ವಿಡಿಯೋ: ಬ್ರಷ್ ಮತ್ತು ಸೋಪ್ ಬಳಸಿ ಬಟ್ಟೆ ತೊಳೆದ ಮಂಗ
ಕೋತಿಗಳು ಅತ್ಯಂತ ಬುದ್ಧಿವಂತ ಪ್ರಾಣಿಗಳಲ್ಲಿ ಒಂದು. ಅದು ಸಾಮಾನ್ಯವಾಗಿ ಜನರಿಂದ ಆಹಾರವನ್ನು ಕದಿಯಲು ಬುದ್ಧಿವಂತ ಮಾರ್ಗಗಳನ್ನು ಉಪಯೋಗಿಸುತ್ತದೆ. ಕೆಲವು ಬಾರಿ ಕೋತಿಗಳು ಸ್ಮಾರ್ಟ್‌ಫೋನ್‌ಗಳತ್ತ ಆಸಕ್ತಿ ತೋರಿಸುವ ವಿಡಿಯೋಗಳನ್ನು ನಾವು ನೋಡಿದ್ದೇವೆ. ಆದರೀಗ ಕೋತಿಯ ಒಂದು ಉಲ್ಲಾಸದ ವಿಡಿಯೋ ವೈರಲ್ ಆಗುತ್ತಿದೆ. ವಿಡಿಯೋದಲ್ಲಿ ಕೋತಿಯು ಮನುಷ್ಯರಂತೆ ಮನೆಕೆಲಸಗಳನ್ನು ಮಾಡುವುದನ್ನು ಕಾಣಬಹುದು.
ಈ ವಿಡಿಯೋವನ್ನು ಕೆಲವು ವರ್ಷಗಳ ಹಿಂದೆ ಹಂಚಿಕೊಳ್ಳಲಾಗಿದ್ದರೂ, ಇದು ಮತ್ತೊಮ್ಮೆ ನೋಡುಗರನ್ನು ರಂಜಿಸಲು ಮರುಕಳಿಸಿದೆ. ವಿಡಿಯೋದಲ್ಲಿ ಕೋತಿ ಸೋಪಿನ ನೀರಿನ ಸಿಂಕ್‌ನಲ್ಲಿ ಕುಳಿತು ಬಟ್ಟೆ ಒಗೆಯುತ್ತಿರುವುದನ್ನು ಕಾಣಬಹುದು. ಈ ಕೋತಿ ಯಾವ ಮನುಷ್ಯರಿಗೂ ತಾನೇನು ಕಮ್ಮಿ ಇಲ್ಲ ಎಂಬಂತೆ ಬಟ್ಟೆಯನ್ನು ಬ್ರಷ್‌ನಿಂದ ಉಜ್ಜಿ ತೊಳೆಯುತ್ತದೆ.

ಕೋತಿ ನಂತರ ಬಟ್ಟೆಗಳನ್ನು ಸಂಪೂರ್ಣವಾಗಿ ಸ್ವಚ್ಛಗೊಳಿಸಲು ಬ್ರಷ್ ಅನ್ನು ಬಳಸುತ್ತದೆ. ಈ ದೃಶ್ಯ ನಿಜಕ್ಕೂ ಉಲ್ಲಾಸದಾಯಕವಾಗಿದೆ. ಏಕೆಂದರೆ ಕೋತಿಯು ಬಟ್ಟೆ ಒಗೆಯುವುದರಲ್ಲಿ ಮಗ್ನವಾಗಿರುವುದನ್ನು ನೋಡುವುದು ತುಂಬಾ ಅಪರೂಪ. ವಿಡಿಯೋ ಕ್ಲಿಪ್ ನೋಡಿದ ಬಳಿಕ ನೆಟ್ಟಿಗರು ಸಾಕಷ್ಟು ಪ್ರತಿಕ್ರಿಯೆ ನೀಡಿದ್ದಾರೆ. ತಮಾಷೆಯ ಕಾಮೆಂಟ್ ಗಳನ್ನು ಮಾಡಿದ್ದಾರೆ. ವಿಡಿಯೋ 1.2 ದಶಲಕ್ಷಕ್ಕೂ ಹೆಚ್ಚು ವೀಕ್ಷಣೆಗಳು ಮತ್ತು 99k ಲೈಕ್‌ಗಳನ್ನು ಪಡೆದಿದೆ.












Click it and Unblock the Notifications