UP Fire Crackers Erupts: ಹಬ್ಬದ ಸಡಗರದಲ್ಲಿ ಯುಪಿಯಲ್ಲಿ ಪಟಾಕಿ ದುರಂತ, ಆಗಿದ್ದೇನು?

ನವದೆಹಲಿ, ನವೆಂಬರ್, 12: ದೇಶವು ದೀಪಾವಳಿ ಹಬ್ಬದ ಸಂಭ್ರಮದಲ್ಲಿದ್ದಾಗ ಉತ್ತರ ಪ್ರದೇಶದ ಮಥುರಾ ನಗರದ ಹೊರವಲಯದ ಗೋಪಾಲಬಾಗ್ ಪ್ರದೇಶದಲ್ಲಿದ್ದ ಪಟಾಕಿ ಅಂಗಡಿಯಲ್ಲಿ ಭಾರೀ ಅಗ್ನಿ ಅವಘಡ ಸಂಭವಿಸಿದೆ. ಸುಮಾರು 9 ಮಂದಿಗೆ ಗಂಭೀರ ಗಾಯಗಳಾಗಿವೆ.

ಗೋಪಾಲಬಾಗ್ ಪ್ರದೇಶದಲ್ಲಿ ಪಟಾಕಿ ಮಾರಾಟ ಮಾಡುವಾಗ ಭಾನುವಾರ ಬೆಂಕಿ ದುರಂತ ಸಂಭವಿಸಿದೆ. ಮೊದಲು ಒಂದೇ ಪಟಾಕಿ ಅಂಗಡಿಗೆ ತಗುಲಿದ್ದ ಬೆಂಕಿ ನೋಡ ನೋಡುತ್ತಿದ್ದಂತೆ ಏಳು ಮಳಿಗೆಗಳಿಗೆ ವ್ಯಾಪಿಸಿದೆ. ಈ ವೇಳೆ ಪಟಾಕಿ ಮಾರಾಟದಲ್ಲಿ ತೊಡಗಿದ್ದವರ ಪೈಕಿ ಒಟ್ಟು ಒಂಬತ್ತು ಮಂದಿಗೆ ಸುಟ್ಟ ಗಾಯಗಳಾಗಿವೆ ಎಂದು ಸ್ಥಳೀಯ ಪೊಲೀಸರು ತಿಳಿಸಿದ್ದಾರೆ.

Uttar Pradesh Fire Cracker Accident: 9 Injured After Fire Extended to 7 Firecrackers Shops.

ದೀಪಾಳಿ ಹಿನ್ನೆಲೆಯಲ್ಲಿ ಇಲ್ಲಿನ ಗೋಪಾಲಬಾಗ್ ಪ್ರದೇಶದಲ್ಲಿ ಪರಿಣಿತರನ್ನು ಹೊಂದಿದ್ದ ಏಳು ಅಂಗಡಿಗಳ ಪಟಾಕಿ ಮಾರಾಟ ಮಾಡುತ್ತಿದ್ದರು. ಇದೇ ವೇಳೆ ಸಂಜೆ ದಿಢೀರ್‌ನೆ ಬೆಂಕಿ ಹೊತ್ತಿಕೊಂಡಿದೆ. ಈ ಘಟನೆಯಲ್ಲಿ ಒಂಬತ್ತು ಜನರಿಗೆ ಸುಟ್ಟ ಗಾಯಗಳಾಗಿವೆ. ಪ್ರಾಥಮಿಕ ತನಿಖೆ ಪ್ರಕಾರ ವಿದ್ಯುತ್ ಶಾರ್ಟ್ ಸರ್ಕ್ಯೂಟ್‌ನಿಂದ ಬೆಂಕಿ ಹೊತ್ತಿಕೊಂಡಿದೆ ಎನ್ನಲಾಗಿದೆ ಎಂದು ರಾಯಾ ಪೊಲೀಸ್ ಠಾಣೆಯ SHO ಅಜಯ್ ಕಿಶೋರ್ ತಿಳಿಸಿದ್ದಾರೆ.

ಅಗ್ನಿಶಾಮಕ ಸಿಬ್ಬಂದಿಗೂ ಗಾಯ
ಮುಂಜಾಗೃತ ದೃಷ್ಟಿಯಿಂದ ಮಾರುಕಟ್ಟೆಯಲ್ಲಿ ಅಗ್ನಿಶಾಮಕ ದಳ ಸಿಬ್ಬಂದಿ ನಿಯೋಜಿಸಲಾಗಿತ್ತು. ಬೆಂಕಿ ಅವಘಡ ಸಂಭವಿಸುತ್ತಿದ್ದಂತೆ ಅಗ್ನಿಶಾಮಕದ ಚಂದ್ರಶೇಖರ್ ಅವರ ಸಹ ಅಂಗಡಿಗಳಿಗೆ ಹತ್ತಿದ್ದ ಬೆಂಕಿ ನಂದಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ಮಳಿಗೆಯಲ್ಲಿದ್ದ ಜನರನ್ನು ರಕ್ಷಿಸುವ ವೇಳೆ ಅವರಿಗೂ ಸಹ ಸುಟ್ಟ ಗಾಯಗಳಾಗಿವೆ.

Uttar Pradesh Fire Cracker Accident: 9 Injured After Fire Extended to 7 Firecrackers Shops.

ಈ ಪಟಾಖಿ ದುರಂತದಲ್ಲಿ ಏಳು ಅಂಗಡಿಗಳು ಅಧಿಕ ಹಾನಿ ಆಗಿದೆ. ಈ ಅಂಡಿ ಮಾಲೀಕರು ಪಟಾಕಿ ರಕ್ಷಿಸಿಕೊಳ್ಳಲು ಹೋಗಿ ಅವರು ಸಹ ಗಾಯಗೊಂಡ ಘಟನೆ ನಡೆದಿದೆ. ಅಗ್ನಿಶಾಮಕ ಚಂದ್ರಶೇಖರ್ ಜೊತೆಗೆ ಮತ್ತೊಬ್ಬ ಸಿಬ್ಬಂದಿ ಸಹ ಗಾಯಗೊಂಡಿದ್ದಾರೆ ಎಂದು ಪೊಲೀಸರು ಹೇಳಿದರು.

ವಿವಿಧ ಆಯಾಮಗದಲ್ಲಿ ಪೊಲೀಸ್ ತನಿಖೆ
ಬೆಂಕಿಗೆ ಆಹುತಿಯಾದ ಈ ಮಳಿಗೆಗಳು ಪಟಾಕಿಗಳನ್ನು ಮಾರಾಟ ಮಾಡಲು ಪರವಾನಗಿ ಪಡೆದಿವೆ. ಸರ್ಕಾರದ ಮಾರ್ಗಸೂಚಿಯಂತೆ ಹೊರವಲಯದಲ್ಲಿ ಮಾರಾಟ ನಡೆಸುತ್ತಿದ್ದವು. ಸದ್ಯ ಗಾಯಗೊಂಡ ಎಲ್ಲರು ಹತ್ತಿರದ ಆಸ್ಪತ್ರೆಗಳಲ್ಲಿ ವೈದ್ಯಕೀಯ ಚಿಕಿತ್ಸೆ ಪಡೆಯುತ್ತಿದ್ದಾರೆ. ಇನ್ನೂ ಪೊಲೀಸರು ಬೆಂಕಿಗೆ ಕೇವಲ ಶಾರ್ಟ್ ಸರ್ಕೂಟ್ ಒಂದೇ ಕಾರಣವಾ ಅಥವಾ ಬೇರೆ ಯಾರಾದರೂ ದುರದ್ದೇಶದಿಂದ ಹೀಗೆ ಮಾಡಿದರಾ ಎಂಬ ಆಯಾಮದಲ್ಲೂ ತನಿಖೆ ನಡೆಸುತ್ತಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+