"ಈ ಮೂರ್ಖರಿಂದ ಏನನ್ನೂ ನಿಭಾಯಿಸಲು ಸಾಧ್ಯವಿಲ್ಲ" ಎಂದ ನಟ ಕಿಶೋರ್!

ಜೈ ಶ್ರೀ ರಾಮ್ ನಿಂದ ವಂದೇ ಮಾತರಂ ವರೆಗೆ .. ಎನ್ನುವ ಶೀರ್ಷಿಕೆಯೊಂದಿಗೆ ನಟ ಕಿಶೋರ್ ಅವರು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿರುವ ಬರಹವು ಇದೀಗ ಮಿಶ್ರ ಪ್ರತಿಕ್ರಿಯೆಗೆ ಕಾರಣವಾಗಿದೆ.

ಪ್ರಧಾನಿ ನರೇಂದ್ರ ಮೋದಿ ಹಾಗೂ ಕೇಂದ್ರ ಬಿಜೆಪಿ ಸರ್ಕಾರವನ್ನು ಗುರಿಯಾಗಿಸಿಕೊಂಡು ನಟ ಕಿಶೋರ್ ಅವರು ಈ ಟ್ವೀಟ್ ಮಾಡಿದ್ದಾರೆ. ಈ ಹೊತ್ತಿಗೆ ನಾವು ಅರ್ಥಮಾಡಿಕೊಂಡಿರಬೇಕಿತ್ತು ಈ ಮೂರ್ಖರಿಂದ ಏನನ್ನೂ ನಿಭಾಯಿಸಲು ಸಾಧ್ಯವಿಲ್ಲವೆಂದು... ಅವರು ಮಾಡಬಹುದಾದದ್ದು ಇಷ್ಟೇ ವಿಭಜಿಸು ಇಲ್ಲ ದಿಕ್ಕು ತಪ್ಪಿಸುವುದು ಎಂದು ನಟ ಕಿಶೋರ್ ಹೇಳಿದ್ದಾರೆ.

Viral Post Actor Kishore Slams BJP Says Can t Handle Anything from These Fools

ಇತರರನ್ನು ಪ್ರೀತಿಯಿಂದ ಸ್ವಾಗತಿಸಲು ಬಳಸುತ್ತಿದ್ದ ಅಭಿವ್ಯಕ್ತಿಯನ್ನು ಹೇಗೆ ಸ್ವಾಧೀನಪಡಿಸಿಕೊಂಡು ಅದನ್ನು ಯುದ್ಧಘೋಷವಾಗಿ, ಮುಸ್ಲಿಮರ ವಿರುದ್ಧ ದ್ವೇಷದ ಅಸ್ತ್ರವಾಗಿ, ಅಧಿಕಾರ ಹಿಡಿಯುವ ಸುಲಭ ಸಾಧನವಾಗಿ ಪರಿವರ್ತಿಸಲಾಗಿದೆಯೋ ಹಾಗೆಯೇ, ಸ್ವಾತಂತ್ರ್ಯ ಹೋರಾಟದಲ್ಲಿ ಯಾವುದೇ ಪಾತ್ರವಿಲ್ಲದ, ನಿಜವಾದ ದೇಶಭಕ್ತರು ನಿರ್ಮಿಸಿದ ಎಲ್ಲವನ್ನೂ ಮಾರುತ್ತಿರುವ ಅಧಿಕಾರದಲ್ಲಿರುವ ನಿಷ್ಪ್ರಯೋಜಕ ಜನರು ಈಗ ನಮ್ಮ ಸ್ವಾತಂತ್ರ್ಯ ಹೋರಾಟಗಾರರು ಬಳಸಿದ ಹಾಡನ್ನು.

ಕಾಲಾಂತರದಲ್ಲಿ ಕೋಮು ಪಕ್ಷಪಾತದ ಕಾದಂಬರಿ ಆನಂದ ಮಠಕ್ಕೆ ತಳಕು ಹಾಕಿಕೊಂಡರೂ ಸಹ, ಸ್ವಾತಂತ್ರ್ಯ ಹೋರಾಟಕ್ಕೆ ಜೀವ ತುಂಬಿದ ಮತ್ತು ಭಾರತದಾದ್ಯಂತ ಜನರನ್ನು ಒಗ್ಗೂಡಿಸಿದ ಹಾಡನ್ನು ಧಾರ್ಮಿಕ ಆಧಾರದ ಮೇಲೆ ದೇಶವನ್ನು ವಿಭಜಿಸಲು, ತಮ್ಮ ರಾಜಕೀಯ ಲಾಭಕ್ಕೆ ಬಳಸಲು ಪ್ರಯತ್ನಿಸುತ್ತಿದ್ದಾರೆ. ಕುಸಿಯುತ್ತಿರುವ ರೂಪಾಯಿ ಮೌಲ್ಯ, ಆರ್ಥಿಕತೆ ಮತ್ತು ಕುಸಿಯುತ್ತಿರುವ ಪ್ರಜಾಪ್ರಭುತ್ವ ಸಂಸ್ಥೆಗಳು, ನಕಲಿ ಜಿಡಿಪಿ ಮತ್ತು ರೈತರಿಗೆ ನೀಡಿದ ನಕಲಿ ಭರವಸೆಗಳು, ಆರೋಗ್ಯ ಮತ್ತು ನಿರುದ್ಯೋಗ, ಅಮೆರಿಕ ಮತ್ತು ಚೀನಾ, ಮಣಿಪುರ ಮತ್ತು ಲಡಾಖ್, ವಿಜ್ಞಾನಿಗಳು ಮತ್ತು ವಿದ್ವಾಂಸರ ಅಕ್ರಮ ಬಂಧನಗಳು ಮುಂತಾದ ಎಲ್ಲಾ ಅಗತ್ಯ ಮತ್ತು ಗಂಭೀರ ಸಮಸ್ಯೆಗಳನ್ನು ನಿರ್ಲಕ್ಷಿಸಿ ಎಂದು ಟೀಕಿಸಿದ್ದಾರೆ.

ಈ ಹೊತ್ತಿಗೆ ನಾವು ಅರ್ಥಮಾಡಿಕೊಂಡಿರಬೇಕಿತ್ತು ಈ ಮೂರ್ಖರಿಂದ ಏನನ್ನೂ ನಿಭಾಯಿಸಲು ಸಾಧ್ಯವಿಲ್ಲವೆಂದು... ಅವರು ಮಾಡಬಹುದಾದದ್ದು ಇಷ್ಟೇ ವಿಭಜಿಸು ಇಲ್ಲ ದಿಕ್ಕು ತಪ್ಪಿಸುವುದು ಎಂದು ಅವರು ಸೋಷಿಯಲ್ ಮೀಡಿಯಾ ಖಾತೆಗಳಲ್ಲಿ ಬರೆದುಕೊಂಡಿದ್ದಾರೆ.

ಸೋಷಿಯಲ್ ಮೀಡಿಯಾದಲ್ಲಿ ಮಿಶ್ರ ಪ್ರತಿಕ್ರಿಯೆ: ಇನ್ನು ನಟ ಕಿಶೋರ್ ಅವರು ಈಚೆಗೆ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿರುವ ಈ ಪೋಸ್ಟ್‌ ಸೋಷಿಯಲ್ ಮೀಡಿಯಾದಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಸಿದ್ದೇಶ್ ಎನ್ನುವವರು, ಕೋಟಿ ಗಟ್ಟಲೆ ಖರ್ಚು ಮಾಡಿ ಅಧಿವೇಶನ ನಡೆಸ್ತಾರೆ.
ಆದ್ರೆ ಚರ್ಚೆ ಆಗೋ ವಿಷಯ ಮಾತ್ರ ಬರಿ ಇಂತವೆ.....! ಬನ್ನಿ ಸಾರ್ ನಾವು ನೀವು Anti Nationalಗಳು ಪಕ್ಕದ ದೇಶಕ್ಕೆ ಹೋಗೋಣ. ಈ ದೇಶದ ಕಥೆ ಇಷ್ಟೇ ಎಂದು ಬೆಂಬಲ ಸೂಚಿಸಿದ್ದಾರೆ. ಇನ್ನೂ ಕೆಲವರು ನಿಮಗೆ ಈ ಬಾರಿ ಕಾಂಗ್ರೆಸ್ ಪಕ್ಷದಿಂದ ಟಿಕೆಟ್ ಸಿಗುವುದು ಪಕ್ಕಾ ಎಂದೂ ಹೇಳಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+