ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಉತ್ತರಪ್ರದೇಶದಲ್ಲಿ ಯಾವ ಎಕ್ಸಿಟ್ ಪೋಲ್ ಆಟ ನಡೆಯಲ್ಲ ಏಕೆ?

ಉತ್ತರಪ್ರದೇಶದಲ್ಲಿ ಚುನಾವಣೆ ಪೂರ್ವ ಅಥವಾ ಎಕ್ಸಿಟ್ ಪೋಲ್ ಸಮೀಕ್ಷೆ ನೀಡುವುದು ಯಾವುದೆ ಸಂಸ್ಥೆಗೂ ಕಬ್ಬಿಣದ ಕಡಲೆಯಂತೆ.ಯಾವ ಸಂಸ್ಥೆಯ ಎಕ್ಸಿಟ್ ಪೋಲ್ ಬಂದರೂ ಅಂತಿಮ ಫಲಿತಾಂಶ ಎಂದಿಗೂ ಉಲ್ಟಾ ಏಕೆ?

By Mahesh
|
Google Oneindia Kannada News

ಬೆಂಗಳೂರು, ಮಾರ್ಚ್ 09: ಉತ್ತರಪ್ರದೇಶದಲ್ಲಿ ಚುನಾವಣೆ ಪೂರ್ವ ಅಥವಾ ಎಕ್ಸಿಟ್ ಪೋಲ್ ಸಮೀಕ್ಷೆ ನೀಡುವುದು ಯಾವುದೆ ಸಂಸ್ಥೆಗೂ ಕಬ್ಬಿಣದ ಕಡಲೆಯಂತೆ.ಯಾವ ಸಂಸ್ಥೆಯ ಎಕ್ಸಿಟ್ ಪೋಲ್ ಬಂದರೂ ಅಂತಿಮ ಫಲಿತಾಂಶ ಎಂದಿಗೂ ಉಲ್ಟಾ ಏಕೆ? ಉತ್ತರಪ್ರದೇಶದಲ್ಲಿ ಸಮೀಕ್ಷೆ ಅಷ್ಟು ಕಷ್ಟ ಏಕೆ? ಪದೇ ಪದೇ ಸಮೀಕ್ಷಾ ಸಂಸ್ಥೆಗಳು ಸೋಲುತ್ತಿರುವುದೇಕೆ? ಇಲ್ಲಿದೆ ವಿಶ್ಲೇಷಣೆ..

ಚುನಾವಣೋತ್ತರ ಸಮೀಕ್ಷೆ ಫಲಿತಾಂಶ ಯಾವತ್ತಿಗೂ ಕುತೂಹಲಕಾರಿಯಾಗಿರುತ್ತದೆ. ಎಲ್ಲಿ ಯಾವ ಪಕ್ಷ ಅಧಿಕಾರಕ್ಕೆ ಬರಲಿದೆ ಎಂಬ ಭವಿಷ್ಯ ತಿಳಿಯುವ ನಿರೀಕ್ಷೆ ಎಲ್ಲರಲ್ಲೂ ಇದ್ದೇ ಇರುತ್ತದೆ. ಕೆಲವೊಮ್ಮೆ ಎಕ್ಸಿಟ್ ಪೋಲ್ ಬಂಪರ್ ಫಲಿತಾಂಶ ನೀಡಿದರೆ, ಮತ್ತೊಮ್ಮೆ ಸಂಪೂರ್ಣ ವ್ಯತಿರಿಕ್ತ ರಿಸಲ್ಟ್ ನೀಡುತ್ತದೆ.[ಇಲ್ಲಿ ತನಕದ ಎಕ್ಸಿಟ್ ಪೋಲ್ ಸ್ಥಿತಿ ಗತಿ]

ಉತ್ತರಪ್ರದೇಶದ 403 ಅಸೆಂಬ್ಲಿ ಸ್ಥಾನಕ್ಕಾಗಿ ಏಳು ಹಂತದಲ್ಲಿ ಮತದಾನ ಆರಂಭಗೊಳ್ಳುವುದಕ್ಕೂ ಮುನ್ನ ಬಂದ ಚುನಾವಣಾ ಪೂರ್ವ ಸಮೀಕ್ಷೆಯಲ್ಲಿ ಬಿಜೆಪಿಗೆ ಮುನ್ನಡೆ, ಸಮಾಜವಾದಿ ಪಕ್ಷಕ್ಕೆ ಎರಡನೆ ಸ್ಥಾನ, ಬಹುಜನ ಸಮಾಜ ವಾದಿ ಪಕ್ಷಕ್ಕೆ ಮೂರನೇ ಸ್ಥಾನ ಎಂದು ಹೇಳಲಾಯಿತು.

2012ರಲ್ಲಿ ಹೆಡ್ ಲೈನ್ಸ್ ಟುಡೇ ನೀಡಿದ ಸಮೀಕ್ಷೆ ಬಿಟ್ಟರೆ ಇಲ್ಲಿ ತನಕ ಸಮೀಕ್ಷೆಗಳೆಲ್ಲವೂ ಉತ್ತರಪ್ರದೇಶದಲ್ಲಿ ಕೊಚ್ಚಿ ಹೋಗಿವೆ. 2012ರಲ್ಲಿ ಎಸ್ ಪಿಗೆ 195 ರಿಂದ 210 ಸ್ಥಾನ ನಿರೀಕ್ಷಿಸಲಾಗಿತ್ತು. 224 ಸ್ಥಾನ ಪಡೆದು ಸಮೀಕ್ಷೆಗೆ ಬೆಲೆ ತಂದಿತ್ತು. 2017ರ ಎಕ್ಸಿಟ್ ಪೋಲ್ ನಲ್ಲಿ ಬಿಜೆಪಿಗೆ ಮುನ್ನಡೆ ಇದ್ದರೂ ಅತಂತ್ರ ಅಸೆಂಬ್ಲಿಯ ಸೂಚನೆ ಸಿಗುತ್ತಿದೆ..

ಹೆಚ್ಚು ಹೆಚ್ಚು ಪಕ್ಷಗಳ ಪೈಪೋಟಿ

ಹೆಚ್ಚು ಹೆಚ್ಚು ಪಕ್ಷಗಳ ಪೈಪೋಟಿ

ಎಕ್ಸಿಟ್ ಪೋಲ್ ಗಳ ಭವಿಷ್ಯ ನಿಖರವಾಗಲು ಎರಡು ಪಕ್ಷಗಳ ದೇಶಗಳಲ್ಲಿ ಮಾತ್ರ ಸಾಧ್ಯ. ಅಮೆರಿಕದಲ್ಲಿ ಇದಕ್ಕೆ ಹೆಚ್ಚಿನ ಮಾನ್ಯತೆ ಸಿಕ್ಕಿದೆ. ಆದರೆ ಉತ್ತರಪ್ರದೇಶದಲ್ಲಿ, ಎಸ್ ಪಿ, ಬಿಜೆಪಿ, ಬಿಎಸ್ ಪಿ, ಕಾಂಗ್ರೆಸ್, ಅಪ್ನಾ ದಳ್, ಭಾರತೀಯ ಸಮಾಜ್ ಪಕ್ಷ ಹೀಗೆ ಹಲವು ಪಕ್ಷಗಳಿದ್ದು, ಬಹುತೇಕ ಎಲ್ಲವೂ ಒಂದಕ್ಕೊಂದು ಮೈತ್ರಿ ಹೊಂದಿವೆ. ಅದು ಚುನಾವಣೆ ಪೂರ್ವ ಅಥವಾ ನಂತರ ಇರಬಹುದು. ಈ ಬಾರಿ ಬಿಎಸ್ ಪಿ ಬಿಟ್ಟರೆ ಮಿಕ್ಕ ಎಲ್ಲಾ ಪ್ರಮುಖ ಪಕ್ಷಗಳು ಮೈತ್ರಿ ಸಾಧಿಸಿವೆ. ಇದು ಸಮೀಕ್ಷೆಗೆ ಮಾರಕವಾದ ಅಂಶ

ಪೋಲ್ ಪೊಳ್ಳಾಗಲು ಕಾರಣ 2

ಪೋಲ್ ಪೊಳ್ಳಾಗಲು ಕಾರಣ 2

ಉತ್ತರಪ್ರದೇಶದ ಜನಸಂಖ್ಯೆ ಎರಡನೆ ಕಾರಣ. ಯುರೋಪಿನ ಅನೇಕ ದೇಶಗಳ ಜನಸಂಖ್ಯೆಯನ್ನು ಮೀರಿಸುವ ದೊಡ್ಡ ರಾಜ್ಯ ಉತ್ತರಪ್ರದೇಶದಲ್ಲಿ ಮತದಾನವನ್ನೇ ಏಳು ಹಂತದಲ್ಲಿ ನಡೆಸಲಾಗುತ್ತದೆ. ವಿವಿಧ ಪ್ರಾಂತ್ಯ, ಬುಡಕಟ್ಟು, ಭಾಷೆ, ಜನಾಂಗ ಹೀಗೆ ಅನೇಕ ವಿಷಯಗಳು ಪರಿಗಣಿಸಲ್ಪಡುತ್ತದೆ. ಸಮಸ್ಯೆಗಳು ವೈವಿಧ್ಯವಾಗಿವೆ. ಲಕ್ಷಾಂತರ ಮಂದಿಯನ್ನು ಲೆಕ್ಕಕ್ಕೆ ತೆಗೆದುಕೊಂಡರೂ ಒಟ್ಟಾರೆ ಟ್ರೆಂಡ್ ಅಥವಾ ಸಮೀಕ್ಷೆಯನ್ನು ನೀಡಲು ಸಾಧ್ಯವಾಗುವುದಿಲ್ಲ ಅದರಲ್ಲೂ ಒಂದೇ ಹಂತದಲ್ಲಿ ಎಕ್ಸಿಟ್ ಪೋಲ್ ಸಾಧ್ಯವಂತೂ ಇಲ್ಲ.

 ಉ.ಪ್ರ ಎಕ್ಸಿಟ್ ಪೋಲ್

ಉ.ಪ್ರ ಎಕ್ಸಿಟ್ ಪೋಲ್

ಮೊದಲೇ ಹೇಳಿದಂತೆ ಜನಸಂಖ್ಯೆ ಆಧಾರಿತ ಪೋಲ್ ಕಷ್ಟಕರ. ಚುನಾವಣಾ ಆಯೋಗದ ಮಾಹಿತಿಯಂತೆ, 14.05 ಮತದಾರರ ಪೈಕಿ 7.7 ಪುರುಷರು, 6.93 ಮಹಿಳೆಯರಿದ್ದಾರೆ. ಆದರೆ, ಸಮೀಕ್ಷೆಗೆ 2 ಲಕ್ಷಕ್ಕಿಂತ ಜನರನ್ನು ಪರಿಗಣಿಸುವುದಿಲ್ಲ. 14 ಕೋಟಿಗೆ ಕನಿಷ್ಠ 2 ಕೋಟಿ ಜನರ ಅಭಿಪ್ರಾಯ ಸಂಗ್ರಹವಾದರೂ ಅಗತ್ಯವಿದೆ.

ಎಕ್ಸಿಟ್ ಪೋಲ್ ಗಳ ಹಣೆಬರಹ

ಎಕ್ಸಿಟ್ ಪೋಲ್ ಗಳ ಹಣೆಬರಹ

ರಾಜ್ಯದ ಬಹುಸಂಖ್ಯಾತ ಹಾಗೂ ಅಲ್ಪಸಂಖ್ಯಾತ ಜಾತಿ, ಧರ್ಮ, ಮತ, ಪಂಥಗಳ ಪರಿಗಣನೆ ಇಲ್ಲದೆ ನಡೆಸುವ ಸಮೀಕ್ಷೆಗೆ ಬೆಲೆ ಇಲ್ಲ. ಸಾಮಾನ್ಯವಾಗಿ ಪ್ರಾದೇಶಿಕ ಪಕ್ಷಗಳಿಗೆ ಜಾತಿ ನಂಬಿಕೊಂಡವರ ಮತ ಬೀಳುತ್ತಾ ಬಂದಿದೆ.
ಆರ್ ಎಲ್ ಡಿಗೆ ಜಾಟ್ ಗಳ ಮತ, ಬಿಎಸ್ ಪಿಗೆ ಜಾತವ್, ಭಾರತೀಯ ಸಮಾಜ್ ಪಾರ್ಟಿಗೆ ರಾಜ್ ಭರ್ ಸಮುದಾಯ ಬೆಂಬಲಕ್ಕೆ ನಿಂತಿದೆ. ಇದು ಯಾವ ಸಮೀಕ್ಷೆಯಲ್ಲೂ ಪರಿಗಣಿಸಿಲ್ಲದಿರುವುದು ಸಮೀಕ್ಷೆಗಳನ್ನು ಸುಳ್ಳಾಗಿಸುತ್ತಾ ಬಂದಿದೆ

English summary
The Uttar Pradesh Assembly election results 2017 will be declared on March 11. The Election Commission allowed the publication of any exit polls after 5:30 PM on March 9. But, over the yeas may pollsters failed to predict the UP election result, Know why?
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X