2,00,00,000 ವೀಕ್ಷಣೆ: 'ವಿಜಯ'ದ ಕಥೆ ಕೇಳಿದಕ್ಕೆ ಧನ್ಯವಾದ ತಿಳಿಸಿದ 'ಮಲ್ಯ'
ಬೆಂಗಳೂರು, ಜೂನ್ 10: ಮದ್ಯ ಸಾಮ್ರಾಜ್ಯದ ದೊರೆ, ಜಾಣ ಉದ್ಯಮಿ, ಕ್ರೀಡಾ ಪ್ರೇಮಿಯೂ ಆಗಿರುವ ವಿಜಯ್ ಮಲ್ಯ (Vijay Mallya Video) ಅವರು ದೇಶಬಿಟ್ಟು ಹೋಗಿ 09 ವರ್ಷಗಳ ಬಳಿಕ ಪ್ರತ್ಯಕ್ಷವಾಗಿದ್ದು ಎಲ್ಲರಿಗೂ ಗೊತ್ತೇ ಇದೆ. ವಿಜಯ್ ಮಲ್ಯ ಯೂಟ್ಯೂಬರ್ ರಾಜ್ ಶಮಾನಿ ಅವರೊಂದಿಗೆ ಮಾತನಾಡಿದ್ದಾರೆ. ಇದೀಗ ಅದೇ ವಿಡಿಯೋ ವೈರಲ್ ಆಗಿದ್ದರ ಬಗ್ಗೆ ತನ್ನ ಆಕ್ಷೇಪಗಳು, ನೈಜ ಜೀವನ ಕಥೆ, ತಮ್ಮ ಬೇಸರ ಕುರಿತು ಮಾತನಾಡಿನ್ನು ಮಿಲಿಯನ್‌ಗಟ್ಟಲೇ ಜನರು ನೋಡಿದ್ದಾರೆ ಎಂದು ಪೋಸ್ಟ್ ಮಾಡಿ ಮಂಗಳವಾರ ಮಾಹಿತಿ ನೀಡಿದ್ದಾರೆ.
ಸರ್ಕಾರ, ದೊಡ್ಡ ದೊಡ್ಡ ಮೀಡಿಯಾ ಸಂಸ್ಥೆಗಳಿಗೆ ಸಿಗದ ಕಿಂಗ್‌ಫಿಷರ್ ಏರ್‌ಲೈನ್ಸ್ ಮಾಲೀಕ, ಕೊಟಿಗಟ್ಟಲೇ ವ್ಯವಹಾರ ಮಾಡಿದ 2016ರಲ್ಲಿ ಭಾರತ ತೊರೆದ ಉದ್ಯಮಿ ಯೂಟ್ಯೂಬರ್ ಜೊತೆ ಮಾತನಾಡಿ ಅಚ್ಚರಿ ಮೂಡಿಸಿದ್ದಾರೆ. ಸುಮಾರು 04 ಗಂಟೆಗಳ ಕಾಲ ಮಾತನಾಡಿ ಮತಹ್ವದ ಸಂಗತಿಗಳನ್ನು ದೇಶದ ಜನರಿಗೆ ತಿಳಿಸಿದ್ದಾರೆ. ಈ ಕುರಿತು ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಇನ್‌ಸ್ಟಾಗ್ರಾಮ್ ರಿಲ್ಸ್‌ನಲ್ಲಿ ಹೆಚ್ಚು ಶೇರ್ ಆಗುತ್ತಿವೆ. ಈವರೆಗೆ ಸುಮಾರು 20 ಮಿಲಿಯನ್ ಜನರು ವೀಕ್ಷಣೆ ಮಾಡಿದ್ದಕ್ಕೆ ಭಾರತೀಯರಿಗೆ ಮಲ್ಯ ಸೆಲ್ಯೂಟ್ಗ ಹೊಡೆದಿದ್ದಾರೆ. ಈ ಬಗ್ಗೆ ವಿಜಯ್ ಮಲ್ಯ ಅವರು X ಖಾತೆಯಲ್ಲಿ ಬರೆದುಕೊಂಡಿದ್ದಾರೆ.

ವಿಜಯ್ ಮಲ್ಯ ನಿರೀಕ್ಷೆ ಹುಸಿಯಾಗಿಲ್ಲ..
ಕೋಟ್ಯಂತರ ರೂಪಾಯಿ ಸಾಲ ಮಾಡಿ ತೀರಿಸಲಾಗದೇ ದೇಶ ಬಿಟ್ಟು ಓಡಿ ಹೋದ ಕಳ್ಳ ಎಂಬ ಅಪವಾದ ಸೇರಿದಂತೆ ಕೆಲವು ಗುರುತರ ಆರೋಪ ಎದುರಿಸುತ್ತಿದ್ದರು ವಿಜಯ್ ಮಲ್ಯ ಅವರು ತಾನು ಏನು? ಆಗಿದ್ದೇನು? ಎಂಬುದನ್ನು ತಿಳಿಸಿದ್ದಾರೆ. ಇದು ಜನರಿಗೆ ತಲುಪಬೇಕಿತ್ತು ಎಂಬ ಆಶಯ ಹೊಂದಿದ್ದ ಅವರಿಗೆ ನಿರೀಕ್ಷೆ ಹುಸಿಯಾಗಿಲ್ಲ. ಅವರಂದುಕೊಂಡಂತೆ ಸುಮಾರು 20 ಮಿಲಿಯನ್ ಜನರು ವಿಡಿಯೋ ವೀಕ್ಷಿಸಿದ್ದಾರೆ.
ಭಾರತೀಯರಿಗೆ ವಿಜಯ್ ಮಲ್ಯ ಹೇಳಿದ್ದೇನು?
ದಿನಕ್ಕೆ 1 ಕೋಟಿ ಲೆಕ್ಕದಲ್ಲಿ ಜನರು ಮದ್ಯ ದೊರೆ ತನ್ನ ಬದುಕಿನ ಬದಲಾವಣೆ, ಆರ್ಥಿಕ ಹಿನ್ನಡೆ, ಮಾಡಿದ ಸಾಲ, ಜಪ್ತಿ ಆದ ಸಾಲ, ಅವರ ಮೇಲಿನ ಆರೋಪಗಳು ಹಾಗೂ ವಾಸ್ತವ ಸಂಗತಿಗಳನ್ನು ವಿಡಿಯೋದಲ್ಲಿ ತಿಳಿಸಿಕೊಟ್ಟಿದ್ದಾರೆ. ''ರಾಜ್ ಶಮಾನಿ ಜೊತೆಗೆ ಪಾಡ್‌ಕ್ಯಾಸ್ಟ್ ನಲ್ಲಿ ಮಾತನಾಡಿದ ವಿಡಿಯೋ ಕೇವಲ 4 ದಿನಗಳಲ್ಲಿ 20 ಮಿಲಿಯನ್ ವೀಕ್ಷಣೆಗಳು ಕಂಡಿದೆ (ಇಂದು 21 ಮಿಲಿಯನ್‌ಗೂ ಹೆಚ್ಚು ವೀಕ್ಷಣೆ ಆಗಿದೆ). Instagram ಮತ್ತು Facebook ನಲ್ಲಿ ಇನ್ನೂ ಎಷ್ಟು ಮರುಪೋಸ್ಟ್‌ಗಳು ಆಗಿದ್ದು, ಎಲ್ಲ ವೇದಿಕೆಗಳಲ್ಲಿ ನನ್ನ ನಿಜವಾದ ಕಥೆಯನ್ನು ಕೇಳಲಾಗುತ್ತಿದೆ. ಇದೆಲ್ಲ ನೋಡಿದರೆ ನನಗೆ ಅತೀವ ಹರ್ಷ ಉಂಟಾಗಿದೆ. ಅಂದುಕೊಂಡಂತೆ ನನ್ನ ಕಥೆ ಜನರಿಗೆ ತಲುಪಿದೆ. ದೇವರು ನಿಮ್ಮೆಲ್ಲರನ್ನು ಆಶೀರ್ವದಿಸಲಿ'' ಎಂದು ಅವರು ವೀಕ್ಷಕರಿಗೆ ಹಾರೈಸಿದ್ದಾರೆ. ಈ ಮೂಲಕ ಮತ್ತೊಮ್ಮೆ ಸುದ್ದಿಯಾಗಿದ್ದಾರೆ.
ಇದರೊಂದಿಗೆ ಯಾಕೆ ವ್ಯಕ್ತಿಗಳು ಸಿಲಿಕಾನ್ ವ್ಯಾಲಿಯಲ್ಲಿ ಇಷ್ಟು ಯಶಸ್ವಿಯಾಗುತ್ತಾರೆ ಎಂಬ ಇನ್ಸ್‌ಟಾಗ್ರಾಮ್ ವಿಡಿಯೋ ಸಹ ಶೇರ್ ಮಾಡಿಕೊಂಡಿದ್ದಾರೆ. ಉದ್ಯಮಿ ಅಗಿರುವ ಅವರು ಇಂತಹ ವಿಷಯಗಳಲ್ಲಿ ಹೆಚ್ಚು ಆಸಕ್ತಿ ಹೊಂದಿದ್ದಾರೆ. ಮರಳಿ ಭಾರತಕ್ಕೆ ಬಂದು ಇಂದಲ್ಲ ನಾಳೆ ಮತ್ತೆ ತನ್ನ ಸಾಮ್ರಾಜ್ಯ ಕಟ್ಟುವುದಾಗಿ ಅವರು ವಿಡಿಯೋ ಸಂದರ್ಶನದಲ್ಲಿ ತಿಳಿಸಿದ್ದಾರೆ.
To say that I am humbled and overwhelmed is well short of what I truly feel. A big heartfelt thank you to all those who took the time to watch my 4 hour plus podcast with @rajshamani 20 million views on YouTube alone in 4 days and god knows how many more reposts on Instagram and…
— Vijay Mallya (@TheVijayMallya) June 9, 2025
ವಿಜಯ್ ಮಲ್ಯ ಸಾಲ ಮಾಡಿದ್ದೆಷ್ಟು? ಆರೋಪ ನಕಾರ
ಆರ್‌ಸಿಬಿ ಪ್ರಾಂಚೈಸಿ ಖರೀದಿ ಮಾಡಿದ್ದೇ ತನ್ನ ಬ್ರ್ಯಾಂಡ್ ಪ್ರಚಾರಕ್ಕಾಗಿ ಎಂದಿರುವ ಮಲ್ಯ ತನ್ನ ಉತ್ಪನ್ನಗಳಿಗೆ ತಾನೇ ಮಾಡೆಲ್ಲ ಎಂದು ಹೇಳಿಕೊಂಡಿದ್ದಾರೆ. ಕಳ್ಳ, ಸಾಲ ಮಾಡಿ ಓಡಿ ಹೋದ ಎಂಬ ಆರೋಪಕ್ಕೆ ಅವರು ಬೇಸರ ವ್ಯಕ್ತಪಡಿಸಿದ್ದಾರೆ. ತಾನು ಒಂದು ನಯಾ ಪೈಸೆ ಕಳ್ಳತನ ಮಾಡಿಲ್ಲ. ತಾವು ವಿವಿಧ ಬ್ಯಾಂಕ್‌ಗಳಿಂದ ಸಾಲ ಮಾಡಿರುವುದು 4000 ಕೋಟಿಗೂ ಹೆಚ್ಚಿರಬಹುದು. ಅದಕ್ಕೆ ಬಡ್ಡಿ ಎಲ್ಲ ಸೇರಿಸಿದರೆ 6200 ಕೋಟಿಗೂ ಹೆಚ್ಚಿದೆ. ಆದರೆ ಸರ್ಕಾರ ತಮ್ಮ ಒಟ್ಟು 14,131 ಕೋಟಿ ರೂಪಾಯಿಯನ್ನು ಜಪ್ತಿ ಮಾಡಿಕೊಂಡಿದ್ದಾರೆ ಎಂದೆಲ್ಲ ತಿಳಿಸಿದ್ದಾರೆ. ಈ ಮೂಲಕ ಗುರುತರ ಆರೋಪಗಳನ್ನು ಅವರು ಒಪ್ಪದೇ ನಿರಾಕರಿಸಿದ್ಧಾರೆ. ವಿಡಿಯೋ ಸಂದರ್ಶನ ಮೂಲಕ ತಮ್ಮ ಮೇಲೆ ದೇಶದ ಜನರಿಗೆ ಇದ್ದ ಭಾವನೆ, ಸತ್ಯಾಸತ್ಯತೆ ತಿಳಿಸಿದ್ದಾರೆ ವಿಜಯ್ ಮಲ್ಯ ಹೇಳಿಕೊಂಡಿದ್ದಾರೆ. ಸದ್ಯ ಅವರ ಸಂದರ್ಶನ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ.
-
ಆರ್‌ಸಿಬಿ ಮತ್ತೆ ಚಾಂಪಿಯನ್ ಆಗೋದು ಫಿಕ್ಸ್, ಹ್ಯಾಜಲ್ವುಡ್ ಅಲಭ್ಯತೆ ತಂಡಕ್ಕೆ ವರದಾನ ಎಂದ ಆರ್.ಅಶ್ವಿನ್ -
March 21 Horoscope: 12 ರಾಶಿಗಳ ಇಂದುದಿನ ಭವಿಷ್ಯ – ಹಣ, ಆರೋಗ್ಯ, ಕೆಲಸದ ಫಲಿತಾಂಶ -
SWR: ವಿಜಯಪುರ-ಮಂಗಳೂರು ಎಕ್ಸ್ಪ್ರೆಸ್ ರೈಲು ಸಂಚಾರದಲ್ಲಿ ಭಾಗಶಃ ರದ್ದು, ವೇಳಾಪಟ್ಟಿ ಗಮನಿಸಿ -
ಜಿಯೋ, ಏರ್ಟೆಲ್ಗೆ ಸೆಡ್ಡು ಹೊಡೆಯಲು BSNL ಮಾಸ್ಟರ್ ಪ್ಲಾನ್: ವೊಡಾಫೋನ್ ಐಡಿಯಾ ಜತೆ ಮಹತ್ವದ ಹೆಜ್ಜೆ -
Rain Alert: ಕರ್ನಾಟಕದಲ್ಲಿ ಮಾ.27ರವರೆಗೆ ಗುಡುಗು ಸಹಿತ ಮಳೆ, ಕರಾವಳಿಗೆ ಉಷ್ಣ ಅಲೆ ಎಚ್ಚರಿಕೆ -
ಯುವತಿಯರ ಜೊತೆ ಸೆಕ್ಯೂರಿಟಿ ಗಾರ್ಡ್ ಭರ್ಜರಿ ಸ್ಟೆಪ್ಸ್: 'ಬೇಬಿ ಡಾಲ್' ಡ್ಯಾನ್ಸ್ ವಿಡಿಯೋ ಸಖತ್ Viral -
Gold Price Today: ಇಂದು ಚಿನ್ನ-ಬೆಳ್ಳಿ ದರದಲ್ಲಿ ದಾಖಲೆಯ ಇಳಿಕೆ, 30000 ರೂ ಕುಸಿದ ಬಿಳಿ ಲೋಹ -
India Rain Forecast: ಮುಂದಿನ 5 ದಿನ ಈ ಭಾಗಗಳಲ್ಲಿ ವ್ಯಾಪಕ ಮಳೆ, ಉಷ್ಣ ಅಲೆ ಎಚ್ಚರಿಕೆ -
ಶೃಂಗೇರಿ ಮಠದಿಂದ ಶಾಲಾ ಮಕ್ಕಳಿಗೆ ಸುವರ್ಣಾವಕಾಶ: 'ರಾಮಾಯಣ ಪರೀಕ್ಷೆ' ಬರೆದು 50 ಸಾವಿರ ರೂ. ನಗದು ಗೆಲ್ಲಿ -
Vande Bharat Express: ಬೆಂಗಳೂರು-ಕಲಬುರಗಿ ಸೇರಿದಂತೆ 4 ರೈಲುಗಳ ವೇಳಾಪಟ್ಟಿ ಪರಿಷ್ಕರಣೆ -
ಕರ್ನಾಟಕ PGCET 2026 ಅಧಿಸೂಚನೆ ಪ್ರಕಟ: ಎಂಬಿಎ ಸೇರಿ ವಿವಿಧ ಸ್ನಾತಕೋತ್ತರ ಪದವಿ ಪ್ರವೇಶಾತಿಗೆ ಮಾರ್ಚ್ 23 ರಿಂದ ಅರ್ಜಿ ಆಹ್ವಾನ -
ವಿಶ್ವಮಾತೆ ಎನ್ನುತ್ತಾ ಶ್ರೀಚಾಮುಂಡೇಶ್ವರಿಯ ಕನ್ನಡ ಹಾಡು ಹಂಚಿಕೊಂಡ ಪ್ರಧಾನಿ ಮೋದಿ












Click it and Unblock the Notifications