ಪುಕಾರಿನ ಬೆನ್ನಲ್ಲೇ 'ಇಂದು ಸರ್ಕಾರ್'ಗೆ ಕಾಂಗ್ರೆಸ್ ತಕರಾರು

Posted By:
Subscribe to Oneindia Kannada

ಸರ್ವಾಧಿಕಾರದ ವಿರುದ್ಧವಾಗಿ, ಪ್ರಜಾಪ್ರಭುತ್ವದ ಪರವಾಗಿ ಧ್ವನಿ ಎತ್ತುವ ಕಾಂಗ್ರೆಸ್ ಈಗ ಮಧುರ್ ಭಂಡಾರ್ಕರ್ ಸಿನಿಮಾಗೆ ಆಕ್ಷೇಪ ವ್ಯಕ್ತಪಡಿಸುತ್ತಿದೆ. ಆ ಸಿನಿಮಾದ ಹೆಸರು 'ಇಂದು ಸರ್ಕಾರ್'. ಇಂದಿರಾ ಗಾಂಧಿ ಜೀವನಾಧಾರಿತವಾದ ಸಿನಿಮಾ ಎಂಬ ಕಾರಣಕ್ಕೆ ಸೆನ್ಸಾರ್ ನಿಂದಲೂ ಆಕ್ಷೇಪ ಬಂದಿದೆ.

ಅಭಿವ್ಯಕ್ತಿ ಸ್ವಾತಂತ್ರ್ಯ, ಕ್ರಿಯಾತ್ಮಕ ವ್ಯಕ್ತಿಯ ಅಭಿವ್ಯಕ್ತಿ ಎಂದು ಹಲವು ವಿಚಾರದಲ್ಲಿ ಬೀದಿಗೆ ಇಳಿದು ಪ್ರತಿಭಟನೆ ನಡೆಸುವ ಕಾಂಗ್ರೆಸ್, ಹೀಗೆ ಒಂದು ಸಿನಿಮಾ ಬಿಡುಗಡೆಗೆ ಹೀಗೆ ಅಡ್ಡಗಾಲು ಹಾಕಿ ನಿಲ್ಲುವುದು ಸರಿಯಾದ ಕ್ರಮವಲ್ಲ ಎಂದು ಸ್ವತಃ ನಿರ್ದೇಶಕ ಮಧುರ್ ಭಂಡಾರ್ಕರ್ ಧ್ವನಿ ಎತ್ತಿದ್ದಾರೆ.

ಇಂದಿರಾಗಿತ್ತೆ ನೆಹರೂ ಸೆಕ್ರೆಟರಿ ಜೊತೆ ಸೀಕ್ರೆಟ್ ಸಂಬಂಧ?

ಈ ಬಗ್ಗೆ ಜನರ ಮಧ್ಯೆಯೇ ಚರ್ಚೆಯಾಗಬೇಕು. ಸಿನಿಮಾಗೆ ತಡೆ ಹಾಕಬೇಕು ಅನ್ನೋ ನಿಲುವಿಗೆ ದೇಶದಾದ್ಯಂತ ವಿರೋಧ ವ್ಯಕ್ತವಾಗಿದೆ. ಬೆಂಗಳೂರಿನಲ್ಲಿ ನಡೆದ ಪ್ರತಿಭಟನೆಯಲ್ಲಿ ನಟಿ ತಾರಾ ಭಾಗವಹಿಸಿದ್ದಾರೆ. ಇನ್ನು ಮೀರತ್ ನಲ್ಲಿ ಪೋಷಕರನ್ನು ಡೋಲಿಯಲ್ಲಿ ಹೆಗಲ ಮೇಲೆ ಹೊತ್ತೊಯ್ದ ಮಗ, ಮಹಾರಾಷ್ಟ್ರದಲ್ಲಿ ಸೆರೆ ಸಿಕ್ಕ ಚಿರತೆ ಮರಿ...

ಜತೆಗೆ ಬ್ರಿಟನ್ ರಾಣಿಯ ಜನ್ಮದಿನಾಚರಣೆ ಬರ್ಲಿನ್ ನಲ್ಲಿ ಮಾಡಲಾಗಿದೆ. ಅಲ್ಲಿ ಅತಿಥಿಗಳ ಜತೆಗೆ ಮಾತನಾಡುತ್ತಿರುವ ಯುವರಾಣಿ ಕೇಟ್ ಸೇರಿದಂತೆ ಇನ್ನಷ್ಟು ಚಿತ್ರ-ಸುದ್ದಿ ನಿಮಗಾಗಿ, ಇಲ್ಲಿವೆ.

'ಕಾಂಗ್ರೆಸ್ ಗೂಂಡಾಗಿರಿ ಅನುಮೋದಿಸ್ತೀರಾ?' ರಾಹುಲ್‌ಗೆ ಮಧುರ್ ಪ್ರಶ್ನೆ

ಇಂದು ಸರ್ಕಾರ್ ಆಕ್ಷೇಪಕ್ಕೆ ತಾರಾ ತಕರಾರು

ಇಂದು ಸರ್ಕಾರ್ ಆಕ್ಷೇಪಕ್ಕೆ ತಾರಾ ತಕರಾರು

ಮಧುರ್ ಭಂಡಾರ್ಕರ್ 'ಇಂದು ಸರ್ಕಾರ್' ಎಂಬ ಹಿಂದಿ ಸಿನಿಮಾ ಮಾಡಿದ್ದಾರೆ. ಆ ಸಿನಿಮಾ ದಿವಂಗತ ಪ್ರಧಾನಿ ಇಂದಿರಾಗಾಂಧಿ ಜೀವನಾಧಾರಿತ ಎಂಬ ಕಾರಣಕ್ಕೆ ಸೆನ್ಸಾರ್ ಬೋರ್ಡ್ ನಿಂದ ಆಕ್ಷೇಪ ಬಂದಿದೆ. ನಿರೀಕ್ಷೆಯಂತೆ ಕಾಂಗ್ರೆಸ್ ನವರು ವಿರೋಧ ಮಾಡಿದ್ದಾರೆ.

ಇದೀಗ ನಿರ್ದೇಶಕ ಭಂಡಾರ್ಕರ್ ಪರವಾಗಿ ಸಿಟಿಜನ್ ಫಾರ್ ಡೆಮಾಕ್ರಸಿ ಸಂಘಟನೆ ಬೆಂಗಳೂರಿನಲ್ಲಿ ನಡೆಸಿದ ಹೋರಾಟದಲ್ಲಿ ನಟಿ ತಾರಾ ಪಾಲ್ಗೊಂಡರು.

ರಾಣಿಯ ಹುಟ್ಟುಹಬ್ಬದಲ್ಲಿ ಯುವರಾಣಿಯ ಸಂಭ್ರಮ

ರಾಣಿಯ ಹುಟ್ಟುಹಬ್ಬದಲ್ಲಿ ಯುವರಾಣಿಯ ಸಂಭ್ರಮ

ಜರ್ಮನಿಯ ಬರ್ಲಿನ್ ನಲ್ಲಿರುವ ಬ್ರಿಟಿಷ್ ರಾಯಭಾರಿಯ ಗೃಹದಲ್ಲಿ ಬ್ರಿಟನ್ ನ ರಾಣಿ ಜನ್ಮದಿನದ ಅಂಗವಾಗಿ ಆಯೋಜಿಸಿದ್ದ ಔತಣಕೂಟದಲ್ಲಿ ಯುವರಾಣಿ ಕೇಟ್ ಅವರು ಅತಿಥಿಗಳ ಜತೆ ಮಾತುಕತೆ ನಡೆಸಿದರು.

ತಂದೆ-ತಾಯಿಯನ್ನು ಹೆಗಲ ಮೇಲೆ ಹೊತ್ತು ಪುಣ್ಯಕ್ಷೇತ್ರ ದರ್ಶನ

ತಂದೆ-ತಾಯಿಯನ್ನು ಹೆಗಲ ಮೇಲೆ ಹೊತ್ತು ಪುಣ್ಯಕ್ಷೇತ್ರ ದರ್ಶನ

ದೆಹಲಿ ಮೂಲದ ವ್ಯಕ್ತಿಯೊಬ್ಬರು ತಮ್ಮ ಪೋಷಕರನ್ನು ಪುಣ್ಯ ಕ್ಷೇತ್ರಗಳ ಯಾತ್ರೆಗೆ ಕರೆದೊಯ್ಯುವ ವೇಳೆ ಮೀರತ್ ನ ಬಳಿ ಕ್ಯಾಮೆರಾ ಕಣ್ಣಿಗೆ ಕಂಡಿದ್ದು ಹೀಗೆ. ಉತ್ತರ ಭಾರತದಲ್ಲಿ ಈಗ ಶ್ರಾವಣ ಮಾಸ. ಈ ಮಾಸದಲ್ಲಿ ಪುಣ್ಯಕ್ಶ್ಶೇತ್ರಗಳ ದರ್ಶನ ಮಾಡಿದರೆ ಪುಣ್ಯಪ್ರಾಪ್ತಿ ಎಂಬುದು ಅವರ ನಂಬಿಕೆ.

ಚೂಪುಚೂಪು ಕಣ್ಣಿನ ಚಿರತೆ

ಚೂಪುಚೂಪು ಕಣ್ಣಿನ ಚಿರತೆ

ಚೂಪುಚೂಪಾದ ಕಣ್ಣು ಇರಿಯುತ್ತಿದೆಯಲ್ಲಾ, ಅದು ಚಿರತೆ ಮರಿ. ಮಹಾರಾಷ್ಟ್ರದ ಹಳ್ಳಿಯೊಂದರ ಕಬ್ಬಿನ ಗದ್ದೆಯಲ್ಲಿ ಹಿಡಿಯಲಾದ ಚಿರತೆ ಮರಿಯನ್ನು ಕರಡ್ ನಲ್ಲಿರುವ ಅರಣ್ಯ ಇಲಾಖೆ ಕಚೇರಿಯ ಬಳಿ ಇರಿಸಿದ್ದಾಗ ಕಂಡ ದೃಶ್ಯವಿದು.

ಬಟ್ಟೆ ನೆನೆಹಾಕಿದಂತಿವೆ ನೋಡಿ ವಾಹನಗಳು

ಬಟ್ಟೆ ನೆನೆಹಾಕಿದಂತಿವೆ ನೋಡಿ ವಾಹನಗಳು

ವಾಹನಗಳನ್ನು ಬಟ್ಟೆ ನೆನೆ ಹಾಕಿದಂತೆ ಕಾಣುತ್ತಿದೆಯಲ್ಲಾ, ಇದು ನಾಗಾಲ್ಯಾಂಡ್ ನ ದಿಮಪುರ್ ನಲ್ಲಿರುವ ಧೋಬಿನಲದ ದೃಶ್ಯ. ಅಲ್ಲಿ ವಿಪರೀತ ಮಳೆಯಾಗಿ, ನೋಡಿ ಇದು ಪರಿಸ್ಥಿತಿ. ಬೆಂಗಳೂರಿನಲ್ಲೂ ಹೀಗೆಲ್ಲ ಆಗುತ್ತೆ ಬಿಡ್ರೀ ಅಂತೀರಾ? ನಿಮ್ಮ ಅನುಭವಕ್ಕೆ ಗೌರವ ಸಮರ್ಪಣೆ.

ಡರ್ಬಿಯಲ್ಲಿ ಅಭ್ಯಾಸನಿರತರು

ಡರ್ಬಿಯಲ್ಲಿ ಅಭ್ಯಾಸನಿರತರು

ಡರ್ಬಿಯಲ್ಲಿ ಭಾರತೀಯ ಮಹಿಳಾ ಕ್ರಿಕೆಟ್ ನ ಆಟಗಾರ್ತಿಯರು ಅಭ್ಯಾಸದಲ್ಲಿ ತೊಡಗಿದ್ದ ಕ್ಷಣಗಳು.

Siddarmaiah Has Finally Decided To Launch "Indira Canteen" On August 15th
ಪಾಕಿಸ್ತಾನದ ಮಗು ಚೇತರಿಕೆ

ಪಾಕಿಸ್ತಾನದ ಮಗು ಚೇತರಿಕೆ

ಪಾಕಿಸ್ತಾನದ ನಾಲ್ಕು ತಿಂಗಳ ಮಗು ರೋಹಾನ್ ಗೆ ನೋಯ್ಡಾದ ಆಸ್ಪತ್ರೆಯಲ್ಲಿ ಯಶಸ್ವಿಯಾಗಿ ಹೃದಯ ಶಸ್ತ್ರಚಿಕಿತ್ಸೆಯಾಗಿ, ಚೇತರಿಸಿಕೊಂಡಿದೆ. ಆ ಮಗುವಿನ ಪೋಷಕರ ಮುಖದಲ್ಲಿ ಕೃತಜ್ಞತಾ ಭಾವ ತುಳುಕುತ್ತಿದೆ. ದ್ವೇಷ ಹೊತ್ತಿ ಉರಿಯುವಾಗಲೂ ಮನುಷ್ಯತ್ವದ ದೀಪ ಬೆಳಗುವಂತೆ ಮಾಡಿರುವುದು ಸಾರ್ಥಕ ಅಲ್ಲದೆ ಮತ್ತೇನು?

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
People protest against Congress stand about Madhur Bhandarkar directed Indu Sarkar movie. Other national and international event represent through PTI photos.
Please Wait while comments are loading...