ಸಂಸತ್ತಿನ ವಿಶೇಷ ಅಧಿವೇಶನದಲ್ಲಿ ವಕೀಲರ ತಿದ್ದುಪಡಿ ಮಸೂದೆ ಅಂಗೀಕಾರ ಸಾಧ್ಯತೆ: ಇದರ ವಿಶೇಷತೆ, ಮಹತ್ವ ತಿಳಿಯಿರಿ
ನವದೆಹಲಿ, ಸೆಪ್ಟೆಂಬರ್ 15: ಕೇಂದ್ರ ಸರ್ಕಾರವು ಸಂಸತ್ತಿನ ವಿಶೇಷ ಅಧಿವೇಶನ ಕರೆದಿದೆ. ಈ ಅಧಿವೇಶನದಲ್ಲಿ ಮಹತ್ವದ ಮಸೂದೆಗಳನ್ನು ಅಂಗೀಕರಿಸುವ ಸಾಧ್ಯತೆ ಇದೆ. ಇವುಗಳಲ್ಲಿ 'ವಕೀಲರ ತಿದ್ದುಪಡಿ ಮಸೂದೆ' ಪ್ರಮುಖವಾಗಿದೆ. ಇದರ ಮಹತ್ವ ಹಾಗೂ ವಿಶೇಷತೆಗಳನ್ನು ತಿಳಿಯಿರಿ.
ಸೆ. 18ರಿಂದ ಸಂಸತ್ತಿನ ವಿಶೇಷ ಅಧಿವೇಶನ ಆರಂಭವಾಗಲಿದೆ. ಈ ಅಧಿವೇಶನದಲ್ಲಿ ವಕೀಲರ ತಿದ್ದುಪಡಿ ಮಸೂದೆ 2023ರ ಕುರಿತು ಚರ್ಚೆ ನಡೆಯುವ ಸಾಧ್ಯತೆಗಳಿವೆ.

ಕೇಂದ್ರ ಕಾನೂನು ಸಚಿವ ಅರ್ಜುನ್ ರಾಮ್ ಮೇಘವಾಲ್ ಅವರು 1961 ರ ವಕೀಲರ ಕಾಯಿದೆಗೆ ತಿದ್ದುಪಡಿ ತರಲು ವಕೀಲರ ತಿದ್ದುಪಡಿ ಮಸೂದೆ- 2023 ಅನ್ನು ಮಂಡಿಸಲಿದ್ದಾರೆ.
ವಕೀಲರ ಕಾಯ್ದೆ- 1961 ಎಂದರೇನು?
ವಕೀಲರ ಕಾಯ್ದೆ- 1961 ಭಾರತೀಯ ಸಂಸತ್ತು ಅಂಗೀಕರಿಸಿದ ಕಾಯ್ದೆಯಾಗಿದೆ. ಇದು ಭಾರತದಲ್ಲಿ ಕಾನೂನು ವೃತ್ತಿಪರರಿಗೆ ಸಂಬಂಧಿಸಿದ ಕಾನೂನುಗಳನ್ನು ಒದಗಿಸುತ್ತದೆ. ಬಾರ್ ಕೌನ್ಸಿಲ್ ಆಫ್ ಇಂಡಿಯಾ ಮತ್ತು ರಾಜ್ಯ ಬಾರ್ ಕೌನ್ಸಿಲ್‌ಗಳಿಗೆ ನೀತಿ ನಿಯಮಗಳನ್ನು ರೂಪಿಸಿದೆ. ಈ ಕಾಯ್ದೆಯು ಕಾನೂನು ವೃತ್ತಿಗಾರರಿಗೆ ಸಂಬಂಧಿಸಿದ ಕಾಯ್ದೆಯಾಗಿದೆ.
ವಕೀಲರ ಕಾಯ್ದೆ- 1961 ಕಾನೂನು ವೃತ್ತಿಯಲ್ಲಿ ಅಸ್ತಿತ್ವದಲ್ಲಿರುವ ಕಾನೂನುಗಳನ್ನು ಕ್ರೋಢೀಕರಿಸಿತು. ಬಾರ್ ಕೌನ್ಸಿಲ್ ಆಫ್ ಇಂಡಿಯಾ ಮತ್ತು ಸ್ಟೇಟ್ ಬಾರ್ ಕೌನ್ಸಿಲ್‌ಗಳು ಇವುಗಳನ್ನು ಜಾರಿಗೆ ತಂದಿತು.
ದೇಶದಾದ್ಯಂತ ಇರುವ ವಕೀಲರಿಗೆ ಒಂದೇ ನೀತಿ ನಿಯಮಗಳನ್ನು ಈ ಕಾಯ್ದೆ ರೂಪಿಸಿತು.
ಈ ಕಾಯ್ದೆ ಅಡಿಯಲ್ಲಿ ಒಬ್ಬ ವಕೀಲ ಒಂದಕ್ಕಿಂತ ಹೆಚ್ಚು ರಾಜ್ಯ ಕೌನ್ಸಿಲ್ ಅಡಿಯಲ್ಲಿ ದಾಖಲಾಗುವಂತಿಲ್ಲ. ಆದರೆ ಒಂದು ರಾಜ್ಯ ಬಾರ್ ಕೌನ್ಸಿಲ್‌ನಿಂದ ಇನ್ನೊಂದಕ್ಕೆ ವರ್ಗಾವಣೆಯಾಗಬಹುದು.
ವಕೀಲರಿಗೆ ದೇಶದ ಯಾವುದೇ ಪ್ರದೇಶದಲ್ಲಿ, ಯಾವುದೇ ಹೈಕೋರ್ಟ್‌ನಲ್ಲಿ ಮತ್ತು ಭಾರತದ ಸುಪ್ರೀಂ ಕೋರ್ಟ್‌ನಲ್ಲಿ ವೃತ್ತಿ ಮಾಡುವ ಮಾಡುವ ಹಕ್ಕನ್ನು ಈ ಕಾಯ್ದೆಯು ನೀಡುತ್ತದೆ.
ಈ ಕಾಯ್ದೆಯಲ್ಲಿ ಕೆಲವೊಂದಿಷ್ಟನ್ನು ತಿದ್ದುಪಡಿ ಮಾಡಿ ವಿಶೇಷ ಸಂಸತ್ ಅಧಿವೇಶನದಲ್ಲಿ ಮಸೂದೆ ಮಂಡಿಸಲು ಕೇಂದ್ರ ಸರ್ಕಾರ ಮುಂದಾಗಿದೆ. ಈ ಕಾಯ್ದೆಯಡಿ ಬಳಕೆಯಲ್ಲಿ ಇಲ್ಲದ ಎಲ್ಲಾ ಕಾನೂನುಗಳು ಅಂದರೆ ಸ್ವಾತಂತ್ರ್ಯ ಪೂರ್ವದಲ್ಲಿ ಅಸ್ತಿತ್ವದಲ್ಲಿರುವ ಕಾನೂನುಗಳನ್ನು ರದ್ದುಗೊಳಸುವ ಚಿಂತನೆಯನ್ನು ಕೇಂದ್ರ ಸರ್ಕಾರ ಹೊಂದಿದೆ.
ಈ ಕುರಿತು ಮಾತನಾಡಿರುವ ಸಂಸತ್ ಸದಸ್ಯ ಸುಜೀತ್ ಕುಮಾರ್, ದೇಶದಲ್ಲಿರುವ ಎಲ್ಲಾ ವಕೀಲರ ಬಗ್ಗೆ ವಿವರಗಳನ್ನು ಹೊಂದಲು ಒಂದೇ ಡೇಟಾಬೇಸ್ ಇರಬೇಕು ಎಂದು ಪ್ರತಿಪಾದಿಸಿದ್ದಾರೆ.
ನಿರ್ಭೀತಿಯಿಂದ ಸೇವೆ ಸಲ್ಲಿಸಲು ವಕೀಲರ ಸಂರಕ್ಷಣಾ ಕಾಯ್ದೆ ತರಬೇಕು ಎಂದು ಅವರು ಒತ್ತಾಯಿಸಿದ್ದಾರೆ.












Click it and Unblock the Notifications