ಯು.ಎಸ್‌ ಡಿಎಫ್‌ಸಿನಿಂದ ಭಾರತದಲ್ಲಿ ಹೂಡಿಕೆ, ಯಾವೆಲ್ಲ ಕ್ಷೇತ್ರಗಳಿಗೆ ಅನುಕೂಲ?, ಇಲ್ಲಿದೆ ವಿವರ

ಚೆನ್ನೈ, ಅಕ್ಟೋಬರ್‌, 11: ಯು.ಎಸ್‌ ಡೆವಲಪ್ಮೆಂಟ್‌ ಫೈನಾನ್ಸ್‌ ಕಾರ್ಪೊರೇಷನ್‌ (ಡಿಎಫ್‌ಸಿ)ಯಿಂದ ಭಾರತದಲ್ಲಿ ಸಂಪೂರ್ಣ ಹೂಡಿಕೆಯನ್ನು ಘೋಷಿಸಿದ್ದು, ಅದರ ಸಂಪೂರ್ಣ ವಿವರವನ್ನು ಇಲ್ಲಿ ನೀಡಲಾಗಿದೆ ಗಮನಿಸಿ.

ಡೆವಲಪ್‌ಮೆಂಟ್‌ ಫೈನಾನ್ಸ್‌ ಕಾರ್ಪ್‌ ಭಾರತದಲ್ಲಿ ಗ್ರೀನ್‌ಫೀಲ್ಡ್ 4 ಗಿಗಾ ವ್ಯಾಟ್ (GW) ಸೋಲಾರ್ ಸೆಲ್ ಮತ್ತು 4 GW ಸೋಲಾರ್ ಮಾಡ್ಯೂಲ್ ಉತ್ಪಾದನಾ ಸೌಲಭ್ಯದ ನಿರ್ಮಾಣ ಮತ್ತು ಕಾರ್ಯಾಚರಣೆಗೆ ಟಾಟಾ ಪವರ್ ರಿನ್ಯೂವಬಲ್ ಎನರ್ಜಿ ಲಿಮಿಟೆಡ್‌ನ ಸಂಪೂರ್ಣ ಸ್ವಾಮ್ಯದ ಅಂಗಸಂಸ್ಥೆಯಾದ TP ಸೋಲಾರ್ ಲಿಮಿಟೆಡ್‌ಗೆ 425 ಮಿಲಿಯನ್ ಡಾಲರ್ ಸಾಲ ನೀಡಲಿದೆ.

US DFC: Investment in India by US DFC

ಈ ಹೂಡಿಕೆಯು ನವೀಕರಿಸಬಹುದಾದ ಇಂಧನ ಉತ್ಪಾದನೆಯನ್ನು ಹೆಚ್ಚಿಸುವ ಭಾರತದ ಮಹತ್ವಾಕಾಂಕ್ಷೆಯ ಕಾರ್ಯಕ್ರಮವನ್ನು ಬೆಂಬಲಿಸುತ್ತದೆ. ಅಷ್ಟೇ ಅಲ್ಲದೆ, ಚೀನಾ (PRC) ಪ್ರಾಬಲ್ಯದಿಂದ ದೂರವಾಗಿ ಸರಬರಾಜನ್ನು ವೈವಿಧ್ಯಗೊಳಿಸಲು ಜಾಗತಿಕ ಇಂಧನ ಪರಿವರ್ತನೆಯನ್ನು ಮುಂದುವರೆಸುತ್ತದೆ.

1. ಭಾರತದಲ್ಲಿ ಇಂಧನ ಶಕ್ತಿಯ ಪ್ರಗತಿ

SAEL ಇಂಡಸ್ಟ್ರೀಸ್ ಲಿಮಿಟೆಡ್‌ನಲ್ಲಿ $35 ಮಿಲಿಯನ್ ಷೇರು ಹೂಡಿಕೆಯು ಸೌರಶಕ್ತಿ ಮತ್ತು ತ್ಯಾಜ್ಯದಿಂದ ಇಂಧನ ವಿದ್ಯುತ್ ಉತ್ಪಾದನೆ ಮತ್ತು ಕಾರ್ಯಾಚರಣೆಗಳ ವಿಸ್ತರಣೆಗೆ ಹಣಕಾಸು ಒದಗಿಸುತ್ತದೆ. ಭಾರತದ ಇಂಧನ ವಲಯವನ್ನು ವೈವಿಧ್ಯಗೊಳಿಸುತ್ತದೆ.

US DFC: Investment in India by US DFC

ಭಾರತದಲ್ಲಿ ಟೆಕ್ ಸ್ಟಾರ್ಟ್‌ಅಪ್‌ಗಳಿಗೆ ಹಣಕಾಸಿನ ಲಭ್ಯತೆಯನ್ನು ಹೆಚ್ಚಿಸುವುದು:
ಅಂಕುರ್ ಕ್ಯಾಪಿಟಲ್ ಫಂಡ್ IIIನಲ್ಲಿ $15 ಮಿಲಿಯನ್ ಇಕ್ವಿಟಿ ಹೂಡಿಕೆಯು ಭಾರತದಲ್ಲಿ ನವೀನ, ಆರಂಭಿಕ ಹಂತದ ಟೆಕ್ ಕಂಪನಿಗಳನ್ನು ಬೆಂಬಲಿಸಲು ಬಂಡವಾಳವನ್ನು ಒದಗಿಸುತ್ತದೆ.

2. ಇನ್ಸುಲಿನ್ ಉತ್ಪಾದನಾ ಸೌಲಭ್ಯಗಳನ್ನು ವಿಸ್ತರಣೆ

ಜೆನೆಸಿಸ್ ಬಯೋಲಾಜಿಕ್ಸ್ ಪ್ರೈವೇಟ್ ಲಿಮಿಟೆಡ್‌ಗೆ ನೀಡಿರುವ $50 ಮಿಲಿಯನ್ ಸಾಲವು ಭಾರತದಲ್ಲಿ ಅದರ ಇನ್ಸುಲಿನ್ ಉತ್ಪಾದನಾ ಸೌಲಭ್ಯಗಳನ್ನು ವಿಸ್ತರಿಸಲು ಸಹಾಯ ಮಾಡುತ್ತದೆ. ಇದು ವಿಶ್ವಾದ್ಯಂತ ಮಧುಮೇಹಕ್ಕೆ ನೀಡಲಾಗುವ ಮಹತ್ವದ ಚಿಕಿತ್ಸೆಗಳು ಕೈಗೆಟಕುವ ದರದಲ್ಲಿ ಸುಲಭವಾಗಿ ಲಭ್ಯವಾಗುವಂತೆ ಮಾಡುತ್ತದೆ.

ಭಾರತದಲ್ಲಿ ಆಹಾರ ಭದ್ರತೆಯನ್ನು ಉತ್ತಮಗೊಳಿಸುವುದು:
ಲೀಪ್ ಇಂಡಿಯಾ ಫುಡ್ & ಲಾಜಿಸ್ಟಿಕ್ಸ್‌ಗೆ ನೀಡಿರುವ $33 ಮಿಲಿಯನ್ ಸಾಲವು ಭಾರತದಲ್ಲಿ ಆಹಾರ ಸಂಗ್ರಹಣೆಯನ್ನು ಆಧುನೀಕರಿಸುವ ಮತ್ತು ಸ್ಥಳೀಯ ಆಹಾರ ಭದ್ರತೆಯನ್ನು ಸುಧಾರಿಸುವ ಧಾನ್ಯದ ಕಣಜಗಳನ್ನು ನಿರ್ಮಿಸಲು ಸಹಾಯ ಮಾಡುತ್ತದೆ.

3. ಭಾರತದಲ್ಲಿ ಹವಾಮಾನ ಹಣಕಾಸು ಬಲವರ್ಧನೆ

ಕ್ಲೈಮ್ ಫೈನಾನ್ಸ್ ಪ್ರೈವೇಟ್ ಲಿಮಿಟೆಡ್‌ಗೆ ಕೊಟ್ಟಿರುವ $10 ಮಿಲಿಯನ್ ಸಾಲವು ಭಾರತದಲ್ಲಿ ಹವಾಮಾನ ಬದಲಾವಣೆ ರೂಪಾಂತರ ಮತ್ತು ಅದನ್ನು ತಗ್ಗಿಸುವ ಚಟುವಟಿಕೆಗಳಲ್ಲಿ ತೊಡಗಿರುವ MSMEಗಳಿಗೆ ಸಾಲ ನೀಡುವುದನ್ನು ಬೆಂಬಲಿಸುತ್ತದೆ.

US DFC: Investment in India by US DFC

ಗ್ರಾಮೀಣ ಭಾರತದಲ್ಲಿ ಆರ್ಥಿಕ ಒಳಗೊಳ್ಳುವಿಕೆಯನ್ನು ವಿಸ್ತರಿಸುವುದು:
ಪಹಲ್ ಫೈನಾನ್ಸಿಯಲ್ ಸರ್ವಿಸಸ್ ಪ್ರೈವೇಟ್ ಲಿಮಿಟೆಡ್‌ಗೆ ನೀಡಿರುವ $12 ಮಿಲಿಯನ್ ಸಾಲವು ಭಾರತದಲ್ಲಿನ ಗ್ರಾಮೀಣ ಮತ್ತು ಪಟ್ಟಣದ ಮಹಿಳೆಯರನ್ನು ಗುರಿಯಾಗಿಸಿಕೊಂಡು ಕಂಪನಿಯ ಮೈಕ್ರೋಫೈನಾನ್ಸ್ ವಲಯದ ವಿಸ್ತರಣೆಯನ್ನು ಬೆಂಬಲಿಸುತ್ತದೆ.

4. ಕೈಗೆಟುಕುವ ಬೆಲೆಯಲ್ಲಿ ವಸತಿ

ಉಮ್ಮೀದ್ ಹೌಸಿಂಗ್ ಫೈನಾನ್ಸ್ ಪ್ರೈವೇಟ್ ಲಿಮಿಟೆಡ್‌ಗೆ ನೀಡಲಾಗಿರುವ $20 ಮಿಲಿಯನ್ ಸಾಲವು ಲಭ್ಯವಿರುವ ಗೃಹ ಹಣಕಾಸು ಸೌಲಭ್ಯವನ್ನು ಕಡಿಮೆ ಮತ್ತು ಮಧ್ಯಮ-ಆದಾಯದ ಸಮುದಾಯಗಳಿಗೆ ವಿಸ್ತರಿಸುತ್ತದೆ. ಭಾರತದಲ್ಲಿ ಕೈಗೆಟುಕುವ ಬೆಲೆಯಲ್ಲಿ ವಸತಿಗಾಗಿ ಹೆಚ್ಚುತ್ತಿರುವ ಬೇಡಿಕೆಯನ್ನು ಪೂರೈಸಲು ಮತ್ತು ಮಹಿಳೆಯರಿಗೆ ಮನೆ ಮಾಲೀಕತ್ವ ದೊರೆಯಲು ಸಹಾಯ ಮಾಡುತ್ತದೆ.

5. EV ಬಳಕೆಗೆ ಹೆಚ್ಚಿಸಲು ಸಹಾಯ

ದ್ವಿಚಕ್ರ ವಾಹನಗಳು ಮತ್ತು ತ್ರಿ-ಚಕ್ರ ಎಲೆಕ್ಟ್ರಿಕ್ ರಿಕ್ಷಾಗಳಿಗೆ ಬ್ಯಾಟರಿ ವಿನಿಮಯ ಜಾಲವನ್ನು ನಿರ್ವಹಿಸುವ ಕಂಪನಿಯಾದ ಅಪ್‌ಗ್ರಿಡ್ ಎಲೆಕ್ಟ್ರಿಲೀಸ್ ಪ್ರೈವೇಟ್ ಲಿಮಿಟೆಡ್ (ಬ್ಯಾಟರಿಸ್ಮಾರ್ಟ್) ಗೆ ಕೊಟ್ಟಿರುವ $10 ಮಿಲಿಯನ್ ಸಾಲವು ಭಾರತದಲ್ಲಿ ಎಲೆಕ್ಟ್ರಿಕ್ ವಾಹನಗಳ ಬಳಕೆ ಹೆಚ್ಚಿಸಲು ಸಹಾಯ ಮಾಡುತ್ತದೆ.

6. ಮರುಬಳಕೆ ಸಾಮರ್ಥ್ಯವನ್ನು ವಿಸ್ತರಿಸುವುದು

ದಾಲ್ಮಿಯಾ ಪಾಲಿಪ್ರೊ ಇಂಡಸ್ಟ್ರೀಸ್ ಪ್ರೈವೇಟ್ ಲಿಮಿಟೆಡ್‌ಗೆ $30 ಮಿಲಿಯನ್ ನೀಡಿರುವ ಸಾಲವು ನವೀನ ನಂತರದ-ಗ್ರಾಹಕ ಮರುಬಳಕೆ ಸೌಲಭ್ಯದ ನಿರ್ಮಾಣವನ್ನು ಬೆಂಬಲಿಸುತ್ತದೆ, ಪ್ಲಾಸ್ಟಿಕ್ ತ್ಯಾಜ್ಯವನ್ನು ಕಡಿಮೆ ಮಾಡುವಲ್ಲಿ ಭಾರತದ ಸಾಮರ್ಥ್ಯವನ್ನು ವಿಸ್ತರಿಸುತ್ತದೆ.

7. ಆಹಾರ ಭದ್ರತಾ ಪರಿಹಾರಗಳನ್ನು ಉತ್ತೇಜಿಸುವುದು

ಸೈನ್ಸ್ ಫಾರ್ ಸೊಸೈಟಿ ಟೆಕ್ನೋ ಸರ್ವಿಸಸ್ ಪ್ರೈವೇಟ್ ಲಿಮಿಟೆಡ್‌ಗೆ ನೀಡಿರುವ $8.9 ಮಿಲಿಯನ್ ಸಾಲವು ಶುದ್ಧ ಶಕ್ತಿಯ ವಿಸ್ತರಣೆ, ಫಾರ್ಮ್-ಗೇಟ್ ಆಹಾರ ಸಂಸ್ಕರಣೆ ಮತ್ತು ಆಹಾರ ತ್ಯಾಜ್ಯ ಮತ್ತು ಇಂಗಾಲದ ಹೊರಸೂಸುವಿಕೆಯನ್ನು ಕಡಿಮೆ ಮಾಡುವುದರೊಂದಿಗೆ ಗ್ರಾಮೀಣ ಮಹಿಳೆಯರಿಗೆ ಆದಾಯವನ್ನು ಹೆಚ್ಚಿಸುತ್ತದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+