ಉತ್ತರ ಪ್ರದೇಶ: ಗಂಗಾ ನದಿಯಲ್ಲಿ ಕೊಚ್ಚಿ ಹೋದ ಆರು ಬಾಲಕರು
ಕಾನ್ಪುರ, ಜುಲೈ 9: ಗಂಗಾ ನದಿಯ ನೀರಿನಲ್ಲಿ ಉತ್ತರ ಪ್ರದೇಶದ ಕಾನ್ಪುರದಲ್ಲಿ ಆರು ಮಕ್ಕಳು ಕೊಚ್ಚಿ ಹೋದ ಘಟನೆ ಭಾನುವಾರ ನಡೆದಿದೆ.
ಇದುವರೆಗೂ ಮೂರು ಮಕ್ಕಳ ಮೃತದೇಹಗಳು ಪತ್ತೆಯಾಗಿದ್ದು, ಉಳಿದ ಮೂರು ಶವಗಳ ಪತ್ತೆಗೆ ಹುಡುಕಾಟ ನಡೆದಿದೆ.
ರಕ್ಷಣಾ ಕಾರ್ಯಾಚರಣೆಯನ್ನು ಮುಂದುವರಿಸಲಾಗಿದೆ.
ಆರು ಮಕ್ಕಳು ನೀರಿನಲ್ಲಿ ಮುಳುಗಿ ಕೊಚ್ಚಿ ಹೋಗಿದ್ದಾರೆ. ನಾವು ಮೂವರ ಶವಗಳನ್ನು ಪತ್ತೆಹಚ್ಚುವಲ್ಲಿ ಯಶಸ್ವಿಯಾಗಿದ್ದೇವೆ. ಇನ್ನು ಉಳಿದ ಮೂವರ ಪತ್ತೆಗೆ ಕಾರ್ಯಾಚರಣೆಯನ್ನು ಮುಂದುವರಿಸಲಾಗಿದೆ.

ಕಾರ್ಯಾಚರಣೆ ಸಾಕಷ್ಟು ಬೋಟ್‌ಗಳು, ನುರಿತ ಈಜುಗಾರರು ಮತ್ತು ಬಲೆಗಳು ಲಭ್ಯವಾಗಿವೆ ಎಂದು ಕರ್ನಲ್‌ಗಂಜ್‌ನ ವೃತ್ತ ಅಧಿಕಾರಿ ಮನೋಜ್ ಗುಪ್ತಾ ತಿಳಿಸಿದ್ದಾರೆ.
ಭಾನುವಾರ ಮಧ್ಯಾಹ್ನದ ವೇಳೆಗೆ 10-12 ವರ್ಷದ ಬಾಲಕರು ಗಂಗಾ ನದಿಯಲ್ಲಿ ಸ್ನಾನಕ್ಕೆ ತೆರಳಿದ್ದರು. ಆದರೆ, ನೀರಿನ ಸೆಳೆತಕ್ಕೆ ಸಿಲುಕಿ ಅವರು ಕೊಚ್ಚಿಕೊಂಡು ಹೋಗಿದ್ದರು. ಇದನ್ನು ಕಂಡ ಸ್ಥಳೀಯರು ಪೊಲೀಸರು ಹಾಗೂ ಈಜುಗಾರರಿಗೆ ಮಾಹಿತಿ ನೀಡಿದ್ದರು.
ಪತ್ತೆಯಾದ ಮೂರು ಶವಗಳನ್ನು ಕಾನ್ಪುರದ ಹಾಲ್ಲೆಟ್ ಆಸ್ಪತ್ರೆಗೆ ರವಾನಿಸಲಾಗಿದೆ.












Click it and Unblock the Notifications