೇರಿ ಮೂಲದ ಜಿ ಮಣಿ (27) ಎಂಬಾತನನ್ನು ಪೊಲೀಸರು ಬಂಧಿಸಿದ್ದು, ಆತನ ಸ್ನೇಹಿತ ತಲೆಮರೆಸಿಕೊಂಡಿದ್ದಾನೆ ಎನ್ನಲಾಗಿದೆ.












Click it and Unblock the Notifications