ಶಬರಿಮಲೆ ದೇವಾಲಯಕ್ಕೆ ಮಹಿಳೆಯರಿಗೆ ಪ್ರವೇಶ ಏಕಿಲ್ಲ?
Recommended Video

ಶಬರಿಮಲೆ ದೇವಾಲಯಕ್ಕೆ ಮಹಿಳೆಯರು ಪ್ರವೇಶ ನೀಡಬೇಕೆ, ಬೇಡವೆ ಎಂಬ ವಿಷಯಕ್ಕೆ ಕುರಿತಂತೆ ಸುಪ್ರೀಂ ಕೋರ್ಟ್ ಇಂದು ಮಹತ್ವದ ತೀರ್ಪು ನೀಡಲಿದೆ.
10 ರಿಂದ 50 ವರ್ಷ ವಯಸ್ಸಿನೊಳಗಿನ ಮಹಿಳೆಯರು ಋತುಮತಿಯಾಗುವ ಕಾರಣಕ್ಕೆ ಅವರಿಗೆ ದೇವಾಲಯಕ್ಕೆ ಪ್ರವೇಶವಿಲ್ಲ. ಅಷ್ಟಕ್ಕೂ ಮುಟ್ಟಾಗುವ ಮಹಿಳೆಯರು ದೇವಾಲಯವನ್ನು ಪ್ರವೇಸಿಸಬಾರದು ಎಂಬ ನಿಯಮದ ಹಿನ್ನೆಲೆಯೇನು?
800 ವರ್ಷಗಳ ಕಾಲ ಮುಚ್ಚಟೆಯಿಂದ ಕಾಯ್ದುಕೊಂಡು ಬಂದ ಈ ನಿಯಮಕ್ಕೆ ಇಂದು ಸುಪ್ರೀಂ ಕೋರ್ಟ್ ಛೀಮಾರಿ ಹಾಕುತ್ತದಾ?

ಪ್ರವೇಶ ಏಕಿಲ್ಲ?
ಹತ್ತರಿಂದ ಐವತ್ತು ವರ್ಷ ವಯಸ್ಸಿನ ಮಹಿಳೆಯರು ಋತುಮತಿಯಾಗುವುದರಿಂದ ಅವರು ದೇವಾಲಯ ಪ್ರವೇಶ ಮಾಡುವುದರಿಂದ ದೇವಾಲಯದ ಪಾವಿತ್ರ್ಯಕ್ಕೆ ಧಕ್ಕೆ ಬರುತ್ತದೆ ಎಂಬುದು ದೇವಾಲಯದ ಆಡಳಿತ ಮಂಡಳಿಯ ವಾದ. ಅಯ್ಯಪ್ಪನ ಭಕ್ತರು ಕಟ್ಟುನಿಟ್ಟಿನ ವ್ರತ ಪಾಲಿಸಿ, ಹರಕೆ ತೀರಿಸಲು ದೇವಾಲಯಕ್ಕೆ ಬರುವುದರಿಂದ ದೇವಾಲಯದ ಪಾವಿತ್ರ್ಯಕ್ಕೆ ಧಕ್ಕೆಯಾಗದಂತೆ ಎಚ್ಚರಿಕೆ ವಹಿಸಬೇಕು ಎಂಬುದು ದೇವಾಲಯದ ವಾದ.
ಮೂಲ ಕಾರಣವೇನು?
ಶಬರಿಮಲೆಯ ಸ್ವಾಮಿ ಅಯ್ಯಪ್ಪ ನೈಷ್ಠಿಕ ಬ್ರಹ್ಮಾಚಾರಿ. ಆದ್ದರಿಂದ ಋತುಮತಿಯಾಗುವ ಮಹಿಳೆಯರು ಆತನ ದೇವಾಲಯವನ್ನು ಪ್ರವೇಶಿಸುವಂತಿಲ್ಲ ಎಂಬುದು ನಿಯಮ.












Click it and Unblock the Notifications