ಅಮೆರಿಕ ಔಷಧ ಸಂಸ್ಥೆಯಿಂದ ಭಾರತಕ್ಕೆ 4 ಲಕ್ಷ ಮಾತ್ರೆ ಪೂರೈಕೆ

ನವದೆಹಲಿ, ಮೇ 4: ಕೊರೊನಾ ಸೋಂಕಿನ ವಿರುದ್ಧ ಭಾರತದ ಹೋರಾಟಕ್ಕೆ ನೆರವಾಗುವ ದೃಷ್ಟಿಯಿಂದ ಅಮೆರಿಕದ ಔಷಧ ತಯಾರಿಕಾ ಕಂಪನಿ ಎಲಿ ಲಿಲ್ಲಿ ಅಂಡ್ ಕೊ, ಕೊರೊನಾ ಚಿಕಿತ್ಸೆಗೆ ಬಳಸುವ ನಾಲ್ಕು ಲಕ್ಷ ಮಾತ್ರೆಗಳನ್ನು ಕಳುಹಿಸಿಕೊಡುವುದಾಗಿ ತಿಳಿಸಿದೆ.

ರೆಮ್ಡೆಸಿವಿರ್ ಔಷಧದೊಂದಿಗೆ ಬಳಸಲಾಗುವ ಈ ಮಾತ್ರೆಗಳನ್ನು ಭಾರತಕ್ಕೆ ಸರಬರಾಜು ಮಾಡುವುದಾಗಿ ಭರವಸೆ ನೀಡಿದೆ.

ತನ್ನ ಔಷಧ ಉತ್ಪಾದನಾ ಸಾಮರ್ಥ್ಯವನ್ನು ವೃದ್ಧಿಸಿಕೊಂಡು ಮುಂದಿನ ವಾರ ಭಾರತಕ್ಕೆ ಔಷಧಿಗಳನ್ನು ರವಾನಿಸುವುದಾಗಿ ತಿಳಿಸಿದೆ. ಸೋಮವಾರ ದೇಶದಲ್ಲಿ, ಆಸ್ಪತ್ರೆಗೆ ದಾಖಲಾಗುವ ಕೊರೊನಾ ರೋಗಿಗಳಿಗೆ ಲಿಲ್ಲಿ ಕಂಪನಿಯ ಬಾರಿಸಿಟಿನಿಬ್ ಬಳಕೆಗೆ ಅನುಮೋದನೆ ನೀಡಲಾಗಿದೆ. ಇದನ್ನು ರೆಮ್ಡೆಸಿವಿರ್ ಜೊತೆ ಬಳಸಲಾಗುತ್ತದೆ.

US Drug Company To Supply 4 Lakh Covid Treatment Tablet To India

ಕಳೆದ 24 ಗಂಟೆಗಳಲ್ಲಿ ಭಾರತದಲ್ಲಿ 357,229 ಹೊಸ ಕೊರೊನಾ ಪ್ರಕರಣಗಳು ದಾಖಲಾಗಿದ್ದು, ಸದ್ಯಕ್ಕೆ ದೇಶದಲ್ಲಿ 3.45 ಸಕ್ರಿಯ ಪ್ರಕರಣಗಳಿವೆ. 3,449 ಮಂದಿ ಸೋಂಕಿನಿಂದ ಮೃತಪಟ್ಟಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+