ನ.4: ದೇಶ, ವಿದೇಶ ಸುದ್ದಿಗಳ ಚುಟುಕು ಸುದ್ದಿ
ಬೆಂಗಳೂರು, ನ.4: ದೇಶ, ವಿದೇಶಗಳಲ್ಲಿನ ವಿದ್ಯಮಾನಗಳ ಈ ದಿನದ ರೌಂಡ್ ಅಪ್ ನಿಮಗಾಗಿ ಇಲ್ಲಿದೆ. ಇಲ್ಲಿ ಬರೀ ಹೆಡ್ ಲೈನ್ ಗಳು, ಟೂ ಲೈನ್ ಅಥವಾ ಒಂದು ಪ್ಯಾರಾ ಸುದ್ದಿಗಳು, ಚುಟುಕು ಮಾಹಿತಿ ಮಾತ್ರ ನಿಮಗೆ ಸಿಗುತ್ತದೆ. ದೇಶದ ಒಟ್ಟಾರೆ ಸುದ್ದಿಗಳ ಅಸಮಗ್ರ ಸಂಗ್ರಹ ನಿಮ್ಮ ಪರದೆ ಮೇಲೆ ಚೆಲ್ಲುವ ಪ್ರಯತ್ನ ಇದಾಗಿದೆ.
13.10: ಬೆಂಗಳೂರಿನಲ್ಲಿ ಹೆಚ್ಚುತ್ತಿರುವ ಲೈಂಗಿಕ ದೌರ್ಜನ್ಯಗಳ ಬಗ್ಗೆ ಕಳವಳ ವ್ಯಕ್ತಪಡಿಸಿರುವ ದಿಗ್ವಿಜಯ್ ಸಿಂಗ್ ಅವರು ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಅವರ ಆದೇಶದಂತೆ ಬೆಂಗಳೂರಿಗೆ ಆಗಮಿಸುತ್ತಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಜೊತೆ ಚರ್ಚಿಸಲಿದ್ದಾರೆ.

10.10: ಮಾಜಿ ಪ್ರಧಾನಿ ಮನ್ಮೋಹನ್ಸಿಂಗ್ ಅವರಿಗೆ ಜಪಾನ್ ದೇಶದ ಅತ್ಯುನ್ನತ ರಾಷ್ಟ್ರೀಯ ಪ್ರಶಸ್ತಿ ದಿ ಗ್ರಾಂಡ್ ಕೋರ್ಡನ್ ಆಫ್ ದಿ ಆರ್ಡರ್ ಆಫ್ ದ ಪೌಲೌನಿಯಾ ಫ್ಲವರ್ಸ್ ನೀಡಲಾಗುತ್ತಿದೆ. ಜಪಾನ್ ದೇಶಕ್ಕೆ ಉತ್ತಮ ಕೊಡುಗೆ ನೀಡಿದವರಿಗೆ ನೀಡುವ ವಿಶೇಷ ಪ್ರಶಸ್ತಿಯಾಗಿದೆ. ಮನಮೋಹನ್ ಸಿಂಗ್ ಈ ಪ್ರಶಸ್ತಿ ಪಡೆದ ಮೊದಲ ಭಾರತೀಯರಾಗಿದ್ದಾರ ಎಂದು ಜಪಾನ್ನ ರಾಯಭಾರ ಕಚೇರಿ ಹೇಳಿದೆ.
9.40: ಮೊಹರಂ ಹಿನ್ನೆಲೆಯಲ್ಲಿ ಕಾಶ್ಮೀರದ ಶ್ರೀನಗರದಲ್ಲಿ ಕರ್ಫ್ಯೂ ಹಾಕಲಾಗಿದೆ.
9.35: ದೇಶದೆಲ್ಲೆಡೆ ಮೊಹರಂ ಆಚರಣೆ ಮಾಡಲಾಗುತ್ತಿದೆ. ತ್ಯಾಗ ಬಲಿದಾನದ ಗೀತೆಗಳನ್ನು ಹಾಡುತ್ತಾ ಮುಸ್ಲಿಮರು ಮೆರವಣಿಗೆ ನಡೆಸಿದ್ದಾರೆ.

9.20: ಭಾರತ ಮತ್ತು ಪಾಕಿಸ್ತಾನದ ಗಡಿ ಭಾಗದ ವಾಘಾದಲ್ಲಿ ನಡೆದ ಬಾಂಬ್ ಸ್ಫೋಟವನ್ನು ಅಮೆರಿಕ ತೀವ್ರವಾಗಿ ಖಂಡಿಸಿದೆ.
Curfew imposed in Srinagar ahead of Muharram pic.twitter.com/uYdm5XIjox
— ANI (@ANI_news) November 4, 2014 9.10: ಮ್ಯೂನಿಚ್ ನಲ್ಲಿ ಎರಡನೇ ಮಹಾಯುದ್ಧ ಕಾಲದ ಬಾಂಬ್ ವೊಂದನ್ನು ನಿಷ್ಕ್ರಿಯಗೊಳಿಸಲಾಗಿದೆ.
9.00: ದೆಹಲಿಯಲ್ಲಿ ವಿಧಾನಸಭೆ ಚುನಾವಣೆ ಬಹುತೇಕ ಖಚಿತವಾಗಿದೆ. ರಾಷ್ಟ್ರಪತಿ ಅನುಮತಿ ಬಳಿಕ ವಿಧಾನಸಭೆ ವಿಸರ್ಜನೆಗೊಳ್ಳಲಿದೆ.
L-G Najeeb Jung sends status report over Delhi government formation to MHA
— ANI (@ANI_news) November 4, 2014 











Click it and Unblock the Notifications