Video: ಪ್ರವಾಹದ ಹಳಿಯಲ್ಲಿ ವಂದೇ ಭಾರತ್ ರೈಲು ಸಂಚಾರ: ನೆಟ್ಟಿಗರಲ್ಲಿ ಅಚ್ಚರಿ ಮೂಡಿಸಿದ ವಿಡಿಯೋ ವೈರಲ್

ಮುಂಬೈ; ದೇಶದ ವಾಣಿಜ್ಯ ನಗರಿ ಅಂತಲೇ ಕರೆಸಿಕೊಳ್ಳುವ ಮಹಾರಾಷ್ಟ್ರ ರಾಜ್ಯದ ಮುಂಬೈ ಸದ್ಯ ಮುಂಗಾರು ಮಳೆಗೆ ನಲುಗಿದೆ. ತೀವ್ರ ಮಳೆಗೆ ಮುಂಬೈನ ಅನೇಕ ಪ್ರದೇಶಗಳಲ್ಲಿ ಪ್ರವಾಹ ಸ್ಥಿತಿ ಉಂಟಾಗಿದೆ. ರೈಲು ಹಳಿಗಳ ಜಲಾವೃತಗೊಂಡಿದ್ದು, ಇಂತಹ ಸ್ಥಿತಿಯಲ್ಲೇ ವಂದೇ ಭಾರತ್ ಎಕ್ಸಪ್ರೆಸ್ ರೈಲು (Vande Bharat Express Train) ಸಂಚರಿಸಿದ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಕೆಲವರು ಇದೇನು ಸಿನಿಮಾ ದೇಶ್ಯವಾ! ಎಂದು ಅಚ್ಚರಿ ವ್ಯಕ್ತಪಡಿಸಿದ್ದಾರೆ.

ಮುಂಬೈನಲ್ಲಿ ಕೆಲವು ದಿನಗಳಿಂದ ನಿರಂತರವಾಗಿ ಮಳೆ ಆಗುತ್ತಿದೆ. ಮಳೆಯಿಂದಾಗಿ ತಗ್ಗು ಪ್ರದೇಶಗಳು, ರಸ್ತೆಗಳಲ್ಲಿ ನೀರು ನಿಂತ ಸಂಚಾರ ಅಸ್ತವ್ಯಸ್ತವಾಗಿದೆ. ಇದೇ ರೀತಿ ರೈಲ್ವೆ ಹಳಿ ಮೇಲೂ ನೀರು ನಿಂತು ರೈಲುಗಳ ಸಂಚಾರ ಕಷ್ಟವೆಂಬ ಸ್ಥಿತಿ ನಿರ್ಮಾಣವಾಗಿದೆ. ಹೀಗಿದ್ದರೂ ಸಹಿತ ನೀರಿದ್ದ ಹಳೆದ ಹಳಿ ಮೇಲೆ ವಂದೇ ಭಾರತ್ ರೈಲು ವೇಗವಾಗಿ ಸಾಗಿದೆ. ಎಡ ಹಾಗೂ ಬಲ ಬದಿಗೆ ನೀರು ಚಿಮ್ಮಿಸುತ್ತಲೇ ಮುಂದೆ ಸಾಗಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

Vande Bharat Express Train

ಮೂಲಗಳ ಪ್ರಕಾರ, ಜುಲೈ 4 ರಂದು ಎಕ್ಸ್ ಖಾತೆಯಲ್ಲಿ ವಂದೇ ಭಾರತ್ ರೈಲಿನ ವಿಡಿಯೋ ಹಂಚಿಕೊಳ್ಳಲಾಗಿದೆ. ಕಂಜುರ್‌ಮಾರ್ಗ್ ಬಳಿ ಭಾರೀ ಮಳೆ ದಾಖಲಾಗಿದೆ. ಇದೇ ವೇಳೆ ಹಳಿಗಳು ಜಲಾವೃತಗೊಂಡ ಸಂದರ್ಭದಲ್ಲಿ ರೈಲು ಸಂಚರಿಸಿದೆ. ಈ ವೇಳೆ ವಿಡಿಯೋ ಚಿತ್ರೀಕರಿಸಲಾಗಿದೆ. ಅದು ಸದ್ಯ ಆನ್‌ಲೈನ್‌ನಲ್ಲಿ ವೈರಲ್ ಆಗುತ್ತಿದೆ.

India Weather Alert: ವಾಯುಭಾರ ಕುಸಿತ, ಈ ಭಾಗಗಳಲ್ಲಿ ಮುಂದಿನ 7 ದಿನ ಧಾರಾಕಾರ ಮಳೆ ಎಚ್ಚರಿಕೆ
India Weather Alert: ವಾಯುಭಾರ ಕುಸಿತ, ಈ ಭಾಗಗಳಲ್ಲಿ ಮುಂದಿನ 7 ದಿನ ಧಾರಾಕಾರ ಮಳೆ ಎಚ್ಚರಿಕೆ

ನಗರದ ಮೂಲಸೌಕರ್ಯ ಸುಧಾರಿಸಬೇಕು

ನೆಟ್ಟಿಗರು ವಿಡಿಯೋ ಕುರಿತು ಪ್ರತಿಕ್ರಿಯಿಸಿದ್ದು, ರೈಲು ಸಿನಿಮಾದಲ್ಲಿ ಸೆರೆ ಹಿಡಿದಂತೆ ಕಾಣಿಸುತ್ತಿದೆ ಎಂದು ವಿವರಿಸಿದ್ದಾರೆ. ಮತ್ತೊಬ್ಬ ಬಳಕೆದಾರರು ಇದು ಮುಂಬೈನಲ್ಲಿ ಮುಂಗಾರು ಮಳೆಯ ಪರಿಸ್ಥಿತಿ ನೋಡಿ ಎಂದು ಹೇಳಿದ್ದಾರೆ. ಮುಂಬೈನಲ್ಲಿ ರೈಲು ಸಂಚಾರ ತಡೆಯಲು ಸಾಧ್ಯವಿಲ್ಲ ಈ ವಿಡಿಯೋ ತೋರಿಸುತ್ತದೆ ಎಂದು ಇನ್ನೊಬ್ಬರು ಹೇಳಿದ್ದಾರೆ. ಇನ್ನೂ ಕೆಲವರು ಮುಂಬೈ ಸಾರಿಗೆ ಮೂಲಸೌಕರ್ಯ ಕುರಿತು ಕಲವಳ ವ್ಯಕ್ತಪಡಿಸಿದ್ದಾರೆ. ಪ್ರತಿ ಮುಂಗಾರು ಸಂದರ್ಭದಲ್ಲಿ ಆಗುವ ಸಮಸ್ಯೆಗಳನ್ನು ಹೇಳಿಕೊಂಡಿದ್ದು, ಅಭಿವೃದ್ಧಿ, ನಗರ ಸುಧಾರಣೆ ಆಗುವ ಅಗತ್ಯವಿದೆ ಎಂದು ಒತ್ತಾಯಿಸಿದ್ದಾರೆ.

ಮುಂಬೈನಲ್ಲಿ ಭಾರೀ ಮಳೆ, ಪ್ರವಾಹ ಆತಂಕ

ಮುಂಗಾರು ಮಳೆ ಮುಂಬೈ, ದೆಹಲಿ ಸೇರಿದಂತೆ ಉತ್ತರ ಭಾರತದ ಪ್ರಮುಖ ನಗರಗಳನ್ನು ಆವರಿಸಿದೆ. ಮುಂಬೈನಲ್ಲಿ ಭಾರೀ ಮಳೆಗೆ ಪ್ರವಾಹ ಉಂಟಾಗಿದ್ದು, ಸಂಚಾರ ದಟ್ಟಣೆ ಸಮಸ್ಯೆ ಉಲ್ಭಣಿಸಿದೆ. ಬಿರುಗಾಳಿ ಸಹಿತ ಭಾರೀ ಮಳೆಯಿಂದಾಗಿ ಮುಂಬೈ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಅಧಿಕಾರಿಗಳು ಭಾನುವಾರ ಒಂದು ಗಂಟೆ ಎಲ್ಲಾ ರನ್‌ವೇ ಕಾರ್ಯಾಚರಣೆಗಳನ್ನು ಸ್ಥಗಿತಗೊಳಿಸಿದ್ದಾರೆ. ರಸ್ತೆ ಸಾರಿಗೆ, ರೈಲು ಸಾರಿಗೆ ಮಾತ್ರವಲ್ಲದೇ ವಿಮಾನಯಾನಕ್ಕೂ ಮಳೆ ಬಿಸಿ ತಟ್ಟಿದೆ.

ಪಶ್ಚಿಮ ಘಟ್ಟಗಳ ಸಾಲಿನಲ್ಲಿ ಮುಂದುವರಿದ ಮಳೆ

ಮುಂಬೈ, ಮಹಾರಾಷ್ಟ್ರ, ಗುಜರಾತ್, ಹರಿಯಾಣ, ಪಂಜಾಬ್, ಅಸ್ಸಾಂ ರಾಜ್ಯಗಳಲ್ಲಿ ಮುಂಗಾರು ಚುರುಕೊಂಡಿದೆ. ಕರ್ನಾಟಕ ಕರಾವಳಿ ಮತ್ತು ಪಶ್ಚಿಮ ಘಟ್ಟಗಳ ಪ್ರದೇಶ, ಕೇರಳ ತಮಿಳುನಾಡು, ಗೋವಾರ, ಕೊಂಕಣ ಪ್ರದೇಶಗಳು ಸೇರಿದಂತೆ ದೇಶದ ಅನೇಕ ಭಾಗಗಳಲ್ಲಿ ಕೆಲವು ದಿನಗಳಿಂದ ಭಾರೀ ಮಳೆ ಸುರಿಯುತ್ತಿದೆ. ಮುಂದಿನ ಜುಲೈ 12ರವರೆಗೆ ಭಾರೀ ಮಳೆ ಮುಂದುವರಿಯಲಿದೆ. ಗುಜರಾತ್, ಗೋವಾ ಕರಾವಳಿ ಭಾಗಗಳಿಗೆ ರೆಡ್ ಅಲರ್ಟ್ ನೀಡಲಾಗಿದೆ. ಮುಂಬೈ, ದೆಹಲಿ ಸೇರಿದಂತೆ ಪ್ರಮುಖ ನಗರಗಳಿಗೆ ಆರೆಂಜ್ ಅಲರ್ಟ್ ಕೊಡಲಾಗಿದೆ. ಇನ್ನೂ ಭಾರಿ ಮಳೆಗೆ ಹಳ್ಳ ಕೊಳ್ಳಗಳು, ನದಿಗಳ ಒಳಹರಿವು ಏರಿಕೆ ಆಗಿದೆ. ಬೇಸಿಗೆಗೆ ಬೆಂದ ಅನೇಕ ಭಾಗಗಳಲ್ಲಿ ಮಳೆಯು ಜನರಲ್ಲಿ ಹರ್ಷ ಮೂಡಿಸಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+