Viral Video: ತೆಂಗಿನ ಚಿಪ್ಪನ್ನು ಮಗುವಿನ ಶೌಚಾಲಯ ಮಾಡಿಕೊಂಡ ದಂಪತಿ, ವಿಡಿಯೋ ವೈರಲ್
Viral Video: ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿರುವ ಪೋಸ್ಟ್‌ವೊಂದು ಇದೀಗ ಭಾರೀ ಆಕ್ರೋಶಕ್ಕೆ ಕಾರಣವಾಗಿದೆ. ದಂಪತಿಗಳು ತೆಂಗಿನ ಚಿಪ್ಪಿನ್ನು ಮಗುವಿಗಾಗಿ ಶೌಚಾಲಯವಾಗಿ ಬಳಸಿಕೊಂಡಿದ್ದಾರೆ. ಅಲ್ಲದೆ ಈ ವಿಡಿಯೋವನ್ನು ಖುದ್ದು ದಂಪತಿಯೇ ಸೋಷಿಯಲ್ ಮೀಡಿಯಾದಲ್ಲಿ ಅಪ್ಲೋಡ್ ಸಹ ಮಾಡಿದ್ದಾರೆ. ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಭಾರೀ ಸಂಚಲನವನ್ನು ಸೃಷ್ಟಿ ಮಾಡಿದೆ. ದಂಪತಿಯ ಸಿವಿಕ್ ಸೆನ್ಸ್‌ನ ಬಗ್ಗೆ ವ್ಯಾಪಕ ಟೀಕೆ ವ್ಯಕ್ತವಾಗಿದೆ. ಇಷ್ಟಕ್ಕೂ ಈ ದಂಪತಿ ಮಾಡಿದ್ದೇನು, ವೈರಲ್ ವಿಡಿಯೋದಲ್ಲಿ ಏನಿದೆ ಎನ್ನುವ ವಿವರ ಇಲ್ಲಿದೆ.
ಕಾರ್‌ನಲ್ಲಿ ಪ್ರಯಾಣಿಸುವಾಗ ತೆಂಗಿನ ಚಿಪ್ಪಿನಲ್ಲಿ ಸಣ್ಣ ಮಗುವಿನಿಂದ ತಾಯಿಯೊಬ್ಬರು ಮೂತ್ರ ಮಾಡಿಸಿದ್ದಾರೆ. ಅಲ್ಲದೆ ಆ ತೆಂಗಿನ ಚಿಪ್ಪನ್ನು ರಸ್ತೆಗೆ ಎಸೆಯಲಾಗಿದೆ. ಆ ಮಗುವಿನ ತಂದೆಯೇ ಇದರ ಸಂಪೂರ್ಣ ವಿಡಿಯೋ ಮಾಡಿಕೊಂಡಿದ್ದು, ಅದನ್ನು ರಸ್ತೆಗೆ ಎಸೆದಿದ್ದಾರೆ.

ಸೂರಜ್ ಕುಮಾರ್ ಬೌಧ್ ಎನ್ನುವವರು ಸೋಷಿಯಲ್ ಮೀಡಿಯಾ ಎಕ್ಸ್‌ನಲ್ಲಿ ಈ ವಿಡಿಯೋವನ್ನು ಶೇರ್ ಮಾಡಿಕೊಂಡಿದ್ದು,
ತೆಂಗಿನ ಚಿಪ್ಪಿನಲ್ಲಿ ಮೂತ್ರ ವಿಸರ್ಜನೆ ಮಾಡಿಸಿ... ಇದು ನಮ್ಮ ನಾಗರಿಕ ಪ್ರಜ್ಞೆಯೇ ನಾಚಿಕೆಗೇಡಿನ ಸಂಗತಿ. ವೈರಲ್ ಆಗಿರುವ ವಿಡಿಯೋದಲ್ಲಿ, ಒಬ್ಬ ತಾಯಿ ತನ್ನ ಮಗವನ್ನು ತೆಂಗಿನ ಚಿಪ್ಪಿನಲ್ಲಿ ಮೂತ್ರ ವಿಸರ್ಜಿಸುವಂತೆ ಮಾಡಿ ರಸ್ತೆಗೆ ಎಸೆದಿದ್ದಾರೆ. ತಂದೆ ವಿಡಿಯೋ ರೆಕಾರ್ಡ್ ಮಾಡಿದ್ದಾರೆ ಮತ್ತು ಅವರು ಏನೋ ಒಳ್ಳೆಯದನ್ನು ಮಾಡಿದ್ದಾರೆ ಎಂಬಂತೆ ಅದನ್ನು ಸಾಮಾಜಿಕ ಮಾಧ್ಯಮದಲ್ಲಿ ಅಪ್‌ಲೋಡ್ ಮಾಡಿದ್ದಾರೆ. ಎದ್ದೇಳಿ ಜನರೇ ಇದು ನಾಚಿಕೆಗೇಡಿನ ಸಂಗತಿ ಎಂದು ಅವರು ಹೇಳಿದ್ದಾರೆ.
ವೈರಲ್ ವಿಡಿಯೋಗೆ ನೆಟ್ಟಿಗರು ಹೇಳಿದ್ದೇನು
ಇನ್ನು ವೈರಲ್ ವಿಡಿಯೋಗೆ ನೆಟ್ಟಿಗರು ಸಹ ಗರಂ ಆಗಿದ್ದಾರೆ. ನೆಟ್ಟಿಗರು ಈ ವೈರಲ್ ವಿಡಿಯೋಗೆ ವ್ಯಾಪಕ ಆಕ್ರೋಶ ಹೊರ ಹಾಕಿದ್ದಾರೆ. ಈ ವಿಡಿಯೋಗೆ ಮಿಶ್ರ ಪ್ರತಿಕ್ರಿಯೆಯೂ ವ್ಯಕ್ತವಾಗಿದೆ. ಕೆಲವರು ತ್ಯಾಜ್ಯ ತೆಂಗಿನಕಾಯಿಯಲ್ಲಿ ಮೂತ್ರ ವಿಸರ್ಜನೆ ಮಾಡುವುದು ತಪ್ಪಲ್ಲ ಆದರೆ ಅದನ್ನು ರಸ್ತೆಗೆ ಎಸೆಯುವುದು ತಪ್ಪೇ ಎಂದಿದ್ದಾರೆ.
"Urinate in coconut shell." ❌
— Suraj Kumar Bauddh (@SurajKrBauddh) March 24, 2026
"Is this our civic sense? Shameful." 😡
In a viral video, a mother made her son urinate in a coconut shell and dumped it on road.
The father recorded the video and they UPLOADED it on social media as if they had done something good. Wake up guys. pic.twitter.com/qzlnx3zCX3
ಈ ಘಟನೆಯು ಭಾರತದಲ್ಲಿ ನಡೆಯುತ್ತಿರುವ ನಗರ ನೈರ್ಮಲ್ಯ ಸವಾಲುಗಳನ್ನು ಒತ್ತಿಹೇಳುತ್ತದೆ. WHO ದತ್ತಾಂಶದ ಪ್ರಕಾರ 2014 ರಿಂದ ಸ್ವಚ್ಛ ಭಾರತ್ ಬಯಲು ಮಲವಿಸರ್ಜನೆಯನ್ನು ಶೇ90ರಷ್ಟು ಕಡಿಮೆ ಮಾಡಿದ್ದರೂ, ಸಾಮಾಜಿಕ ಮಾಧ್ಯಮ ವೈರಲ್ ಆಗುವಿಕೆಯು ಜವಾಬ್ದಾರಿಯುತ ಅಭ್ಯಾಸಗಳಿಗಿಂತ ಕೆಟ್ಟ ಅಭ್ಯಾಸಗಳನ್ನು ಸಾಮಾನ್ಯಗೊಳಿಸುವುದು ಹೆಚ್ಚಾಗಿದೆ ಎಂದು ಕೆಲವರು ಅಭಿಪ್ರಾಯಪಟ್ಟಿದ್ದಾರೆ.
-
Viral Post: 'ಬೆಂಗಳೂರು ಟ್ರಾಫಿಕ್' ಕಿರಿಕಿರಿ ತಪ್ಪಿಸಲು ಆಫೀಸ್ನಿಂದ ಮನೆಗೆ ನಡೆದುಕೊಂಡು ಹೋಗುತ್ತಿರುವ ಮಹಿಳೆ -
Love Mocktail 3: ಕ್ರಿಪ್ಟೋಮ್ನೇಶಿಯಾ ಯಾರದ್ದೋ ಕಥೆ ಯಾರದ್ದೋ ಹೆಸರು ರೂಪಾ ರಾವ್ ಬರಹ -
ಶಾಲಾ ಮಕ್ಕಳ ಮೊಬೈಲ್ ಬಳಕೆ ನಿರ್ಬಂಧ: 'ಡಿಜಿಟಲ್ ಕರಡು ನೀತಿ' ಬಿಡುಗಡೆಗೊಳಿಸಿದ ರಾಜ್ಯ ಸರ್ಕಾರ -
'ಧುರಂಧರ್ 2' ರಣವೀರ್ ಸಿಂಗ್ ಎಂಟ್ರಿ ದೃಶ್ಯ ಮರುಸೃಷ್ಟಿಸಿದ ಯೂಟ್ಯೂಬರ್: 13 ಮಿಲಿಯನ್ ವೀಕ್ಷಣೆ ಪಡೆದ Viral Video -
Video: ಬೆಂಗಳೂರು ರಸ್ತೆಯಲ್ಲಿ ಯುವಕರ 'ಬಿಯರ್' ದರ್ಬಾರ್: ಬೈಕ್ನಲ್ಲೇ ಟ್ರಿಪಲ್ ರೈಡಿಂಗ್ ಜತೆ ಮದ್ಯಪಾನ -
Karnataka Weather: ಮಾ.23ರಿಂದ 28ರವರೆಗೆ 10ಕ್ಕೂ ಅಧಿಕ ಜಿಲ್ಲೆಗಳಿಗೆ ಮಳೆ ಮುನ್ಸೂಚನೆ -
'ಬೆಂಗಳೂರಿನ ಬಸವನಗುಡಿಯಿಂದ ಬೆಳ್ಳಂದೂರಿಗೆ ಹೋಗಿ ದೊಡ್ಡ ತಪ್ಪು ಮಾಡಿಬಿಟ್ಟೆ': ಅಳಲು ತೋಡಿಕೊಂಡ ಕನ್ನಡಿಗ, ಭಾರೀ ವೈರಲ್ -
Pink Line Metro: ಏಪ್ರಿಲ್ನಲ್ಲಿ ಪರೀಕ್ಷೆ ಮುಕ್ತಾಯ, ಮೇ ತಿಂಗಳಲ್ಲಿ ಗುಲಾಬಿ ಮಾರ್ಗದಲ್ಲಿ ಸಂಚಾರ -
Gold Price: ಇಳಿಕೆಯತ್ತ ಚಿನ್ನ, ಬೆಳ್ಳಿ ಬೆಲೆ: ಇಂದಿನ ದರವೆಷ್ಟು? ಇಲ್ಲಿದೆ ಮಾಹಿತಿ -
Bengaluru Viral: ಆಟೋ ಚಾಲಕನ ಕ್ರಿಯೇಟಿವಿಟಿಗೆ ಬೆಂಗಳೂರು ನಿಜಕ್ಕೂ ಸೃಜನಶೀಲ ನಗರ ಎಂದ ನೆಟ್ಟಿಗರು -
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Video: ಲ್ಯಾಂಬೋರ್ಗಿನಿ ಸ್ಟಂಟ್ ಕೇಸ್: ಮುತ್ತಪ್ಪ ರೈ ಪುತ್ರ ರಿಕ್ಕಿ ರೈಗೆ ಪೊಲೀಸರಿಂದ ನೋಟಿಸ್












Click it and Unblock the Notifications