ವೈರಲ್ ವಿಡಿಯೋ: ಸಂಸದನ ಪಾದ ತೊಳೆದು ನೀರು ಕುಡಿದ ಬಿಜೆಪಿ ಕಾರ್ಯಕರ್ತ!

Recommended Video

      ಜಾರ್ಖಂಡ್ ನ ಬಿಜೆಪಿ ಕಾರ್ಯಕರ್ತನ ವಿಡಿಯೋ ವೈರಲ್ | Oneindia Kannada

      ಗೊಡ್ಡ(ಜಾರ್ಖಂಡ್), ಸೆಪ್ಟೆಂಬರ್ 17: ಇದನ್ನೇನು ಅಭಿಮಾನದ ಪರಾಕಾಷ್ಠೆ ಎನ್ನಬೇಕಾ... ಅಥವಾ ಓವರ್ acting ಅನ್ಬೇಕಾ ಗೊತ್ತಿಲ್ಲ! ಜಾರ್ಖಂಡ್ ನ ಗೊಡ್ಡಾ ಕ್ಷೇತ್ರದ ಬಿಜೆಪಿ ಸಂಸದರ ಪಾದ ತೊಳೆದು, ಆ ನೀರನ್ನು ಕಾರ್ಯಕರ್ತನೊಬ್ಬ ಕುಡಿದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ!

      ಸಂಸದ ನಿಶಿಕಾಂತ್ ದುಬೆ ಅವರ ಕಟ್ಟಾ ಅಭಿಮಾನಿಯಾಗಿರುವ ಕಾರ್ಯಕರ್ತನೊಬ್ಬ ತನ್ನ ಅಭಿಮಾನವನ್ನು ವ್ಯಕ್ತಪಡಿಸಿದ ರೀತಿಯ ಕುರಿತು ಇದೀಗ ಸಾಕಷ್ಟು ಚರ್ಚೆ ಎದ್ದಿದೆ. ಉದ್ವೇಗಕ್ಕೊಳಗಾದ ಕಾರ್ಯಕರ್ತ ಸಂಸದರ ಪಾದವನ್ನು ತೊಳೆದು, ನಂತರ ಪಾದ ತೊಳೆದ ನೀರನ್ನು ತಾನೇ ತೀರ್ಥದಂತೆ ಸೇವಿಸುವ ಮೂಲಕ ತನ್ನ ಅಭಿಮಾನ ಮೆರೆದಿದ್ದಾನೆ. ಈ ನಡೆಯನ್ನು ಜೊತೆಗಿರುವವರೆಲ್ಲ ಚಪ್ಪಾಳೆ ತಟ್ಟಿ ಮೆಚ್ಚಿದ್ದಾರೆ.

      ಈ ನಡೆಯ ಬಗ್ಗೆ ಎದ್ದ ವ್ಯಂಗ್ಯೋಕ್ತಿಗಳಿಗೆ ಪ್ರತಿಕ್ರಿಯಿಸಿದ ಸಂಸದ ದುಬೆ, 'ಅತಿಥಿಗಳ ಪಾದ ತೊಳೆಯುವುದರಲ್ಲಿ ತಪ್ಪೇನಿದೆ? ಇದಕ್ಕೆ ರಾಜಕೀಯ ಬಣ್ಣ ಹಚ್ಚುವುದೇಕೆ? ನೀವು ಮಹಾಭಾರತದ ಕಥೆಗಳನ್ನು ಓದಿಲ್ಲವೇ?' ಎಂದು ಪ್ರಶ್ನಿಸಿದ್ದಾರೆ.

      Viral video: A BJP worker washes feet of BJP Godda MP

      ಈ ಘಟನೆಯ ನಂತರ ಫೇಸ್ ಬುಕ್ ನಲ್ಲಿ ಸ್ಟೇಟಸ್ ಹಾಕಿರುವ ದುಬೆ, ಇಂದು ನಮ್ಮ ಪಕ್ಷದ ನಿಷ್ಠಾವಂತ ಕಾರ್ಯಕರ್ತ ಪವನ್ ಸಿಂಗ್, ಸಾವಿರ ಜನರೆದುರು ನನ್ನ ಪಾದ ತೊಳೆದರು. ನನಗೂ ಇಂಥದೇ ಅವಕಾಶ ಸಿಕ್ಕು, ನಾನೂ ನನ್ನ ಪಕ್ಷದ ಕಾರ್ಯಕರ್ತರ ಪಾದ ತೊಳೆದು, ಆ ನೀರನ್ನು ಕುಡಿಯುವಂತಾಗಲಿ' ಎಂದು ಹಾರೈಸುತ್ತೇನೆ ಎಂದಿದ್ದಾರೆ.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+