ಪ್ರಧಾನಿ ಮೋದಿ ಸ್ವಾಗತಿಸಲು ಓಡಿ ಬಂದ ದೀದಿ!
ಕೋಲ್ಕತಾ, ಮೇ 25: ಕರ್ನಾಟಕದಲ್ಲಿ ಕುಮಾರಸ್ವಾಮಿ ಅವರು ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕಾರ ಮಾಡುವ ಸಮಾರಂಭಕ್ಕೆ ಬಂದಿದ್ದಾಗ ಸ್ವಲ್ಪ ದೂರು ನಡೆಯುವ ಸ್ಥಿತಿ ಬಂದಿದ್ದಕ್ಕೆ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು, ಶುಕ್ರವಾರ ಪ್ರಧಾನಿ ನರೇಂದ್ರ ಮೋದಿ ಅವರನ್ನು ಸ್ವಾಗಿಸಲು ಓಡಿ ಬರುವ ವಿಡಿಯೋ ವೈರಲ್ ಆಗಿದೆ.
ಶಾಂತಿನಿಕೇತನದ ವಿಶ್ವಭಾರತಿ ವಿಶ್ವವಿದ್ಯಾಲಯದ ಘಟಿಕೋತ್ಸವದಲ್ಲಿ ಪಾಲ್ಗೊಳ್ಳಲು ಪ್ರಧಾನಿ ನರೇಂದ್ರ ಮೋದಿ ಶಾಂತಿನಿಕೇತನದ ಹೆಲಿಪ್ಯಾಡ್‌ಗೆ ಬಂದಿಳಿದರು. ಮೋದಿ ಅವರು ಬಂದಿದ್ದನ್ನು ಕಂಡ ಮಮತಾ ಬ್ಯಾನರ್ಜಿ, ದೂರದಿಂದ ಬಿರುಸಾಗಿ ನಡೆದುಕೊಂಡು ಬಂದು ಅವರಿಗೆ ಶಾಲು ಹೊದಿಸಿ ಸ್ವಾಗತಿಸಿದರು.
ಬೆಂಗಳೂರಿನಲ್ಲಿ ಪ್ರಮಾಣವಚನ ಸ್ವೀಕಾರ ಸಮಾರಂಭದ ದಿನದಂದು ಸಹ ಮಮತಾ ಬಿರುಬಿರನೆ ನಡೆದುಕೊಂಡು ವಿಧಾನಸೌಧತ್ತ ತೆರಳಿದ್ದರು. ಆಗ ಅವರು ಟ್ರಾಫಿಕ್ ಜಾಮ್‌ನಿಂದ ಉಂಟಾದ ಕಿರಿಕಿರಿಯಿಂದ ಸಿಟ್ಟಿಗೆದ್ದಿದ್ದರು. ಆದರೆ, ಮೋದಿ ಅವರನ್ನು ಸ್ವಾಗತಿಸಲು ಓಡಿ ಬಂದ ದೀದಿಯ ಮುಖದಲ್ಲಿ ನಗು ತುಂಬಿಕೊಂಡಿತ್ತು.
#WATCH PM Narendra Modi arrives in Shanti Niketan to attend the convocation of Visva Bharati University, received by West Bengal CM Mamata Banerjee pic.twitter.com/dnDE1pZmyf
— ANI (@ANI) 25 May 2018
ಈ ವಿಡಿಯೋವನ್ನು ಹಂಚಿಕೊಂಡಿರುವ ಟ್ವಿಟ್ಟರಿಗರು, ಮಮತಾ ಅವರನ್ನು ಲೇವಡಿ ಮಾಡಿದ್ದಾರೆ.
ವಿಶ್ವಭಾರತಿ ವಿಶ್ವವಿದ್ಯಾಲಯದ ಘಟಿಕೋತ್ಸವದಲ್ಲಿ 1975ರ ಬಳಿಕ ಪಾಲ್ಗೊಂಡು ವೇದಿಕೆ ಏರಿದ ಮೊದಲ ಮುಖ್ಯಮಂತ್ರಿ ಎಂಬ ಹೆಗ್ಗಳಿಕೆಗೂ ಮಮತಾ ಪಾತ್ರರಾಗಿದ್ದಾರೆ.
1975ರಲ್ಲಿ ಆಗಿನ ಮುಖ್ಯಮಂತ್ರಿ ಸಿದ್ಧಾರ್ಥ ಶಂಕರ್ ರಾಯ್ ಅವರು ಘಟಿಕೋತ್ಸವದಲ್ಲಿ ಪಾಲ್ಗೊಂಡಿದ್ದರು. ಆದರೆ ಆಗ ಅವರನ್ನು ವೇದಿಕೆಗೆ ಆಹ್ವಾನಿಸಿರಲಿಲ್ಲ.
ಘಟಿಕೋತ್ಸವಕ್ಕೆ ಬಾಂಗ್ಲಾದೇಶದ ಪ್ರಧಾನಿ ಶೇಖ್ ಹಸೀನಾ ಅವರಿಗೂ ಆಹ್ವಾನ ನೀಡಲಾಗಿತ್ತು. ಶಾಂತಿನಿಕೇತನದಲ್ಲಿ ನಿರ್ಮಿಸಿರುವ ಬಾಂಗ್ಲಾದೇಶ ಭವನವನ್ನು ಮೋದಿ ಮತ್ತು ಹಸೀನಾ ಅವರು ಉದ್ಘಾಟಿಸಿದರು.
|
ಕುಮಾರಸ್ವಾಮಿಗೆ ಪಾಠ
ಮಮತಾಜಿ ಅವರಿಂದ ಕುಮಾರಸ್ವಾಮಿ ಅವರು ಸರ್ಕಾರ ನಡೆಸುವ ಪಾಠವನ್ನು ಕಲಿತುಕೊಂಡರು. ಮತ್ತು ಅವರನ್ನು ಸ್ವಲ್ಪ ದೂರು ನಡೆಯುವಂತೆ ಮಾಡಿದ ಅಧಿಕಾರಿಗಳನ್ನು ಕರೆಸಿಕೊಂಡರು. ಆದರೆ, ಪ್ರಧಾನಿ ನರೇಂದ್ರ ಮೋದಿ ಅವರು ಇದ್ದಾಗ ಮಮತಾಜಿ ಕೂಡ ಈ ರೀತಿ ಓಡಬಲ್ಲರು ಎಂದು ಅವರಿಗೆ ಗೊತ್ತಿರಲಿಲ್ಲ ಎಂದು ಶೋಭಾ ಕರಂದ್ಲಾಜೆ ಟ್ವೀಟ್ ಮಾಡಿದ್ದಾರೆ.
|
ಮೋದಿಯನ್ನು ಅಮಾನತು ಮಾಡಬಹುದು!
ಮಮತಾ ಬ್ಯಾನರ್ಜಿ ಅವರನ್ನು ನಡೆಯುವಂತೆ ಮಾಡಿದ್ದಕ್ಕೆ ಕರ್ನಾಟಕ ಡಿಜಿಪಿ ಅವರಂತೆಯೇ ಪ್ರಧಾನಿ ನರೇಂದ್ರ ಮೋದಿ ಅವರನ್ನೂ ತೆಗೆದುಹಾಕಬಹುದು ಎಂದು @sootradhar ಎಂಬುವವರು ಟ್ವೀಟ್ ಮಾಡಿದ್ದಾರೆ.
ಮಮತಾ ಅವರಿದ್ದ ಕಾರು ಸಮಾರಂಭ ನಡೆಯುವ ಸ್ಥಳದ ವರೆಗೂ ಬರಲು ಸಾಧ್ಯವಾಗದ ಕಾರಣ ಅವರು ತುಸು ದೂರು ನಡೆದಿದ್ದರು. ಈ ಬಗ್ಗೆ ಪೊಲೀಸ್ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಳ್ಳಲಾಗಿತ್ತು.
|
ಬಂಗಾಳ ಡಿಜಿಪಿಗೆ ಇದೇ ಗತಿಯೇ?
ಈಗ ಮಮತಾ ಅವರು ಪ್ರಧಾನಿ ಅವರನ್ನು ಸ್ವಾಗತಿಸಲು ನಡೆದುಕೊಂಡು ಹೋಗಬೇಕಾಯಿತು. ಈಗ ಪಶ್ಚಿಮ ಬಂಗಾಳ ಡಿಜಿಪಿಗೆ ಯಾವುದೇ ಸಮಸ್ಯೆಯಿಲ್ಲವೇ ಅಥವಾ ಅವರನ್ನೂ ಮಮತಾ ವರ್ಗಾವಣೆ ಮಾಡುತ್ತಾರೆಯೇ? ಎಂದು ಪವನ್ ಕೆ. ತಿವಾರಿ ವ್ಯಂಗ್ಯವಾಡಿದ್ದಾರೆ.
|
ಕೆಸರಿನಲ್ಲಿ ಕಮಲ
ಮೋದಿ: ದೀದಿ ಈ ಕಡೆಯಿಂದ ಬನ್ನಿ
ಮಮತಾ: ಇಲ್ಲ ನಾನು ಆ ಕಡೆಯಿಂದಲೇ ಬರ್ತೀನಿ
ಮೋದಿ: ಅರೆ ದೀದಿ ಅಲ್ಲಿ ಕೆಸರಿದೆ
ಮಮತಾ: ಇದ್ದರೇನಂತೆ ನಾನು ಅಲ್ಲಿಂದಲೇ ಬರ್ತೀನಿ
ಮೋದಿ: ಅದಕ್ಕೇ ಹೇಳೋದು ಕೆಸರಿನಲ್ಲಿಯೇ ಕಮಲ ಅರಳೋದು ಎಂದು.
ಹೀಗೆ ತಮಾಷೆಯ ಟ್ವೀಟ್ ಮಾಡಿದ್ದಾರೆ ರಾಹುಲ್ ಬನ್ಸಾಲ್
-
Transfer: ಕರ್ನಾಟಕ ಶಿಕ್ಷಕರಿಗೆ ಸಿಹಿ ಸುದ್ದಿ: ವರ್ಗಾವಣೆ ನಿಯಮಗಳಲ್ಲಿ ಮಹತ್ವ ಬದಲಾವಣೆ, ಯಾರು ಅರ್ಹರು? -
ವೈಭವ್ ಸೂರ್ಯವಂಶಿ ಕುರಿತು ಬಿಸಿಸಿಐಗೆ ಹೋಯ್ತು ವಿಶೇಷ ಮನವಿ; ಟೀಮ್ ಇಂಡಿಯಾ ಸೇರ್ತಾರಾ ಯುವ ಪ್ರತಿಭೆ? -
ಒಂದು ಬಟನ್ ಒತ್ತಿದರೆ ಬದಲಾಗುತ್ತೆ BMW ಕಾರಿನ ನಂಬರ್ ಪ್ಲೇಟ್, ಹೈಟೆಕ್ ಕಳ್ಳಾಟದ ವಿಡಿಯೋ ಭಾರಿ ವೈರಲ್ -
Asha Bhosle: ಗಾನ ಕೋಗಿಲೆ ಆಶಾ ಭೋಸ್ಲೆ ನಿಧನ: ದೇಶವೇ ಶೋಕದಲ್ಲಿ, ಸಾಮಾಜಿಕ ಜಾಲತಾಣದಲ್ಲಿ ಫ್ಯಾನ್ಸ್ ಕಂಬನಿ -
ಮೈಸೂರು-ಬೆಂಗಳೂರು ರೈಲು ಪ್ರಯಾಣಿಕರಿಗೆ ಗುಡ್ನ್ಯೂಸ್ ಕೊಟ್ಟ ವಿ.ಸೋಮಣ್ಣ -
ವಾಂಖೆಡೆಯಲ್ಲಿ ಆರ್ಸಿಬಿ-ಮುಂಬೈ ಇಂಡಿಯನ್ಸ್ ಪಂದ್ಯಕ್ಕೆ ಮಳೆ ಅಡ್ಡಿಯಾಗಲಿದ್ಯಾ? ಹವಾಮಾನ ಇಲಾಖೆ ವರದಿ ಹೀಗಿದೆ -
Ram Gopal Varma: ದಾವೂದ್ ಇಬ್ರಾಹಿಂ ಇಲ್ಲದಿದ್ದರೆ ನಾನು ಬದುಕು ಕಟ್ಟಿಕೊಳ್ಳುತ್ತಿರಲಿಲ್ಲ: ನಿರ್ದೇಶಕ ರಾಮ್ ಗೋಪಾಲ್ ವರ್ಮಾ -
Duet Songs: ಆಶಾ ಭೋಸ್ಲೆ-ಲತಾ ಮಂಗೇಶ್ಕರ್ ಸಹೋದರಿಯರ ಕಂಠಸಿರಿಯಲ್ಲಿ ಅರಳಿದ ಮಾಧುರ್ಯ: ಒಟ್ಟಿಗೆ ಹಾಡಿದ ಹಿಟ್ ಹಾಡುಗಳಿವು -
Karnataka Rains: ಸಮುದ್ರ ಮಲ್ಮೈ ಸುಳಿಗಾಳಿ, ಏಪ್ರಿಲ್ 14-17ರವರೆಗೆ ಬೆಂಗಳೂರು, ಇತರ ಜಿಲ್ಲೆಗಳಲ್ಲಿ ಮಳೆ -
ಎಪಿಎಂಸಿಯಲ್ಲಿ ಮೂಟೆಗಳು ಮೈಮೇಲೆ ಬಿದ್ದರೂ ಪವಾಡಸದೃಶ್ಯದಂತೆ ಬದುಕಿದ ಮಹಿಳೆ Video Viral -
April 12 Horoscope: 12 ರಾಶಿಗಳಿಗೆ ಇಂದು ಹಣ-ಪ್ರೇಮದಲ್ಲಿ ಅದೃಷ್ಟ ಯಾರಿಗೆ? ಸಂಪೂರ್ಣ ವಿವರ -
BESCOM Mithra: 'ಬೆಸ್ಕಾಂ ಮಿತ್ರ' ಸೇವೆ ತಾತ್ಕಾಲಿಕ ಸ್ಥಗಿತ, ಸುಧಾರಿತ ವ್ಯವಸ್ಥೆ ಶೀಘ್ರವೇ ಲಭ್ಯ











Click it and Unblock the Notifications