ಮೀರತ್ ನಲ್ಲಿ ರಾಹುಲ್, ಅಖಿಲೇಶ್ ಬೃಹತ್ ಪ್ರಚಾರ

Posted By:
Subscribe to Oneindia Kannada

ಉತ್ತರ ಪ್ರದೇಶದಲ್ಲಿ ವಿಧಾನಸಭೆ ಚುನಾವಣೆಯ ಕಾವು ದಿನೇ ದಿನೇ ಏರುತ್ತಿದೆ. ಫೆಬ್ರವರಿ 11ರಂದು ಅಲ್ಲಿ ಮೊದಲ ಸುತ್ತಿನ ಮತದಾನ ನಡೆಯಲಿರುವುದರಿಂದ ರಾಜಕೀಯ ಪಕ್ಷಗಳ ನಾಯಕರು ಮತಯಾಚನೆಯಲ್ಲಿ ಸಿಕ್ಕಾಪಟ್ಟೆ ಬ್ಯುಸಿಯಾಗಿದ್ದಾರೆ.

ಈ ಬಾರಿಯ ಚುನಾವಣೆಗೆ ಉತ್ತರ ಪ್ರದೇಶದ ಆಡಳಿತಾರೂಢ ಸಮಾಜವಾದಿ ಪಕ್ಷವು, ಕಾಂಗ್ರೆಸ್ ಪಕ್ಷದೊಂದಿಗೆ ಕೈ ಜೋಡಿಸಿದೆ. ಒಟ್ಟು 403 ವಿಧಾನಸಭಾ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಪಕ್ಷವು 120 ಕ್ಷೇತ್ರಗಳಲ್ಲಿ ಸ್ಪರ್ಧಿಸಿದರೆ, ಸಮಾಜವಾದಿ ಪಾರ್ಟಿಯು 115 ಕ್ಷೇತ್ರಗಳಲ್ಲಿ ಕಣಕ್ಕಿಳಿಯಲಿದೆ.

ಈ ಹಿನ್ನೆಲೆಯಲ್ಲಿ, ಇಂದು ಉತ್ತರ ಪ್ರದೇಶದ ಮೀರತ್ ಗೆ ಭೇಟಿ ನೀಡಿದ್ದ ಕಾಂಗ್ರೆಸ್ ಪಕ್ಷದ ಯುವ ನೇತಾರ, ಸಮಾಜವಾದಿ ಪಕ್ಷದ ನಾಯಕ ಹಾಗೂ ಮುಖ್ಯಮಂತ್ರಿ ಅಖಿಲೇಶ್ ಯಾದವ್ ಜತೆಗೂಡಿ ಭರ್ಜರಿಯಾಗಿ ಆಯೋಜಿಸಲಾಗಿದ್ದ ಚುನಾವಣಾ ರ್ಯಾಲಿಯಲ್ಲಿ ಭಾಗವಹಿಸಿದ್ದರು.

ಆಗಿಲಿದೆಯೇ ರಾಹುಲ್ ಮೋಡಿ?

ಆಗಿಲಿದೆಯೇ ರಾಹುಲ್ ಮೋಡಿ?

ಮೀರತ್ ನಲ್ಲಿ ಆಯೋಜಿಸಲಾಗಿದ್ದ ರ್ಯಾಲಿಯಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಮಾತನಾಡಿದರು. ಸಹಜವಾಗಿ ಅವರ ಮಾತುಗಳು ಬಿಜೆಪಿ ವಿರುದ್ಧವೇ ಆಗಿತ್ತು.

ಸೈಕಲ್ ಮೇಲೆ ಕಾಂಗ್ರೆಸ್ ಕೈ

ಸೈಕಲ್ ಮೇಲೆ ಕಾಂಗ್ರೆಸ್ ಕೈ

ಮುಖ್ಯಮಂತ್ರಿ ಅಖಿಲೇಶ್ ಯಾದವ್ ಹಾಗೂ ರಾಹುಲ್ ಗಾಂಧಿ ಫೋಟೋಕ್ಕೆ ಪೋಸು ನೀಡಿ ಎರಡೂ ಪಕ್ಷಗಳ ಕಾರ್ಯಕರ್ತರಲ್ಲಿ ಹಾಗೂ ಮತದಾರರಲ್ಲಿ ಹುರುಪು ತಂದರು.

ಸೈಕಲ್ ಮೇಲೆ ಕಾಂಗ್ರೆಸ್ ಕೈ

ಸೈಕಲ್ ಮೇಲೆ ಕಾಂಗ್ರೆಸ್ ಕೈ

ಮುಖ್ಯಮಂತ್ರಿ ಅಖಿಲೇಶ್ ಯಾದವ್ ಹಾಗೂ ರಾಹುಲ್ ಗಾಂಧಿ ಫೋಟೋಕ್ಕೆ ಪೋಸು ನೀಡಿ ಎರಡೂ ಪಕ್ಷಗಳ ಕಾರ್ಯಕರ್ತರಲ್ಲಿ ಹಾಗೂ ಮತದಾರರಲ್ಲಿ ಹುರುಪು ತಂದರು.

ಕಾರ್ಯಕರ್ತರ ಹುಮ್ಮಸ್ಸು

ಕಾರ್ಯಕರ್ತರ ಹುಮ್ಮಸ್ಸು

ಮೀರತ್ ನಲ್ಲಿನ ರ್ಯಾಲಿಯಲ್ಲಿ ವೇದಿಕೆ ಮೇಲೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹಾಗೂ ಮುಖ್ಯಮಂತ್ರಿ ಅಖಿಲೇಶ್ ಯಾದವ್ ಅವರನ್ನು ನೋಡಿ ಪುಳಕಿತನಾದ ಸಮಾಜವಾದಿ ಕಾರ್ಯಕರ್ತ.

ಮಾಯಾವತಿ ಪ್ರಚಾರ

ಮಾಯಾವತಿ ಪ್ರಚಾರ

ಉತ್ತರ ಪ್ರದೇಶದ ಮಾಜಿ ಮುಖ್ಯಮಂತ್ರಿ ಹಾಗೂ ಬಹುಜನ ಸಮಾಜವಾದಿ ಪಕ್ಷದ ನಾಯಕಿ ಮಾಯಾವತಿಯವರು ಗಾಜಿಯಾಬಾದ್ ನಲ್ಲಿ ಚುನಾವಣಾ ಪ್ರಚಾರ ನಡೆಸಿದರು. ಈ ವೇಳೆ ಆಯೋಜಿಸಲಾಗಿದ್ದ ಬೃಹತ್ ರ್ಯಾಲಿಯಲ್ಲಿ ಅವರು ಜನರನ್ನುದ್ದೇಶಿಸಿ ಮಾತನಾಡಿದರು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Day by day, the heat of assembly election is increasing in Uttar Pradesh. As part of it, in Meerut, a rally was organised in which Congress leader Rahul Gandhi and Chief Minister Akhilesh Yadav participated.
Please Wait while comments are loading...