ನ.6: ದೇಶ, ವಿದೇಶ ಸುದ್ದಿಗಳ ಚುಟುಕು ಸುದ್ದಿ
ಬೆಂಗಳೂರು, ನ.6: ದೇಶ, ವಿದೇಶಗಳಲ್ಲಿನ ವಿದ್ಯಮಾನಗಳ ಈ ದಿನದ ರೌಂಡ್ ಅಪ್ ನಿಮಗಾಗಿ ಇಲ್ಲಿದೆ. ಇಲ್ಲಿ ಬರೀ ಹೆಡ್ ಲೈನ್ ಗಳು, ಟೂ ಲೈನ್ ಅಥವಾ ಒಂದು ಪ್ಯಾರಾ ಸುದ್ದಿಗಳು, ಚುಟುಕು ಮಾಹಿತಿ ಮಾತ್ರ ನಿಮಗೆ ಸಿಗುತ್ತದೆ. ದೇಶದ ಒಟ್ಟಾರೆ ಸುದ್ದಿಗಳ ಅಸಮಗ್ರ ಸಂಗ್ರಹ ನಿಮ್ಮ ಪರದೆ ಮೇಲೆ ಚೆಲ್ಲುವ ಪ್ರಯತ್ನ ಇದಾಗಿದೆ.
15.30: ನಾವು ಎಲ್ಲಾ ಜಾತ್ಯಾತೀತ ಶಕ್ತಿಗಳನ್ನು ಒಂದು ಕಡೆ ತರಲು ಯತ್ನಿಸುತ್ತಿದ್ದೇವೆ ಎಂದ ಲಾಲೂ ಪ್ರಸಾದ್ ಯಾದವ್.

15.15: ಮೋದಿ ಅವರು ಕಪ್ಪು ಹಣ ವಾಪಸ್ ತಂದು ಎಲ್ಲರಿಗೂ 15 ಲಕ್ಷ ರು ಹಂಚುತ್ತೇನೆ ಎಂದಿದ್ದರು ಯಾರಿಗೆ ಎಷ್ಟು ಸಿಕ್ಕಿದೆ ಎಂದು ಪ್ರಶ್ನಿಸಿದ ಲಾಲೂ.
So we have decided to bring all secular forces within the nation together: Lalu Yadav pic.twitter.com/9uxCMMk3Cn
— ANI (@ANI_news) November 6, 2014 15.00: ರಾಷ್ಟ್ರಪತಿ ಭವನದಲ್ಲಿ ಪ್ರಣಬ್ ಮುಖರ್ಜಿ ಅವರ ಜೊತೆ ಗುರು ನಾನಕ್ ಜಯಂತಿ ಆಚರಿಸಿದ ಪ್ರಧಾನಿ ಮೋದಿ.
Delhi : PM Narendra Modi attends function on Gurpurab at President's House pic.twitter.com/O71hAmO0f5
— ANI (@ANI_news) November 6, 2014 12.30: ಮಹಿಳಾ ಬಾಕ್ಸರ್ ಗಳಿಗೆ ಉದ್ದೀಪನ ಪರೀಕ್ಷೆ ಕಡ್ಡಾಯಗೊಳಿಸಲಾಗಿದೆ. ಜೊತೆಗೆ ಗರ್ಭಪರೀಕ್ಷೆಯನ್ನು ನಡೆಸಲು ಮುಂದಾಗಿರುವುದನ್ನು ಕಾಂಗ್ರೆಸ್ ಖಂಡಿಸಿದೆ. ಇದೇ ಕಾನೂನು ಎಲ್ಲಾ ಅಥ್ಲೀಟ್ ಗಳಿಗೆ(ವಿವಾಹಿತ ಹಾಗೂ ಅವಿವಾಹಿತ) ಅನ್ವಯವಾಗುವುದು ಎಂದು ಕ್ರೀಡಾ ಸಂಸ್ಥೆ ಹೇಳಿರುವುದನ್ನು ಕಾಂಗ್ರೆಸ್ ಟೀಕಿಸಿದೆ.
It is unfortunate if there is such rule that unmarried athletes are forced to undergo pregnancy test:Shobha Oza, Cong pic.twitter.com/YCUy95S3wi
— ANI (@ANI_news) November 6, 2014 11.30: ಗೋವಾದ ಗಣಿಗಾರಿಕೆ ಉದ್ಯಮಿ ರಾಧಾ ಟಿಂಬ್ಲೋ ಅವರಿಗೆ ಜಾರಿ ನಿರ್ದೇಶನಾಲಯದಿಂದ ಸಮನ್ಸ್ ಜಾರಿಗೊಳಿಸಲಾಗಿದೆ. ರಾಧಾ ಅವರ ಹೆಸರು ಕಪ್ಪುಹಣವುಳ್ಳ ಖಾತೆದಾರರರ ಪಟ್ಟಿಯಲ್ಲಿಯಲ್ಲಿರುವುದನ್ನು ಸ್ಮರಿಸಬಹುದು.
10.40: ಜಾರ್ಖಂಡ್ ನಲ್ಲಿ ಇರಾಕ್ ಮೂಲದ ಉಗ್ರರ ಬೆಂಬಲಿಸುವ ವಾಕ್ಯವಿರುವ ಟೀ ಶರ್ಟ್ ಹಾಕಿರುವ ಯುವಕನೊಬ್ಬನನ್ನು ಪೊಲೀಸರು ವಶಕ್ಕೆ ತೆಗೆದುಕೊಂಡು ವಿಚಾರಣೆ ನಡೆಸಿದ್ದಾರೆ. ಮೊಹರಂ ಮೆರವಣಿಗೆ ಸಂದರ್ಭದಲ್ಲಿ ಯುವಕ ಈ ರೀತಿ ಟೀ ಶರ್ಟ್ ಹಾಕಿಕೊಂಡಿದ್ದ.

9.45: ದೇಶದ ಹಲವೆಡೆ ಶ್ರದ್ಧಾ ಭಕ್ತಿಗಳಿಂದ ಗುರು ನಾನಕ್ ಜಯಂತಿಯನ್ನು ಆಚರಿಸಲಾಗುತ್ತಿದೆ.
9.30: ಬಿಜೆಪಿ ಹಾಗೂ ಕಾಂಗ್ರೆಸ್ಸೇತರ ನಾಯಕರನ್ನು ತಮ್ಮ ನಿವಾಸಕ್ಕೆ ಕರೆಸಿಕೊಂಡಿರುವ ಮುಲಾಯಂ ಸಿಂಗ್ ಯಾದವ್. ಲಾಲೂ ಪ್ರಸಾದ್, ನಿತಿಶ್ ಕುಮಾರ್, ದೇವೇಗೌಡ ಅವರ ಜೊತೆ ಸಮಾಜವಾದಿ ನಾಯಕನ ಮಾತುಕತೆ.












Click it and Unblock the Notifications