ಆ.20: ದೇಶ, ವಿದೇಶಗಳ ಹೆಡ್ ಲೈನ್ಸ್
ಬೆಂಗಳೂರು, ಆ.20: ದೇಶ, ವಿದೇಶಗಳಲ್ಲಿನ ವಿದ್ಯಮಾನಗಳ ಈ ದಿನದ ರೌಂಡ್ ಅಪ್ ನಿಮಗಾಗಿ ಇಲ್ಲಿದೆ. ಇಲ್ಲಿ ಬರೀ ಹೆಡ್ ಲೈನ್ ಗಳು, ಟೂ ಲೈನ್ ಅಥವಾ ಒಂದು ಪ್ಯಾರಾ ಸುದ್ದಿಗಳು, ಚುಟುಕು ಮಾಹಿತಿ ಮಾತ್ರ ನಿಮಗೆ ಸಿಗುತ್ತದೆ. ದೇಶದ ಒಟ್ಟಾರೆ ಸುದ್ದಿಗಳ ಅಸಮಗ್ರ ಸಂಗ್ರಹ ನಿಮ್ಮ ಪರದೆ ಮೇಲೆ ಚೆಲ್ಲುವ ಪ್ರಯತ್ನ ಇದಾಗಿದೆ.
3.30: ಕೆಪಿಎಸ್ ಸಿ ನೇಮಕಾತಿ ವಿವಾದ ಪ್ರಕರಣದ ವಿಚಾರಣೆಯನ್ನು ಸೆಪ್ಟೆಂಬರ್ 16ಕ್ಕೆ ಮುಂದೂಡಿದ ಕರ್ನಾಟಕ ಹೈಕೋರ್ಟ್.
3.15: ಅಸ್ಸಾಂನ ಗೊಲ್ಗಾಟ್ ಜಿಲ್ಲೆಯಲ್ಲಿ ಮತ್ತೆ ಫೈರಿಂಗ್ ನಡೆದಿದ್ದು 5 ಜನರಿಗೆ ಗಾಯಗಳಾಗಿವೆ.
3.00: 2ಜಿ ಹಗರಣ ಪ್ರಕರಣದಲ್ಲಿ ಮಾಜಿ ಕೇಂದ್ರ ಸಚಿವ ಎ ರಾಜಾ ಹಾಗೂ ಕನಿಮೋಳಿ ಅವರಿಗೆ ಸಿಬಿಐ ಕೋರ್ಟ್ ಜಾಮೀನು ಮಂಜೂರು ನೀಡಲಾಗಿದೆ.

11.55 : ದೇಶದ ಹಲವೆಡೆ ಬುಧವಾರದಂದು ಮಾಜಿ ಪ್ರಧಾನಿ ರಾಜೀವ್ ಗಾಂಧಿ ಅವರ 70ನೇ ಪುಣ್ಯಸ್ಮರಣೆ ಕಾರ್ಯಕ್ರಮಗಳು ನಡೆದಿವೆ.
11.00: ಪಾಕಿಸ್ತಾನದ ಪ್ರಧಾನಿ ನವಾಜ್ ಷರೀಫ್ ರಾಜಿನಾಮೆ ನೀಡದಿದ್ದರೆ, ಷರೀಫ್ ನಿವಾಸಕ್ಕೆ ಮುತ್ತಿಗೆ ಹಾಕಲಾಗುವುದು ಎಂದು ಮಾಜಿ ಕ್ರಿಕೆಟಿಗ, ರಾಜಕಾರಣಿ ಇಮ್ರಾನ್ ಖಾನ್ ಬುಧವಾರ ಎಚ್ಚರಿಸಿದ್ದಾರೆ.
10.30: 2-ಜಿ ತರಾಂಗಾಂತರ ಹಂಚಿಕೆ ಹಗರಣ ಪ್ರಕರಣಕ್ಕೆ ಸಂಬಂಧಿಸಿದಂತೆ ಡಿಎಂಕೆ ಮುಖ್ಯಸ್ಥ ಎಂ. ಕರುಣಾನಿಧಿ ಅವರ ಪತ್ನಿ ದಯಾಳ್ ಅಮ್ಮಾಳ್ ಅವರಿಗೆ ಜಾಮೀನು ನೀಡಲಾಗಿದೆ.

10.25 : 2ಜಿ ಸ್ಪೆಕ್ಟ್ರಂ ಹಂಚಿಕೆ ಹಗರಣದಲ್ಲಿ ಮಾಜಿ ಕೇಂದ್ರ ಸಚಿವ ಎ.ರಾಜಾ, ಕನಿಮೊಳಿ, ದಯಾಳ್ ಅಮ್ಮಾಳ್ ಸೇರಿದಂತೆ 19 ಜನರ ವಿರುದ್ಧ ನವದೆಹಲಿಯಲ್ಲಿರುವ ಸಿಬಿಐನ ವಿಶೇಷ ನ್ಯಾಯಾಲಯಕ್ಕೆ ಆರೋಪ ಪಟ್ಟಿ ಸಲ್ಲಿಸಿದ್ದನ್ನು ಇಲ್ಲಿ ಸ್ಮರಿಸಬಹುದು.
10.00: ಕರ್ನಾಟಕದ ಹಿರಿಯ ರಾಜಕಾರಣಿ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಲೋಕಸಭೆಯಲ್ಲಿ ಪ್ರತಿಪಕ್ಷ ಸ್ಥಾನದಲ್ಲಿ ಕುಳಿತುಕೊಳ್ಳುವ ಅವಕಾಶ ತಪ್ಪಿದೆ. ಈ ವಿಷಯವನ್ನು ಸ್ಪೀಕರ್ ಸುಮಿತ್ರಾ ಮಹಾಜನ್ ಸ್ಪಷ್ಟಪಡಿಸಿದ್ದಾರೆ.
9.45: ಯೋಗರತ್ನ, ಪದ್ಮವಿಭೂಷಣ ಬಿಕೆಎಸ್ ಅಯ್ಯಂಗಾರ್ ಬುಧವಾರ ನಿಧನರಾಗಿದ್ದರು.
9.30: ಇಸ್ಲಾಮಿಕ್ ರಾಜ್ಯ ಜಿಹಾದಿಗಳು ಯುಎಸ್ ಜನರ್ಲಿಸ್ಟ್ ರುಂಡ ಕತ್ತರಿಸಿ ವಿಡಿಯೋ ಹಂಚಿದ್ದಾರೆ.












Click it and Unblock the Notifications