ಗುಜರಾತ್ : ವಡೋದರಾದಲ್ಲಿ ಪಾನಿಪೂರಿ ಮಾರಾಟ ನಿಷೇಧ!

ಗಾಂಧಿನಗರ, ಜುಲೈ 27 : ಸಂಜೆಯ ರಸ್ತೆ ಬದಿಯಲ್ಲಿ ನಿಂತು ಪಾನಿಪೂರಿ, ಮಸಾಲೆ ಪೂರಿ ಸವಿಯುವುದೇ ಒಂದು ಸಂತಸದ ವಿಷಯ. ಆದರೆ, ಗುಜರಾತ್‌ನ ವಡೋದರದಲ್ಲಿ ಪಾನಿಪೂರಿ ಮಾರಾಟವನ್ನು ನಿಷೇಧಿಸಲಾಗಿದೆ.

ಸ್ಥಳೀಯ ಜನರ ಹಿತದೃಷ್ಟಿಯಿಂದ ವಡೋದರಾದ ಮುನ್ಸಿಪಲ್ ಕಾರ್ಪೊರೇಷನ್ ಇಂತಹ ನಿರ್ಧಾರವನ್ನು ಕೈಗೊಂಡಿದೆ. ಪಾನಿಪೂರಿ, ಮಸಾಲೆ ಪೂರಿ ಮುಂತಾದವುಗಳ ಮಾರಾಟವನ್ನು ತಾತ್ಕಾಲಿಕವಾಗಿ ನಿಷೇಧಿಸಿದೆ.

ಅವೈಜ್ಞಾನಿಕವಾಗಿ, ಯಾವುದೇ ಶುಚಿತ್ವವಿಲ್ಲದೇ ಪಾನಿಪೂರಿ ತಯಾರು ಮಾಡಲಾಗುತ್ತಿತ್ತು. ಇದರಿಂದ ಜನರ ಆರೋಗ್ಯದ ಹದಗೆಡಲಿದೆ, ಆದ್ದರಿಂದ ಮಾರಾಟಕ್ಕೆ ತಡೆ ನೀಡಿದ್ದು, ಪಾನಿಪೂರಿ ತಯಾರಿಕಾ ಮಳಿಗೆಗಳ ಮೇಲೆ ದಾಳಿ ಮಾಡಲಾಗಿದೆ.

Vadodara bans sale of panipuri

ಮಳೆಗಾಲದ ಸಂದರ್ಭದಲ್ಲಿ ನೂರಾರು ಜನರು ಪಾನಿಪೂರಿ, ಮಸಾಲೆಪೂರಿ ಮುಂತಾದವುಗಳನ್ನು ಸವಿಯುತ್ತಿದ್ದರು. ಇದರಿಂದ ಜನರ ಆರೋಗ್ಯ ಹದಗೆಡುತ್ತಿತ್ತು. ಆದ್ದರಿಂದ ಪಾನಿಪೂರಿ ಮಾರಾಟಕ್ಕೆ ನಿಷೇಧ ಹೇರಲಾಗಿದೆ.

ವಡೋದರಾದ ಮುನ್ಸಿಪಲ್ ಕಾರ್ಪೊರೇಷನ್ ಆರೋಗ್ಯ ಘಟಕ ನಗರದ ವಿವಿಧ ಕಡೆ ದಾಳಿ ನಡೆಸಿದ್ದು, ಪಾನಿಪೂರಿ ತಯಾರು ಮಾಡುತ್ತಿದ್ದ ಕಚ್ಚಾ ವಸ್ತಗಳನ್ನು ನಾಶ ಪಡಿಸಿದೆ. ಹಲವು ಲೀಟರ್ ಪಾನಿಯನ್ನು ಚರಂಡಿಗೆ ಸುರಿದಿದೆ.

ಆರೋಗ್ಯ ಘಟಕದ ಅಧಿಕಾರಿಗಳು ಸುಮಾರು 4 ಸಾವಿರ ಕೆಜಿ ಪೂರಿ, 3500 ಕೆಜಿ ಆಲೂಗೆಡ್ಡೆಯನ್ನು ವಶಕ್ಕೆ ಪಡೆದುಕೊಂಡಿದೆ. ಮಳೆಗಾಲ ಮುಗಿಯುವ ತನಕ ಪಾನಿಪೂರಿ ಮಾರಾಟ ಮಾಡದಂತೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+