ಸೈನಿಕರ ತ್ಯಾಗ ವ್ಯರ್ಥವಾಗಲ್ಲ, ಉರಿ ದಾಳಿ ಮರೆಯಲ್ಲ: ಮೋದಿ

By: ಒನ್ಇಂಡಿಯಾ ಪ್ರತಿನಿಧಿ
Subscribe to Oneindia Kannada

ಕೋಳಿಕ್ಕೋಡ್, ಸೆಪ್ಟೆಂಬರ್ 25: ಉರಿ ದಾಳಿಯನ್ನು ಮರೆಯುವುದಿಕ್ಕೆ ಸಾಧ್ಯವಿಲ್ಲ ಮತ್ತು 18 ಯೋಧರನ್ನು ಕಳೆದುಕೊಂಡಿರುವುದು ವ್ಯರ್ಥವಾಗುವುದಿಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ಪಾಕಿಸ್ತಾನಕ್ಕೆ ಕಠಿಣ ಎಚ್ಚರಿಕೆ ರವಾನಿಸಿದ್ದಾರೆ.

ಕಳೆದ ಭಾನುವಾರ ಉರಿಯಲ್ಲಿ ನಡೆದ ಉಗ್ರಗಾಮಿಗಳ ದಾಳಿ ನಂತರ ಕೇರಳದಲ್ಲಿ ಭಾಗವಹಿಸಿದ್ದ ಮೊದಲ ಸಾರ್ವಜನಿಕ ಸಭೆಯಲ್ಲಿ ಮಾತನಾಡಿ, ಭಯೋತ್ಪಾದನೆ ರಫ್ತು ಮಾಡುತ್ತಿರುವ, ಅಮಾಯಕರನ್ನು ಕೊಂದು, ರಕ್ತಪಾತಕ್ಕೆ ಕಾರಣವಾಗುತ್ತಿರುವ ಪಾಕಿಸ್ತಾನದ ಬಣ್ಣವನ್ನು ಬಯಲು ಮಾಡುತ್ತೇವೆ. ಅಂತರರಾಷ್ಟ್ರೀಯ ಮಟ್ಟದಲ್ಲಿ ಏಕಾಂಗಿಯನ್ನಾಗಿ ಮಾಡುತ್ತೇವೆ ಎಂದರು.[ಗಡಿಯಾಚೆಗಿನ ಕಾರ್ಯಾಚರಣೆ ನಡೆದಿಲ್ಲ: ಭಾರತೀಯ ಸೇನೆ]

Narendra Modi

"ಉರಿ ದಾಳಿಯನ್ನು ಭಾರತ ಮರೆಯುವುದಿಲ್ಲ ಎಂಬುದನ್ನು ಉಗ್ರಗಾಮಿಗಳು ಕೇಳಿಸಿಕೊಳ್ಳಲಿ. ಪಾಕಿಸ್ತಾನದ ನಾಯಕರು ತಿಳಿದುಕೊಳ್ಳಲಿ, ನಮ್ಮ ಯೋಧರ ತ್ಯಾಗ ವ್ಯರ್ಥವಾಗುವುದಿಲ್ಲ" ಎಂದು ಖಡಕ್ ಸಂದೇಶ ರವಾನಿಸಿದರು. ಕೋಳಿಕ್ಕೋಡ್ ನಲ್ಲಿ ನಡೆದ ಬೃಹತ್ ಸಭೆಯನ್ನು ಉದ್ದೇಶಿಸಿ ಅವರು ಮಾತನಾಡಿದರು.

ಉರಿ ಸೇನಾ ನೆಲೆಯ ಮೇಲಿನ ದಾಳಿ ಬಗ್ಗೆ ಹೇಳಿಕೆ ನೀಡಿರುವ್ ಪ್ರಧಾನಿ ನವಾಜ್ ಷರೀಫ್, ಕಾಶ್ಮೀರದ ಜನರ ಮೇಲೆ ನಡೆದ ದೌರ್ಜನ್ಯದ 'ಪ್ರತೀಕಾರದ ಕೃತ್ಯ' ಎಂದು ಹೇಳುವ ಮೂಲಕ ಭಾರತವನ್ನು ಮತ್ತಷ್ಟು ಕೆರಳಿಸಿದ್ದಾರೆ.[ಪಾಕ್ ಆಕ್ರಮಿತ ಕಾಶ್ಮೀರದೊಳಗೆ ನುಗ್ಗಿ ಇಪ್ಪತ್ತು ಉಗ್ರರ ಹತ್ಯೆ?]

ಕಾಶ್ಮೀರ ಹಿಂಸಾಚಾರದಲ್ಲಿ ಮೃತಪಟ್ಟವರ, ಗಾಯಗೊಂಡವರ ಸಂಬಂಧಿಕರೋ ಆಪ್ತರೋ ಕೋಪದಿಂದ ಈ ದಾಳಿ ನಡೆಸಿರಬಹುದು ಎಂದು ಲಂಡನ್ ನಲ್ಲಿ ಷರೀಫ್ ಮಾಧ್ಯಮದವರಿಗೆ ತಿಳಿಸಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Uri terror attack will not be forgotten and the sacrifice of 18 jawans will not go in vain, Prime minister Narendra Modi warned Pakistan in a public meeting (Kozhikode), Kearala.
Please Wait while comments are loading...