ಒಂದೇ ಸಿರಿಂಜು ಚುಚ್ಚಿ, ಹಲವರಿಗೆ HIV ತಗುಲಿಸಿದ ನಕಲಿ ವೈದ್ಯ
ಉನ್ನಾವ್(ಉತ್ತರ ಪ್ರದೇಶ), ಫೆಬ್ರವರಿ 6: ಉತ್ತರ ಪ್ರದೇಶದ ಉನ್ನಾವ್ ಎಂಬಲ್ಲಿ ಕನಿಷ್ಠ 21 ಕ್ಕೂ ಹೆಚ್ಚು ಜನ ಎಚ್ ಐವಿ ಪಾಸಿಟಿವ್ ಎಂಬುದು ಪತ್ತೆಯಾಗಿದ್ದು, ಆತಂಕ ಸೃಷ್ಟಿಸಿದೆ.
ನಕಲಿ ವೈದ್ಯನೊಬ್ಬ ಒಂದೇ ಸಿರಿಂಜಿನಲ್ಲಿ ಹಲವಾರು ಜನರಿಗೆ ಚುಚ್ಚುಮದ್ದು ನೀಡಿದ ಪರಿಣಾಮ ಈ ಅನಾಹುತ ಸಂಭವಿಸಿದೆ ಎಂಬ ಮಾಹಿತಿ ಲಭ್ಯವಾಗಿದೆ.
ಇದು ಅಂದಾಜು ಪ್ರಮಾಣವಷ್ಟೇ, ಸರಿಯಾಗಿ ಪತ್ತೆ ಮಾಡಿದರೆ ಕನಿಷ್ಠ 500 ಕ್ಕೂ ಹೆಚ್ಚು ಜನ ಈ ಸೋಂಕಿಗೆ ತುತ್ತಾಗಿರಬಹುದು ಎಂಬ ಆತಂಕಕಾರಿ ಸಂಗತಿಯನ್ನೂ ಈ ಪ್ರದೇಶದ ಕೌನ್ಸಿಲರ್ ಸುನಿಲ್ ಬಂಗಾರಮೌ ತಿಳಿಸಿದ್ದಾರೆ.

ಈ ಭಾಗಕ್ಕೆ ಹೆಚ್ಚಾಗಿ ಆಗಿಸುವ ಲಾರಿ ಡ್ರೈವರ್ ಗಳಿಗೆ ಹೆಚ್ಚಿನ ಪ್ರಮಾಣದಲ್ಲಿ ಸೋಂಕು ತಗುಲಿರು ಸಾಧ್ಯತೆ ಇದೆ ಎನ್ನಲಾಗಿದೆ. ಜನರಲ್ಲಿ ಆರೋಗ್ಯದ ಬಗ್ಗೆ ಕಾಳಜಿ ಇರಬೇಕು. ಯಾವುದೇ ವೈದ್ಯರು ಒಂದೇ ಸಿರಿಂಜ್ ಅನ್ನು ಮತ್ತೊಮ್ಮೆ ಬಳಸಿದರೆ ಅದನ್ನು ತಕ್ಷಣ ವಿರೋಧಿಸಿ ಹೊಸ ಸಿರಿಂಜು ಬಳಸುವಂತೆ ಹೇಳಬೇಕು. ಇಲ್ಲವಾದಲ್ಲಿ ಇಂಥ ದುರಂತ ಸಂಭವಿಸುತ್ತದೆ ಎಂದು ಅವರು ಹೇಳಿದ್ದಾರೆ.











Click it and Unblock the Notifications