ಮಹಾದಾಯಿ ವಿಷಯದಲ್ಲಿ ಯಾವುದೇ ರಾಜಿಯಿಲ್ಲ: ಗೋವಾ ಸಚಿವ ವಿನೋದ್ ಸಂದರ್ಶನ

Posted By: ಅನುಷಾ ರವಿ
Subscribe to Oneindia Kannada
   ಮಹದಾಯಿ ವಿವಾದ : ಯಾವುದೇ ರಾಜಿಯಿಲ್ಲ ಎಂದ ಗೋವಾ ಸಚಿವ ವಿನೋದ್ ಪಾಲೇಕರ್ | Oneindia Kannada

   ಬೆಂಗಳೂರು, ಡಿಸೆಂಬರ್ 27: ಮಹಾದಾಯಿ ನದಿ ನೀರು ಹಂಚಿಕೆ ವಿವಾದ ಈಗ ಕರ್ನಾಟಕ ಹಾಗೂ ಗೋವಾ ರಾಜ್ಯಗಳಲ್ಲಿ ರಾಜಕೀಯ ಪಕ್ಷಗಳ ಕೆಸರೆರೆಚಾಟಕ್ಕೆ ನಾಂದಿ ಹಾಡಿದೆ. ಗೋವಾ ಸಿಎಂ ಮನೋಹರ್ ಅವರು ತಮ್ಮ ಸರ್ಕಾರ ಉಳಿಸಿಕೊಳ್ಳುವ ಸರ್ಕಸ್ ನಡೆಸಿದ್ದಾರೆ.

   ಮಹದಾಯಿ ನೀರು ಹಂಚಿಕೆ : ಅಂದಿನಿಂದ ಇಂದಿನವರೆಗೆ

   ಉತ್ತರ ಕರ್ನಾಟಕ ಬಂದ್ ಆಗಿದೆ. ರೈತ್ರು ಬೆಂಗಳೂರಿನಲ್ಲಿ ಹೋರಾಟ ಮುಂದುವರೆಸಿದ್ದಾರೆ. ಕರ್ನಾಟಕದಲ್ಲಿ ಚುನಾವಣೆ ಮುಗಿಯುವ ತನಕ ಮಹಾದಾಯಿ ಬಗ್ಗೆ ಮಾತುಕತೆ ಬೇಡ ಎಂದು ಆಜ್ಞೆ ಹೊರಡಿಸಿದೆ.

   ಕರ್ನಾಟಕ, ಗೋವಾ ಹಾಗೂ ಮಹಾರಾಷ್ಟ್ರ ರಾಜ್ಯಗಳ ನಡುವೆ ಮಹಾದಾಯಿ 7.56 ಟಿಎಂಸಿ ನೀರು ಹಂಚಿಕೆ ವಿವಾದ ಸದ್ಯ ಸುಪ್ರೀಂಕೋರ್ಟಿನಲ್ಲಿ ವಿಚಾರಣೆಯಲ್ಲಿದೆ. ಮಾತುಕತೆ ಮೂಲಕ ಸಮಸ್ಯೆ ಬಗೆಹರಿಸಿಕೊಳ್ಳಲು ಟ್ರಿಬ್ಯುನಲ್ ಸೂಚಿಸಿದೆ.

   ಗೋವಾ ಹಾಗೂ ಕರ್ನಾಟಕ ಸರ್ಕಾರ ಈ ಬಗ್ಗೆ ಉತ್ಸುಕರಾಗಿದ್ದರೂ, ಮಹಾರಾಷ್ಟ್ರ ಸಿದ್ಧವಿಲ್ಲ.ಈ ನಡುವೆ ಗೋವಾದ ಜಲ ಸಂಪನ್ಮೂಲ ಸಚಿವ ವಿನೋದ್ ಪಾಲೇಕರ್ ಜತೆ ನಮ್ಮ ಪ್ರತಿನಿಧಿ ನಡೆಸಿದ ಸಂದರ್ಶನದ ಮುಖ್ಯಾಂಶಗಳು ಇಲ್ಲಿವೆ..

   ಗೋವಾ ಫಾರ್ವರ್ಡ್ ಪಾರ್ಟಿ ನಿಲುವೇನು?

   ಗೋವಾ ಫಾರ್ವರ್ಡ್ ಪಾರ್ಟಿ ನಿಲುವೇನು?

   ಗೋವಾ ಫಾರ್ವರ್ಡ್ ಪಾರ್ಟಿ ನಿಲುವೇನು?, ಗೋವಾ ಸಿಎಂ ಮನೋಹರ್ ಪರಿಕ್ಕರ್ ನಿಲುವಿಗೆ ನಿಮ್ಮ ಸಮ್ಮತಿ ಇದೆಯೆ? ಎಂಬ ಪ್ರಶ್ನೆಗೆ ಉತ್ತರಿಸಿ,
   -ಮಹಾದಾಯಿ ನಮ್ಮ ತಾಯಿ, ಈ ವಿಷಯದಲ್ಲಿ ಯಾವುದೇ ರೀತಿ ರಾಜಿಗೆ ನಾವು ಸಿದ್ಧರಿಲ್ಲ. ನಮಗೆ ಮಹಾದಾಯಿ ಮುಖ್ಯ ಸಂಪನ್ಮೂಲವಾಗಿದೆ. ನಮ್ಮ ಜೀವಜಲ, ಇದನ್ನು ಕಳೆದುಕೊಂಡರೆ ಕೇವಲ ಮೀನುಗಾರಿಕೆ, ಆರ್ಥಿಕ ಅಸಮತೋಲನವಷ್ಟೇ ಅಲ್ಲ, ನಮ್ಮ ಬದುಕು ಅತಂತ್ರವಾಗುತ್ತದೆ. ಮನೋಹರ್ ಅವರು ಮಾತುಕತೆ ನಡೆಸಲಿ, ಆದರೆ, ನೀರು ಹಂಚಿಕೆ ಬಗ್ಗೆ ನಮ್ಮ ನಿಲುವು ಸ್ಪಷ್ಟವಾಗಿದ್ದು, ಒಂದು ಹನಿ ನೀರು ಕೊಡುವುದಿಲ್ಲ ಎಂದರು.

   ಮನೋಹರ್ ಸರ್ಕಾರಕ್ಕೆ ನೀಡಿದ ಬೆಂಬಲ ಹಿಂಪಡೆಯುತ್ತೀರಾ?

   ಮನೋಹರ್ ಸರ್ಕಾರಕ್ಕೆ ನೀಡಿದ ಬೆಂಬಲ ಹಿಂಪಡೆಯುತ್ತೀರಾ?

   ಈ ಸರ್ಕಾರ, ಸಚಿವ ಸ್ಥಾನ ಎಲ್ಲವೂ ಮಹಾದಾಯಿ ಮುಂದೆ ಕ್ಷುಲ್ಲಕ ಹಾಗೂ ಕ್ಷಣಿಕ. ನಾವು ಸಚಿವ ಸ್ಥಾನವನ್ನು ತೊರೆದು ಹೋರಾಡಲು ಸಿದ್ಧ, ಮೊದಲೇ ಹೇಳಿದಂತೆ ಯಾವುದೇ ರೀತಿ ರಾಜಿಗೆ ಸಿದ್ಧರಿಲ್ಲ, ಮಹಾದಾಯಿಗಾಗಿ ಪದತ್ಯಾಗಕ್ಕೆ ನಮ್ಮ ಪಕ್ಷದವರು ಸಿದ್ಧ. ಮನೋಹರ್ ಅವರು ಮಾತುಕತೆಗೆ ಮುಂದಾಗುತ್ತೇವೆ ಎಂದಷ್ಟೇ ಹೇಳಿದ್ದಾರೆ. ಈ ಬಗ್ಗೆ ಟ್ರಿಬ್ಯುನಲ್ ಗಾಗಲಿ, ಕೋರ್ಟಿಗಾಗಲಿ ತಿಳಿಸಿಲ್ಲ. ಹೀಗಾಗಿ, ಸದ್ಯ ಸರ್ಕಾರ ಉರುಳಿಸುವ ಯಾವುದೇ ಹೆಜ್ಜೆ ಇಡುವುದಿಲ್ಲ.

   ಕುಡಿಯುವುದಕ್ಕೆ ನೀರು ಎನ್ನುವುದು ರಾಜಕೀಯವಲ್ಲವೇ?

   ಕುಡಿಯುವುದಕ್ಕೆ ನೀರು ಎನ್ನುವುದು ರಾಜಕೀಯವಲ್ಲವೇ?

   ನಾವು ಮಹಾದಾಯಿ ವಿಷಯದಲ್ಲಿ ಸ್ಪಷ್ಟ ನಿಲುವು ತಳೆದಿದ್ದೇವೆ. ಕುಡಿಯುವುದಕ್ಕೆ, ಕೃಷಿಗೆ ಎಂದು ನೀರುಹಂಚಿಕೆಯಲ್ಲಿ ಅರ್ಥವಿಲ್ಲ. ರಾಜಕೀಯ ಲಾಭ ನಷ್ಟದ ಪ್ರಶ್ನೆ ಇಲ್ಲಿ ಉದ್ಭವಿಸುವುದಿಲ್ಲ. ನಮಗದೂ ಬೇಕಾಗಿಲ್ಲ. ಗೋವಾದ ಜನರ ಭಾವನೆಗಳಿಗೆ ಧಕ್ಕೆ ತರುವ ಯಾವ ನಿರ್ಧಾರಕ್ಕೂ ನಮ್ಮ ಸಮ್ಮತಿ ಇಲ್ಲ.

   ರಾಜಕೀಯ ಪಕ್ಷಗಳು ಕಣ್ಣೊರೆಸುವ ತಂತ್ರ ಮಾಡುತ್ತಿವೆಯೆ?

   ರಾಜಕೀಯ ಪಕ್ಷಗಳು ಕಣ್ಣೊರೆಸುವ ತಂತ್ರ ಮಾಡುತ್ತಿವೆಯೆ?

   ನಮ್ಮ ಪಕ್ಷ ಗೋವಾದ ಅಭಿವೃದ್ಧಿ, ಜನರ ಹಿತಕ್ಕಾಗಿ ದುಡಿಯುತ್ತಿದೆ. ಜನರ ಭಾವನೆಗೆ, ಆಶಯಕ್ಕೆ ತಕ್ಕಂತೆ ನಾವು ಕಾರ್ಯ ನಿರ್ವಹಿಸುತ್ತೇವೆ. ರಾಜಕೀಯ ಲಾಭಕ್ಕಾಗಿ ಜನರ ಹಿತ ಬಲಿ ಕೊಡುವುದಿಲ್ಲ. ಕಣ್ಣೊರೆಸುವ ತಂತ್ರ ಮಾಡಿ ಲಾಭ ಯಾರಿಗೆ ಆಗಬೇಕಿದೆ ಗೊತ್ತಿಲ್ಲ ಎಂದರು.

   ಉತ್ತರ ನೀಡದ ಪ್ರಶ್ನೆಗಳು ಇಲ್ಲಿವೆ

   ಉತ್ತರ ನೀಡದ ಪ್ರಶ್ನೆಗಳು ಇಲ್ಲಿವೆ

   ಮಹಾದಾಯಿ ವಿಷಯವಾಗಿ ನೀರು ಹಂಚಿಕೆಗೆ ತಾತ್ವಿಕ ಒಪ್ಪಿಗೆ ನೀಡುವ ಬಗ್ಗೆ ಕರ್ನಾಟಕ ಸಿಎಂ ಸಿದ್ದರಾಮಯ್ಯ ಅವರಿಗೆ ಪತ್ರ ಬರೆಯದೇ ಮಾಜಿ ಸಿಎಂ ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್ ಯಡಿಯೂರಪ್ಪ ಅವರಿಗೆ ಪತ್ರ ಬರೆದಿದ್ದೇಕೆ? ಎಂಬ ಪ್ರಶ್ನೆಗೆ ವಿನೋದ್ ಅವರು ಉತ್ತರಿಸಲಿಲ್ಲ.

   ಮಹಾದಾಯಿ ವಿಷಯದಲ್ಲಿ ಬಿಜೆಪಿ ಹೈಕಮಾಂಡ್ ನಾಯಕರ ನೆರವು ಬೇಕೆ? ಕರ್ನಾಟಕದ ಜಲ ಸಂಪನ್ಮೂಲ ಸಚಿವ ಎಂ.ಬಿ ಪಾಟೀಲರು(ಚಿತ್ರದಲ್ಲಿ) ಒಂದು ಸಭೆಯಲ್ಲೇ ಸಂಧಾನ ಮಾತುಕತೆಗೆ ಕೋರಿ ಬರೆದ ಪತ್ರಕ್ಕೆ ಗೋವಾ ಸರ್ಕಾರ ಉತ್ತರಿಸಿಲ್ಲವೇಕೆ ? ಎಂಬ ಪ್ರಶ್ನೆಗೂ ಸಚಿವ ವಿನೋದ್ ಉತ್ತರಿಸಲು ನಿರಾಕರಿಸಿದರು.

   ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

   English summary
   OneIndia News caught up with Goa's water resources minister Vinod Palyekar. "Willing to sacrifice anything but no compromise on Mahadayi," says Goa minister Vinod Palyekar. This is what Parrikar's minister from his ally party- Goa Forward Party- had to say about the issue The Mahadayi water sharing issue concerns three states of Karnataka, Goa and Maharashtra.

   Oneindia ಬ್ರೇಕಿಂಗ್ ನ್ಯೂಸ್,
   ತಾಜಾ ಸುದ್ದಿ ತಕ್ಷಣವೇ ಪಡೆಯಿರಿ