ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೊರೊನಾ ಲಸಿಕೆ ಅಭಾವದ ನಡುವೆ ಸರ್ಕಾರಕ್ಕೆ ವೋಕ್‌ಹಾರ್ಟ್‌ ಲಸಿಕೆ ಪ್ರಸ್ತಾಪ

|
Google Oneindia Kannada News

ನವದೆಹಲಿ, ಮೇ 26: ದೇಶದಲ್ಲಿ ಕೊರೊನಾ ಲಸಿಕೆಗಳಿಗೆ ತೀವ್ರ ಅಭಾವ ಎದುರಾಗಿದೆ. ಲಸಿಕಾ ಅಭಿಯಾನದ ವೇಗಕ್ಕೆ ತಕ್ಕಂತೆ ಕೊರೊನಾ ಲಸಿಕೆಗಳು ಲಭ್ಯವಾಗದ ಕಾರಣ ಹಲವು ರಾಜ್ಯಗಳು ಲಸಿಕೆ ನೀಡುವುದನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿವೆ. ಈ ನಡುವೆ ಭಾರತೀಯ ಔಷಧ ತಯಾರಿಕಾ ಕಂಪನಿ ವೋಕ್‌ಹಾರ್ಟ್ ಕೊರೊನಾ ಸೋಂಕಿಗೆ ಲಸಿಕೆ ತಯಾರಿಸುವುದಾಗಿ ಕೇಂದ್ರ ಸರ್ಕಾರಕ್ಕೆ ಮಾಹಿತಿ ನೀಡಿದೆ.

ವರ್ಷಕ್ಕೆ ಸುಮಾರು ಎರಡು ಬಿಲಿಯನ್ ಡೋಸ್‌ಗಳ ಲಸಿಕೆ ಉತ್ಪಾದನೆಗೆ ಸಿದ್ಧವಾಗಿದ್ದೇವೆ. ಫೆಬ್ರವರಿ 2022ರ ಹೊತ್ತಿಗೆ 500 ಮಿಲಿಯನ್ ಡೋಸ್‌ಗಳ ಲಸಿಕೆ ಉತ್ಪಾದನೆ ಮಾಡುತ್ತೇವೆ ಎಂದು ತಿಳಿಸಿದೆ. ಕೊರೊನಾ ಸೋಂಕಿನ ವಿರುದ್ಧ ಹೋರಾಡಲು ಪ್ರೊಟೀನ್ ಆಧಾರಿತ ಎಂಆರ್‌ಎನ್‌ಎ ಲಸಿಕೆಗಳ ಉತ್ಪಾದನೆ ಹಾಗೂ ಪೂರೈಕೆಗೆ ಅನುವಾಗುವಂತೆ ಸಂಸ್ಥೆ ಉತ್ಪಾದನೆ ಹಾಗೂ ಸಂಶೋಧನಾ ಸಾಮರ್ಥ್ಯ ಹೊಂದಿದೆ ಎಂದು ಸರ್ಕಾರಕ್ಕೆ ನೀಡಿದ ಪ್ರಸ್ತಾಪದಲ್ಲಿ ತಿಳಿಸಿದೆ. ಸಂಸ್ಥೆಯ ಈ ಪ್ರಸ್ತಾಪವನ್ನು ಸರ್ಕಾರ ಇನ್ನೂ ಸ್ವೀಕರಿಸಿಲ್ಲ ಹಾಗೂ ಪರಿಶೀಲನೆ ನಡೆಸುತ್ತಿರುವುದಾಗಿ ತಿಳಿದುಬಂದಿದೆ.

ಭಾರತಕ್ಕೆ ಮುಂದಿನ ವರ್ಷ ಲಭ್ಯವಾಗಲಿದೆ ಮಾಡರ್ನಾ ಲಸಿಕೆಭಾರತಕ್ಕೆ ಮುಂದಿನ ವರ್ಷ ಲಭ್ಯವಾಗಲಿದೆ ಮಾಡರ್ನಾ ಲಸಿಕೆ

ಮುಂಬೈ ಮೂಲದ ಈ ಕಂಪನಿ ಈಗಾಗಲೇ ಕೊರೊನಾ ಲಸಿಕೆ ಉತ್ಪಾದಿಸುತ್ತಿರುವ ಇನ್ನಿತರೆ ಪಾಲುದಾರರನ್ನು ಗುರುತಿಸಲು ಸಹಾಯ ಕೋರಿ ಈ ತಿಂಗಳ ಆರಂಭದಲ್ಲಿಯೇ ಕೇಂದ್ರ ಸರ್ಕಾರಕ್ಕೆ ಔಪಚಾರಿಕವಾಗಿ ಅರ್ಜಿ ಸಲ್ಲಿಸಿದೆ. ಲಸಿಕೆ ಉತ್ಪಾದನೆ ಕುರಿತು ಕೆಲವು ತಂತ್ರಜ್ಞಾನವನ್ನು ಅಳವಡಿಸಿಕೊಳ್ಳುವ ಕುರಿತು ಚಿಂತನೆ ನಡೆಸುತ್ತಿರುವುದಾಗಿ ತಿಳಿದುಬಂದಿದೆ.

Wockhardt Proposes To Make Corona Vaccines

ಈ ಮಧ್ಯೆ ಭಾರತದ ಹೊರಗೆ ವೋಕ್‌ಹಾರ್ಟ್ ಬ್ರಿಟನ್ ಸರ್ಕಾರದೊಂದಿಗೆ ಕೊರೊನಾ ಲಸಿಕೆಗಳ ಉತ್ಪಾದನೆ ಕುರಿತು ಒಪ್ಪಂದ ಮಾಡಿಕೊಂಡಿರುವುದಾಗಿ ತಿಳಿದುಬಂದಿದೆ. ಬ್ರಿಟನ್ ಸರ್ಕಾರವು ಹದಿನೆಂಟು ತಿಂಗಳ ಬಳಕೆಗೆ ಲಸಿಕೆಗೆ ಬೇಡಿಕೆ ಇಟ್ಟಿದ್ದು, ಲಸಿಕೆ ಪೂರೈಕೆ ಖಾತರಿಪಡಿಸಲಾಗಿದೆ. ಆಸ್ಟ್ರಾಜೆನೆಕಾ ಅಭಿವೃದ್ಧಿಪಡಿಸುತ್ತಿರುವ ಆಕ್ಸ್‌ಫರ್ಡ್ ಲಸಿಕೆ ತಯಾರಿಸಲು ವೋಕ್‌ಹಾರ್ಟ್ ಒಪ್ಪಂದ ಮಾಡಿಕೊಂಡಿರುವುದಾಗಿ ತಿಳಿದುಬಂದಿದೆ.

ದೇಶದಲ್ಲಿ ಲಸಿಕೆ ಕೊರತೆ ಎದುರಾಗಿರುವ ಈ ಸಮಯದಲ್ಲಿ ವೋಕ್‌ಹಾರ್ಟ್ ಲಸಿಕೆ ಉತ್ಪಾದನೆ ಪ್ರಸ್ತಾಪ ಉತ್ತಮ ಸುದ್ದಿಯಾಗಿದೆ. ಕಳೆದ ಡಿಸೆಂಬರ್‌ನಲ್ಲಿ ಕೊರೊನಾ ಸೋಂಕಿನ ವಿರುದ್ಧ ಲಸಿಕೆ ಉತ್ಪಾದನೆಗೆ ಔರಂಗಾಬಾದ್‌ನಲ್ಲಿನ ತನ್ನ ಜಾಗವನ್ನು ಬಳಸಿಕೊಳ್ಳುವಂತೆ ಭಾರತ ಸರ್ಕಾರಕ್ಕೆ ವೋಕ್‌ಹಾರ್ಟ್ ಲಿಮಿಟೆಡ್ ತಿಳಿಸಿತ್ತು.

English summary
Indian pharma company wockhardt proposes to make two billion corona vaccine doses a year,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X