ಉತ್ತರಾಖಂಡ: ತೀರ್ಥಯಾತ್ರೆ ಮುಗಿಸಿ ಬಂದವರು 'ಕಾಳಿ' ನದಿಪಾಲು: ಬೆಂಗಳೂರಿನ ಇಬ್ಬರು ಸೇರಿ 6 ಮಂದಿ ಸಾವು
ನವದೆಹಲಿ, ಅಕ್ಟೋಬರ್ 25: ತೀರ್ಥಯಾತ್ರೆ ಮುಗಿಸಿ ಮರಳಿ ಬರುತ್ತಿದ್ದ ವೇಳೆ ಟ್ಯಾಕ್ಸಿಯೊಂದು ಚಾಲಕನ ನಿಯಂತ್ರಣ ತಪ್ಪಿ ನದಿಗೆ ಉರುಳಿ ಬಿದ್ದು ಒಟ್ಟು ಆರು ಮಂದಿ ಪ್ರಾಣ ಬಿಟ್ಟ ಘಟನೆ ಉತ್ತರಾಖಂಡ ರಾಜ್ಯದಲ್ಲಿ ನಡೆದಿದೆ. ಈ ಘಟನೆಯಲ್ಲಿ ಮೃತಪಟ್ಟವರ ಪೈಕಿ ಇಬ್ಬರು ಬೆಂಗಳೂರಿನವರು ಎಂದು ತಿಳಿದು ಬಂದಿದೆ.
ಉತ್ತರಾಖಂಡದ ಪಿಧೋರಗಳ ಜಿಲ್ಲೆಯಲ್ಲಿ ನಿನ್ನೆ ಮಂಗಳವಾರ ಸಾಯಂಕಾಲ ಧಾರ್ತುಲಾ-ಲಿವುಲೇಗ್ ರಸ್ತೆಯಲ್ಲಿ ಬರುತ್ತಿದ್ದ ಟ್ಯಾಕ್ಸಿಯೊಂದು ಊಮ್ಮದ್ ಬಳಿ ಕಾಳಿ ನದಿಗೆ ಬಿದ್ದಿದೆ. ಇವರೆಲ್ಲ ಯಾತ್ರಿಕರಾಗಿದ್ದು, ಆದಿ ಕೈಲಾಸದಿಂದ ತೀರ್ಥಯಾತ್ರೆ ಮುಗಿಸಿ ಮರಳುತ್ತಿದ್ದರು. ಈ ವೇಳೆ ಅವಘಡ ನಡೆದಿದೆ ಎಂದು ಸ್ಥಳೀಯ ಪೊಲೀಸರು ತಿಳಿಸಿದ್ದಾರೆ.

ಯಾತ್ರಿಕರು ಹಿಂತಿರುವಾಗ ಕತ್ತಲೆ ಮತ್ತು ಉತ್ತಮವಾದುದಲ್ಲದ ರಸ್ತೆಯ ಕಾರಣದಿಂದ ಇಂತದ್ದೊಂದು ಸಮಸ್ಯೆ ಉಂಟಾಗಿದೆ. ಸದ್ಯ ನದಿಯಲ್ಲಿನ ಶವಗಳ ಹೊರತೆಗೆಯುವಿಕೆ ನಡೆದಿದೆ ಎಂದು ಪಿಧೋರಗರ ಪೊಲೀಸ್ ವರಧಿಕಾರಿ ಲೋಕೇಶ್ವರ್ ಸಿಂಗ್ ತಿಳಿಸಿದ್ದಾರೆ. ಬುಧವಾರ ಬೆಳಗ್ಗೆಯಿಂದ ಮೃತದೇಹಗಳನ್ನು ಹೊರತೆಗೆಯುವ ಕಾರ್ಯ ಆರಂಭವಾಯಿತು.
धारचूला-लिपुलेख सड़क मार्ग पर लखनपुर के समीप दुर्भाग्यपूर्ण सड़क दुर्घटना में यात्रियों के हताहत होने का अत्यंत दु:खद समाचार प्राप्त हुआ।
— Pushkar Singh Dhami (@pushkardhami) October 24, 2023
ईश्वर से प्रार्थना है कि दिवंगत आत्माओं को अपने श्रीचरणों में स्थान एवं शोक संतप्त परिजनों को यह असीम कष्ट सहन करने की शक्ति प्रदान करें।
ॐ…
ಈ ಮೃತ ಯಾತ್ರಿಕರು ಛಾರ್ಯುಲಾ-ಲಿವುಲೇಖ್ ರಸ್ತೆಯಲ್ಲಿ ಕೈಲಾಸ ದರ್ಶನ ಮುಗಿಸಿ ಮರಳುತ್ತಿದ್ದಾಗ ಈ ಭೀಕರ ಘಟನೆ ನಡೆದಿದೆ. ಮೃತರದಲ್ಲಿ ಇಬ್ಬರು ಬೆಂಗಳೂರು ಮೂಲದವರಾಗಿದ್ದಾರೆ. ತೆಲಂಗಾಣದ ಇಬ್ಬರು ಮತ್ತು ಉತ್ತರಾಖಂಡದ ಇಬ್ಬರು ಸೇರಿದಂತೆ ವಿವಿಧ ಸ್ಥಳಗಳಿಂದ ಬಂದವರಾಗಿದ್ದಾರೆ ಎಂದು ಪಿಯೋರಗಡ್ ಫಿಲಿಸ್ ಅಧೀಕ್ಷಕ ಲೋಕೇಶ್ವರ್ ಸಿಂಗ್ ಮಾಹಿತಿ ನೀಡಿದ್ದಾರೆ.
ಈ ಅಪಘಾತದಲ್ಲಿ ಸಾವೀಗಿಡಾದವರಿಗೆ ಉತ್ತರಾಖಂಡದ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಅವರು ತೀವ್ರ ಸಂತಾಪ ವ್ಯಕ್ತವಡಿಸಿದ್ದಾರೆ.












Click it and Unblock the Notifications