ಅಹಮದಾಬಾದ್‌: ತಾಯಿ ಪರೀಕ್ಷೆ ಬರೆಯುವಾಗ ಮಗುವಿನ ಆರೈಕೆ ಮಾಡಿದ ಮಹಿಳಾ ಕಾನ್ಸ್‌ಟೇಬಲ್

ತಾಯಿ ಪರೀಕ್ಷೆ ಬರೆಯುವಾಗ ಮಹಿಳಾ ಪೇದೆಯೊಬ್ಬರು ಮಗುವಿನ ಆರೈಕೆ ಮಾಡುವ ಮೂಲಕ ಮಾನವೀಯತೆ ಮೆರೆದ ಘಟನೆ ಅಹಮದಾಬಾದ್‌ನಲ್ಲಿ ನಡೆದಿದೆ.

ಆರು ತಿಂಗಳ ಮಗುವಿನ ತಾಯಿಯೊಬ್ಬರು ಗುಜರಾತ್ ಹೈಕೋರ್ಟ್‌ನ ಪ್ಯೂನ್ ನೇಮಕಾತಿ ಪರೀಕ್ಷೆಗೆ ಹಾಜರಾಗಿದ್ದರು. ಪರೀಕ್ಷೆ ಬರೆಯುತ್ತಿದ್ದಾಗ ಅವರ ಮಗುವನ್ನು ಅಹಮದಾಬಾದ್ ಪೊಲೀಸ್‌ನ ಮಹಿಳಾ ಪೇದೆಯೊಬ್ಬರು ಆರೈಕೆ ಮಾಡಿದರು.

Woman constable who took care of a child while the mother was writing an exam in Ahmedabad

ಅಹಮದಾಬಾದ್ ಪೊಲೀಸರ ಅಧಿಕೃತ ಟ್ವಿಟರ್ ಹ್ಯಾಂಡಲ್‌ನಲ್ಲಿ ಈ ಚಿತ್ರಗಳನ್ನು ಹಂಚಿಕೊಳ್ಳಲಾಗಿದೆ. ಮಹಿಳಾ ಪೇದೆ ಮಗುವನ್ನು ಹಿಡಿದುಕೊಂಡು ಆಟವಾಡುತ್ತಿರುವುದನ್ನು ಚಿತ್ರಗಳು ತೋರಿಸುತ್ತವೆ. ಭಾನುವಾರ ಗುಜರಾತ್ ಹೈಕೋರ್ಟ್‌ನ ಪ್ಯೂನ್ ಹುದ್ದೆಗೆ ಪರೀಕ್ಷೆ ನಡೆದಿತ್ತು.

ಮಹಿಳೆಯೊಬ್ಬರು ತನ್ನ 6 ತಿಂಗಳ ಮಗುವಿನೊಂದಿಗೆ ಪರೀಕ್ಷಾ ಕೊಠಡಿಗೆ ಹೋಗುತ್ತಿದ್ದರು. ಕೆಲವೇ ನಿಮಿಷಗಳಲ್ಲಿ ಪರೀಕ್ಷೆ ಆರಂಭವಾಗಬೇಕಿತ್ತು. ಆದರೆ, ಆಕೆಯ ಮಗು ಅಸಹನೀಯವಾಗಿ ಅಳುತ್ತಿತ್ತು. ಇದರಿಂದಾಗಿ ಮಹಿಳೆಯ ಸ್ಥಿತಿ ಅರಿತ ಮಹಿಳಾ ಪೊಲೀಸ್ ಪೇದೆ ಮಗುವನ್ನು ಆರೈಕೆ ಮಾಡಿದ್ದಾರೆ. ಇದರಿಂದ ತಾಯಿ ನೆಮ್ಮದಿಯಾಗಿ ಪರೀಕ್ಷೆ ಬರೆದಿದ್ದಾರೆ. ಜೊತೆಗೆ ಕಾನ್‌ಸ್ಟೆಬಲ್ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತವಾಗಿದೆ.

Woman constable who took care of a child while the mother was writing an exam in Ahmedabad

ಹಿಂದೊಮ್ಮೆ ನಡೆದ ಘಟನೆ

2021 ಭಾನುವಾರ (ಡಿ.19)ದಂದು ಕರ್ನಾಟಕ ಲೋಕ ಸೇವಾ ಆಯೋಗದ "ಸಿ' ಗುಂಪಿನ ನೇಮಕಾತಿಗಾಗಿ ಹಾವೇರಿಯಲ್ಲಿ ಸ್ಪರ್ಧಾತ್ಮಕ ಪರೀಕ್ಷೆ ನಡೆದವು. ಹಾವೇರಿಯ ಎಸ್.ಜೆ.ಎಂ ಕಾಲೇಜಿನ ಪರೀಕ್ಷಾ ಕೇಂದ್ರದಲ್ಲಿ ಬ್ಯಾಡಗಿ ಠಾಣೆಯ ಮಹಿಳಾ ಪೊಲೀಸ್ ಕಾನ್‌ಸ್ಟೆಬಲ್ ನೇತ್ರಾವತಿ ಬಂದೋಬಸ್ತ ಕರ್ತವ್ಯ ನಿರ್ವಹಿಸುತ್ತಿದ್ದರು.

ಈ ವೇಳೆ ಹಸುಗೂಸನ್ನು ಕರೆದುಕೊಂಡು ಕರ್ನಾಟಕ ಲೋಕ ಸೇವಾ ಆಯೋಗ (ಕೆಪಿಎಸ್‌ಸಿ) ಪರೀಕ್ಷೆ ಬರೆಯಲು ಬಂದಿದ್ದ ಮಹಿಳೆಯೊಬ್ಬರು ಗಲಿಬಿಲಿಗೊಂಡಿರುವುದನ್ನು ಗಮನಿಸಿ ಮಹಿಳಾ ಪೊಲೀಸ್ ಕಾನ್‌ಸ್ಟೆಬಲ್ ನೇತ್ರಾವತಿ ಪರೀಕ್ಷಾ ಅಭ್ಯರ್ಥಿಗೆ ಸಮಾಧಾನ ಮಾಡಿ, ಧೈರ್ಯ ನೀಡಿದರು.

ಜೊತೆಗೆ ನಿಶ್ಚಿಂತೆಯಿಂದ ಪರೀಕ್ಷೆ ಬರೆಯಲು ತಿಳಿಸಿ ಅವರ ಮಗುವನ್ನು ಎತ್ತಿಕೊಂಡು ಪರೀಕ್ಷೆ ಮುಗಿಯುವವರೆಗೂ ತಮ್ಮ ಕರ್ತವ್ಯ ನಿರ್ವಹಿಸುವುದರ ಜೊತೆಗೆ, ಮಗುವಿನ ಕಾಳಜಿಯನ್ನು ಮಾಡಿದರು. ಪೊಲೀಸ್ ಕಾನ್‌ಸ್ಟೆಬಲ್ ನೇತ್ರಾವತಿಯರವರ ಈ ಮಾನವೀಯ ಕಾಳಜಿಯನ್ನು ಹಾವೇರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹನುಮಂತರಾಯ ಪ್ರಶಂಸೆ ವ್ಯಕ್ತಪಡಿಸಿದ್ದಾರೆ. ಕೆಪಿಎಸ್‌ಸಿ ಪರೀಕ್ಷೆ ಬರೆಯಲು ಬಂದಿದ್ದ ಮಹಿಳೆಯೊಬ್ಬರು ಹಸುಗೂಸನ್ನು ಆರೈಕೆ ಮಾಡಿದ್ದಕ್ಕೆ ಮಹಿಳಾ ಪೊಲೀಸ್ ಕಾನ್‌ಸ್ಟೆಬಲ್ ನೇತ್ರಾವತಿಯವರಿಗೆ ಸಾರ್ವಜನಿಕರಿಂದಲೂ ಮೆಚ್ಚುಗೆ ವ್ಯಕ್ತವಾಗಿದೆ.

ತಮಿಳುನಾಡಿನಲ್ಲಿ ನಡೆದ ಘಟನೆ

ಈ ಹಿಂದೆ ತಮಿಳುನಾಡಿನ ಒಂದು ಸ್ಥಳದಲ್ಲಿ ಮತ ಚಲಾಯಿಸಲು ಮಗುವಿನ ತಾಯಿ ಮತಗಟ್ಟೆಯೊಳಗೆ ಹೋಗಿದ್ದಾಗ ಪುರುಷ ಪೋಲೀಸ್ ಒಬ್ಬರು ಮಗುವನ್ನು ನೋಡಿಕೊಳ್ಳುತ್ತಿರುವ ಫೋಟೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ಆಂಧ್ರಪ್ರದೇಶದ ಕಾನ್ಸ್‌ಟೇಬಲ್‌ನ ಫೋಟೋವನ್ನು ಆಂಧ್ರ ಪೊಲೀಸರ ಟ್ವಿಟರ್ ಹ್ಯಾಂಡಲ್‌ನಿಂದ ಹಂಚಿಕೊಳ್ಳಳಾಗಿತ್ತು.

ಇದು ಚುನಾವಣಾ ಸಮಯದಲ್ಲಿ ತಮಿಳುನಾಡಿನಲ್ಲಿ ಕಾನ್‌ಸ್ಟೆಬಲ್ ಅನ್ನು ಹೇಗೆ ನಿಯೋಜಿಸಲಾಗಿದೆ ಎಂಬುದನ್ನು ಉಲ್ಲೇಖಿಸುತ್ತದೆ. ಫೋಟೋದಲ್ಲಿ ಸಮವಸ್ತ್ರಧಾರಿ ಪೊಲೀಸ್ ಸಿಬ್ಬಂದಿ ಮತಗಟ್ಟೆಯ ಹೊರಗೆ ಮಗುವನ್ನು ಹಿಡಿದುಕೊಂಡು ನೋಡುತ್ತಿದ್ದಾರೆ. ಮಗುವಿಗೆ ಒಂದು ತಿಂಗಳು ಎಂದು ಪೋಸ್ಟ್ನಲ್ಲಿ ಹೇಳಲಾಗಿದೆ. ಪೋಸ್ಟ್ ಅನ್ನು ಮೂಲತಃ ಅನಂತಪುರ ಪೊಲೀಸರು ಹಂಚಿಕೊಂದ್ದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+