ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

'ಅಭಿನಂದನೆ ಪ್ರಧಾನಿ ಮೋದಿ': ಲಸಿಕೆ ಮೈಲಿಗಲ್ಲಿಗೆ ವಿಶ್ವ ಆರೋಗ್ಯ ಸಂಸ್ಥೆ ಮುಖ್ಯಸ್ಥ ಪ್ರತಿಕ್ರಿಯೆ

|
Google Oneindia Kannada News

ನವದೆಹಲಿ, ಅಕ್ಟೋಬರ್‌ 21: ದೇಶದಲ್ಲಿ ಕೊರೊನಾ ವೈರಸ್‌ ಸೋಂಕು ವಿರುದ್ಧ ಲಸಿಕೆ ನೀಡಲು ಆರಂಭ ಮಾಡಿ ಒಂಬತ್ತು ತಿಂಗಳು ಆಗಿದ್ದು, ದೇಶದಲ್ಲಿ ಈಗ ನೂರು ಕೋಟಿ ಡೋಸ್‌ ಕೋವಿಡ್‌ ಲಸಿಕೆಯನ್ನು ನೀಡಲಾಗಿದೆ. ಈ ಮೂಲಕ ಭಾರತವು ನೂರು ಕೋಟಿ ಲಸಿಕೆ ನೀಡಿದ ಜಗತ್ತಿನ ಎರಡನೇ ದೇಶವಾಗಿದೆ. ಈ ನಿಟ್ಟಿನಲ್ಲಿ ವಿಶ್ವ ಆರೋಗ್ಯ ಸಂಸ್ಥೆಯು ಭಾರತಕ್ಕೆ ಅಭಿನಂದನೆ ತಿಳಿಸಿದೆ.

ಈ ಬಗ್ಗೆ ವಿಶ್ವ ಆರೋಗ್ಯ ಸಂಸ್ಥೆಯ ಮುಖ್ಯಸ್ಥ ಟೆಡ್ರೋಸ್‌ ಅಧನೊಂ ಗೆಬ್ರೇಯೇಸಸ್‌ ಟ್ವೀಟ್‌ ಮಾಡಿ ಭಾರತಕ್ಕೆ ಅಭಿನಂದನೆ ತಿಳಿಸಿದ್ದಾರೆ. "ಭಾರತದ ಪ್ರಧಾನ ಮಂತ್ರಿ ನರೇಂದ್ರ ಮೋದಿ, ವಿಜ್ಞಾನಿಗಳು, ಆರೋಗ್ಯ ಕಾರ್ಯಕರ್ತರು ಹಾಗೂ ಭಾರತದ ಜನರಿಗೆ ಅಭಿನಂದನೆಗಳು," ಎಂದು ಟೆಡ್ರೋಸ್‌ ಅಧನೊಂ ಗೆಬ್ರೇಯೇಸಸ್‌ ಟ್ವೀಟ್‌ ಮಾಡಿದ್ದಾರೆ.

ಭಾರತದ ಆರೋಗ್ಯ ಸಚಿವರಿಗೆ ಧನ್ಯವಾದ: ವಿಶ್ವ ಆರೋಗ್ಯ ಸಂಸ್ಥೆ ಮುಖ್ಯಸ್ಥಭಾರತದ ಆರೋಗ್ಯ ಸಚಿವರಿಗೆ ಧನ್ಯವಾದ: ವಿಶ್ವ ಆರೋಗ್ಯ ಸಂಸ್ಥೆ ಮುಖ್ಯಸ್ಥ

ಹಾಗೆಯೇ, "ದೇಶದ ದುರ್ಬಲ ಜನರನ್ನು ಕೊರೊನಾ ವೈರಸ್‌ ಸೋಂಕಿನಿಂದ ಕಾಪಾಡಿಕೊಳ್ಳುವಲ್ಲಿ ಹಾಗೂ ಲಸಿಕೆ ಗುರಿಯನ್ನು ತಲುಪುವಲ್ಲಿ ಭಾರತದ ಪ್ರಧಾನ ಮಂತ್ರಿ ನರೇಂದ್ರ ಮೋದಿ, ವಿಜ್ಞಾನಿಗಳು, ಆರೋಗ್ಯ ಕಾರ್ಯಕರ್ತರು ಹಾಗೂ ಭಾರತದ ಜನರ ಪ್ರಯತ್ನಕ್ಕೆ ಅಭಿನಂದನೆಗಳು," ಎಂದು ವಿಶ್ವ ಆರೋಗ್ಯ ಸಂಸ್ಥೆಯ ಮುಖ್ಯಸ್ಥ ಟೆಡ್ರೋಸ್‌ ಅಧನೊಂ ಗೆಬ್ರೇಯೇಸಸ್‌ ಹೇಳಿದ್ದಾರೆ.

 WHO Chief Congratulates PM Modi On Vaccine Century

ಭಾರತದಲ್ಲಿ ನೂರು ಕೋಟಿ ಡೋಸ್‌ ಕೋವಿಡ್‌ ಲಸಿಕೆ ನೀಡಲಾದ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರವು ದೇಶದ ಆರೋಗ್ಯ ಕಾರ್ಯಕರ್ತರಿಗೆ ಧನ್ಯವಾದ ಸಲ್ಲಿಸಿದೆ. ರೈಲ್ವೇ ಸ್ಟೇಷನ್‌, ವಿಮಾನ ನಿಲ್ದಾಣ ಹಾಗೂ ಸ್ಮಾರಕಗಳಲ್ಲಿ ರಾಷ್ಟ್ರ ಧ್ವಜವನ್ನು ಹಾರಿಸುವ ಮೂಲಕ ಧನ್ಯವಾದವನ್ನು ಅರ್ಪಿಸಲಾಗುತ್ತಿದೆ.

ಈ ಬಗ್ಗೆ ಟ್ವೀಟ್‌ ಮಾಡಿರುವ ಪ್ರಧಾನ ಮಂತ್ರಿ ನರೇಂದ್ರ ಮೋದಿ, "ಭಾರತವು ಇತಿಹಾಸವನ್ನು ಬರೆದಿದೆ. ನಾವಿಂದು 130 ಕೋಟಿ ಭಾರತೀಯರ ಸಾಮೂಹಿಕ ಮನೋಭಾವ, ಭಾರತೀಯ ವಿಜ್ಞಾನ, ಉದ್ಯಮದ ವಿಜಯವನ್ನು ನೋಡುತ್ತಿದ್ದೇವೆ. ಕೊರೊನಾ ವೈರಸ್‌ ಲಸಿಕೆ ನೀಡಿಕೆ ನೂರು ಕೋಟಿ ದಾಟಿದ ಹಿನ್ನೆಲೆಯಲ್ಲಿ ಭಾರತಕ್ಕೆ ಅಭಿನಂದನೆಗಳು. ನಮ್ಮ ವೈದ್ಯರು, ದಾದಿಯರು ಹಾಗೂ ಈ ಕಾರ್ಯ ಸಾಧನೆಗೆ ಶ್ರಮಿಸಿದ ಎಲ್ಲರಿಗೂ ಧನ್ಯವಾದಗಳು," ಎಂದು ತಿಳಿಸಿದ್ದಾರೆ. ಈ ಟ್ವೀಟ್‌ಗೆ ಪ್ರತಿಕ್ರಿಯೆ ನೀಡು‌ತ್ತಾ, ವಿಶ್ವ ಆರೋಗ್ಯ ಸಂಸ್ಥೆಯ ಮುಖ್ಯಸ್ಥ ಟೆಡ್ರೋಸ್‌ ಅಧನೊಂ ಗೆಬ್ರೇಯೇಸಸ್‌ ಭಾರತಕ್ಕೆ ಅಭಿನಂದನೆ ತಿಳಿಸಿದ್ದಾರೆ. ಈ ನಡುವೆ ಟ್ವಿಟ್ಟರ್‌ನಲ್ಲಿ #VaccineCentury ಟ್ರೆಂಡ್‌ ಆಗಿದೆ.

ಭಾರತದಲ್ಲಿ 100 ಕೋಟಿ ಡೋಸ್ ಲಸಿಕೆ ವಿತರಣೆ: ಹೇಗಿದೆ ನಾಯಕರ ಪ್ರತಿಕ್ರಿಯೆ?ಭಾರತದಲ್ಲಿ 100 ಕೋಟಿ ಡೋಸ್ ಲಸಿಕೆ ವಿತರಣೆ: ಹೇಗಿದೆ ನಾಯಕರ ಪ್ರತಿಕ್ರಿಯೆ?

ಇನ್ನು ಹಲವಾರು ಭಾರತದ ನಾಯಕರುಗಳು ಕೂಡಾ ಈ ಮೈಲಿಗಲ್ಲಿನ ನಿಟ್ಟಿನಲ್ಲಿ ಅಭಿನಂದನೆ ಸಲ್ಲಿಸಿದ್ದಾರೆ. ಈ ಬಗ್ಗೆ ಟ್ವೀಟ್‌ ಮಾಡಿರುವ ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಮನ್ಸುಖ್ ಮಾಂಡವೀಯಾ, "ಅಭಿನಂದನೆಗಳು ಭಾರತ. ನಾವು ನೂರು ಡೋಸ್‌ ಲಸಿಕೆ ನೀಡುವ ಮೈಲಿಗಲ್ಲನ್ನು ತಲುಪಿದ್ದೇವೆ. ಈ ಗುರಿ ತಲುಪುವಲ್ಲಿ ಹಗಲು, ರಾತ್ರಿ ಶ್ರಮಿಸಿದ ನಮ್ಮ ಕೋವಿಡ್‌ ವಾರಿಯರ್‌ಗಳಿಗೆ, ನಮ್ಮ ಆರೋಗ್ಯ ಕಾರ್ಯಕರ್ತರಿಗೆ, ಮುಂಚೂಣಿ ಕಾರ್ಯಕರ್ತರಿಗೆ ನಮ್ಮ ವಂದನೆ," ಎಂದಿದ್ದಾರೆ.

ಈ ಹಿಂದೆ ಕೊರೊನಾವೈರಸ್‌ ಸೋಂಕು ವಿರುದ್ದ ನೀಡಲಾಗುವ ಲಸಿಕೆಯನ್ನು ಭಾರತವು ರಫ್ತು ಮಾಡಲು ತೀರ್ಮಾನ ಮಾಡಿರುವುದಕ್ಕೆ ವಿಶ್ವ ಆರೋಗ್ಯ ಸಂಸ್ಥೆಯ ಮುಖ್ಯಸ್ಥ ಟೆಡ್ರೋಸ್‌ ಅಧನೊಂ ಗೆಬ್ರೇಯೇಸಸ್‌, ಕೇಂದ್ರ ಆರೋಗ್ಯ ಸಚಿವ ಮನ್ಸುಖ್‌ ಮಾಂಡವೀಯಾರಿಗೆ ಧನ್ಯವಾದ ತಿಳಿಸಿದ್ದರು.

ಈ ಬಗ್ಗೆ ಟ್ವೀಟ್‌ ಮಾಡಿರುವ ವಿಶ್ವ ಆರೋಗ್ಯ ಸಂಸ್ಥೆ ಮುಖ್ಯಸ್ಥ ಟೆಡ್ರೋಸ್‌ ಅಧನೊಂ ಗೆಬ್ರೇಯೇಸಸ್‌, "ಅಕ್ಟೋಬರ್‌ನಲ್ಲಿ ಈ ನಿರ್ಣಾಯಕ ಕೋವಾಕ್ಸ್‌ ಕೋವಿಡ್‌ ಲಸಿಕೆಯ ರಫ್ತನ್ನು ಭಾರತ ಆರಂಭ ಮಾಡುವುದಾಗಿ ಘೋಷಣೆ ಮಾಡಿದ ಆರೋಗ್ಯ ಸಚಿವ ಮನ್ಸುಖ್‌ ಮಾಂಡವೀಯಾರಿಗೆ ಧನ್ಯವಾದಗಳು," ಎಂದು ತಿಳಿಸಿದ್ದರು. ಹಾಗೆಯೇ, "ಈ ವರ್ಷದ ಕೊನೆಯಲ್ಲಿ ಶೇಕಡ 40 ರಷ್ಟಾದರೂ ಕೋವಿಡ್‌ ಲಸಿಕೆ ನೀಡಿಕೆ ಗುರಿಯನ್ನು ವಿಶ್ವದ ಹಲವು ದೇಶಗಳು ತಲುಪುವುದಕ್ಕೆ ಈ ಮಹತ್ವದ ಬೆಳವಣಿಗೆ ಕಾರಣವಾಗಲಿದೆ. ಲಸಿಕೆ ಸಮಾನತೆ," ಎಂದು ಡಬ್ಲ್ಯೂಎಚ್‌ಒ ಮುಖ್ಯಸ್ಥ ಟೆಡ್ರೋಸ್‌ ಟ್ವೀಟ್‌ ಮಾಡಿದ್ದರು.

(ಒನ್‌ಇಂಡಿಯಾ ಸುದ್ದಿ)

English summary
WHO Director-General Tedros Adhanom Ghebreyesus Congratulates Prime Minister Narendra Modi On Vaccine Century.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X