Get Updates
Get notified of breaking news, exclusive insights, and must-see stories!

Vande Bharat Sleeper: ಕನ್ಫರ್ಮ್ ಟಿಕೆಟ್ ಇದ್ದವರಿಗಷ್ಟೇ ಪ್ರಯಾಣ, 400 ಕಿಮೀಗೆ ಕನಿಷ್ಠ ದರ, ಟಿಕೆಟ್ ದರಗಳು

ನವದೆಹಲಿ: ಭಾರತದ ಅತೀ ವೇಗದ ರೈಲು, ಬಹುನಿರೀಕ್ಷೆಯ ವಂದೇ ಭಾರತ್ ಸ್ಲೀಪರ್ ಎಕ್ಸ್‌ಪ್ರೆಸ್ ರೈಲು ಇದೇ ಜನವರಿ 17ರಂದು ಕಾರ್ಯಾಚರಣೆ ಆರಂಭಿಸಲಿದೆ. ಪ್ರಧಾನಿ ಮೋದಿಯವರು ಸಂಚಾರಕ್ಕೆ ಹಸಿರುವ ನಿಶಾನೆ ತೋರಿಸಲಿದ್ದಾರೆ. 400 ಕಿಲೋ ಮೀಟರ್ ದೂರದವರೆಗೂಕನಿಷ್ಠ ದರ ವಿಧಿಸಲಾಗಿದೆ. ವೇಟಿಂಗ್ ಲಿಸ್ಟ್, ಆರ್ಎಸಿ ಇದರಲ್ಲಿ ಲಭ್ಯವಿಲ್ಲ. ಇತರ ರೈಲುಗಳಿಗಿಂತ ಈ ರೈಲಿನ ಟಿಕೆಟ್ ದರ ಹೆಚ್ಚು ಎಂದು ರೈಲ್ವೆ ಇಲಾಖೆ ತಿಳಿಸಿದೆ. ಹಾಗಾದರೆ ವಿವಿಧ ವರ್ಗದ ಎಸಿ ಸೀಟು ಕಾಯ್ದಿರಿಸುವಿಕೆಗೆ ಎಷ್ಟಿದೆ ದರ, ಪೂರ್ಣ ಮಾಹಿತಿ ಇಲ್ಲಿದೆ.

ರೈಲು ಟಿಕೆಟ್ ಕಾಯ್ದಿರಿಸಿದಾಗ ಟಿಕೆಟ್ ವೇಟಿಂಗ್ ವೇಳೆ ಅಥವಾ ಬುಕಿಂಗ್‌ಗೆ ಲಭ್ಯವಿದ್ದ ಆರ್‌ಎಸಿ ಇದರಲ್ಲಿ ಇಲ್ಲ. ರೈಲಿನ ಟಿಕೆಟ್ ದರ ಪ್ರೀಮಿಯಂ ರೈಲುಗಳಿಗಿಂತ ಸ್ವಲ್ಪ ಹೆಚ್ಚಾಗಿದೆ. ಪ್ರಯಾಣಿಕರು ಕಡಿಮೆ ದೂರದ ಪ್ರಯಾಣಕ್ಕೂ ಅಂದರೆ 200, 300 ಕಿಲೋ ಮೀಟರ್ ದೂರ (01ರಿಂದ 400-ಕಿಮೀ) ಪ್ರಯಾಣಕ್ಕೆ ಕನಿಷ್ಠ ದರ ನಿಗದಿ ಮಾಡಲಾಗಿದೆ. ಮುಖ್ಯವಾಗಿ ಈ ರೈಲಿಗೆ ದೃಢೀಕೃತ ಟಿಕೆಟ್‌ಗಳನ್ನು ಮಾತ್ರ ನೀಡಲಾಗುತ್ತದೆ. RAC/ವೇಟ್‌ಲಿಸ್ಟ್/ಭಾಗಶಃ ದೃಢೀಕೃತ ಟಿಕೆಟ್‌ಗಳಿಗೆ ಯಾವುದೇ ಅವಕಾಶ ಇರುವುದಿಲ್ಲ. ಲಭ್ಯವಿರುವ ಎಲ್ಲಾ ಬರ್ತ್‌ಗಳು ಮುಂಗಡ ಕಾಯ್ದಿರಿಸುವಿಕೆ ಅವಧಿ (ARP) ದಿನದಿಂದ ಲಭ್ಯವಿರುತ್ತವೆ" ಎಂದು ರೈಲ್ವೆ ಮಂಡಳಿ ತಿಳಿಸಿದೆ.

Vande Bharat Sleeper No More RAC Sharing only Confirmed Tickets Minimum Charges for 400 km

ಇತರ ಎಕ್ಸ್‌ಪ್ರೆಸ್ ರೈಲುಗಳ ಎಸಿ ಬೋಗಿ ವೇಟ್‌ಲಿಸ್ಟ್ ಮಾಡಿದ ಟಿಕೆಟ್‌ಗಳನ್ನು ಸ್ವೀಕರಿಸುವುದಿಲ್ಲ. ಹಾಗೆ ಬುಕಿಂಗ್ ಮಾಡಿದಲ್ಲಿ ಸ್ವಯಂಚಾಲಿತ ರದ್ದಾಗುತ್ತದೆ. ದೃಢೀಕರಣವಾಗದ ಸಂದರ್ಭದಲ್ಲಿ ಆರ್‌ಎಸಿ ಟಿಕೆಟ್‌ಗಳನ್ನು ನಿಯಮಿತವಾಗಿ ನೀಡಲಾಗುತ್ತದೆ. ಆರ್‌ಎಸಿ ಅಡಿಯಲ್ಲಿ, ಇಬ್ಬರು ಪ್ರಯಾಣಿಕರಿಗೆ ಸೈಡ್ ಲೋವರ್ ಬರ್ತ್ ಹಂಚಿಕೊಳ್ಳಲು ಅವಕಾಶವಿದೆ.

ಟಿಕೆಟ್ ದರ ಮಾಹಿತಿ ಹೀಗಿದೆ

ಪ್ರಯಾಣಿಕರಿಂದ 3ಎಸಿ ಆಸನ ಕಾಯ್ದಿರಿಸಲು ಪ್ರತಿ ಕಿ.ಮೀ.ಗೆ 2.4 ರೂ., 2ಎಸಿ ಗೆ ಪ್ರತಿ ಕಿ.ಮೀ.ಗೆ 3.1 ರೂ. ಮತ್ತು ಮೊದಲ ಎಸಿಗೆ ಪ್ರತಿ ಕಿ.ಮೀ.ಗೆ 3.8 ರೂ. ದರದಲ್ಲಿ ಶುಲ್ಕ ವಿಧಿಸಲಾಗುತ್ತದೆ. ಹಾಗಾಗಿ, 400 ಕಿ.ಮೀ. ದೂರದ ವಂದೇ ಭಾರತ್ ಸ್ಲೀಪರ್ ರೈಲಿನ ಕನಿಷ್ಠ ದರ 3ಎಸಿ ಗೆ 960 ರೂ. ದರ ನಿಗದಿಪಡಿಸಲಾಗಿದೆ. ಉಳಿದಂತೆ 2ಎಸಿ ಗೆ 1,240 ರೂ. ಮತ್ತು 1ಎಸಿಗೆ 1,520 ರೂ. ಆಗಿದೆ. ಇದರಲ್ಲಿ ಜಿಎಸ್‌ಟಿ ಬರುವುದಿಲ್ಲ. ಅದನ್ನು ಪ್ರತ್ಯೇಕವಾಗಿ ವಿಧಿಸಲಾಗುತ್ತದೆ.

ವಂದೇ ಭಾರತ್ ಸ್ಲೀಪರ್ ರೈಲು ಹೌರಾ ಮತ್ತು ಗುವಾಹಟಿ ಮಧ್ಯ ಸಂಚಾರ ಆರಂಭಿಸಲಿದೆ. ಈ ಮಾರ್ಗದ ಮಧ್ಯೆ 1,000 ಕಿಲೋ ಮೀಟರ್ ದೂರಕ್ಕೆ 3ಎಸಿಗೆ 2,400 ರೂ. ಇದೆ. 2ಎಸಿ ಗೆ 3,100 ರೂ. ಮತ್ತು 1ಎಸಿಗೆ 3,800 ರೂ. ಆಗಿದೆ. 2,000 ಕಿ.ಮೀ. ದೂರಕ್ಕೆ, ದರಗಳು 3ಎಸಿಗೆ 4,800 ರೂ., 2ಎಸಿಗೆ ಗೆ 6,200 ರೂ. ಮತ್ತು 3ಎಸಿಗೆ ಗೆ 7,600 ರೂಪಾಯಿ ಪಾವತಿಸಬೇಕಾಗುತ್ತದೆ. ಹೌರಾ ಮತ್ತು ಗುವಾಹಟಿ ನಡುವೆ ರಾಜಧಾನಿ ಎಕ್ಸ್‌ಪ್ರೆಸ್ ಚಲಿಸುವುದಿಲ್ಲ. ದೆಹಲಿ ಮತ್ತು ಮುಂಬೈ ಮಧ್ಯೆ ಸಿಎಸ್‌ಎಂಟಿ ರಾಜಧಾನಿ ಪ್ರತಿ ಕಿ.ಮೀ.ಗೆ 2.10 ರೂ (3ಎಸಿ), 2.85 ರೂ (2ಎಸಿ), ಮತ್ತು 3.53 ರೂ (1ಎಸಿ) ಟಿಕೆಟ್ ಬೆಲೆ ವಿಧಿಸಲಾಗಿದೆ.

ಎಕ್ಸ್‌ಪ್ರೆಸ್ ರೈಲಿನ ದರ

ಹೌರಾ-ಗುವಾಹಟಿ (ಕಾಮಾಖ್ಯ ಜಂಕ್ಷನ್) ಮಾರ್ಗದಲ್ಲಿ ಸರೈಘಾಟ್ ಎಕ್ಸ್‌ಪ್ರೆಸ್‌ ರೈಲಿನ ಅತ್ಯಧಿಕ ದರ 1,410 (3ಎಸಿ) ರೂಪಾಯಿ, 2ಎಸಿಗೆ 1,985 ರೂ. ಹಾಗೂ 1ಎಸಿ ಗೆ 3,320 ರೂಪಾಯಿ ಟಿಕೆಟ್ ದರವಿದೆ. 1969 ರಲ್ಲಿ ಹೌರಾದಿಂದ ಪ್ರಾರಂಭವಾದ ನಂತರ ದಶಕಗಳಿಂದ ರಾಜಧಾನಿ ಎಕ್ಸ್‌ಪ್ರೆಸ್ ರೈಲುಗಳು ಶುರುವಾದ ಮಾರ್ಗ ಇದಾಗಿದೆ.

ಗಂಟೆಗೆ 130 ಕಿಮೀ ವೇಗದಲ್ಲಿ ಚಾಲನೆ

ಈ ವಂದೇ ಭಾರತ್ ಸ್ಲೀಪರ್ ಎಕ್ಸ್‌ಪ್ರೆಸ್ ರೈಲು ಪ್ರತಿ ಗಂಟೆಗೆ 180 ಕಿಲೋ ಮೀಟರ್ ವೇಗದಲ್ಲಿ ಚಲಿಸಬಹುದು. ರೈಲ್ವೆ ಮೂಲಸೌಕರ್ಯ, ಸುರಕ್ಷತಾ ಕಾರಣದಿಂದಾಗಿ ಪ್ರತಿ ಗಂಟೆಗೆ 130 ಕಿಮೀ ವೇಗದಲ್ಲಿ ಚಲಿಸುವಂತೆ ನಿರ್ವಹಿಸಲಾಗುತ್ತಿದೆ.
ರಾಜಧಾನಿ ಗಂಟೆಗೆ ಸರಾಸರಿ 80-90 ಕಿಮೀ ವೇಗದಲ್ಲಿ ಚಲಿಸುತ್ತದೆ. ಹಲವು ಸುರಕ್ಷತಾ ತಂತ್ರಜ್ಞಾನದೊಂದಿಗೆ ಮೊದಲ ಸ್ಲೀಪರ್ ವಂದೇ ಭಾರತ್ ರೈಲು ಸಂಚಾರ ಆರಂಭವಾಗಲಿದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+