ಜಾಮೀನು ಪಡೆಯುತ್ತಲೇ ಭಾರತೀಯ ಮಾಧ್ಯಮಗಳ ಮೇಲೆ ಮಲ್ಯ ಕಿಡಿ
ತಮ್ಮ ಕೋಪಾವೇಶಕ್ಕೆ ಟ್ವೀಟರ್ ಅನ್ನು ವೇದಿಕೆ ಮಾಡಿಕೊಂಡ ವಿಜಯ ಮಲ್ಯ; ವಿಚಾರಣೆಗೆ ಹಾಜರಾಗಿದ್ದನ್ನು ಬಂಧನ ಎಂದು ಭಾರತೀಯ ಮಾಧ್ಯಮಗಳು ಸುಳ್ಳು ಹೇಳಿವೆ ಎಂದು ಹೇಳಿದ ಮದ್ಯದ ದೊರೆ.
ಲಂಡನ್, ಏಪ್ರಿಲ್ 18: ಸ್ಕಾಟ್ಲೆಂಡ್ ಪೊಲೀಸರಿಂದ ಮಂಗಳವಾರ ಬಂಧನಕ್ಕೊಳಗಾದ ಮೂರು ಗಂಟೆಗಳಲ್ಲಿ ಜಾಮೀನು ಪಡೆದ ವಿಜಯ್ ಮಲ್ಯ, ತಮ್ಮ ಬಿಡುಗಡೆಯಾಗುತ್ತಲೇ ಭಾರತೀಯ ಮಾಧ್ಯಮಗಳ ವಿರುದ್ಧ ಹರಿಹಾಯ್ದಿದ್ದಾರೆ.
ಟ್ವಿಟರ್ ನಲ್ಲಿ ತಮ್ಮ ಕೋಪಾವೇಶ ತೋಡಿಕೊಂಡಿರುವ ಅವರು, ''ನನ್ನ ಗಡೀಪಾರು ಕುರಿತಂತೆ ಭಾರತ ಸರ್ಕಾರ ಸಲ್ಲಿಸಿರುವ ಮನವಿಯ ವಿಚಾರಣೆಗೆ ನಾನು ಮಂಗಳವಾರ ಹೋಗಿದ್ದೆ. ಈ ವಿಚಾರಣೆ ಮೊದಲೇ ನಿರೀಕ್ಷಿತವಾಗಿತ್ತು. ಆದರೆ, ಭಾರತೀಯ ಮಾಧ್ಯಮಗಳು ಇದಕ್ಕೆ ಬಂಧನದ ಲೇಪ ಹಚ್ಚಿ ದೊಡ್ಡದಾಗಿ ಪ್ರಚಾರ ಮಾಡಿವೆ'' ಎಂದು ಅವರು ಟೀಕಿಸಿದ್ದಾರೆ.

ಭಾರತದಲ್ಲಿನ 17 ಬ್ಯಾಂಕುಗಳಿಂದ ಸುಮಾರು 9 ಸಾವಿರ ಕೋಟಿ ರು.ಗಳ ಸಾಲವನ್ನು ಬಾಕಿ ಉಳಿಸಿಕೊಂಡಿರುವ ಮಲ್ಯ ಬಂಧನ ಅವರ ಬಂಧನವಾಗಿದ್ದಾಗಿ ಮಂಗಳವಾರ ಮಧ್ಯಾಹ್ನದ ವೇಳೆಗೆ ಸುದ್ದಿ ಹರಡಿತ್ತು.
Usual Indian media hype. Extradition hearing in Court started today as expected.
— Vijay Mallya (@TheVijayMallya) April 18, 2017












Click it and Unblock the Notifications