ಹಿಂದೆ ಅಂಜನಾ ಅಂತ ನೋಡ್ತಿದ್ದರಲ್ಲ, ಅದೇ ಈಗಿನ ಕಾಲದ ವೀಡಿಯೋ ಕಾಲ್ ಅಲ್ವಾ?

ಹಿಂದಿನ ಕಾಲದಲ್ಲಿ ಬೇರೆ ಯಾವುದೋ ಪ್ರದೇಶದಲ್ಲಿ ಏನು ಆಗುತ್ತಿದೆ ಅಂತ ನೋಡಲು ಅದೇನೋ ಕವಡೆ ಶಾಸ್ತ್ರವೋ, ಅಂಜನಾವೋ ಇನ್ನೊಂದು ಹಾಕಿ ನೋಡುತ್ತಿದ್ದರು. ಎಲ್ಲಿಯೋ ಆಗುತ್ತಿರುವ ಘಟನೆ ಇಲ್ಲಿ ನೀರಲ್ಲೋ, ಎಣ್ಣೆಯಲ್ಲೋ ರಿಫ್ಲೆಕ್ಟ್ ಆಗುತ್ತಿತ್ತು. ಅದಕ್ಕೆ ಅಗೋಚರ ಶಕ್ತಿಯ ಅಗತ್ಯವಿತ್ತು ಬಿಡಿ. ಆದರೆ, ಈಗ ಅದು ನಿಜವಾಗಲೂ ತಂತ್ರಜ್ಞಾನದಿಂದ ಸಾಧ್ಯವಾಗಿದೆ. ಅಮೆರಿಕವೋ, ಮತ್ಯಾವುದೋ ದೇಶದಲ್ಲಿರೋ ಮಕ್ಕಳು ಅಪ್ಪ-ಅಮ್ಮನ ಜೊತೆ ಹೊಂದು ಕ್ಯಾಮೆರಾ ಇಟ್ಟು, ಇಂಟರ್‌ನೆಂಟ್ ಸಹಾಯದಿಂದ ಸದಾ ಕನೆಕ್ಟ್ ಆಗಿರುತ್ತಾರೆ. 24/7 ಕಾಲ್ ಇಲ್ಲದೇ ಒಬ್ಬರಿಗೊಬ್ಬರು ಕನೆಕ್ಟ್ ಆಗುತ್ತಾರೆ. ಹಿಂದನ ಕಾಲದಲ್ಲಿ ಕಂಡಿದ್ದು, ಈ ಸಾಕಾರಗೊಳ್ಳುತ್ತಿದೆ. ಅಂಥದ್ದೊಂದ ಸಾಧ್ಯತೆಯನ್ನು ಈ ಅಮ್ಮ-ಮಗ ತಮ್ಮ ಪ್ರೇಮವನ್ನು ತೋರಿಸಿಕೊಳ್ಳಲು ಬಳಸಿಕೊಳ್ಳುತ್ತಿದ್ದಾರೆ. ಟೆಕ್ಕಿ ಹರ್ಷ್ ಸೇವರ್‌ಗಾಂವ್ಕರ್ ಏನು ಮಾಡಿದ್ದಾರೋ ನೋಡಿ.

Video Call Man Connects With Mother 24 Hour Through Video Call Mom Son Stays Connected With Each Other All Time

ಅಮ್ಮನ ಮೇಲಿನ ಅಪಾರ ಪ್ರೀತಿ :

ಗಂಡು ಮಕ್ಕಳಿಗೆ ಅಮ್ಮ ಅಂದರೆ ಸ್ವಲ್ಪ ಹೆಚ್ಚು ಪ್ರೀತಿ, ಸಲುಗೆ. ಹಾಗಾಗಿ ಅಮ್ಮನ್ನನು ಬಿಟ್ಟು ದೂರ ಹೋಗುವಾಗ ಕಷ್ಟವಾಗುವುದು ಸಹಜ. ಟೆಕ್ಕಿ ಹರ್ಷ್ ಸೇವರ್‌ಗಾಂವ್ಕರ್ ಕೂಡಾ ಇದೇ ತೊಳಲಾಟವನ್ನು ಅನುಭವಿಸಿದವರು. ಅಮ್ಮನನ್ನು ನೋಡದೆ ಇರಲು ಸಾಧ್ಯವೇ ಇಲ್ಲ. ಅಮ್ಮಾ ಒಬ್ಬಳೇ ಏನು ಮಾಡುತ್ತಾಳೋ? ಸರಿಯಾಗಿ ಊಟ ತಿಂಡಿ ಮಾಡುತ್ತಾಳಾ, ಅಥವಾ ಮೂರು ಹೊತ್ತು ಟೆನ್ಶನ್‌ ಮಾಡಿಕೊಂಡೇ ದಿನ ಕಳೆಯುತ್ತಾಳಾ ಎನ್ನುವ ಹತ್ತು ಹಲವು ಪ್ರಶ್ನೆ ಇವರನ್ನು ಕಾಡ್ತಾ ಇತ್ತು. ಆಗ ಇವರು ಕಂಡುಕೊಂಡಿದ್ದೇ ಈ ಹೊಸ ಮಾರ್ಗ. ಇವರ ಈ ಉಪಾಯದಿಂದಾಗಿ ದಿನದ ಇಪ್ಪತ್ನಾಲ್ಕು ಗಂಟೆಯೂ ಅಮ್ಮ ಮಗನನ್ನು, ಮಗ ಅಮ್ಮನ್ನು ನೇರವಾಗಿ ನೋಡುವುದು ಸಾಧ್ಯವಾಗಿದೆ.

ಡೈನಿಂಗ್‌ ಟೇಬಲ್‌ ಮೇಲೆ ಹಳೆಯ ಲ್ಯಾಪ್‌ಟಾಪ್ ಮೂಲಕ Video Call :

ಅವರು ಮನೆಯ ಡೈನಿಂಗ್‌ ಟೇಬಲ್‌ ಮೇಲೆ ದೊಡ್ಡ ಸ್ಕ್ರೀನ್‌ನ ಹಳೆಯ ಲ್ಯಾಪ್‌ಟಾಪ್ (laptop) ಅನ್ನು ಕನೆಕ್ಟ್‌ ಮಾಡಿದ್ದಾರೆ. ನಂತರ 24 ಗಂಟೆಗಳ ವೀಡಿಯೊ ಕಾಲನ್ನುಆಕ್ಟಿವ್‌ ಮಾಡಿದ್ದಾರೆ. ಈಗ, ವಿದೇಶದಲ್ಲಿದ್ದಾಗಲೂ, ಹರ್ಷ್ ತನ್ನ ತಾಯಿಯನ್ನು ನೋಡಬಹುದು. ತಾಯಿ ಕೂಡಾ ಯಾವಾಗ ಬೇಕೋ ಆಗ ಮಗನನ್ನು ನೋಡಬಹುದು. ಇದರರ್ಥ ಇಬ್ಬರೂ ಇಡೀ ದಿನ ವಿಡಿಯೋ ಕಾಲ್‌ನಲ್ಲಿ ಮಾತನಾಡ್ತಾ ಇರುತ್ತಾರೆ ಎಂದಲ್ಲ. ಮಾತನಾಡದಿದ್ದರೂ ಯಾರು ಏನು ಮಾಡ್ತಾ ಇದ್ದಾರೆ ಅನ್ನೋದು ಗೊತ್ತಾಗುತ್ತದೆ. ಅವರ ಈ ಕಲ್ಪನೆ ಈಗ ಸೋಶಿಯಲ್‌ ಮಿಡಿಯಾದಲ್ಲಿ ಭಾರೀ ವೈರಲ್‌ ಆಗಿದೆ.

ಕಾಲ್‌ ಡಿಸ್‌ಕನೆಕ್ಟ್‌ ಆಗುವುದೇ ಇಲ್ಲ :

ಇನ್ನು ಹರ್ಷ್ AI (artificial intelligence) ಕ್ಲೌಡ್ ಸಹಾಯವನ್ನು ತೆಗೆದುಕೊಂಡಿದ್ದಾರೆ. ಸಣ್ಣಪುಟ್ಟ ಟೆಕ್ನಿಕಲ್‌ ಇಶ್ಯೂ ಆಗಿ ಕಾಲ್‌ ಕಟ್‌ ಆದರೆ ಮತ್ತೆ ರಿ ಕನೆಕ್ಟ್‌ ಮಾಡಲು ಸಹಾಯವಾಗುವಂತೆ ಈ ಸೆಟಪ್‌ ಮಾಡಿಕೊಂಡಿದ್ದಾರೆ. ಬ್ರೌಸರ್ ಕ್ರ್ಯಾಶ್ ಆದಾಗ, ಇಂಟರ್ನೆಟ್ ಡಿಸ್‌ ಕನೆಕ್ಟ್‌ ಆದಾಗ, ಮತ್ತೆ ರಿ ಕನೆಕ್ಟ್‌ ಆಗುವ ರೀತಿ ಸೆಟಪ್‌ ಮಾಡಿಕೊಂಡಿದ್ದಾರೆ. ಅಲ್ಲದೆ ಒಂದು ವೇಳೆ ಲ್ಯಾಪ್‌ಟಾಪ್ ಸ್ವಿಚ್‌ ಆಫ್‌ ಆದರೆ ಪವರ್ ಬಟನ್ ಒತ್ತಿದ ತಕ್ಷಣ ಎಲ್ಲವೂ ಮತ್ತೆ ಕನೆಕ್ಟ್‌ ಆಗುವಂತೆ ರೆಡಿ ಮಾಡಿಟ್ಟುಕೊಂಡಿದ್ಧಾರೆ.

ಇಲ್ಲಿ ತಾಯಿ (mother) ಮಗ ಮೂರು ಹೊತ್ತೂ ಮಾತನಾಡಿಕೊಂಡು ಇರಲ್ಲ, ಆದರೆ ಇಬ್ಬರೂ ಒಟ್ಟಿಗೆ ಇದ್ದೇವೆ ಎನ್ನುವ ಫೀಲ್‌ ಅವರಿಗಿದೆಯಂತೆ. ತಾಯಿ ಮನೆಯಲ್ಲಿ ಅವರದ್ದೇ ಆದ ಕೆಲಸ ಮಾಡಿಕೊಂಡು ಇರ್ತಾರೆ. ಮಗ ತನ್ನ ಪಾಡಿಗೆ ವಿದೇಶದಲ್ಲಿ ಕೆಲಸದಲ್ಲಿರುತ್ತಾರೆ. ಆದರೂ ಅವರು ಊಟ ಮಾಡಿದರೇ, ತಿಂಡಿ ತಿಂದರೇ, ಏನು ಮಾಡ್ತಾ ಇದ್ದಾರೆ ಎನ್ನುವುದ್ನು ಖುದ್ದು ಗಮನಿಸಬಹುದು. ಅಮ್ಮ ರಾತ್ರಿ ನೀರು ಕುಡಿಯಲು ಎದ್ದಾಗ ಸ್ಕ್ರೀನ್‌ ಮೇಲೆ ಮಗ ಕಾಣಿಸಿದರೆ ಒಂದು ಹಾಯ್ ಹೇಳಿ ಮತ್ತೆ ಮಲಗುತ್ತಿದ್ದರು. ಇದು ಅವರಿಬ್ಬರ ನಡುವಿನ ಅಂತರವನ್ನು ಕಡಿಮೆ ಮಾಡುತ್ತದೆ ಎನ್ನುವುದು ಮಗನ ಅಭಿಪ್ರಾಯ.

ಅಮ್ಮ-ಮಗನ ಈ ಪ್ರೀತಿಗೆ ನೆಟ್ಟಿಗರ ಮೆಚ್ಚುಗೆ :

ಹರ್ಷ್ ಅವರ ಪೋಸ್ಟ್ ವೈರಲ್ ಆಗುತ್ತಿದ್ದ ಹಾಗೆಯೇ ಜನರಿಗೆ ಈ ಕಲ್ಪನೆ ತುಂಬಾ ಇಷ್ಟವಾಗಿದೆ. ವಿದೇಶದಲ್ಲಿ ಒಂಟಿಯಾಗಿರುವಾಗ ಕುಟುಂಬದೊಂದಿಗೆ ಸದಾ ಸಂಪರ್ಕದಲ್ಲಿರುವ ಈ ಪ್ರಯತ್ನ ತುಂಬಾ ಜನರಿಗೆ ಇಷ್ಟವಾಗಿದೆ. ಕೆಲವರು ವ್ಯವಸ್ಥೆಯನ್ನು ಮತ್ತಷ್ಟು ಸುಧಾರಿಸಲು ಕೆಲವು ಸಲಹೆಗಳನ್ನು ಕೊಟ್ಟಿದ್ದಾರೆ. ತಾಯಿಗೆ ಸಹಾಯ ಬೇಕಾದಾಗ ಮಗನಿಗೆ ಎಚ್ಚರಿಕೆ ನೀಡುವ ವೈಶಿಷ್ಟ್ಯ ತುಂಬಾ ಉಪಯುಕ್ತವಾಗಬಹುದು ಎಂದು ಕೆಲವರು ಅಭಿಪ್ರಾಯಪಟ್ಟಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+