• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಸೆ.5: ದೇಶ, ವಿದೇಶ ಸುದ್ದಿಗಳ ಹೆಡ್ ಲೈನ್ಸ್

By Mahesh
|

ಬೆಂಗಳೂರು, ಸೆ.5: ದೇಶ, ವಿದೇಶಗಳಲ್ಲಿನ ವಿದ್ಯಮಾನಗಳ ಈ ದಿನದ ರೌಂಡ್ ಅಪ್ ನಿಮಗಾಗಿ ಇಲ್ಲಿದೆ. ಇಲ್ಲಿ ಬರೀ ಹೆಡ್ ಲೈನ್ ಗಳು, ಟೂ ಲೈನ್ ಅಥವಾ ಒಂದು ಪ್ಯಾರಾ ಸುದ್ದಿಗಳು, ಚುಟುಕು ಮಾಹಿತಿ ಮಾತ್ರ ನಿಮಗೆ ಸಿಗುತ್ತದೆ. ದೇಶದ ಒಟ್ಟಾರೆ ಸುದ್ದಿಗಳ ಅಸಮಗ್ರ ಸಂಗ್ರಹ ನಿಮ್ಮ ಪರದೆ ಮೇಲೆ ಚೆಲ್ಲುವ ಪ್ರಯತ್ನ ಇದಾಗಿದೆ.

4.15: ಭಾರತ ಹಾಗೂ ಆಸ್ಟ್ರೇಲಿಯಾ ನಡುವೆ ಅಣು ಒಪ್ಪಂದಕ್ಕೆ ಅಂಕಿತ ಹಾಕಲಾಗಿದೆ. ಭಾರತ ಪ್ರವಾಸದಲ್ಲಿರುವ ಆಸ್ಟ್ರೇಲಿಯನ್ ಪ್ರಧಾನಿ ಟೋನಿ ಅಬೋಟ್ ಅವರು ಪ್ರಧಾನಿ ಮೋದಿ ಅವರನ್ನು ಭೇಟಿ ಮಾಡಿ ನೆಹರೂ ಜಾಕೆಟ್ ಉಡುಗೊರೆಯಾಗಿ ನೀಡಿದ್ದಾರೆ.

4.00: ನಟ ಸಲ್ಮಾನ್ ಖಾನ್ ಗೆ ಕೃಷ್ಣಮೃಗ ಬೇಟೆ ಪ್ರಕರಣದಲ್ಲಿ ರಿಲೀಫ್ ಸಿಕ್ಕಿಲ್ಲ. ಪ್ರಕರಣದ ವಿಚಾರಣೆಯನ್ನು ಅಕ್ಟೋಬರ್ 28ಕ್ಕೆ ಮುಂದೂಡಲಾಗಿದೆ.

3.40: ಜಮ್ಮು ಮತ್ತು ಕಾಶ್ಮೀರದ ಭೂ ಕುಸಿತ, ಪ್ರವಾಹದಿಂದ ಸಾವನ್ನಪ್ಪಿದವರ ಸಂಖ್ಯೆ 84ಕ್ಕೇರಿದೆ.

2.55: ನಿತಿನ್ ಗಡ್ಕರಿ ಹಾಗೂ ರಾಜನಾಥ್ ಸಿಂಗ್ ಅವರು ದೆಹಲಿಯಲ್ಲಿ ಸರ್ಕಾರ ರಚನೆ ಬಗ್ಗೆ ಉನ್ನತ ಮಟ್ಟದ ಚರ್ಚೆ ನಡೆಸಿದ್ದಾರೆ.

10.45: ತಮಿಳುನಾಡಿನ ಪುದುಕೊಟ್ಟೈನಲ್ಲಿನ ಬಿಜೆಪಿ ವಕೀಲರ ಸಂಘದ ಮುಖ್ಯಸ್ಥರ ಮನೆ ಮೇಲೆ ದುಷ್ಕರ್ಮಿಗಳು ಪೆಟ್ರೋಲ್ ಬಾಂಬ್ ಎಸೆದಿದ್ದಾರೆ. ಅವರ ಕಾರಿನ ವಿಂಡ್ ಶೀಲ್ಡ್ ಪುಡಿ ಪುಡಿ ಮಾಡಲಾಗಿದೆ.

10.30: ಭಾರತೀಯ ನೌಕಾಪಡೆಗೆ ಸೇರಿದ ‘ಐಎನ್‌ಎಸ್‌ ಸುಮಿತ್ರ' ಹೆಸರಿನ ಅತಿದೊಡ್ಡ ಕಾವಲು ನೌಕೆಯನ್ನು ಗುರುವಾರ ದೇಶಕ್ಕೆ ಸಮರ್ಪಿಸಲಾಗಿದೆ.

10.15: ದೆಹಲಿಯಲ್ಲಿ ಮತ್ತೊಮ್ಮೆ ಸರ್ಕಾರ ರಚನೆ ಕಸರತ್ತು ಆರಂಭವಾಗಿದೆ.ರಾಷ್ಟ್ರಪತಿ ಪ್ರಣಬ್ ಮುಖರ್ಜಿಗೆ ಈ ಬಗ್ಗೆ ರಾಜ್ಯಪಾಲ ಲೆ. ನಜೀಬ್ ಜಂಗ್ ಪತ್ರ ಬರೆದಿದ್ದಾರೆ.

10.00: ಅಫ್ಘಾನಿಸ್ತಾನದಲ್ಲಿ ಉಗ್ರರ ದಾಳಿಗೆ 33 ಜನ ಮೃತಪಟ್ಟಿದ್ದು, 147 ಜನ ಗಾಯಗೊಂಡಿದ್ದಾರೆ.

9.45: ಲ್ಯಾಟಿನ್ ರಾಕರ್ ಗುಸ್ಟವೋ ಸೆರಾಟಿ(55) ಅವರು ಸಾವನ್ನಪ್ಪಿದ್ದಾರೆ.

9.30: ಅಲ್ ಖೈದಾ ವಿಡಿಯೋ ನಂತರ ದೇಶದೆಲ್ಲೆಡೆ ಹೈ ಅಲರ್ಟ್ ಘೋಷಿಸಲಾಗಿದೆ. ಅದರಲ್ಲೂ ಉತ್ತರಪ್ರದೇಶದಲ್ಲಿ ಹೆಚ್ಚುವರಿ ಭದ್ರತಾ ಪಡೆ ನಿಯೋಜಿಸಲಾಗಿದೆ.

9.15: ದೇಶದೆಲ್ಲೆಡೆ ಶುಕ್ರವಾರ(ಸೆ.5) ಶಿಕ್ಷಕರ ದಿನಾಚರಣೆಯನ್ನು ಆಚರಿಸಲಾಗುತ್ತಿದೆ. ಎನ್ ಡಿಎ ಸರ್ಕಾರ ಈ ದಿನವನ್ನು ಗುರು ಉತ್ಸವ ಎಂದು ಕೊಂಡಾಡುತ್ತಿದೆ.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Top news in brief for the day: Petrol bombs were thrown at the house of a state functionary of BJP's lawyers wing and the windshield of his car was damaged by some persons here today, police said and many more news from across the globe.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more