Get Updates
Get notified of breaking news, exclusive insights, and must-see stories!

No-Confidence Motion: ಈವರೆಗೆ 27 ಅವಿಶ್ವಾಸ ನಿರ್ಣಯ ಮಂಡನೆ, ಹಾಗಾದ್ರೆ ಯಾರು? ಹೇಗೆ? ಮಂಡಿಸುತ್ತಾರೆ, ಪೂರ್ಣ ಮಾಹಿತಿ ಇಲ್ಲಿದೆ

ಬೆಂಗಳೂರು, ಜುಲೈ 26: ಲೋಕಸಭಾ ಚುನಾವಣೆಗೆ ಕೆಲವೇ ತಿಂಗಳು ಬಾಕಿ ಇದ್ದು, ಪ್ರಸ್ತಕ ವರ್ಷದ ಮುಂಗಾರು ಅಧಿವೇಶನ 2023 ಆರಂಭಗೊಂಡು ಕೆಲವೇ ದಿನಕ್ಕೆ ಕೇಂದ್ರ ಸರ್ಕಾರದ ವಿರುದ್ಧ ವಿಪಕ್ಷಗಳು ಅವಿಶ್ವಾಸ ನಿರ್ಣಯ ಮಂಡಿಸಿವೆ. 2003ರ ನಂತರ ಇದೇ ಮೊದಲ ಭಾರಿಗೆ ಕೇಂದ್ರದ ವಿರುದ್ಧ ಬುಧವಾರ ಅವಿಶ್ವಾಸ ಮಂಡನೆ ಆಗಿದೆ. ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರದ ಪತನಕ್ಕೆ ಅಸ್ತವಾಗಿ ವಿಪಕ್ಷಗಳು ಈ ತಂತ್ರ ಹೂಡಿವೆ.

ಹಾಗಾದರೆ ಅವಿಶ್ವಾಸ ಮಂಡನೆ ಎಂದರೇನು?, ಯಾರು ಈ ಅವಿಶ್ವಾಸ ನಿರ್ಣಯ ಮಂಡನೆಗೆ ಅರ್ಹರು ಎಂಬೆಲ್ಲ ಪ್ರಮುಖ ಅಂಶಗಳನ್ನು ಇಲ್ಲಿ ತಿಳಿಯೋಣ.

ಮೊದಲಿಗೆ ಅವಿಶ್ವಾಸ ನಿರ್ಣಯ ಎಂದರೆ?, ಅವಿಶ್ವಾಸ ನಿರ್ಣವು ಇದೊಂದು ಸಂಸತ್ತಿನ ಪ್ರಕ್ರಿಯೆ ಆಗಿದೆ. ಅದು ಸರ್ಕಾರದ ಬಹುಮತ ಮತ್ತು ಆಡಳಿತದ ಸಾಮರ್ಥ್ಯವನ್ನು ಪ್ರತಿಪಕ್ಷಗಳಿಗೆ ಸವಾಲು ಮಾಡಲು ಅವಕಾಶ ನೀಡುತ್ತದೆ. ಪ್ರಸ್ತಾವನೆ ಅಂಗೀಕಾರವಾದರೆ ಸರ್ಕಾರ ರಾಜೀನಾಮೆ ನೀಡಬೇಕಾಗುತ್ತದೆ. ಅಂತಹ ಶಕ್ತಿ ಇದಕ್ಕಿದೆ.

what-is-a-no-confidence-motion

* ಯಾರು ಅವಿಶ್ವಾಸ ನಿರ್ಣಯ ಮಂಡಿಸಬಹುದು?

ಲೋಕಸಭೆಯ ಯಾವುದೇ ಸದಸ್ಯರು ಸಹ ಅವಿಶ್ವಾಸ ನಿರ್ಣಯವನ್ನು ಮಂಡಿಸಬಹುದಾಗಿದೆ. ಆದಾಗ್ಯೂ, ಸದನದ ಕನಿಷ್ಠ 50 ಸದಸ್ಯರು ಈ ಪ್ರಸ್ತಾಪವನ್ನು ಬೆಂಬಲಿಸಬೇಕಿರುತ್ತದೆ.

* ಅವಿಶ್ವಾಸ ಗೊತ್ತುವಳಿ ಮಂಡನೆ ಹೇಗೆ?

ಮುಖ್ಯವಾಗಿ ಅವಿಶ್ವಾಸ ನಿರ್ಣಯವು ಲಿಖಿತವಾಗಿರಬೇಕು ಮತ್ತು ಅದನ್ನು ಮಂಡಿಸುವ ಸದಸ್ಯರು ಸಹಿ ಮಾಡಿರಬೇಕು. ಸದನದ ಯಾವುದೇ ದಿನದಂದು ಲೋಕಸಭೆಯ ಸ್ಪೀಕರ್‌ಗೆ ಈ ಪ್ರಸ್ತಾವನೆಯನ್ನು ಸಲ್ಲಿಸಬಹುದು.

* ಅವಿಶ್ವಾಸ ಮಂಡನೆ ನಂತರದ ಪ್ರಕ್ರಿಯೆ?

ಮಂಡನಯೆಆದ ಅವೀಶ್ವಾಸ ಗೊತ್ತುವಳಿ ಪ್ರಸ್ತಾವನೆಯನ್ನು ಅಂಗೀಕರಿಸಬೇಕೇ ಎಂಬುದನ್ನು ಲೋಕಸಭೆಯ ಸ್ಪೀಕರ್ ನಿರ್ಧರಿಸುತ್ತಾರೆ. ಪ್ರಸ್ತಾವನೆ ಅಂಗೀಕಾರವಾದರೆ ಸ್ಪೀಕರ್ ಅದರ ಚರ್ಚೆಗೆ ದಿನಾಂಕ ಮತ್ತು ಸಮಯವನ್ನು ತೀರ್ಮಾನಿಸುತ್ತಾರೆ. ಲೋಕಸಭೆಯ ನಿಯಮಗಳ 198ನೇ ಉಪನಿಯಮ (2) ಮತ್ತು (3) ರ ಅಡಿಯಲ್ಲಿ (2) ಮತ್ತು (3) ನೇ ವಿಧಿಯ ಚರ್ಚೆಗೆ ಸ್ಪೀಕರ್ ಸಮಯಾವಕಾಶ ನೀಡಬಹುದಾಗಿದೆ.

* ಚರ್ಚೆ ಹೇಗೆ ನಡೆಯುತ್ತದೆ?

ಪ್ರಸ್ತಾವನೆಯನ್ನು ಸಲ್ಲಿಸಿದ ಸದಸ್ಯರು ಮಂಡಿಸುತ್ತಾರೆ. ನಂತರ ನಿಗದಿತ ಅವಕಾಶದಂತೆ ಲೋಕಸಭೆಯಲ್ಲಿ ಅವಿಶ್ವಾಸ ನಿರ್ಣಯದ ಬಗ್ಗೆ ಚರ್ಚೆ ನಡೆಯುತ್ತದೆ. ಈ ಬಗ್ಗೆ ಸರ್ಕಾರವು ವಿಪಕ್ಷಗಳ ಮನವಿಗೆ ಪ್ರತಿಕ್ರಿಯಿಸುತ್ತದೆ. ನಂತರ ವಿರೋಧ ಪಕ್ಷಗಳಿಗೆ ಪ್ರಸ್ತಾವನೆಯ ಮೇಲೆ ಮಾತನಾಡಲು ಅವಕಾಶ ದೊರೆಯಲಿದೆ.

what-is-a-no-confidence-motion

* ಸದಸ್ಯರ ಅವಿಶ್ವಾಸ ಗೊತ್ತುವಳಿ ಮಂಡನೆ ಹೇಗೆ?

ಮೊದಲು ಚರ್ಚೆ ನಡೆದು ಬಳಿಕ ನಂತರ ಲೋಕಸಭೆಯಲ್ಲಿ ವಿಶ್ವಾಸಮತ ಯಾಚನೆ ನಡೆಯುತ್ತದೆ. ಆಗ ಸದನದ ಬಹುಪಾಲು ಸದಸ್ಯರು ಅದನ್ನು ಬೆಂಬಲಿಸಿದರೆ ಪ್ರಸ್ತಾವನೆ ಅಂಗೀಕಾರವಾಗುತ್ತದೆ.

* ಅವಿಶ್ವಾಸ ಅಂಗೀಕಾರದ ನಂತರ ಮುಂದೇನು?

ಮೇಲಿನ ಇಷ್ಟೇಲ್ಲ ಪ್ರಕ್ರಿಯೆಗಳು ಪೂರ್ಣಗೊಂಡ ನಂತರ ಅವಿಶ್ವಾಸ ಗೊತ್ತುವಳಿ ಮಂಡನೆ ವೇಳೆ ಸರ್ಕಾರ ರಾಜೀನಾಮೆ ನೀಡಬೇಕು. ಅಂತೆಯೇ ಅವಿಶ್ವಾಸ ನಿರ್ಣಯದ ಮೇಲಿನ ಮತದಾನದಲ್ಲಿ ಸರ್ಕಾರ ಗೆದ್ದರೆ ಅಂಗೀಕಾರದ ನಿರ್ಣಯಕ್ಕೆ ಸೋಲಾಗುತ್ತದೆ. ಸರ್ಕಾರ ಪುನಃ ಅಧಿಕಾರದಲ್ಲಿಯೆ ಮುಂದುವರಿಯುತ್ತದೆ.

* ಈವರೆಗೆ ಯಾರು? ಎಷ್ಟು ಬಾರಿ ಅವಿಶ್ವಾಸ ಎದುರಿಸಿದ್ದಾರೆ?

1947ರಲ್ಲಿ ಸ್ವಾತಂತ್ರ್ಯ ಬಂದ ನಂತರ ಲೋಕಸಭೆಯಲ್ಲಿ 27 ಅವಿಶ್ವಾಸ ನಿರ್ಣಯ ಮಂಡನೆಯಾಗಿದೆ. 1963 ರಲ್ಲಿ ಪ್ರಧಾನ ಮಂತ್ರಿ ಜವಾಹರಲಾಲ್ ನೆಹರು ಅವರ ವಿರುದ್ಧ ಮೊದಲ ಅವಿಶ್ವಾಸ ನಿರ್ಣಯ ಮಂಡನೆ ಆಯಿತು. ಮಾಜಿ ಪ್ರಧಾನಿ ದಿ.ಇಂದಿರಾ ಗಾಂಧಿ ಅವರು ಸುಮಾರು 15 ಅವಿಶ್ವಾಸ ನಿರ್ಣಯಗಳನ್ನು ಎದುರಿಸುವ ಮೂಲಕ ಅತೀ ಹೆಚ್ಚು ಅವಿಶ್ವಾಸ ಎದುರಿಸಿದ ಮೊದಲಿಗರಾಗಿದ್ದಾರೆ. ಅವರ ನಂತರ ಲಾಲ್ ಬಹದ್ದೂರ್ ಶಾಸ್ತ್ರಿ ಹಾಗೂ ಪಿವಿ ನರಸಿಂಹ ರಾವ್ ಅವರು ತಲಾ ಮೂರು ಅವಿಶ್ವಾಸ ಎದುರಿಸಿದ್ದಾರೆ.

ಮಾಜಿ ಪ್ರಧಾನಿ ದಿ.ಅಟಲ್ ಬಿಹಾರಿ ವಾಜಪೇಯಿ ಸರ್ಕಾರವು ಏಪ್ರಿಲ್ 1999 ರಲ್ಲಿ ಒಂದು ಮತದ (269-270) ಅಂತರದಿಂದ ಅವಿಶ್ವಾಸ ನಿರ್ಣಯ ಕಳೆದುಕೊಂಡಿತು. 2003ರಲ್ಲಿ ಸಹ ಒಮ್ಮೆ ಅವಿಶ್ವಾಸ ನಿರ್ಣಯ ಮಂಡನೆ ಆಗಿತ್ತು. ಅದಾದ ಬಳಿಕ ಸದರಿ 2023ರಲ್ಲಿ ಪ್ರಧಾನಿ ಮೋದಿಯವರು ಅವಿಶ್ವಾಸ ಮಂಡನೆ ಎದುರಿಸಿದ್ದಾರೆ. ಈ ಕುರಿತು ಪ್ರಧಾನಿ ಮೋದಿ ಅವರು 2018 ರಲ್ಲಿ ಮಾತನಾಡಿದ್ದ ವಿಡಿಯೋ ತುಣುಕು ಈಗ ವೈರಲ್ ಆಗುತ್ತಿದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+