ಹತ್ಯೆಯಾಗಿದ್ದವರ ಕುಟುಂಬಕ್ಕೆ 4 ಫ್ಲಾಟ್ ನೀಡಿದ ಸರ್ಕಾರ
ನವದೆಹಲಿ, ಜನವರಿ, 09: ಉತ್ತರ ಪ್ರದೇಶದ ದಾದ್ರಿಯಲ್ಲಿ ಗೋಮಾಂಸ ಸಂಗ್ರಹ ಆರೋಪದದಲ್ಲಿ ಹಿಂದೂ ಪರ ಸಂಘಟನೆಗಳಿಂದ ಹಲ್ಲೆಗೆ ಒಳಗಾಗಿ ಸಾವನ್ನಪ್ಪಿದ್ದ ಅಖ್ಲಾಕ್ ಕುಟುಂಬಕ್ಕೆ ಉತ್ತರ ಪ್ರದೇಶ ಸರ್ಕಾರ ಗ್ರೇಟರ್ ನೋಯ್ಡಾದಲ್ಲಿ ನಾಲ್ಕು ಫ್ಲಾಟ್ ಗಳನ್ನು ಪರಿಹಾರಾರ್ಥವಾಗಿ ನೀಡಿದೆ.
ಉತ್ತರ ಪ್ರದೇಶ ಸರ್ಕಾರ ಹಿಂದೆ ನೀಡಿದ್ದ ಭರವಸೆಯಂತೆ ನಾಲ್ಕು ಫ್ಲಾಟ್ ಗಳನ್ನು ಮೃತ ಅಖ್ಲಾಕ್ ಪತ್ನಿ ಇಕ್ರಮಾನ್ ಮತ್ತು ಪುತ್ರರಾದ ಜಾನಾ ಮೊಹಮದ್, ಅಫ್ಜಲ್ ಅಹ್ಮದ್ ಮತ್ತು ಜಮೀಲ್ ಅಹ್ಮದ್ ಅವರ ಹೆಸರಿಗೆ ಗ್ರೇಟರ್ ನೋಯ್ಡಾ ಪ್ರಾಧಿಕಾರ ನೋಂದಣಿ ಮಾಡಿಸಿ ನೀಡಿದೆ.[ದನದ ಮಾಂಸದ ಸುತ್ತ ನಾರುತ್ತಿರುವ ರಾಜಕೀಯ ದುರ್ಮಾಂಸ]

ಮುಖ್ಯಮಂತ್ರಿಯವರ ವಿವೇಚನಾ ನಿಧಿಯಿಂದ ಈ ಫ್ಲಾಟ್ ಗಳನ್ನು ನೀಡಲಾಗಿದೆ. ಒಂದು ಫ್ಲಾಟ್ ನ ಬೆಲೆ 20 ರಿಂದ 24 ಲಕ್ಷ ರು . ಆಗುತ್ತಯದೆ. ಪ್ರತಿ ಫ್ಲಾಟ್ ಗೆ ಅಖ್ಲಾಕ್ ಕುಟುಂಬ 9.5 ಲಕ್ಷ ರು. ಪಾವತಿಸಿದೆ.
ಕಳೆದ ಸೆಪ್ಟಂಬರ್ ನಲ್ಲಿ ಉತ್ತರ ಪ್ರದೇಶದ ದಾದ್ರಿಯಲ್ಲಿ ಗೋಮಾಂಸ ಸಂಗ್ರಹಿಸಿದ್ದಾರೆಂಬ ಆರೋಪದ ಮೇಲೆ ಮೊಹಮದ್ ಅಖ್ಲಾಕ್ ಎಂಬುವರ ಮೇಲೆ ಹಲ್ಲೆ ಮಾಡಿದ್ದು ದೇಶದಲ್ಲಿ ವಿವಾದ ಎಬ್ಬಿಸಿತ್ತು. ಇದಾದ ನಂತರ ಅಸಹಿಷ್ಣುತೆ ಕೂಗು ಸಹ ಕೇಳಿ ಬಂದಿತ್ತು.












Click it and Unblock the Notifications