ಜನವರಿ 1ರಿಂದ ಈ ಫೋನ್ ಗಳಲ್ಲಿ ನಿಮ್ಮ ನೆಚ್ಚಿನ WhatsApp ವರ್ಕ್ ಆಗಲ್ಲ!
ನವದೆಹಲಿ, ಜನವರಿ 01: ಜನಪ್ರಿಯ ಮೆಸೆಂಜರ್ app ವಾಟ್ಸಾಪ್ ಜನವರಿ 1 ರಿಂದ ಕೆಲವು ಫೋನ್ ಗಳಲ್ಲಿ ವರ್ಕ್ ಆಗುವುದಿಲ್ಲ ಎಂದು ವಾಟ್ಸಾಪ್ ಆಡಳಿತ ಮಂಡಳಿ ತಿಳಿಸಿದೆ.
ನೋಕಿಯಾ S40 ಫೋನ್ ಗಳಲ್ಲಿ ಡಿಸೆಂಬರ್ 31 ರ ನಂತರ ವಾಟ್ಸಾಪ್ ಬರೋಲ್ಲ. ಅಲ್ಲದೆ ಅಂಡ್ರಾಯ್ಡ್ ವರ್ಷನ್ 2.3.7 ಮತ್ತು ಹಳೆಯ ವರ್ಶನ್ ಗಳು, ಐಒಎಸ್ 7 ಮತ್ತು ಹಳೆಯ ವರ್ಶನ್ ಗಳಲ್ಲಿ ಫೆಬ್ರವರಿ 1, 2020 ರ ನಂತರ ವಾಟ್ಸಾಪ್ ಕೆಲಸ ಮಾಡುವುದಿಲ್ಲ.

ಮೇಲಿನ ಯಾವುದೇ ಫೋನ್ ಅನ್ನು ಬಳಸುತ್ತಿರುವವರು ತಮ್ಮ ಆಪರೇಟಿಂಗ್ ಸಿಸ್ಟೆಮ್ ಅನ್ನು ಅಪ್ ಗ್ರೇಡ್ ಮಾಡಿಕೊಳ್ಳುವ ಮೂಲಕ ವಾಟ್ಸಾಪ್ ಬಳಸಬಹುದಾಗಿದೆ ಎಂದು ವರದಿಗಳು ತಿಳಿಸಿವೆ.
ಯಾವುದರಲ್ಲಿ ವಾಟ್ಸಾಪ್ ವರ್ಕ್ ಆಗಲ್ಲ?
2.3.3 ಅಂಡ್ರಾಯ್ಡ್ ವರ್ಶನ್ ಮತ್ತು ಅದಕ್ಕಿಂತ ಹಳೆಯದು
ವಿಂಡೋಸ್ ಫೋನ್ 7
ಐಫೋನ್ 3GS/iOS 6
ನೋಕಿಯಾ ಸಿಂಬಿಯನ್ S60












Click it and Unblock the Notifications