ಪ್ರಧಾನಿ ನರೇಂದ್ರ ಮೋದಿ ವಿಶ್ವದ ಜನಪ್ರಿಯ ನಾಯಕರಾಗಲು ಕಾರಣ ಏನು ಗೊತ್ತಾ? ಇಲ್ಲಿದೆ ವರದಿ
ನರೇಂದ್ರ ಮೋದಿ, ಸದ್ಯದ ವಿಶ್ವದ ಅತ್ಯಂತ ಜನಪ್ರಿಯ ನಾಯಕರಲ್ಲಿ ಒಬ್ಬರು. ಹಲವು ಸರ್ವೆಗಳು, ವರದಿಗಳ ಪ್ರಕಾರ ನರೇಂದ್ರ ಮೋದಿ ವಿಶ್ವದಲ್ಲಿ ಎಲ್ಲಾ ನಾಯಕರಿಗಿಂತ ಜನಪ್ರಿಯತೆಯಲ್ಲಿ ಮುಂಚೂಣಿಯಲ್ಲಿದ್ದಾರೆ. ಟ್ವಿಟರ್ ನಲ್ಲಿ ನರೇಂದ್ರ ಮೋದಿ ಅವರು 89.5 ಮಿಲಿಯನ್ ಫಾಲೋವರ್ಸ್‌ಗಳನ್ನು ಹೊಂದಿದ್ದಾರೆ.
ನರೇಂದ್ರ ಮೋದಿ ಇಷ್ಟೊಂದು ಜನಪ್ರಿಯವಾಗಲು ಕಾರಣವೇನು, ಯಾವೆಲ್ಲಾ ವಿಚಾರಗಳು ಅವರು ಜನಪ್ರಿಯವಾಗಲು ಸಹಾಯಕವಾಗಿವೆ ಎನ್ನುವ ಬಗ್ಗೆ ಮುಜಿಬ್ ಮಶಾಲ್, ದಿ ನ್ಯೂಯಾರ್ಕ್ ಟೈಮ್ಸ್‌ನಲ್ಲಿ ಬೆಳಕು ಚೆಲ್ಲಿದ್ದಾರೆ. ನರೇಂದ್ರ ಮೋದಿ ಅವರ ಜನಪ್ರಿಯತೆ ಹೆಚ್ಚಾಗಲು ರೇಡಿಯೋ ಕಾರಣ ಎಂದು ಹೇಳಿದ್ದಾರೆ.

ಹೌದು, ನರೇಂದ್ರ ಮೋದಿ ಜನಪ್ರಿಯತೆ ಹೆಚ್ಚಾಗಲು ಅವರು ನಡೆಸುವ 'ಮನ್ ಕಿ ಬಾತ್' ರೇಡಿಯೋ ಕಾರ್ಯಕ್ರಮ ಪ್ರಮುಖ ಕಾರಣ ಎಂದು ಹೇಳಿದ್ದಾರೆ. ಇಡೀ ದೇಶದ ಜನರನ್ನು ಮೋದಿ ಉದ್ದೇಶಿಸಿ ಮಾತನಾಡುತ್ತಾರೆ. ಸ್ಥಳೀಯ ವಿಚಾರಗಳ ಬಗ್ಗೆ ಅವರು ಪ್ರಸ್ತಾಪಿಸುತ್ತಾರೆ. ಪ್ರತಿ ತಿಂಗಳು ಪ್ರಸಾರವಾಗುವ ಈ ಕಾರ್ಯಕ್ರಮ ದೊಡ್ಡ, ಅಥವಾ ಚಿಕ್ಕ ಸ್ಪೂರ್ತಿದಾಯಕ ಘಟನೆಗಳನ್ನು ಒಳಗೊಂಡಿರುತ್ತದೆ. ಕೆಲವು ಸಮಸ್ಯೆಗಳಿಗೆ ಪರಿಹಾರ ಒದಗಿಸುತ್ತದೆ. ಆಧ್ಯಾತ್ಮಿಕದ ರೀತಿಯಲ್ಲಿ ಈ ಕಾರ್ಯಕ್ರಮ ಜನಪ್ರಿಯವಾಗಿದೆ.
ದೊಡ್ಡ ದೇಶದ ಪ್ರಧಾನಿ ಎನ್ನುವುದೊಂದೆ ಕಾರಣವಲ್ಲ!
ನರೇಂದ್ರ ಮೋದಿ ದೇಶ, ಭಾಷೆ, ಗಡಿಗಳನ್ನು ಮೀರಿ ಜನಪ್ರಿಯತೆ ಗಳಿಸಲು ಅವರು ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವ ದೇಶದ ಪ್ರಧಾನಿ ಎನ್ನುವುದು ಮಾತ್ರ ಕಾರಣವಲ್ಲ. ಅಥವಾ, ಅವರು ಪ್ರಪಂಚದ ವಿವಿಧ ದೇಶಗಳಿಗೆ ಭೇಟಿ ನೀಡುವುದರಿಂದ ಜನಪ್ರಿಯವಾಗಿಲ್ಲ. ಆದರೆ, ಅವರು ಹೋದ ಕಡೆ ಜನರ ಮೇಲೆ ಬೀರುವ ಪ್ರಭಾವ, ಭಾರತೀಯರು ಮತ್ತು ಅವರ ಸಂಪ್ರದಾಯಗಳು, ನಂಬಿಕೆಗಳ ಮೇಲೆ ಮೋದಿ ಬೀರುವ ಪ್ರಭಾವ ಅವರ ಜನಪ್ರಿಯತೆ ಹೆಚ್ಚಾಗಲು ಕಾರಣವಾಗಿದೆ.
ತಿಂಗಳಿಗೊಮ್ಮೆ, ಪ್ರಧಾನಿ ಮೋದಿ ಅವರು ತಮ್ಮ ಸರ್ಕಾರಿ ಬಂಗಲೆಯಲ್ಲಿ ಸ್ಥಾಪಿಸಲಾದ ಸ್ಟುಡಿಯೊಗೆ ಹೋಗುತ್ತಾರೆ ಮತ್ತು ಮೈಕ್ರೊಫೋನ್ ಹಿಂದೆ ಕುಳಿತು ತಮ್ಮ ರೇಡಿಯೊ ಕಾರ್ಯಕ್ರಮವನ್ನು ಪ್ರಾರಂಭಿಸುತ್ತಾರೆ, ಮನ್ ಕಿ ಬಾತ್ ಈಗಾಗಲೇ 100 ಸಂಚಿಕೆಗಳ ಪ್ರಸಾರ ಕಂಡಿದೆ. "ನನ್ನ ಪ್ರೀತಿಯ ದೇಶವಾಸಿಗಳೇ, ನಮಸ್ಕಾರ!" ಎಂದು ಶುರು ಮಾಡುವ ಅವರು, ಹಲವು ವಿಚಾರಗಳ ಬಗ್ಗೆ ಮಾತನಾಡುತ್ತಾರೆ.
ಆಯ್ದ ವ್ಯಕ್ತಿಗಳ ಜೊತೆ ಮೋದಿ ಮಾತು
ವಿಶ್ವದ ಅತಿ ಹೆಚ್ಚು ಜನಸಂಖ್ಯೆಯುಳ್ಳ ರಾಷ್ಟ್ರದ ಪ್ರಧಾನಮಂತ್ರಿ ಮೋದಿ, ರೇಡಿಯೋ ಕಾರ್ಯಕ್ರಮ ಪ್ರಸಾರದಲ್ಲಿ ಭಾರತದ ವಿವಿಧ ರಾಜ್ಯಗಳ ಪರಂಪರೆಯ ಬಗ್ಗೆ, ಆಚಾರ-ವಿಚಾರ ಸಂಪ್ರದಾಯಗಳ ಬಗ್ಗೆ ಮಾತನಾಡುತ್ತಾರೆ. ಯುವಕರ ಬಗ್ಗೆ, ಮಹಿಳೆಯರ ಸ್ವಾವಲಂಬನೆ ಬಗ್ಗೆ ಮಾತನಾಡುವ ಮೂಲಕ ಜನಮನ ಗೆದ್ದಿದ್ದಾರೆ.
ಇನ್ನು ಈ ಕಾರ್ಯಕ್ರಮದಲ್ಲಿ ನರೇಂದ್ರ ಮೋದಿಯವರು, ಕೇಳುಗರ ಜೊತೆ ದೂರವಾಣಿ ಮೂಲಕ ಮಾತನಾಡುತ್ತಾರೆ. ದೇಶದ ಯಾವುದೋ ಮೂಲೆಯಲ್ಲಿರುವ ಸಾಮಾನ್ಯ ವ್ಯಕ್ತಿಯೊಬ್ಬರ ಜೊತೆ ಪ್ರಧಾನಿ ದೂರವಾಣಿಯಲ್ಲಿ ಮಾತನಾಡುವುದು, ಅವರ ಸಾಧನೆ, ಕೆಲಸಗಳ ಬಗ್ಗೆ ಮಾತನಾಡುವುದು, ರೇಡಿಯೋ ಕಾರ್ಯಕ್ರಮ ಜನಪ್ರಿಯಾಗಲು ಕಾರಣವಾಗಿದೆ.
ಶಿಕ್ಷಕರು, ಮಹಿಳೆಯರು, ಮಕ್ಕಳಿಗೆ ದೂರವಾಣಿ ಕರೆ ಮಾಡುವ ಅವರು, ಶಾಲಾ ಪರೀಕ್ಷೆಗಳ ಒತ್ತಡವನ್ನು ನಿರ್ವಹಿಸುವ ಕುರಿತು ಅವರು ಸಲಹೆ ನೀಡುತ್ತಾರೆ, ಅವರ ಶೈಕ್ಷಣಿಕ ಹಿನ್ನೆಲೆ ಅವರಂತೆಯೇ ವಿನಮ್ರವಾಗಿದೆ ಎಂದು ಅವರು ತಮ್ಮ ಪ್ರೇಕ್ಷಕರಿಗೆ ನೆನಪಿಸುತ್ತಾರೆ. ಗ್ರಾಮ ಮತ್ತು ಕೃಷಿ ಜೀವನದ ಸವಾಲುಗಳ ಅರಿವನ್ನು ವ್ಯಕ್ತಪಡಿಸುವಾಗ ಅವರು ನೀರನ್ನು ಉಳಿಸುವ ಬಗ್ಗೆ ಮಾತನಾಡುತ್ತಾರೆ. ಶೌಚಾಲಯ ಬಳಕೆ ಬಗ್ಗೆ ಅರಿವು ಮೂಡಿಸುತ್ತಾರೆ.
ಮೋದಿ ರೇಡಿಯೋ ಕಾರ್ಯಕ್ರಮದ ಸಂಭಾಷಣೆಗಳನ್ನು ಕತ್ತರಿಸಿ, ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗಿದೆ. ಇವು ಸಾಕಷ್ಟು ವೈರಲ್ ಆದವು. ಗ್ರಾಮೀಣ ಭಾರತದ ಬಗ್ಗೆ ಮೋದಿಯವರಿಗೆ ಇರುವ ಜ್ಞಾನ, ಅವರನ್ನು ಇನ್ನಷ್ಟು ಜನಪ್ರಿಯವಾಗಿಸಿದೆ ಎಂದು ಹೇಳಿದೆ.












Click it and Unblock the Notifications