ಭಾರತ ಬಿಡುವ ಮುನ್ನ ಫ್ರಾನ್ಸ್, ಇಂಗ್ಲೆಂಡ್‌ನಲ್ಲಿ ಕೋಟ್ಯಾಂತರ ಮೌಲ್ಯದ ಆಸ್ತಿ ಖರೀದಿಸಿದ್ದ ವಿಜಯ್ ಮಲ್ಯ!
ನವದೆಹಲಿ, ಮಾರ್ಚ್. 23: ಕಿಂಗ್‌ಫಿಶರ್ ವಿಮಾನಯಾನ ಸಂಸ್ಥೆ ತೀವ್ರ ಆರ್ಥಿಕ ಮುಗ್ಗಟ್ಟು ಎದುರಿಸುತ್ತಿರುವಾಗಲೂ ಅದರ ಸಂಸ್ಥಾಪಕ ವಿಜಯ್ ಮಲ್ಯ ವಿದೇಶಗಳಲ್ಲಿ ಕೋಟ್ಯಾಂತರ ರೂಪಾಯಿ ಮೌಲ್ಯದ ಆಸ್ತಿ ಖರೀದಿಸಿದ್ದಾರೆ ಎಂಬ ವಿಷಯ ಬಹಿರಂಗಗೊಂಡಿದೆ. 2016 ರಲ್ಲಿ ಭಾರತ ಬಿಟ್ಟು ಪರಾರಿಯಾಗುವ ಮೊದಲು ಪ್ರಾನ್ಸ್ ಮತ್ತು ಇಂಗ್ಲೆಂಡ್‌ನಲ್ಲಿ ಕೋಟ್ಯಾಂತರ ಮೌಲ್ಯದ ಆಸ್ತಿ ಖರೀದಿಸಿದ್ದಾರೆ.
ಕಳೆದ ವರ್ಷ ಮುಂಬೈನ ವಿಶೇಷ ನ್ಯಾಯಾಲಯದ ಮುಂದೆ ಸಿಬಿಐ ಸಲ್ಲಿಸಿದ ಪೂರಕ ಆರೋಪಪಟ್ಟಿಯಲ್ಲಿ, ಈಗ ನಿಷ್ಕ್ರಿಯವಾಗಿರುವ ಕಿಂಗ್‌ಫಿಷರ್ ಏರ್‌ಲೈನ್ಸ್ ಲಿಮಿಟೆಡ್ (ಕೆಎಎಲ್) ಭಾರತದಲ್ಲಿ ತೀವ್ರ ಆರ್ಥಿಕ ಮುಗ್ಗಟ್ಟು ಎದುರಿಸುತ್ತಿರುವಾಗಲೂ ಅದರ ಅಧ್ಯಕ್ಷ ವಿಜಯ್ ಮಲ್ಯ ವಿದೇಶಗಳಲ್ಲಿ ವೈಯಕ್ತಿಕ ಆಸ್ತಿಯನ್ನು ಸಂಪಾದಿಸುತ್ತಿದ್ದರು ಎಂದು ಆರೋಪಿಸಿದೆ.

ವಿಜಯ್ ಮಲ್ಯ 2015-16ರ ಅವಧಿಯಲ್ಲಿ ಇಂಗ್ಲೆಂಡ್ ಮತ್ತು ಫ್ರಾನ್ಸ್‌ನಲ್ಲಿ 330 ಕೋಟಿ ರೂಪಾಯಿ ಮೌಲ್ಯದ ಆಸ್ತಿಗಳನ್ನು ಖರೀದಿಸಿದ್ದಾರೆ. ಅವರ ಕಿಂಗ್‌ಫಿಶರ್ ವಿಮಾನಯಾನ ಸಂಸ್ಥೆಗಳು ಆ ಸಮಯದಲ್ಲಿ ನಗದು ಬಿಕ್ಕಟ್ಟನ್ನು ಎದುರಿಸುತ್ತಿದ್ದವು. ಬ್ಯಾಂಕುಗಳಿಂದ ಪಡೆದಿದ್ದ ಸಾಲಗಳನ್ನು ಮರು ಪಾವತಿ ಮಾಡಿರಲಿಲ್ಲ ಎಂದು ಸಿಬಿಐ ತನ್ನ ಆರೋಪ ಪಟ್ಟಿಯಲ್ಲಿ ತಿಳಿಸಿದೆ. ಸಿಬಿಐ ಐಡಿಬಿಐ ಬ್ಯಾಂಕ್-ಕಿಂಗ್‌ಫಿಶರ್ ಏರ್ಲೈನ್ಸ್ 900 ಕೋಟಿ ರೂಪಾಯಿ ಸಾಲ ವಂಚನೆ ಪ್ರಕರಣದ ತನಿಖೆ ನಡೆಸುತ್ತಿದೆ.. ವಿಜಯ್ ಮಲ್ಯ ಪ್ರಕರಣದ ಪ್ರಮುಖ ಆರೋಪಿ.
ಸಿಬಿಐ ಇತ್ತೀಚೆಗೆ ವಿಶೇಷ ಸಿಬಿಐ ನ್ಯಾಯಾಲಯದ ಮುಂದೆ ಪೂರಕ ಚಾರ್ಜ್‌ಶೀಟ್ ಸಲ್ಲಿಸಿದೆ. ಹಿಂದಿನ ಚಾರ್ಜ್‌ಶೀಟ್‌ಗಳಲ್ಲಿ ಹೆಸರಿಸಲಾದ ಎಲ್ಲಾ 11 ಆರೋಪಿಗಳೊಂದಿಗೆ, ತನ್ನ ಇತ್ತೀಚಿನ ಪೂರಕ ಚಾರ್ಜ್‌ಶೀಟ್‌ನಲ್ಲಿ ಐಡಿಬಿಐ ಬ್ಯಾಂಕಿನ ಮಾಜಿ ಜನರಲ್ ಮ್ಯಾನೇಜರ್ ಬುದ್ಧದೇವ್ ದಾಸ್‌ಗುಪ್ತಾ ಹೆಸರನ್ನು ಸೇರಿಸಿದೆ. ಇವರು ತನ್ನ ಅಧಿಕೃತ ಸ್ಥಾನವನ್ನು ದುರುಪಯೋಗಪಡಿಸಿಕೊಂಡಿದ್ದಾರೆ ಎಂದು ಆರೋಪಿಸಿದೆ.
ಐಡಿಬಿಐ ಬ್ಯಾಂಕ್ ಮತ್ತು ವಿಜಯ್ ಮಲ್ಯರ ಅಧಿಕಾರಿಗಳೊಂದಿಗೆ ಬುದ್ಧದೇವ್ ದಾಸ್‌ಗುಪ್ತಾ ಅವರು 2009 ರ ಅಕ್ಟೋಬರ್‌ನಲ್ಲಿ 150 ಕೋಟಿ ರೂಪಾಯಿಯ ಅಲ್ಪಾವಧಿಯ ಸಾಲವನ್ನು (ಎಸ್‌ಟಿಎಲ್) ಅನುಮೋದನೆ ಮತ್ತು ವಿತರಣೆಯ ವಿಷಯದಲ್ಲಿ ಸಂಚು ಹೂಡಿದರು. ಐಡಿಬಿಐ ಬ್ಯಾಂಕಿನ ಮಾನ್ಯತೆಯನ್ನು ಒಟ್ಟು 750 ಕೋಟಿ ಮೊತ್ತಕ್ಕೆ ಸೀಮಿತಗೊಳಿಸಬೇಕಾಗಿತ್ತು. ಆದರೆ ಬುದ್ಧದೇವ್ ದಾಸ್‌ಗುಪ್ತಾ ಅವರ ಆಜ್ಞೆಯ ಮೇರೆಗೆ, ಇದು ಡಿಸೆಂಬರ್ 2009 ರಲ್ಲಿ 900 ಕೋಟಿಗೆ ಏರಿಕೆಯಾಗಿತ್ತು ಎಂದು ಚಾರ್ಜ್‌ಶೀಟ್ ಉಲ್ಲೇಖಿಸಿದೆ.

2016 ರಲ್ಲಿ ಡಿಯಾಜಿಯೊ ( ಮದ್ಯ ವ್ಯಾಪಾರ ಮಾರುಕಟ್ಟೆ) ಪಿಎಲ್‌ಸಿಯೊಂದಿಗಿನ ಒಪ್ಪಂದದಿಂದ ವಿಜಯ್ ಮಲ್ಯ ಪಡೆದ 40 ಮಿಲಿಯನ್ ಡಾಲರ್ ಮೊತ್ತವನ್ನು ಸ್ವಿಟ್ಜರ್ಲೆಂಡ್‌ನಲ್ಲಿ ಸ್ಥಾಪಿಸಲಾದ ಮೂರು ಮಕ್ಕಳ ಮೂರು ಟ್ರಸ್ಟ್ ಖಾತೆಗಳಿಗೆ ವರ್ಗಾಯಿಸಲಾಗಿದೆ. ಮಲ್ಯಗೆ ಸಂಬಂಧಿಸಿದ ಸಾಗರೋತ್ತರ ಬ್ಯಾಂಕ್ ಖಾತೆಗಳು ಮತ್ತು ವಹಿವಾಟುಗಳ ವ್ಯಾಪಕ ವಿವರಗಳನ್ನು ಸಂಸ್ಥೆಯು ಮೊದಲ ಬಾರಿಗೆ ಚಾರ್ಜ್‌ಶೀಟ್‌ಗೆ ಸೇರಿಸಿದೆ.
ಡಿಯಾಜಿಯೊದಿಂದ ಮಲ್ಯ 40 ಮಿಲಿಯನ್ ಡಾಲರ್‌ಗಳನ್ನು ಪಡೆದಿದ್ದಾರೆ ಎಂದು ಸಿಬಿಐ ಹೇಳಿಕೊಂಡಿದೆ. ಏಷ್ಯಾದಲ್ಲಿ ಡಿಯಾಜಿಯೊದೊಂದಿಗೆ ಸ್ಪರ್ಧಿಸುವುದಿಲ್ಲ ಎಂಬ ಒಪ್ಪಂದದ ಪ್ರಕಾರ, ಯುನೈಟೆಡ್ ಸ್ಪಿರಿಟ್ಸ್ ಲಿಮಿಟೆಡ್‌ನ ಅಧ್ಯಕ್ಷ ಸ್ಥಾನದಿಂದ ಕೆಳಗಿಳಿಯುವ ಬದಲು ವಿಜಯ್ ಮಲ್ಯ ಅವರು 2017 ರಿಂದ 2021 ರವರೆಗೆ ಡಿಯಾಜಿಯೊದಿಂದ ಪ್ರತಿ ವರ್ಷ 40 ಮಿಲಿಯನ್ ಡಾಲರ್ ಮುಂಗಡವಾಗಿ ಮತ್ತು ಉಳಿದ 7 ಮಿಲಿಯನ್ ಡಾಲರ್ ಪಡೆದಿದ್ದಾರೆ..
ವಿಜಯ್ ಮಲ್ಯ ಮತ್ತು ಆತನೊಂದಿಗೆ ನಂಟು ಹೊಂದಿರುವ ಇತರರ ವ್ಯವಹಾರಗಳ ಬಗ್ಗೆ ವಿವರವಾದ ತನಿಖೆಗಾಗಿ ಯುನೈಟೆಡ್ ಕಿಂಗ್‌ಡಮ್, ಯುಎಸ್, ಮಾರಿಷಸ್ ಮತ್ತು ಸ್ವಿಟ್ಜರ್ಲೆಂಡ್‌ಗೆ ಪತ್ರ ಕಳುಹಿಸಲಾಗಿದೆ ಎಂದು ಸಿಬಿಐ ಹೇಳಿದೆ. ಅವರ ಬ್ಯಾಂಕ್ ಖಾತೆಗಳ ಗೌಪ್ಯ ಡೇಟಾ ಸೇರಿದಂತೆ ಪ್ರತಿಕ್ರಿಯೆಗಳನ್ನು ಈ ದೇಶಗಳ ವಿವಿಧ ಅಧಿಕಾರಿಗಳು ಹಂಚಿಕೊಂಡಿದ್ದಾರೆ.
ದೇಶ ಬಿಟ್ಟು ಪರಾರಿಯಾಗಿರುವ ವಿಜಯ್ ಮಲ್ಯ ಅವರು ಫ್ರಾನ್ಸ್‌ನಲ್ಲಿ 35 ಮಿಲಿಯನ್ ಯುರೋಗಳಿಗೆ ರಿಯಲ್ ಎಸ್ಟೇಟ್ ಪ್ರಾಪರ್ಟಿಗಳನ್ನು ಖರೀದಿಸುತ್ತಿದ್ದಾರೆ ಮತ್ತು ಅವರ ಕಂಪನಿಗಳಲ್ಲಿ ಒಂದಾದ ಗಿಜ್ಮೊ ಹೋಲ್ಡಿಂಗ್ಸ್‌ನ ಖಾತೆಯಿಂದ 8 ಮಿಲಿಯನ್ ಯುರೋಗಳನ್ನು ಪಾವತಿಸಲು ಪ್ರಯತ್ನಿಸಿದ್ದಾರೆ ಎಂಬ ವಿಷಯಗಳನ್ನು ಸಿಬಿಐ ಚಾರ್ಜ್‌ಶೀಟ್ ಒಳಗೊಂಡಿದೆ.












Click it and Unblock the Notifications