Get Updates
Get notified of breaking news, exclusive insights, and must-see stories!

ಉತ್ತರಾಖಂಡ್ ಅಸೆಂಬ್ಲಿ ಕಣದಲ್ಲಿ 200 ಮಂದಿ ಕೋಟ್ಯಧಿಪತಿಗಳು

ಉತ್ತರಾಖಂಡ್ ನಲ್ಲಿ ವಿಧಾನಸಭಾ ಚುನಾವಣೆ ಬಿಸಿ ದಿನೇ ದಿನೇ ಕಾವೇರುತ್ತಿದೆ. 2017ರ ಅಸೆಂಬ್ಲಿ ಕದನದಲ್ಲಿರುವ ಅಭ್ಯರ್ಥಿಗಳ ಆಸ್ತಿ ವಿವರ ಬಹಿರಂಗವಾಗಿದ್ದು, ಸರಿ ಸುಮಾರು 200ಕ್ಕೂ ಅಧಿಕ ಕೋಟ್ಯಧಿಪತಿಗಳು ಕಣದಲ್ಲಿದ್ದಾರೆ.

ಡೆಹ್ರಾಡೂನ್, ಫೆಬ್ರವರಿ 06: ಉತ್ತರಾಖಂಡ್ ನಲ್ಲಿ ವಿಧಾನಸಭಾ ಚುನಾವಣೆ ಬಿಸಿ ದಿನೇ ದಿನೇ ಕಾವೇರುತ್ತಿದೆ. 2017ರ ಅಸೆಂಬ್ಲಿ ಕದನದಲ್ಲಿರುವ ಅಭ್ಯರ್ಥಿಗಳ ಆಸ್ತಿ ವಿವರ ಬಹಿರಂಗವಾಗಿದ್ದು, ಸರಿ ಸುಮಾರು 200ಕ್ಕೂ ಅಧಿಕ ಕೋಟ್ಯಧಿಪತಿಗಳು ಕಣದಲ್ಲಿದ್ದಾರೆ. 91 ಮಂದಿ ಅಭ್ಯರ್ಥಿಗಳು ಕ್ರಿಮಿನಲ್ ಹಿನ್ನಲೆಯುಳ್ಳವರಾಗಿದ್ದಾರೆ ಎಂದು ಅಸೋಸಿಯೇಷನ್ ಫಾರ್ ಡೆಮೊಕ್ರಾಟಿಕ್ ರಿಫಾರ್ಮ್ ವರದಿ ಮಾಡಿದೆ.

ಕ್ರಿಮಿನಲ್ ಹಿನ್ನೆಲೆಯುಳ್ಳ ಅಭ್ಯರ್ಥಿಗಳು: ಒಟ್ಟಾರೆ 637 ಅಭ್ಯರ್ಥಿಗಳು ಕಣದಲ್ಲಿದ್ದು, ಈ ಪೈಕಿ 91 ಅಭ್ಯರ್ಥಿಗಳು ತಮ್ಮ ಮೇಲೆ ಕ್ರಿಮಿನಲ್ ಕೇಸ್ ಇದೆ ಎಂದು ಘೋಷಿಸಿಕೊಂಡಿದ್ದಾರೆ.

ತೀವ್ರವಾದ ಕ್ರಿಮಿನಲ್ ಕೇಸ್ : 54 ಮಂದಿ ಅಭ್ಯರ್ಥಿಗಳು ತಮ್ಮ ಮೇಲೆ ತೀವ್ರತರವಾದ ಆರೋಪಗಳು ಕೇಳಿ ಬಂದಿದ್ದು, ಕ್ರಿಮಿನಲ್ ಕೇಸ್ ಗಳು ಜಾರಿಯಲ್ಲಿವೆ ಎಂದಿದ್ದಾರೆ.

ಮರ್ಡರ್ ಕೇಸ್ : ಒಟ್ಟು 5 ಅಭ್ಯರ್ಥಿಗಳ ಮೇಲೆ ಕೊಲೆ ಹಾಗೂ ಕೊಲೆ ಯತ್ನದ ಕೇಸ್ ದಾಖಲಾಗಿದೆ.

Uttarakhand elections: 200 crorepaties in the fray

ಮಹಿಳೆಯವರ ವಿರುದ್ಧ ಹಲ್ಲೆ ಪ್ರಕರಣ : ಮಹಿಳೆ ಮೇಲೆ ಹಲ್ಲೆ ಸೇರಿದಂತೆ ದೌರ್ಜನ್ಯ ಎಸಗಿದ ಪ್ರಕರಣಗಳಲ್ಲಿ ಆರೋಪ ಹೊತ್ತಿರುವ 5 ಅಭ್ಯರ್ಥಿಗಳು ಕಣದಲ್ಲಿದ್ದಾರೆ.

ಪಕ್ಷವಾರು ಕ್ರಿಮಿನಲ್ ಹಿನ್ನಲೆ: ಭಾರತೀಯ ಜನತಾ ಪಕ್ಷದ 70 ಮಂದಿ ಅಭ್ಯರ್ಥಿಗಳ ಪೈಕಿ 19 ಮಂದಿ ಮೇಲೆ ಕ್ರಿಮಿನಲ್ ಕೇಸ್ ಗಳಿವೆ. ಕಾಂಗ್ರೆಸ್ಸಿನಲ್ಲಿ 7 ಹಾಗೂ ಬಿಎಸ್ ಪಿಯಲ್ಲಿ 4 ಮಂದಿ ಅಭ್ಯರ್ಥಿಗಳಿದ್ದಾರೆ.

* 637 ಅಭ್ಯರ್ಥಿಗಳ ವಿವರ ವಿಶ್ಲೇಷಿಸಿದಾಗ 200ಕ್ಕೂ ಅಧಿಕ ಕೋಟ್ಯಧಿಪತಿಗಳು ಕಂಡು ಬಂದಿದ್ದಾರೆ.
* ಕಾಂಗ್ರೆಸ್ಸಿನಲ್ಲಿ 70 ಅಭ್ಯರ್ಥಿಗಳ ಪೈಕಿ 52 ಮಂದಿ ಕೋಟ್ಯಧಿಪತಿಗಳಿದ್ದಾರೆ. ಬಿಜೆಪಿಯಲ್ಲಿ 70 ರಲ್ಲಿ 48 ಅಭ್ಯರ್ಥಿಗಳು, ಬಿಎಸ್ ಪಿಯ 69 ಅಭ್ಯರ್ಥಿಗಳ ಪೈಕಿ 19 ಮಂದಿ ಅಭ್ಯರ್ಥಿಗಳು 1 ಕೋಟಿ ರು ಗೂ ಅಧಿಕ ಆಸ್ತಿ ಘೋಷಿಸಿದ್ದಾರೆ.
* ಪಕ್ಷಾವರು ಸರಾಸರಿ ಆಸ್ತಿ ಮೊತ್ತದಲ್ಲಿ ಬಿಜೆಪಿ 4.20 ಕೋಟಿ ರು, ಕಾಂಗ್ರೆಸ್ 3.08 ಕೋಟಿ ಹಾಗೂ ಬಿಎಸ್ ಪಿ 1.55 ಕೋಟಿ ರು ನಷ್ಟಿದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+