Video: ವಿಮಾನದಿಂದ ಕಾಣೆಯಾದ 'ಅಮಲ್ಕಾ': ಎರಡು ರನ್‌ವೇ ಕ್ಲೋಸ್- ಡ್ರೋನ್ ಕ್ಯಾಮೆರಾದಲ್ಲಿ ನಾಯಿಗಾಗಿ ಹುಡುಕಾಟ!

ಕಳೆದ ಮಂಗಳವಾರ ಪ್ಯಾರಿಸ್‌ನ ಚಾರ್ಲ್ಸ್-ಡಿ-ಗಾಲ್ ವಿಮಾನ ನಿಲ್ದಾಣದಲ್ಲಿ ಅಚ್ಚರಿಯ ಘಟನೆಯೊಂದು ನಡೆದಿದೆ. ಆಸ್ಟ್ರಿಯಾದ ಪ್ರವಾಸಿಗರ ನಾಯಿ ವಿಮಾನದಿಂದ ಕಾಣೆಯಾದ ಕಾರಣ ವಿಮಾನ ನಿಲ್ದಾಣದ ಎರಡು ರನ್‌ವೇಗಳನ್ನು ಕ್ಲೋಸ್‌ ಮಾಡಿದ ಘಟನೆ ನಡೆದಿದೆ. 'ಅಮಲ್ಕಾ' ಎಂಬ ಸಾಕು ನಾಯಿ ವಿಮಾನದಿಂದ ಕಾಣೆಯಾಗಿತ್ತು. ಇದನ್ನು ಹುಡುಕಾಡಲು ಹಲವು ಅಧಿಕಾರಿಗಳು ಮತ್ತು ವಿಮಾನ ನಿಲ್ದಾಣದ ಸಿಬ್ಬಂದಿಯನ್ನು ನಿಯೋಜಿಸಲಾಗಿತ್ತು. ಈ ಸುದ್ದಿ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗುತ್ತಿದೆ.

ವಿಯೆನ್ನಾದಿಂದ ಪ್ಯಾರಿಸ್ ವಿಮಾನ ನಿಲ್ದಾಣಕ್ಕೆ ಮಿಸಾ ಎಂಬ ಪ್ರಯಾಣಿಕರು ಬಂದಿಳಿದರು. ಮಿಸಾ ವಿಮಾನದಿಂದ ಇಳಿಯುವಾಗ ಅಮಲ್ಕಾ ತನ್ನ ಕ್ಯಾರಿಯರ್ ಪಂಜರದಿಂದ ಜಾರಿ ಬಿದ್ದಿದೆ. ಆ ಕ್ಷಣ ಅಮಲ್ಕಾ ಅಲ್ಲಿಂದ ಓಡಿಹೋಗಿದೆ. ಇದರಿಂದ ನಾಯಿಯ ಮಾಲೀಕ ಮಿಸಾ ಎಷ್ಟೇ ಪ್ರಯತ್ನ ಪಟ್ಟರೂ ನಾಯಿ ತಮ್ಮ ಬಳಿ ಬರಲೇ ಇಲ್ಲ. ತೀವ್ರ ಬೇಸರ ವ್ಯಕ್ತಪಡಿಸಿದ ಮಿಸಾ ತಮ್ಮ ನಾಯಿಯನ್ನು ಹುಡುಕಿ ಕೊಡುವಂತೆ ಮನವಿ ಮಾಡಿದ್ದಾರೆ. ಈ ವೇಳೆ ಅಮಲ್ಕಾಳನ್ನು ಹುಡುಕಲು ಸಾಕಷ್ಟು ಪ್ರಯತ್ನಗಳು ನಡೆದವು. ರಾತ್ರಿಯೂ ಶೋಧ ಕಾರ್ಯ ನಡೆದಿದೆ.

Viral Video Dog missing from Paris airport Two runways closed - Drone camera searches for dog

ಡ್ರೋನ್‌ಗಳ ಸಹಾಯದಿಂದ ಹುಡುಕಾಟ

ಅಧಿಕಾರಿಗಳು ನಾಯಿಯನ್ನು ಹುಡುಕಲು ಆರಂಭಿಸಿದರು. ಬಹಳ ಹೊತ್ತು ಹುಡುಕಿದರೂ ಸಾಕು ನಾಯಿ ಸಿಗದಿದ್ದಾಗ ಎರಡು ರನ್‌ವೇಗಳನ್ನು ಮುಚ್ಚಿ ಹೈಪೋಡರ್ಮಿಕ್ ಸೂಜಿಯೊಂದಿಗೆ ಡ್ರೋನ್ ಕ್ಯಾಮೆರಾದ ಸಹಾಯದಿಂದ ಅದನ್ನು ಪ್ರಜ್ಞೆ ತಪ್ಪಿಸಿ ಅದರ ನಿಖರವಾದ ಸ್ಥಳವನ್ನು ಪತ್ತೆ ಹಚ್ಚಬೇಕಾಯಿತು. ವಾಸ್ತವವಾಗಿ ತಂಡವು ಆ ಸಾಕುನಾಯಿಯನ್ನು ಹಲವು ಬಾರಿ ಪತ್ತೆ ಮಾಡಿದರೂ ಹಿಡಿಯಲು ಸಾಧ್ಯವಾಗಿರಲಿಲ್ಲ. ಹೀಗಿರುವಾಗ ಬೇರೆ ವಿಧಿಸಿಯಿಲ್ಲದೆ ಹೈಪೋಡರ್ಮಿಕ್ ಸೂಜಿಯನ್ನು ಬಳಸಬೇಕಾಯಿತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಕ್ಯಾಮರಾ ಕಣ್ಣಿಗೆ ಬೀಳುವ ನಾಯಿ ಕೈಗೆ ಸಿಗದೆ ಎಸ್ಕೇಪ್

ಅಂದಹಾಗೆ ಸಾಮಾನ್ಯವಾಗಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣಗಳು ತುಂಬಾ ದೊಡ್ಡದಾಗಿರುತ್ತವೆ. ಚಾರ್ಲ್ಸ್-ಡಿ-ಗೌಲ್ ಯುರೋಪ್ನಲ್ಲಿ ಅತ್ಯಂತ ಜನನಿಬಿಡ ವಿಮಾನ ನಿಲ್ದಾಣವಾಗಿದೆ. ಇದು ನಾಲ್ಕು ರನ್‌ವೇಗಳನ್ನು ಹೊಂದಿದೆ. ಆದರೆ ಹಾರಾಟದ ಮೇಲೆ ಪರಿಣಾಮ ಬೀರದ ರೀತಿಯಲ್ಲಿ ಎರಡು ರನ್‌ವೇಗಳನ್ನು ಮುಚ್ಚಲಾಗಿತ್ತು.

ಪ್ಯಾರಿಸ್‌ನ ಚಾರ್ಲ್ಸ್-ಡಿ-ಗಾಲ್ ವಿಮಾನ ನಿಲ್ದಾಣ ಹಲವಾರು ಎಕರೆ ವಿಸ್ತೀರ್ಣವನ್ನು ಹೊಂದಿದ್ದು ಈ ಪ್ರದೇಶದಲ್ಲಿ ನಾಯಿಯನ್ನು ಹಿಡಿಯುವುದು ಸವಾಲಿನ ಕೆಲಸವಾಗಿತ್ತು. ಅದರ ಇರುವಿಕೆ ಕ್ಯಾಮರಾ ಕಣ್ಣಿಗೆ ಕಾಣಿಸಿದರೂ ಅದು ಕೈಗೆ ಸಿಗುತ್ತಿರಲಿಲ್ಲ. ಹೀಗಾಗಿ ಅಧಿಕಾರಿಗಳಿಗೆ ದೊಡ್ಡ ತಲೆನೋವಾಗಿತ್ತು.

ಅಮಲ್ಕಾ ವಿಮಾನ ನಿಲ್ದಾಣದಲ್ಲಿ ತಪ್ಪಿಸಿಕೊಳ್ಳುತ್ತಿದ್ದಂತೆ ಅವರ ಮಾಲೀಕರು ಸಾಮಾಜಿಕ ಮಾಧ್ಯಮದಿಂದ ಸಹಾಯವನ್ನು ಕೋರಿದರು. ಅಮಲ್ಕಾ ವಿಮಾನ ನಿಲ್ದಾಣದಲ್ಲಿ ಇದ್ದಿದ್ದರಿಂದ ಏರ್ ಫ್ರಾನ್ಸ್ ಎಲ್ಲ ವ್ಯವಸ್ಥೆಗಳನ್ನು ಮಾಡಿತ್ತು. ಅದರ ಪತ್ತೆಗೆ ನೆರವಾಗುವಂತೆ ವಿಮಾನ ನಿಲ್ದಾಣದ ಎಲ್ಲೆಡೆ ಪೋಸ್ಟರ್‌ಗಳನ್ನು ಸಹ ಹಾಕಲಾಯಿತು. ಬಳಿಕ ಅಧಿಕಾರಿಗಳು ಕ್ಯಾಮಾರಾ ಸಹಾಯದಿಂದ ಅದನ್ನು ಪತ್ತೆ ಮಾಡಿ ಪ್ರಜ್ಞೆ ತಪ್ಪುವ ಚುಚ್ಚು ಮದ್ದು ನೀಡಿ ಅದನ್ನು ರಕ್ಷಣೆ ಮಾಡಿದ್ದಾರೆ.

ಸಾಮಾಜಿಕ ಜಾಲತಾಣದಲ್ಲಿ ಸುದ್ದಿ ವೈರಲ್

ಅಮಲ್ಕಾ ಅವರ ಈ ಸುದ್ದಿ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಆತನನ್ನು ಹುಡುಕಲು ಹಲವು ಶೋಧ ತಂಡಗಳೂ ಸಿದ್ಧವಾಗಿರುವ ವಿಚಾರ ಕೇಳಿ ನೆಟ್ಟಿಗರು ಅಚ್ಚರಿಗೊಂಡಿದ್ದಾರೆ. ವಿಮಾನ ನಿಲ್ದಾಣದ ಅಧಿಕಾರಿಗಳು ಅಮಲ್ಕಾಳನ್ನು ಶೀಘ್ರದಲ್ಲೇ ಸುರಕ್ಷಿತವಾಗಿ ರಕ್ಷಣೆ ಮಾಡಿರುವ ವಿಷಯ ಕೇಳಿ ಸಂತೋಷ ವ್ಯಕ್ತಪಡಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+