15- 18 ವಯಸ್ಸಿನವರಿಗೆ ಲಸಿಕೆ: CoWin ನೋಂದಣಿ ಇಂದಿನಿಂದ ಪ್ರಾರಂಭ
ನವದೆಹಲಿ, ಜನವರಿ 1: ದೇಶದ 15ರಿಂದ 18 ವರ್ಷ ವಯಸ್ಸಿನ ಮಕ್ಕಳಿಗೆ ಕೋವಿಡ್-19 ಲಸಿಕೆಗಾಗಿ ಕೋವಿನ್ (CoWin) ನೋಂದಣಿಯನ್ನು ಶನಿವಾರದಿಂದ ಪ್ರಾರಂಭಿಸಲು ಭಾರತ ಸರ್ಕಾರ ಸಿದ್ಧವಾಗಿದೆ.
ಜನವರಿ 3ರಂದು ಕೋವಿಡ್ -19 ವಿರುದ್ಧ ಡೋಸ್ ಪಡೆಯಲು ಪ್ರಾರಂಭಿಸುವ ಮಕ್ಕಳಿಗೆ ಲಸಿಕೆ ಹಾಕಲು ವಾಕ್-ಇನ್ ಮತ್ತು ಆನ್‌ಲೈನ್ ನೋಂದಣಿ ಎರಡೂ ಲಭ್ಯವಿರುತ್ತವೆ ಎಂದು ಸರ್ಕಾರ ತಿಳಿಸಿದೆ.
CoWin ನೋಂದಣಿಗಳು ಶನಿವಾರದಿಂದ ಪ್ರಾರಂಭವಾಲಿದ್ದು, ಆನ್‌ಸೈಟ್ ನೋಂದಣಿಯು ವ್ಯಾಕ್ಸಿನೇಷನ್ ದಿನದಿಂದ ಅಂದರೆ ಜನವರಿ 3ರಿಂದ ಪ್ರಾರಂಭವಾಗುತ್ತವೆ.

ಕೇಂದ್ರ ಸರ್ಕಾರದ ಮಾರ್ಗಸೂಚಿಗಳ ಪ್ರಕಾರ, ಜನವರಿ 1ರಿಂದ ಮಕ್ಕಳು ತಮ್ಮ ಐಡಿ ಕಾರ್ಡ್‌ಗಳನ್ನು ಬಳಸಿಕೊಂಡು CoWin ಅಪ್ಲಿಕೇಶನ್‌ನಲ್ಲಿ ಸ್ಲಾಟ್‌ಗಳನ್ನು ಬುಕ್ ಮಾಡಬಹುದಾಗಿದೆ.
ಆಧಾರ್ ಮತ್ತು ಇತರ ರಾಷ್ಟ್ರೀಯ ಗುರುತಿನ ಚೀಟಿಗಳಲ್ಲದೆ, ಮಕ್ಕಳು ತಮ್ಮ 10ನೇ ತರಗತಿಯ ಗುರುತಿನ ಚೀಟಿಯನ್ನು ನೋಂದಣಿಗಾಗಿ ಬಳಸಬಹುದು ಎಂದು ಕೋವಿನ್ ಪ್ಲಾಟ್‌ಫಾರ್ಮ್ ಮುಖ್ಯಸ್ಥ ಡಾ. ಆರ್.ಎಸ್. ಶರ್ಮಾ ಈ ಹಿಂದೆ ಹೇಳಿದ್ದರು.
ಇನ್ನು ಮಂಗಳವಾರದಂದು ಕೇಂದ್ರ ಆರೋಗ್ಯ ಕಾರ್ಯದರ್ಶಿ 15-18 ವಯೋಮಾನದವರಿಗೆ ವ್ಯಾಕ್ಸಿನೇಷನ್ ರೋಲ್‌ಔಟ್ ಅನ್ನು ಪರಿಶೀಲಿಸಲು ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳೊಂದಿಗೆ (ಯುಟಿ) ವಿಡಿಯೋ ಕಾನ್ಫರೆನ್ಸ್ ಮೂಲಕ ಕಾರ್ಯಾಗಾರದ ಅಧ್ಯಕ್ಷತೆ ವಹಿಸಿದ್ದರು.

ಅಲ್ಲದೇ ಮುನ್ನೆಚ್ಚರಿಕೆಯ ಕ್ರಮವಾಗಿ ದುರ್ಬಲ ವರ್ಗಗಳಿಗೆ, ಆರೋಗ್ಯ ಕಾರ್ಯಕರ್ತರಿ (HCW), ಮುಂಚೂಣಿ ಕೆಲಸಗಾರರಿಗೆ (FLW) ಮತ್ತು ಸಹ-ಅಸ್ವಸ್ಥತೆ ಹೊಂದಿರುವ 60 ವಯಸ್ಸಿನ ಮೇಲ್ಪಟ್ಟವರಿಗೆ ಮೂರನೇ ಡೋಸ್ ನೀಡುವಂತೆ ಸಲಹೆ ನೀಡಿದ್ದರು.
ಪ್ರಧಾನಿ ನರೇಂದ್ರ ಮೋದಿ ಡಿಸೆಂಬರ್ 25, 2021 ರಂದು ತಮ್ಮ ಭಾಷಣದಲ್ಲಿ 15-18 ವರ್ಷ ವಯಸ್ಸಿನ ಮಕ್ಕಳು ಜನವರಿ 3, 2022ರಿಂದ ಕೋವಿಡ್-19 ವಿರುದ್ಧ ಲಸಿಕೆಯನ್ನು ಪಡೆಯಲು ಪ್ರಾರಂಭಿಸುತ್ತಾರೆ ಮತ್ತು ಆರೋಗ್ಯ ಮತ್ತು ಮುಂಚೂಣಿಯ ಕಾರ್ಯಕರ್ತರು ಜನವರಿ 10ರಿಂದ ಮುನ್ನೆಚ್ಚರಿಕೆಯ ಪ್ರಮಾಣವನ್ನು (ಬೂಸ್ಟರ್ ಡೋಸ್) ಸ್ವೀಕರಿಸಲು ಪ್ರಾರಂಭಿಸುತ್ತಾರೆ ಎಂದು ಘೋಷಿಸಿದರು.
ಭಾರತ್ ಬಯೋಟೆಕ್‌ನ ಕೋವಾಕ್ಸಿನ್, 12ರಿಂದ 18 ವರ್ಷದೊಳಗಿನ ತುರ್ತು ಪರಿಸ್ಥಿತಿಯಲ್ಲಿ ನಿರ್ಬಂಧಿತ ಬಳಕೆಗಾಗಿ ಅನುಮೋದನೆಯನ್ನು ನೀಡಲಾಗಿದೆ, ಇದು ಮಕ್ಕಳಿಗೆ ಲಭ್ಯವಿರುವ ಏಕೈಕ ಲಸಿಕೆಯಾಗಿದೆ.
15-18 ವರ್ಷ ವಯಸ್ಸಿನ ಮಕ್ಕಳಿಗಾಗಿ ಪ್ರತ್ಯೇಕ ಮೀಸಲಾದ ಕೋವಿಡ್-19 ಲಸಿಕೆ ಕೇಂದ್ರಗಳನ್ನು ಸ್ಥಾಪಿಸಲು ಕೇಂದ್ರವು ರಾಜ್ಯಗಳಿಗೆ ಸಲಹೆ ನೀಡಿದೆ, ಆದರೆ ಪ್ರತ್ಯೇಕ ಲಸಿಕೆ ತಂಡ ಮತ್ತು ಎಲ್ಲಾ ಇತರ ಸಿವಿಸಿಗಳಲ್ಲಿ ಪ್ರತ್ಯೇಕ ಸರತಿ ಸಾಲುಗಳನ್ನು ನಿರ್ವಹಿಸಬೇಕಾಗುತ್ತದೆ.












Click it and Unblock the Notifications