Vande Bharat: ಮುಂದಿನ 3-4 ವರ್ಷಗಳಲ್ಲಿ ಟ್ರ್ಯಾಕ್‌ಗೆ ಇಳಿಯಲಿವೆ 400ಕ್ಕೂ ಹೆಚ್ಚು ವಂದೇ ಭಾರತ್‌ ರೈಲುಗಳು: ಭಾರತೀಯ ರೈಲ್ವೆ

ನವದೆಹಲಿ, ನವೆಂಬರ್‌, 19: ಭಾರತದ ಸಾರಿಗೆ ವಿಭಾಗಗಳಲ್ಲಿ ರೈಲ್ವೆಯು ಪ್ರಯಾಣಿಕರ ದಟ್ಟಣೆಯನ್ನು ತಡೆಯಲು ಆಗಾಗ ಹೆಚ್ಚುವರಿ ರೈಲುಗಳನ್ನು ಬಿಡುತ್ತಲೇ ಇದೆ. ಹಾಗೆಯೇ ಇದೀಗ ರೈಲ್ವೆ ಪ್ರಯಾಣಿಕರ ಹೆಚ್ಚಳವನ್ನು ಗಮನದಲ್ಲಿಟ್ಟುಕೊಂಡು ಮುಂದಿನ 4ರಿಂದ 5 ವರ್ಷದಲ್ಲಿ 400-450 ವಂದೇ ಭಾರತ್ ರೈಲುಗಳನ್ನು ಓಡಿಸಲು ರೈಲ್ವೆ ಇಲಾಖೆ ನಿರ್ಧರಿಸಿದೆ. ಹಾಗೂ ಇದರ ಜೊತೆಗೆ ಸಾಮಾನ್ಯ ರೈಲುಗಳನ್ನು ಓಡಿಲಸಲು ಕೂಡ ನಿರ್ಧಾರ ಮಾಡಿದೆ.

ಹೈಸ್ಪೀಡ್‌ ರೈಲುಗಳಲ್ಲಿ ಒಂದಾದ ವಂದೇ ಭಾರತ್‌ ರೈಲು ಭಾರೀ ಜನಮನ್ನಣೆಯನ್ನು ಪಡೆದಿದೆ. ಅದರಲ್ಲೂ ಸಾರಿಗೆ ವಿಭಾದಲ್ಲಿ ಅತೀ ವೇಗವಾಗಿ ಬೆಳೆಯುತ್ತಿರುವುದೆಂದರೆ ಅದು ಭಾರತೀಯ ರೈಲ್ವೆ ಆಗಿದೆ. ರೈಲ್ವೆ ಪ್ರಯಾಣಿಕರ ಹೆಚ್ಚಳವನ್ನು ಗಮನದಲ್ಲಿಟ್ಟುಕೊಂಡು ಮುಂದಿನ 4ರಿಂದ 5 ವರ್ಷದಲ್ಲಿ 400-450 ವಂದೇ ಭಾರತ್ ರೈಲು ಹಾಗೂ 3,000 ಹೊಸ ಸಾಮಾನ್ಯದ ರೈಲುಗಳನ್ನು ಓಡಿಸಲು ನಿರ್ಧಾರ ಮಾಡಿದೆ.

Vande Bharat Express: More than 400 Vande Bharat trains to operate in next 3-4 years

ರೈಲ್ವೆ ಜಾಲ ವಿಸ್ತರಣೆಗಾಗಿ 5 ವರ್ಷಗಳ ಯೋಜನೆ ಸಿದ್ಧಪಡಿಸಲಾಗಿದ್ದು, ವಾರ್ಷಿಕವಾಗಿ ಈಗಿರುವ 800 ಕೋಟಿ ಪ್ರಯಾಣಿಕರ ಸಂಖ್ಯೆಯನ್ನು 1,000 ಕೋಟಿಗೆ ಏರಿಸುವ ಗುರಿಯನ್ನು ಭಾರತೀಯ ರೈಲ್ವೆ ಹೊಂದಿದೆ. ಇದೀಗ ದೇಶದಲ್ಲಿ69 ಸಾವಿರ ಹೊಸ ಕೋಚ್‌ಗಳು ಸಿದ್ಧವಾಗಿವೆ. ಪ್ರತಿ ವರ್ಷ ಭಾರತೀಯ ರೈಲ್ವೇ 5,000 ಹೊಸ ಬೋಗಿಗಳನ್ನು ತಯಾರಿಸುತ್ತಿದೆ. ಇದರ ಸಹಾಯದಿಂದ ರೈಲ್ವೆಯು ಪ್ರತಿ ವರ್ಷ ಸುಮಾರು 250 ಹೊಸ ರೈಲುಗಳನ್ನು ಪ್ರಾರಂಭಿಸಬಹುದು.

ಇದರಲ್ಲಿ ವಂದೇ ಭಾರತ್‌ ರೈಲುಗಳನ್ನು ಸೇರಿಸಲು ಆಗಿಲ್ಲ. ಮುಂಬರುವ ವರ್ಷಗಳಲ್ಲಿ400-450 ವಂದೇ ಭಾರತ್‌ ರೈಲುಗಳಿಗೆ ಇಲಾಖೆ ಚಾಲನೆ ನೀಡಲಿದೆ. ಈಗಾಗಲೇ ಹೈಸ್ಪೀಡ್‌ ರೈಲಿನ ಕನಸನ್ನು ಈಡೇರಿಸುವಲ್ಲಿ ವಂದೇ ಭಾರತವು ಸಂಪೂರ್ಣವಾಗಿ ಯಶಸ್ವಿ ಆಗಿದೆ. ಈ ರೈಲುಗಳ ಸಂಖ್ಯೆಯನ್ನು ಹೆಚ್ಚಿಸಲು ಕೂಡ ರೈಲ್ವೆ ಇಲಾಖೆ ನಿರ್ಧರಿಸಿದೆ.

ರೈಲುಗಳ ವೇಗ ಮತ್ತು ಹಳಿಗಳನ್ನು ಸುಧಾರಿಸುವ ಯೋಜನೆಗಳು ಚಾಲ್ತಿಯಲ್ಲಿವೆ. ಹೊಸ ಪ್ರದೇಶಗಳಿಗೂ ರೈಲು ಸೇವೆ ನೀಡಲು ಹಳಿಗಳನ್ನು ಹಾಕಲಾಗುತ್ತಿದೆ. ಪ್ರಯಾಣದ ಸಮಯವನ್ನು ತಗ್ಗಿಸಲೂ ಆದ್ಯತೆ ನೀಡಲಾಗಿದೆ. ನಾವು ನವದೆಹಲಿ-ಕೋಲ್ಕೊತ್ತಾ ರೈಲು ಮಾರ್ಗವನ್ನು ಸುಧಾರಿಸಿದರೆ, ಪ್ರಯಾಣದ ಸಮಯವನ್ನು ಸುಮಾರು 2.20 ಗಂಟೆಗಳವರೆಗೆ ಕಡಿಮೆ ಮಾಡಬಹುದು.

ವಂದೇ ಭಾರತ್‌ ರೈಲುಗಳಲ್ಲಿ ವೇಗ ಹೆಚ್ಚಳ ಮತ್ತು ಬ್ರೇಕಿಂಗ್‌ ತಂತ್ರಜ್ಞಾನವು ಸಾಮಾನ್ಯ ರೈಲುಗಳಿಗಿಂತ ನಾಲ್ಕು ಪಟ್ಟು ಉತ್ತಮ ಆಗಿದೆ. ಆದ್ದರಿಂದ ನಾವು ಪ್ರಯಾಣದ ಸಮಯವನ್ನು ಕಡಿಮೆ ಮಾಡಲು ಸಾಧ್ಯವಾಯಿತು. ಈ ಹೊಸ ತಂತ್ರಜ್ಞಾನವನ್ನು ಇತರ ರೈಲುಗಳಲ್ಲಿಯೂ ಅಳವಡಿಸಲಾಗುವುದು ಎಂದು ರೈಲ್ವೆ ಸಚಿವ ಅಶ್ವಿನಿ ವೈಷ್ಣವ್‌ ಹೇಳಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+