ಜೂ.8: ದೇಶ, ವಿದೇಶಗಳ ಹೆಡ್ ಲೈನ್ ನ್ಯೂಸ್

ಬೆಂಗಳೂರು, ಜೂ.8: ದೇಶ, ವಿದೇಶಗಳಲ್ಲಿನ ವಿದ್ಯಮಾನಗಳ ಈ ದಿನದ ರೌಂಡ್ ಆಪ್ ನಿಮಗಾಗಿ ಇಲ್ಲಿದೆ. ಇಲ್ಲಿ ಬರೀ ಹೆಡ್ ಲೈನ್ ಗಳು, ಟೂ ಲೈನ್ ಅಥವಾ ಒಂದು ಪ್ಯಾರಾ ಸುದ್ದಿಗಳು, ಚುಟುಕು ಮಾಹಿತಿ ಮಾತ್ರ ನಿಮಗೆ ಸಿಗುತ್ತದೆ. ದೇಶದ ಒಟ್ಟಾರೆ ಸುದ್ದಿಗಳ ಅಸಮಗ್ರ ಸಂಗ್ರಹ ನಿಮ್ಮ ಪರದೆ ಮೇಲೆ ಚೆಲ್ಲುವ ಪ್ರಯತ್ನ ಇದಾಗಿದೆ.
5.00: ದೆಹಲಿಯ ಬಿಜೆಪಿ ಮುಖಂಡ ವಿಜಯ್ ಪಂಡಿತ್ ಹತ್ಯೆ ಮಾಡಿದ ಆರೋಪದ ಮೇಲೆ ನಾಲ್ವರು ಶಂಕಿತರನ್ನು ಪೊಲೀಸರು ಭಾನುವಾರ ಬಂಧಿಸಿದ್ದಾರೆ.
12.55: ಚೀನಾ ವಿದೇಶಾಂಗ ಸಚಿವರು ಭಾರತಕ್ಕೆ ಬಂದಿರುವುದನ್ನು ದೆಹಲಿಯಲ್ಲಿರುವ ಟಿಬೆಟ್ಟಿಯನ್ ವಿದ್ಯಾರ್ಥಿಗಳು ಖಂಡಿಸಿ ಪ್ರತಿಭಟನೆ ನಡೆಸಿದ್ದಾರೆ.
12.40: ಚೀನಾ ವಿದೇಶಾಂಗ ಸಚಿವ ವಾಂಗ್ ಯಿ ಜತೆ ವಿದೇಶಾಂಗ ಖಾತೆ ಸಚಿವೆ ಸುಷ್ಮಾ ಸ್ವರಾಜ್ ಅವರು ಮಾತುಕತೆ ನಡೆಸಿದ್ದಾರೆ.


12.15: ಬಿಜೆಪಿ ಮುಖಂಡ ವಿಜಯ್ ಹತ್ಯೆ ನಂತರ ಗಲಭೆ : ಗ್ರೇಟರ್ ನೋಯ್ಡಾದಲ್ಲಿ ಸಿಆರ್ ಪಿಎಫ್ ಸೆಕ್ಷನ್ 144 ಜಾರಿಗೊಳಿಸಲಾಗಿದ್ದು, 2 ತುಕಡಿ ಕ್ಷಿಪ್ರ ಕಾರ್ಯ ಪಡೆಯನ್ನು ನಿಯೋಜಿಸಲಾಗಿದೆ. [ವಿವರ ಇಲ್ಲಿ ಓದಿ]

11.10: ವಾಣಿಜ್ಯ ರಾಜಧಾನಿ ಮುಂಬೈನಲ್ಲಿ ಮೊದಲ ಮೆಟ್ರೋ ರೈಲು ಸಂಚಾರಕ್ಕೆ ಮುಖ್ಯಮಂತ್ರಿ ಪೃಥ್ವಿರಾಜ್ ಚೌಹಾಣ್ ಅವರಿಂದ ಹಸಿರು ನಿಶಾನೆ.
11.30: ಆಮ್ ಆದ್ಮಿ ಪಕ್ಷದ ಮಹತ್ವದ ಸಭೆ ಮುಕ್ತಾಯವಾದ ಮೇಲೆ ಸಂಜೆ ಪತ್ರಿಕಾಗೋಷ್ಠಿ ನಡೆಸಿ ವಿವರ ನೀಡುವ ಸಾಧ್ಯತೆಯಿದೆ.
10.45: ನವದೆಹಲಿಯಲ್ಲಿ ಆಮ್ ಆದ್ಮಿ ಪಕ್ಷದ ಮಹತ್ವದ ಸಭೆ ಆರಂಭಗೊಂಡಿದ್ದು, ಯೋಗೇಂದ್ರ ಯಾದವ್, ಶಾಜಿಯಾ ಇಲ್ವಿ ಮನವೊಲಿಕೆಗೆ ಆರವಿಂದ್ ಕೇಜ್ರಿವಾಲ್ ಯತ್ನಿಸುತ್ತಿದ್ದಾರೆ.
10.30: ರಾಂಚಿಯಲ್ಲಿ 18 ಸಜೀವ ಬಾಂಬ್ ಪತ್ತೆಯಾಗಿದ್ದು, ರಾಷ್ಟ್ರೀಯ ತನಿಖಾ ತಂಡ(ಎನ್ಐಎ) ಶನಿವಾರ ಇಫ್ತೆಕಾರ್ ಹಾಗೂ ಫಿರೋಜ್ ಅಸ್ಲಂ ಎಂಬ ಆರೋಪಿಗಳನ್ನು ಪೊಲೀಸರ ವಶಕ್ಕೆ ನೀಡಿದ್ದಾರೆ.

10.45: ನವದೆಹಲಿಯಲ್ಲಿ ಆಮ್ ಆದ್ಮಿ ಪಕ್ಷದ ಮಹತ್ವದ ಸಭೆ ಆರಂಭಗೊಂಡಿದ್ದು, ಯೋಗೇಂದ್ರ ಯಾದವ್, ಶಾಜಿಯಾ ಇಲ್ವಿ ಮನವೊಲಿಕೆಗೆ ಆರವಿಂದ್ ಕೇಜ್ರಿವಾಲ್ ಯತ್ನಿಸುತ್ತಿದ್ದಾರೆ. ಯೋಗೇಂದ್ರ ಯಾದವ್ ಅವರ ರಾಜೀನಾಮೆಯನ್ನು ತಿರಸ್ಕರಿಸಲಾಗಿದೆ ಎಂದು ಎಎಪಿ ಸ್ಪಷ್ಟಪಡಿಸಿದೆ.
10.30: ರಾಂಚಿಯಲ್ಲಿ 18 ಸಜೀವ ಬಾಂಬ್ ಪತ್ತೆಯಾಗಿದ್ದು, ರಾಷ್ಟ್ರೀಯ ತನಿಖಾ ತಂಡ(ಎನ್ಐಎ) ಶನಿವಾರ ಇಫ್ತೆಕಾರ್ ಹಾಗೂ ಫಿರೋಜ್ ಅಸ್ಲಂ ಎಂಬ ಆರೋಪಿಗಳನ್ನು ಪೊಲೀಸರ ವಶಕ್ಕೆ ನೀಡಿದ್ದಾರೆ.

Arvind Kejriwal

10.15: ದೆಹಲಿ ಬಿಜೆಪಿ ಮುಖಂಡ ವಿಜಯ್ ಪಂಡಿತ್ ಅವರನ್ನು ಶನಿವಾರ ರಾತ್ರಿ ಹತ್ಯೆ ಮಾಡಲಾಗಿದೆ.
9.45: ಭಾರತೀಯ ಜಲಸೇನೆಯ ಅತಿದೊಡ್ಡ ಹಡಗು ಐಎನ್ಎಸ್ ವಿಕ್ರಮಾದಿತ್ಯದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಪ್ರಯಾಣ ಮಾಡಲಿದ್ದಾರೆ.
9.30: ಮುಂಬೈನಲ್ಲಿ ಪ್ರಥಮ ಮೆಟ್ರೋ ರೈಲು ಚಾಲನೆ ಆರಂಭವಾಗಿದೆ.
9.15: ಚಂದ್ರಬಾಬು ನಾಯ್ಡು ಅವರು ಸೀಮಾಂಧ್ರ ಮುಖ್ಯಮಂತ್ರಿಯಾಗಿ ಭಾನುವಾರ ಸಂಜೆ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+