ಹಲವು ದಾಖಲೆಗಳನ್ನು ಸೃಷ್ಟಿಸಲಿದೆ ಹಿಮಾಚಲ ಪ್ರದೇಶ ಚುನಾವಣೆ

By: ವಿಕಾಸ್ ನಂಜಪ್ಪ
Subscribe to Oneindia Kannada

ಶಿಮ್ಲಾ, ನವೆಂಬರ್ 2: ಹಿಮಾಚಲ ಪ್ರದೇಶ ವಿಧಾನಸಭೆಗೆ ಇದೇ ನವೆಂಬರ್ 9ರಂದು ಚುನಾವಣೆ ನಡೆಯಲಿದೆ. ವಿವಿಪ್ಯಾಟ್ ಮತಯಂತ್ರಗಳ ಬಳಕೆ, ವಿಶೇಷ ಚೇತನರು ಮತ್ತು ಮಹಿಳಾ ಸಿಬ್ಬಂದಿಗಳೇ ನಿರ್ವಹಿಸಲಿರುವ ಮತಗಟ್ಟೆ ಸೇರಿದಂತೆ ಹಲವು ಪ್ರಥಮಗಳಿಗೆ ಈ ಚುನಾವಣೆ ಸಾಕ್ಷಿಯಾಗಲಿದೆ.

ಹಿಮಾಚಲ ಪ್ರದೇಶ ಮುಖ್ಯಮಂತ್ರಿ ಅಭ್ಯರ್ಥಿಯನ್ನು ಘೋಷಿಸಿದ ಬಿಜೆಪಿ

ಮುಖ್ಯ ಚುನಾವಣಾ ಅಧಿಕಾರಿ (ಸಿಇಒ) ಪುಷ್ಪೇಂದ್ರ ರಜಪೂತ್ ಈ ಬಗ್ಗೆ ಹೇಳಿಕೆ ನೀಡಿದ್ದು, "ಪ್ರತೀ ಕ್ಷೇತ್ರದಲ್ಲಿ (ಒಟ್ಟು 68 ಕ್ಷೇತ್ರ) 2 ಮತಗಟ್ಟೆಗಳನ್ನು ಮಹಿಳಾ ಸಿಬ್ಬಂದಿಗಳೇ ನಿರ್ವಹಣೆ ಮಾಡಲಿದ್ದಾರೆ," ಎಂದು ಹೇಳಿದ್ದಾರೆ. ಇದೇ ವೇಳೆ ವಿಶೇಷ ಚೇತನರಿಗೆ 5 ಮತಗಟ್ಟೆಗಳ ಹೊಣೆ ನೀಡಲಾಗಿದೆ.

Voter slips in braille and many other firsts in the Himachal assembly elections 2017

ಈ ಐತಿಹಾಸಿಕ ಸಾಧನೆಯಲ್ಲಿ ತೊಡಗಿಸಿಕೊಳ್ಳಲು ಇವರೆಲ್ಲಾ ಸ್ವಯಂ ಪ್ರೇರಿತವಾಗಿ ಮುಂದೆ ಬಂದಿದ್ದಾರೆ. ಇದು ಸ್ವಾಗತಾರ್ಹ ಬೆಳವಣಿಗೆ ಎಂದು ಅವರು ಸಿಬ್ಬಂದಿಗಳ ಉತ್ಸಾಹವನ್ನು ಮೆಚ್ಚಿಕೊಂಡಿದ್ದಾರೆ.

ಇನ್ನು ಕಣ್ಣು ಕಾಣದವರಿಗೆ ಮತಪತ್ರಗಳನ್ನು ಬ್ರೈಲ್ ಲಿಪಿಯಲ್ಲಿ ನೀಡಲು ಚುನಾವಣಾ ಆಯೋಗ ನಿರ್ಧರಿಸಿದೆ. ಈ ಮೂಲಕ ಕಣ್ಣು ಕಾಣದವರೂ ಯಾರದೇ ಸಹಾಯವಿಲ್ಲದೆ ಮತಚಲಾಯಿಸಬಹುದಾಗಿದೆ.

ಹೆಚ್ಚಿನ ವಿಶೇಷ ಚೇತನರು ಮತ್ತು ಹಿರಿಯರು ಮತಚಲಾಯಿಸುವ ಮತಗಟ್ಟೆಗಳನ್ನೂ ಚುನಾವಣಾ ಆಯೋಗ ಗುರುತು ಮಾಡಿಕೊಂಡಿದ್ದು ಅಲ್ಲಿ ಅವರಿಗೆ ವೀಲ್ ಚೇರ್ ಸೇರಿದಂತೆ ಅಗತ್ಯ ಸೌಲಭ್ಯಗಳು ಸಿಗಲಿವೆ.

"ಇದಲ್ಲದೆ ಶಸ್ತ್ರಾಸ್ತ್ರಗಳನ್ನು ಚುನಾವಣಾ ಸಂದರ್ಭದಲ್ಲಿ ವಾಪಸ್ ಪಡೆಯಲಾಗುತ್ತದೆ. ಅಂತರರಾಜ್ಯ ಗಡಿಗಳನ್ನು ಸಂಪರ್ಕಿಸುವ ರಸ್ತೆಗಳ ಚೆಕ್ ಪೋಸ್ಟ್ ಗಳಲ್ಲಿ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಲಾಗುತ್ತದೆ. ಶಾಂತಿಯುತ ಮತದಾನಕ್ಕೆ ಬೇಕಾದ ಎಲ್ಲಾ ವ್ಯವಸ್ಥೆಗಳನ್ನು ಮಾಡಲಾಗುವುದು," ಎಂದು ರಜಪೂತ್ ಹೇಳಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Apart from the use of voter-verified paper audit trail, the Himachal Pradesh assembly elections 2017 will also witness differently abled people and women manning 5 and 136 booths respectively.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ